ಗುರು ನಾನಕರು ಒಮ್ಮೆ ಗಂಗಾ ನದಿಯ ತೀರದಲ್ಲಿ ಒಬ್ಬ ಬ್ರಾಹ್ಮಣನನ್ನು ಭೇಟಿಯಾದರು. ಆ ಬ್ರಾಹ್ಮಣನು ನದಿಯಲ್ಲಿ ಸ್ನಾನ ಮಾಡಿ, ತನ್ನ ಪೂರ್ವಜರಿಗೆ ಶಾಂತಿಯನ್ನು ಕೋರಿ ಸೂರ್ಯನಿಗೆ ಅರ್ಘ್ಯ ಅರ್ಪಿಸುತ್ತಿದ್ದನು. ಗುರು ನಾನಕರು ಅವನ ಬಳಿಗೆ ಹೋಗಿ, ತಾವೂ ಸ್ನಾನ ಮಾಡಿ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ನೀರನ್ನು ಎಸೆಯಲಾರಂಭಿಸಿದರು. ಬ್ರಾಹ್ಮಣನು ಆಶ್ಚರ್ಯಗೊಂಡು, ‘ನೀವು ಏಕೆ ತಪ್ಪು ದಿಕ್ಕಿನಲ್ಲಿ ನೀರನ್ನು ಎಸೆಯುತ್ತಿರುವಿರಿ?’ ಎಂದು ಕೇಳಿದನು. ಗುರು ನಾನಕರು ‘ನಾನು ನನ್ನ ಕ್ಷೇತ್ರಕ್ಕೆ ನೀರನ್ನು ಕೊಡುತ್ತಿದ್ದೇನೆ, ಅದು ಪಂಜಾಬ್ನಲ್ಲಿದೆ’ ಎನ್ನುತ್ತಾರೆ. ಬ್ರಾಹ್ಮಣನು ನಕ್ಕು, ‘ಅದು ಹೇಗೆ ಸಾಧ್ಯ’ ಎಂದು ಪರಿಹಾಸ್ಯ ಮಾಡುತ್ತಾನೆ. ಗುರು ನಾನಕರು, ‘ನೀವು ಸೂರ್ಯನಿಗೆ ಅರ್ಪಿಸುವಾಗ ಅದು ಸಾವಿರಾರು ಮೈಲಿಗಳ ದೂರದ ನಿಮ್ಮ ಪಿತೃಗಳಿಗೆ ತಲುಪುತ್ತದೆಂದು ಭಾವಿಸುವಿರಿ. ಹಾಗಿರುವಾಗ, ನನ್ನ ಕ್ಷೇತ್ರಕ್ಕೆ ಏಕೆ ತಲುಪಲಾರದು?’ ಎನ್ನುತ್ತಾರೆ. ಈ ಮಾತಿನಿಂದ ಬ್ರಾಹ್ಮಣನಿಗೆ ತನ್ನ ಆಚರಣೆಯ ಅರ್ಥವಿಲ್ಲದಿರುವಿಕೆ ತಿಳಿಯಿತು. ಅಂದಿನಿಂದ ಅವನು ಗುರು ನಾನಕರ ಶಿಷ್ಯನಾಗುತ್ತಾನೆ.

ನಾಮ್ ಜಪೋ (ದೇವರನ್ನು ಸ್ಮರಿಸು), ಕಿರತ್ ಕರೋ (ಪ್ರಾಮಾಣಿಕವಾಗಿ ಪರಿಶ್ರಮದಿಂದ ದುಡಿದು ಜೀವನೋಪಾಯ ಮಾಡಬೇಕು), ವಂಡ್ ಛಕೋ (ತನ್ನ ಆದಾಯವನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳಬೇಕು)– ಇವು ಗುರು ನಾನಕರು ಉಪದೇಶಿಸಿದ ಮೂರು ಮಂತ್ರಗಳು.

ಯಾವುದೇ ದೇವಸ್ಥಾನವನ್ನು ನೋಡಿ ತೀರ್ಥಸ್ಥಾನಗಳಿಗೆ ಹೋಗಿ ಕಾಲಿಡಲೂ ಆಗದ ಜನಜಂಗುಳಿ ನೆರೆದಿರುತ್ತದೆ. ಅದಕ್ಕಿಂತ ಹೆಚ್ಚಾಗಿ ಭಕ್ತಿಯ ಹೆಸರಲ್ಲಿ, ದೇವರ ದರ್ಶನದ ಹೆಸರಿನಲ್ಲಿ ವ್ಯಾಪಾರ ನಡೆಸಿರುವವರೇ ಸಿಗುತ್ತಾರೆ. ‘ನಿಮಗೆ ವಿಐಪಿ ದರ್ಶನ ಮಾಡಿಸ್ತೇನೆ. ಸರತಿಗಾಗಿ ಕಾದು ನಿಲ್ಲಬೇಕಾಗಿಲ್ಲ. ನನ್ನೊಂದಿಗೆ ಬನ್ನಿ’ ಎನ್ನುವ ದಲ್ಲಾಳಿಗಳ ದಂಡೇ ನಿಂತಿರುತ್ತದೆ. ಅದಕ್ಕಾಗಿ ಐದುನೂರು ರೂಪಾಯಿಯಿಂದ ಸಾವಿರ ರೂಪಾಯಿವರೆಗಿನ ಹೆಚ್ಚಿನ ಶುಲ್ಕ ಬೇರೆ ತೆರಬೇಕು. ದೇವರನ್ನು ಹುಡುಕಿಕೊಂಡು ಹೋದವರಿಗೆ ದೇವರು ಸಿಗುತ್ತಾನೆಯೇ ? ಸರಿಯಾಗಿ ದರ್ಶನವೂ ಆಗುವುದಿಲ್ಲ.

ಇನ್ನು ಜ್ಯೋತಿಷ್ಯ, ಮಂತ್ರ ತಂತ್ರವೆಂದು ಕುರುಡು ನಂಬಿಕೆ, ಮೋಸಕ್ಕೆ ಬಲಿಯಾಗಿ ಕೂಡಿಟ್ಟಿದ್ದ ಅಲ್ಪಸ್ವಲ್ಪ ಸಂಪತ್ತನ್ನೂ ಕಳಕೊಳ್ಳುವವರಿದ್ದಾರೆ. ಜೀವಕ್ಕೆ ಹಾನಿಮಾಡಿಕೊಳ್ಳುವವರಿದ್ದಾರೆ. ‘ಆ ಪೂಜೆ ಮಾಡಿಸಿದರೆ ಈ ಹೋಮ ಮಾಡಿಸಿದರೆ ನಿಮ್ಮ ಎಲ್ಲ ಕಾರ್ಯಗಳು ಸಿದ್ಧಿಸುತ್ತವೆ’ ಎನ್ನುವ ಕಪಟ ಜ್ಯೋತಿಷಿಗಳಿಗೆ ಅದು ಜೀವನೋಪಾಯದ ಮಾರ್ಗವಷ್ಟೇ. ‘ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನೂ ಸಾಲದು’ ಎಂಬ ಗಾದೆಯೇ ಇದೆ. ಎಲ್ಲವೂ ನಮ್ಮ ಪ್ರಾರಬ್ಧ, ಗ್ರಹಗತಿಗಳ ಪ್ರಕಾರ ಲಭಿಸುವಂತಿದ್ದರೆ ಮನುಷ್ಯ ಇಷ್ಟು ಕಷ್ಟಪಡುತ್ತಿದ್ದನೇ? ನಾವು ಬದುಕನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ದೋಷವಿದೆ. ನಮ್ಮ ಆಲೋಚನಾಕ್ರಮದಲ್ಲಿ ದೋಷವಿದೆ.

ಅನೇಕ ಖ್ಯಾತ ವಿಜ್ಞಾನಿಗಳು ಬಾಲ್ಯದಲ್ಲಿ ಸಾಧಾರಣ ವಿದ್ಯಾರ್ಥಿಗಳಾಗಿದ್ದರು. ಅಲ್ಬರ್ಟ್ ಐನ್ಸ್ಟೀನ್ ಬಾಲ್ಯದಲ್ಲಿ ಮಾತು ತಡವಾಗಿ ಕಲಿತನಂತೆ. ಶಿಕ್ಷಕರು ಇವನಿಂದ ಏನೂ ಆಗುವುದಿಲ್ಲವೆಂದು ತೀರ್ಪು ಕೊಟ್ಟಿದ್ದರು. ವಿದ್ಯುತ್ ದೀಪವನ್ನು ಕಂಡುಹಿಡಿದ ಥಾಮಸ್ ಆಲ್ವಾ ಎಡಿಸನ್ ಕೇವಲ ಮೂರು ತಿಂಗಳಷ್ಟೆ ಶಾಲೆಗೆ ಹೋಗಿದ್ದನಂತೆ. ಹೀಗೆ ಯಾವ ವೈಫಲ್ಯವೂ ಅಂತಿಮವಲ್ಲ. ಅದು ಯಶಸ್ಸಿನ ಮೆಟ್ಟಿಲಾಗಿರುತ್ತದೆ. ಮೇಲಿನ ಕತೆಯಲ್ಲಿ ಗುರು ನಾನಕರು ಕುರುಡು ಆಚರಣೆಗಳಿಗಿಂತ ಶುದ್ಧ ಭಕ್ತಿ, ದುಡಿದು ಉಣ್ಣುವ, ಇದ್ದುದನ್ನು ಹಂಚಿಕೊಂಡು ಬಾಳುವ ಮಹತ್ವವನ್ನು ಕಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.