ಒಂದು ಮನೆ. ಎಲ್ಲ ಮನೆಗಳಲ್ಲಿ ಇರುವಂತೆ ಆ ಮನೆಯಲ್ಲೂ ಹಲವಾರು ವಸ್ತುಗಳು. ಮನೆಯ ನಡುಮನೆಯಲ್ಲೊಂದು ಸುಂದರ ಕುಸುರಿ ಕೆಲಸದ ಬಾಗಿಲು. ಅದಕ್ಕೊಂದು ಹೊಳೆವ ಬೀಗ. ಅದಕ್ಕೊಂದು ಕೀಲಿಕೈ. ಹೊರಗಡೆ ಹೋಗುವಾಗ ಆ ಕೋಣೆಯ ಬೀಗ ಹಾಕಿ ಬೀಗದ ಕೈ ಅನ್ನು ಅಲ್ಲಿಯೇ ಇತರ ವಸ್ತುಗಳ ನಡುವೆ ಹೊರಗಿನವರಿಗೆ ಗೊತ್ತಾಗದ ಜಾಗದಲ್ಲಿಟ್ಟು ಹೋಗುತ್ತಿದ್ದರು ಮನೆಯವರು.

ಒಂದು ದಿನ ಮನೆಯವರೆಲ್ಲ ಹೊರಗೆ ಹೋಗಿದ್ದರು. ಆ ದಿನ ಸಂಜೆ ಚೆಂದದ ಬಾಗಿಲು ಹೇಳಿತು: ‘ಇಲ್ಲಿ ಇರುವ ಎಲ್ಲಾ ವಸ್ತುಗಳಲ್ಲಿ ನಾನೇ ಬಹಳ ಬಲಶಾಲಿ. ಈ ಮನೆಯ ಮುಖ್ಯ ಕೋಣೆಯನ್ನು ನಾನು ಕಾಯುತ್ತೇನೆ. ನನ್ನನ್ನು ನಂಬಿಯೇ ಈ ಮನೆಯವರು ಎಲ್ಲರೂ ಹೊರಹೋಗಿದ್ದಾರೆ. ನಾನಿಲ್ಲದೇ ಇದ್ದರೆ ಯಾರು ಬೇಕಾದರೂ ಒಳಗೆ ಹೋಗಿ ಎಲ್ಲವನ್ನೂ ಕದ್ದುಕೊಂಡು ಹೋಗಬಹುದು’.

ಅದನ್ನು ಕೇಳಿದ ಬೀಗವೂ ಹೇಳಿತು: ‘ನಿಜ, ನೀನು ಗಟ್ಟಿಯಿದ್ದಿ. ಮತ್ತು ನಾನು ನಿನ್ನನ್ನು ಜೋಪಾನವಾಗಿರಿಸುತ್ತೇನೆ. ನನ್ನ ಸಹಕಾರವಿಲ್ಲದೇ ಯಾರೂ ಬಾಗಿಲನ್ನು ತೆರೆಯಲಾರರು’.

ಅಲ್ಲಿಯೇ ಇದ್ದ ಪುಟಾಣಿ ಕೀಲಿಕೈ ಅವರ ಮಾತನ್ನು ಕೇಳುತ್ತ ಸುಮ್ಮನೆ ಇತ್ತು. ಅದಕ್ಕೆ ಬಾಗಿಲು ಬೀಗದ ಕೈ ಕಡೆ ನೋಡಿ, ‘ಏನು ಸುಮ್ಮನೆ ಕುಳಿತೆಯಲ್ಲ, ನೀನಿಷ್ಟು ಪುಟ್ಟ ಗಾತ್ರ. ನೀನೇನು ಮಾಡುತ್ತೀಯಾ’ ಅಂದಿತು.

ಬೀಗದ ಕೈ ಸಣ್ಣ ಧ್ವನಿಯಲ್ಲಿ, ‘ಹೆಚ್ಚೇನೂ ಮಾಡಲ್ಲ ನಾನು ಬಿಡಿ’ ಅಂದಿತು.

ಅವತ್ತು ರಾತ್ರಿಯೇ ಹೊರಗಡೆ ಹೋದ ಮನೆಯ ಜನರು ಮರಳಿ ಬಂದರು. ತಾಯಿ ಒಳಬಂದವರೇ ಸಣ್ಣ ಬೀಗದ ಕೈ ಹುಡುಕಿ ಕುಸುರಿಯ ಬಾಗಿಲನ್ನು ತೆರೆದರು. ಬಾಗಿಲು ಮತ್ತು ಬೀಗ ಎರಡೂ ಮುಖಮುಖ ನೋಡಿಕೊಂಡವು. ಬೀಗ ಹೇಳಿತು: ‘ಬೀಗದ ಕೈ ಇಲ್ಲದೇ ಇದ್ದರೆ ನಾನು ಮುಚ್ಚಿಯೇ ಇರುತ್ತಿದ್ದೆ. ಅಥವಾ ನನ್ನನ್ನು ಒಡೆದು ಹಾಕುತ್ತಿದ್ದರು’. ಬಾಗಿಲೂ ಹೇಳಿತು: ‘ಹೌದು, ಬೀಗದ ಕೈ ಇಲ್ಲದಿದ್ದರೆ ನಾನು ಯಾವಾಗಲೂ ಮುಚ್ಚಿಯೇ ಇರುತ್ತಿದ್ದೆ’.

ಸಣ್ಣ ಕೀಲಿಕೈ ಮುಗುಳ್ನಕ್ಕು ಹೇಳಿತು: ‘ದೊಡ್ಡ ಬಾಗಿಲಾಗಲೀ ಚಿಕ್ಕ ಬಾಗಿಲಾಗಲಿ ಅವನ್ನು ತೆರೆಯಲು ಪುಟ್ಟ ಕೀಲಿಕೈ ಬೇಕೇ ಬೇಕು. ಎಷ್ಟು ದೊಡ್ಡ ಬಾಗಿಲಾದರೂ ಬೀಗ ಮತ್ತು ಬೀಗದ ಕೈ ಇಲ್ಲದಿದ್ದರೆ ಅದು ಸುಭದ್ರವಲ್ಲ. ಹಾಗಂತ ಬಾಗಿಲು ಇಲ್ಲದಿದ್ದರೆ ಕೀಲಿಕೈಗೂ ಬೆಲೆಯಿಲ್ಲ, ಬೀಗಕ್ಕೂ ಬೆಲೆಯಿಲ್ಲ’.

ಅವತ್ತಿನಿಂದ ಬಾಗಿಲು ಮತ್ತು ಬೀಗ ಎರಡೂ ಒಂದು ವಸ್ತುವಿನ ಪ್ರಾಮುಖ್ಯವನ್ನು ಗಾತ್ರದಿಂದ ಅಳೆಯಬಾರದು ಎಂಬುದನ್ನು ಅರ್ಥ ಮಾಡಿಕೊಂಡವು.

ಪುಟ್ಟ ಕೀಲಿ ಕೈ ದೊಡ್ಡ ಬಾಗಿಲನ್ನು ತೆರೆದ ಹಾಗೆ ದೊಡ್ಡ ಅವಕಾಶಗಳನ್ನು ಸಣ್ಣ ಸಂಗತಿಗಳು ಒದಗಿಸುತ್ತವೆ. ಇಷ್ಟು ಸಣ್ಣ ಕೆಲಸವೆ? ಇದೇನು ಮಹಾ ಎಂಬ ನಿರ್ಲಕ್ಷ್ಯದಿಂದ ಅವಕಾಶಗಳು ಕೈ ತಪ್ಪಿಯೂ ಹೋಗಬಹುದು. ಪ್ರೀತಿಯ ಶಿಕ್ಷಕರ ಒಂದು ಸಣ್ಣ ಪ್ರೋತ್ಸಾಹದಾಯಕ ನುಡಿ ವಿದ್ಯಾರ್ಥಿ ಸಾಧನೆ ಮಾಡಲು ಸ್ಫೂರ್ತಿಯಾಗಬಹುದು. ನಾನಿದ್ದೇನೆ ಎಂಬ ಗೆಳೆಯನ ಭರವಸೆ ಕಷ್ಟವನ್ನು ಎದುರಿಸುವ ಸ್ಥೈರ್ಯ ಕೊಡಬಹುದು. ದಿನಕ್ಕೆ ಹತ್ತೇ ನಿಮಿಷ ಕಲಿಯುವ ಹೊಸ ಕೌಶಲದಿಂದ ಬದುಕಿನ ದಿಕ್ಕೇ ಬದಲಾಗಬಹುದು. ನಾವು ಯಾವಾಗಲೂ ದೊಡ್ಡ ಅವಕಾಶಗಳಿಗಾಗಿ ಕಾಯುತ್ತೇವೆ. ಆದರೆ ದಿನವೂ ನಾವು ಮಾಡುವ ಪುಟ್ಟ ಕೆಲಸಗಳೇ ಆ ಅವಕಾಶವನ್ನು ನಿರ್ಮಿಸುತ್ತವೆ ಎಂಬುದನ್ನು ಮರೆತುಬಿಡುತ್ತೇವೆ. ಸಣ್ಣ ಸಂಗತಿಗಳ ಮಹತ್ವವನ್ನು ಅರ್ಥ ಮಾಡಿಕೊಂಡರೆ ಬದುಕನ್ನೂ ಅರ್ಥ ಮಾಡಿಕೊಂಡಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.