ಕೊಪ್ಪಳದ ಗವಿಸಿದ್ದೇಶ್ವರ ಮಠದ ಸ್ವಾಮೀಜಿಗಳು ತಮ್ಮ ಒಂದು ಪ್ರವಚನದಲ್ಲಿ ಈ ದೃಷ್ಟಾಂತವನ್ನು ಬಳಸುತ್ತಾರೆ. ಒಂದು ಕಾಗೆ. ಅದಕ್ಕೆ ಸುಂದರವಾದ ದನಿ ಇಲ್ಲ, ಸುಂದರವಾದ ಶರೀರ, ಬಣ್ಣವಿಲ್ಲ. ಆದರೂ ಅದು ಸಂತೋಷವಾಗಿ ಇರುವುದನ್ನು ನೋಡಿ ಕೋಗಿಲೆ ಮತ್ತು ನವಿಲುಗಳಿಗೆ ಅಚ್ಚರಿ; ಚಂದದ ಬಣ್ಣ, ದನಿ ಇರದೇ ಇದ್ದರೂ ಖುಷಿಯಾಗಿ ಹಾರಾಡಿಕೊಂಡಿರುವ ಬಗ್ಗೆ. ಎರಡೂ ಕೇಳಿಯೇ ಬಿಡುತ್ತವೆ. ಚಂದದ ದನಿ, ಚಂದದ ಬಣ್ಣ ಎರಡೂ ಇರದ ನೀನು ಸದಾ ಖುಷಿಯಿಂದ ಇರಲು ಏನು ಕಾರಣ? ಅದಕ್ಕೆ ಕಾಗೆ ಬಹಳ ಮಾರ್ಮಿಕವಾಗಿ ಉತ್ತರ ಕೊಡುತ್ತದೆ: ‘ನಿಮ್ಮಿಬ್ಬರ ದನಿ ಬಣ್ಣ ನರ್ತನವನ್ನು ಕಂಡು ನಾನು ಸಂತೋಷಪಡುತ್ತೇನೆ ಅಷ್ಟು ಸಾಕು. ನನಗೇ ನನ್ನ ಬಗ್ಗೆ ಈ ರೀತಿ ಯೋಚನೆ ಇಲ್ಲ. ನಾನು ನನಗೆ ಸಮಸ್ಯೆಯೇ ಅಲ್ಲ. ನಿಮ್ಮದೇನು ಸಮಸ್ಯೆ?’

ಇದೇ ನಮ್ಮ ಸಮಸ್ಯೆ ಅನಿಸುತ್ತದೆ. ಬೇರೆಯವರಿಗೆ ಇರದ ಸಮಸ್ಯೆಯನ್ನು ಅವರ ತಲೆಯೊಳಗೆ ಹಾಕಿ ಮಜಾ ಮಾಡುವ ಪ್ರವೃತ್ತಿ ಅದು. ಉಳ್ಳವರ ಶಿವಾಲಯದ ಕತೆಯೇ ಇದು. ಕೂದಲಿದ್ದವರು ಹೇಗೆ ಬೇಕಾದರೂ ಬಾಚಬಹುದು. ಇನ್ನೊಬ್ಬರ ದೇಹ, ಇನ್ನೊಬ್ಬರ ಮನೆ, ಅವರ ಬಳಿ ಇರುವ ಭೌತಿಕ ವಸ್ತುಗಳು ಅವು ಅವರವು. ಅವುಗಳ ಜೊತೆಗೆ ನಿರಾಳವಾಗಿ ಹೊಂದಿಕೊಂಡು ಬಾಳು ನಡೆಸುತ್ತಿರುತ್ತಾರೆ. ಅವರಿಗೆ ಏನೂ ಸಮಸ್ಯೆ ಇರುವುದಿಲ್ಲ. ಇದ್ದವರು ಹೋಗಿ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿ ಬರುತ್ತಾರೆ. ಆ ಮೂರು ಜನರ ಪುಟ್ಟ ಸಂಸಾರಕ್ಕೆ ವೆಸ್ಪಾ, ಹೋಂಡಾದಂತಹ ಗಾಡಿ ಸಾಕಿತ್ತು. ಅದು ಅವರಿಗೆ ಸಮಸ್ಯೆ ಎನಿಸುತ್ತಲೇ ಇರಲಿಲ್ಲ. ಆದರೆ ಹೋದವರು ತಮ್ಮ ಬಳಿ ಇರುವ ಹೊಸ ಆವೃತ್ತಿಯ ಕಾರು, ಅದರ ಅನುಕೂಲ, ಲಭ್ಯತೆ, ಮಾಸಿಕ ಕಂತುಗಳ ಬಗ್ಗೆ ಭಾಷಣ ಹೊಡೆದು, ಕಾರು ನಿಲ್ಲಿಸುವ ಜಾಗ, ಖರ್ಚು, ಸಾಲ ಎಲ್ಲ ಹೊರೆಯನ್ನು ಹೊರಿಸಿ ಬಂದುಬಿಡುತ್ತಾರೆ. ಕೋಗಿಲೆಯ ಕಂಠ, ನವಿಲಿನ ನರ್ತನ, ಬಣ್ಣ ನೋಡಿ ಖುಷಿಪಡುತ್ತಿದ್ದ ಕಾಗೆಯ ನಿಲುವೇ ಬೇರೆ. ಬಾಳಿನ ಗುರಿಯೇ ಬೇರೆ. ಇದ್ದುದರಲ್ಲೇ ತೃಪ್ತಿ ಮತ್ತು ಅಂಗೈನ ನೆಲ್ಲಿಕಾಯಿ ಮುಖ್ಯವೇ ಹೊರತು ಆಕಾಶದ ಮಲ್ಲಿಗೆ ಅಲ್ಲ.

ಇದು ತಮ್ಮ ಪಾಡಿಗೆ ತಾವು ತಮ್ಮ ಹಾಸಿಗೆಯಲ್ಲಿ ಕಾಲು ಚಾಚಿ ಮಲಗಿದವರ ನಿದ್ದೆ ಹಾಳು ಮಾಡುವವರ ಸಮಸ್ಯೆ. ಕೆಲವೊಂದು ಮಿತಿಗಳನ್ನು ಒಪ್ಪಿಕೊಳ್ಳುವುದೂ ವಿವೇಕವೇ ಎನ್ನುವುದಾದರೆ ಅಂತಹ ವಿವೇಕವನ್ನು ಗೌರವಿಸೋಣ. ‘ಮಿತಿ ಮೀರು’ ಮತ್ತು ‘ಸಾಧ್ಯತೆಗಳನ್ನು ಹಿಗ್ಗಿಸಿಕೋ’ ಎಂಬ ಮಾತಿನಲ್ಲಿ ಬಹಳ ಅರ್ಥವಿದೆ. ನಾಲ್ಕು ಗೋಡೆಗಳ ನಡುವೆಯೇ ಜೀವ ಸವೆಸದೆ ಲೋಕವನ್ನು ನೋಡುವ, ಕಲಿಯುವ, ಬೆರೆಯುವ ಸಾಧ್ಯತೆ. ಆದರೆ ಎಪ್ಪತ್ತು ಸಾವಿರ ಬೆಲೆಯ ಬೈಕನ್ನೇ ನಿಭಾಯಿಸಲಾಗದೆ ಆನಗತ್ಯವಾಗಿ ದುಬಾರಿ ಕಾರನ್ನು ಖರೀದಿಸಿ ಜೀವಮಾನವಿಡೀ ಪರಿತಪಿಸುವುದು ‘ಮಿತಿ ಮೀರುವುದು’ ಅನಿಸುವುದಿಲ್ಲ. ದೇಹ ಬಣ್ಣ ಆಕಾರ ಆರೋಗ್ಯ ಅವರವರ ಸ್ವತ್ತು. ಅವರವರು ತಮಗೆ ಸಿಕ್ಕ ಚೆಲುವನ್ನು ಒಲವನ್ನು ಬಾಳನ್ನು ಹಾಗಾಗೇ ಸ್ವೀಕರಿಸಿ ಚೆಂದ ಉಸಿರಾಡುತ್ತಿರುವಾಗ ಅಂತಹ ಜೀವನ ಕೋಗಿಲೆಯ ಮಧುರ ಕಂಠ ಮತ್ತು ನವಿಲಿನ ಬಣ್ಣದ ಮೈ ರೆಕ್ಕೆಯನ್ನೂ ನಾಚಿಸಬಲ್ಲದು. ಒಮ್ಮೆ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ...’ ಹಾಡನ್ನು ಕೇಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.