ಒಂದು ನಗರದ ನಟ್ಟನಡುವಿನ ಪಾರ್ಕ್ ಒಂದರಲ್ಲಿ ಹಳೆಯ ಮರದ ಬೆಂಚೊಂದಿತ್ತು. ಅದು ಬಹಳ ವರ್ಷಗಳಿಂದ ಒಂದೇ ಜಾಗದಲ್ಲಿತ್ತು. ಆ ಬೆಂಚಿನ ಹತ್ತಿರವೇ ಒಂದು ಲೈಟುಕಂಬವಿತ್ತು. ಅಲ್ಲಿಯೇ ಕಲ್ಲಿನ ಕಿರುದಾರಿಯೊಂದಿತ್ತು. ಸ್ವಲ್ಪ ದೂರದಲ್ಲಿ ವಯಸ್ಸಾದ ಆಲದ ಮರವೂ ಇತ್ತು.

ಪ್ರತೀ ರಾತ್ರಿ ಪಾರ್ಕ್ ಶಾಂತವಾಗುತ್ತಿತ್ತು. ಹೊಳೆವ ನಕ್ಷತ್ರಗಳ ಬೆಳಕಿನಲ್ಲಿ ಬೆಂಚು, ಲೈಟು ಕಂಬ ಮತ್ತಿತರ ವಸ್ತುಗಳು ಬೇಸರ ಕಳೆಯಲು ಮಾತಾಡುತ್ತಿದ್ದವು. ಹೀಗೆಯೇ ಒಂದು ರಾತ್ರಿ ಮಾತಾಡುವಾಗ ಬೆಂಚು ದೀರ್ಘವಾಗಿ ನಿಟ್ಟುಸಿರೆಳೆದು ಹೇಳಿತು: ‘ನನಗಂತೂ ಸಾಕಾಗಿಹೋಗಿದೆ. ದಿನವೂ ಯಾರ್ಯಾರೋ ಬಂದು ನನ್ನ ಮೇಲೆ ಕೂರುತ್ತಾರೆ. ಕೆಲವರು ಭಾರಿ ಭಾರ, ಮತ್ತೆ ಕೆಲವರು ಹಾರಿ ಹಾರಿ ಕುಣಿಯುತ್ತಾರೆ, ಇನ್ನು ಕೆಲವರು ನನ್ನನ್ನು ಉಗುರಿನಿಂದ ಕೆರೆಯುತ್ತಾರೆ, ಪಿನ್ನಿನಿಂದ ಕೊರೆಯುತ್ತಾರೆ. ನನಗಂತೂ ಇಲ್ಲಿರುವುದೇ ಸಾಕು ಅನ್ನಿಸುತ್ತಿದೆ’.

ಆಗ ಲೈಟುಕಂಬ ಮಂದ ಬೆಳಕು ಚೆಲ್ಲುತ್ತ ಹೇಳಿತು: ‘ಆದರೂ ನಿನ್ನನ್ನು ಜನ ಗುರ್ತಿಸುತ್ತಾರೆ, ನಿನ್ನ ಜತೆ ತಮ್ಮ ಸಂತೋಷ ದುಃಖ ಹಂಚಿಕೊಳ್ಳುತ್ತಾರೆ. ನಾನು ಇಲ್ಲಿ ದೆವ್ವದಂತೆ ನಿಂತೇ ಇದ್ದರೂ ನನ್ನ ಕಡೆ ಕಣ್ಣೆತ್ತಿ ನೋಡುವವರೇ ಇಲ್ಲ’.

ಇವೆರಡರ ಮಾತು ಕೇಳುತ್ತಿದ್ದ ಕಲ್ಲುಹಾಸಿನ ಕಿರುದಾರಿ ಸ್ವಲ್ಪ ಒರಟಾಗಿಯೇ ಹೇಳಿತು: ‘ನಿಮ್ಮಿಬ್ಬರ ಮಾತು ಜಾಸ್ತಿಯಾಯಿತು. ಜನರು ಇಡೀ ದಿನ ನನ್ನನ್ನು ತುಳಿದುಕೊಂಡೇ ಓಡಾಡುತ್ತಾರೆ, ಚಪ್ಪಲಿ, ಕೊಳಕು ಶೂ, ಸೈಕಲ್ಲು. ಆದರೂ ನಾನು ಸುಮ್ಮನಿರುವುದಿಲ್ಲವಾ?’

ಇವುಗಳ ಸಂಭಾಷಣೆ ಮುಗಿಯುತ್ತಿದ್ದಂತೆ ಆಲದ ಮರ ನಸುನಕ್ಕು ಕೇಳಿತು: ‘ಗೆಳೆಯರೇ, ನಾವು ಇಲ್ಲಿ ಏಕಿದ್ದೇವೆ ಎಂದು ಗೊತ್ತಿದೆಯೇ ನಿಮಗೆ?’

ಎಲ್ಲವೂ ಸುಮ್ಮನಾದವು.

‘ನಾವಿರುವುದು ಜನರಿಗೆ ಸಹಾಯ ಮಾಡಲು. ಬೆಂಚಿನ ಮೇಲೆ ಕುಳಿತು ಜನ ವಿಶ್ರಾಂತಿ ಪಡೆಯುತ್ತಾರೆ. ಲೈಟು ಕಂಬ ಅವರಿಗೆ ದಾರಿ ತೋರುತ್ತದೆ. ಪಾರ್ಕಿನಲ್ಲಿ ಹುಶಾರಾಗಿ ಓಡಾಡಲು ಕಲ್ಲಿನ ಹಾದಿ ಸಹಾಯ ಮಾಡುತ್ತದೆ. ನಮಗೆಲ್ಲರಿಗೂ ಒಂದೊಂದು ಗುರಿ ಇದೆ’ ಎಂದಿತು ಮರ.

ಅಷ್ಟು ಹೊತ್ತಿಗೆ ಓರ್ವ ವಯಸ್ಸಾದ ವ್ಯಕ್ತಿ ನಿಧಾನವಾಗಿ ನಡೆದುಕೊಂಡು ಬಂದರು. ದಣಿದವರಂತೆ ಕಾಣುತ್ತಿದ್ದ ಅವರು ಊರುಗೋಲನ್ನು ಇಟ್ಟು ಉಸ್ಸೆಂದು ಬೆಂಚಿನ ಮೇಲೆ ಕುಳಿತರು. ‘ಅಬ್ಬ ಈ ಬೆಂಚೊಂದು ಇಲ್ಲದಿದ್ದರೆ ನನ್ನ ಕತೆ ಮುಗಿಯುತ್ತಿತ್ತು’ ಅಂದರು. ಲೈಟುಕಂಬ ಪ್ರಖರವಾಗಿ ಬೆಳಗಿ ಅವರಿಗೆ ದಾರಿ ತೋರಿತು. ಕಿರುದಾರಿ ಅವರನ್ನು ಮನೆಯೆಡೆ ಕಳಿಸಿತು.

ಬೆಂಚಿಗೆ ಒಳಗೊಳಗೇ ಖುಷಿಯಾಯಿತು. ಆಲದ ಮರದ ಮಾತು ಅದಕ್ಕೆ ಅರ್ಥವಾಗಿತ್ತು. ಬೇರೆಯವರಿಗೆ ಸಹಾಯ ಮಾಡುವುದು ನಮ್ಮ ಕೆಲಸವನ್ನು ಅರ್ಥಪೂರ್ಣವಾಗಿಸುತ್ತದೆ ಅಂದುಕೊಂಡಿತದು. ಲೈಟುಕಂಬ ಮತ್ತೊಮ್ಮೆ ಬೆಳಗಿ ತನ್ನ ಸಹಮತ ವ್ಯಕ್ತಪಡಿಸಿತು. ಕಲ್ಲುಹಾಸಿನ ದಾರಿ ಕೂಡ ಮೌನವಾಗಿ ಸಮ್ಮತಿ ಸೂಚಿಸಿತು. ಇವುಗಳನ್ನು ನೋಡಿ ಆಲದ ಮರ ಮೆಲ್ಲಗೆ ಮುಗುಳ್ನಕ್ಕು ತಂಗಾಳಿಯಲ್ಲಿ ತಲೆದೂಗಿತು.

ಅವತ್ತಿನಿಂದ ಅವು ಯಾವುವೂ ದೂರು ಹೇಳಲಿಲ್ಲ. ಜಗತ್ತು ಒಂದು ಉತ್ತಮ ಸ್ಥಳವಾಗುವ ನಿಟ್ಟಿನಲ್ಲಿ ತಮ್ಮ ಪುಟ್ಟ ಪುಟ್ಟ ಕೆಲಸಗಳ ಅವಶ್ಯಕತೆ ಇದೆ ಎಂದವುಗಳಿಗೆ ಅರ್ಥವಾಗಿತ್ತು. ಬದುಕಿನಲ್ಲಿ ನಾವು ನಿರ್ವಹಿಸುವ ಪಾತ್ರ ಎಷ್ಟೇ ಚಿಕ್ಕದಿರಬಹುದು; ಒಟ್ಟಾರೆಯಾಗಿ ನೋಡಿದರೆ ಅದು ಕೂಡ ಮುಖ್ಯವೇ ಆಗಿರುತ್ತದೆ. ಇಲ್ಲಿ ಯಾವುದೂ ಅಮುಖ್ಯವಲ್ಲ ಎಂದು ಕುವೆಂಪು ಹೇಳಿರುವುದು ಅದೆಷ್ಟು ಸೂಕ್ತವಾಗಿದೆ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.