ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ತಮ್ಮ ಕಲಿಕಾ ಸಾಮರ್ಥ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಸಂದರ್ಭದಲ್ಲಿ ಅಪರಿಚಿತನಾದ ಕರ್ಣನ ಪ್ರವೇಶವಾಗುತ್ತದೆ. ಅರ್ಜುನನ ಸಮರವಿದ್ಯಾ ಕಲೆಗೆ ಸಮನಾಗಿ ತಾನೂ ಪ್ರತಿಭಾ ಪ್ರದರ್ಶನ ಮಾಡುವುದಾಗಿ ಘೋಷಿಸಿದ ಕರ್ಣನ ಮಾತು ಅಲ್ಲಿದ್ದ ದ್ರೋಣ, ಕೃಪ ಮೊದಲಾದವರಿಗೆ ಉದ್ಧಟತನವಾಗಿ ಕಾಣುತ್ತದೆ. ಅವರು ಕರ್ಣನ ಪ್ರತಿಭಾ ಪ್ರದರ್ಶನವನ್ನು ನೋಡುವ ಮೊದಲೇ ಅವನ ಕುಲದ ಸ್ಥಾನಮಾನವನ್ನು ಕೆಣಕಿ ಅರ್ಜುನನೊಂದಿಗೆ ಸೆಣಸಾಡುವ ಅವನ ಸಾಮಾಜಿಕ ಅರ್ಹತೆಯನ್ನು ಪ್ರಶ್ನಿಸುತ್ತಾರೆ.

ಅವರ ಪ್ರಶ್ನೆಗೆ ಉತ್ತರ ಕೊಡಲು ಹಿಂಜರಿಯುತ್ತಿದ್ದ ಕರ್ಣನ ಅವಸ್ಥೆ ನೋಡಿ ಮರುಗಿದ ದುರ್ಯೋಧನ ಎಲ್ಲದಕ್ಕೂ ಕುಲವನ್ನೇಕೆ ತಂದಿಕ್ಕುವಿರಿ? ಪರಾಕ್ರಮವೇ ಅವನ ಕುಲವಲ್ಲವೇ? ಎಂದು ಹೇಳಿ ಕರ್ಣನ ಸಾಮರ್ಥ್ಯ ಪ್ರದರ್ಶನಕ್ಕೆ ಅವನ ಕುಲವೇ ಅಡ್ಡಿಯಾಗುವುದಾದರೆ ಅವನನ್ನು ಈಗಲೇ ಕುಲಜನನ್ನಾಗಿ ಮಾಡುತ್ತೇನೆಂದು ಕೈ ಹಿಡಿದೊಯ್ದು ಕನಕಪೀಠದಲ್ಲಿ ಕುಳ್ಳಿರಿಸಿ ಚತುರ್ವೇದ ಪಾರಂಗತರಿಂದ ಪುಣ್ಯ ತೀರ್ಥೋದಕಗಳನ್ನು ಅಭಿಷೇಕ ಮಾಡಿಸಿ ಅಂಗ ರಾಜ್ಯವನ್ನೂ 18 ಕೋಟಿ ಹೊನ್ನನ್ನೂ ಕೊಟ್ಟು ಕರ್ಣನ ಗೆಳೆತನವನ್ನು ಬಯಸುತ್ತಾನೆ. ಇತರರು ಚಕ್ರವರ್ತಿಯಾದ ನನ್ನ ಕಾಲಿಗೆ ಬೀಳುತ್ತಾರೆ, ಜೀಯ, ಪ್ರಸಾದ, ಕ್ಷಮಿಸಿ ಎಂದೆಲ್ಲಾ ದೀನರಂತೆ ವರ್ತಿಸುತ್ತಾರೆ. ನೀನು ನನ್ನೊಂದಿಗೆ ಹಾಗೆ ನಡೆದುಕೊಳ್ಳುವುದು ಬೇಡ, ಮಿತ್ರನಂತಿರು ಎಂದು ಹೇಳಿ ಕೊನೆಯವರೆಗೂ ಹಾಗೆಯೇ ನಡೆದುಕೊಳ್ಳುತ್ತಾನೆ. ಕರ್ಣನ ಅನುಪಸ್ಥಿತಿ ದುರ್ಯೋಧನನನ್ನು ವಿಪರೀತವಾಗಿ ಕಾಡುವ ಅನೇಕ ಸಂದರ್ಭಗಳು ಸ್ನೇಹದ ಅಪೂರ್ವ ಲಕ್ಷಣಗಳನ್ನು ವಿವರಿಸುತ್ತವೆ.

ಇಲ್ಲಿ ಮನುಷ್ಯನ ಬದುಕಿನ ಎರಡು ಮುಖ್ಯ ಸಂಗತಿಗಳು ನಮ್ಮ ವಿವೇಚನೆಯನ್ನು ಎಚ್ಚರಿಸುತ್ತವೆ. ಒಂದು ಜಾತಿ ಸುಳಿ. ಅದರಿಂದ ಹೊರಬರಲು ಪ್ರಜ್ಞಾಪೂರ್ವಕ ಪ್ರಯತ್ನ ಬೇಕು. ಇಲ್ಲದಿದ್ದರೆ ಸುಳಿ ಸುತ್ತಿಕೊಂಡು ಮತ್ತೆ ಏಳದಂತೆ ಅದುಮಿ ಬಿಡುತ್ತದೆ. ಸಾಮಾಜಿಕ ಕೀಳರಿಮೆಯಿಂದ ಒಬ್ಬರನ್ನು ಮೇಲೆತ್ತುವ ಸಲುವಾಗಿ ಹೊನ್ನು ಮಣ್ಣು ಕೊಡುವುದು ತಾತ್ಕಾಲಿಕ ಕ್ರಮ. ಆದರೆ ಅವರ ವಿದ್ಯಾ ಕೌಶಲಕ್ಕೆ ಸಿಗಬೇಕಾದ ಮಾನ್ಯತೆ ಹಾಗೇ ಉಳಿಯಿತಲ್ಲ? ಅವರಿಗೆ ಸಾರ್ವಜನಿಕವಾಗಿ ಉಂಟಾದ ಅವಮಾನದ ಕಳಂಕ ಚತುರ್ವೇದ ಪಾರಂಗತರ ಪುಣ್ಯ ಜಲಾಭಿಷೇಚನದಿಂದ ಅಳಿಸಿಹೋದೀತೆ? ಮಣ್ಣು ಹೋಯ್ತು, ಹೊನ್ನು ಹೋಯ್ತು ಕೊಟ್ಟು ಪಡೆದ ಜೀವವೂ ಹೋಯ್ತು. ಜಾತಿನಿಷ್ಠ ವ್ಯಸನದ ದಪ್ಪದಪ್ಪ ಗೆರೆಗಳು ಮಾತ್ರ ಗಾಢವಾಗಿ ಉಳಿದಿವೆ. ಅವು ನಮ್ಮ ಕೆಲಸ, ನಾವು ತಿನ್ನುವ ಅನ್ನ, ತೊಗಲಿನ ಬಣ್ಣವನ್ನು ನೋಡಿ ಮೂದಲಿಸುತ್ತಿವೆ. ಕರ್ಣ ದ್ರೋಣರೆಲ್ಲ ಹೋದರೂ ಅವರ ನಡುವಿದ್ದ ಸಂಘರ್ಷ ಜೀವಂತವಾಗಿದೆ. ಹೋಗೇ ಹೋಗುವ ಜೀವದ ಜೊತೆಗೆ ಕಳಂಕಗಳೂ ಹೋಗುವಂತಿದ್ದರೆ ವರ್ತಮಾನ ಎಷ್ಟು ಚೆನ್ನಾಗಿರುತ್ತಿತ್ತು. ಯಾರ ಜೊತೆಗೇ ಆಗಲಿ, ಆತ್ಮೀಯತೆ ಎನ್ನುವುದು ನಿರಾಡಂಬರ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚುತ್ತದೆ. ಸ್ನೇಹದಲ್ಲಿ ಗಂಡು ಹೆಣ್ಣು, ಆಳು ಅರಸ, ಬಡವ ಬಲ್ಲಿದ ಎಂಬುದರ ನೆನಪೇ ಆಗದಷ್ಟು ಭೇದರಾಹಿತ್ಯ ಸಾಧ್ಯ ಎನ್ನುವುದನ್ನು ದುರ್ಯೋಧನ– ಕರ್ಣರ ನಡುವಿನ ಸಂಬಂಧ ಸಾರುತ್ತದೆ.

ಸದ್ಯದ ಡಿಜಿಟಲ್ ಯುಗದಲ್ಲಿ ಮನುಷ್ಯ ಮನುಷ್ಯರ ನಡುವೆ ಗಾಢವಾದ ಸ್ನೇಹ ಸಲುಗೆಯ ಅವಶ್ಯಕತೆಯಿದೆ.
ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂಟಿಯಾಗುತ್ತಿರುವ ಮನುಷ್ಯನ ಎದೆಯೊಳಗಿನ ನೋವನ್ನು ಅರಿಯಬಲ್ಲ ಸ್ನೇಹಿತರು ಅಪರೂಪವಾಗುತ್ತಿರುವ ಸಂದರ್ಭದಲ್ಲಿ ಒಬ್ಬರ ಉಪಸ್ಥಿತಿಗಾಗಿ ಮತ್ತೊಬ್ಬರು ಹಾತೊರೆಯುವ ಆಕರ್ಷಣೆ ಬೇಕಾಗಿದೆ. ಗೆಳೆಯರ ಸ್ನೇಹ ಸಲುಗೆಯ ಹಿತವಾದ ಬೆಸುಗೆಯಲ್ಲಿ ಎಲ್ಲ ಪ್ರತಿಷ್ಠೆಗಳು ಕರಗಿ ಉಳಿಯುವ ಮೈತ್ರಿ ವೈಭವ ಅಪರೂಪದ್ದು. ಗೆಳೆಯನ ಗೆಳೆತನಕ್ಕೆ ಸೋಲುವುದೇ ಗೆಲುವಿಗೆ ಸೋಪಾನ. ಯುದ್ಧದಿಂದ ಒಬ್ಬರ ಸೋಲು ಅನೇಕರಿಗೆ ಸಾವು. ಇಬ್ಬರಿಗೂ ಗೆಲುವು, ಸಂಭ್ರಮ ಸ್ನೇಹದ ಅಪ್ಪುಗೆಯಲ್ಲಿ ಮಾತ್ರ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.