ಮಹಾತ್ಮಾ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿದ್ದಾಗಿನ ಒಂದು ಘಟನೆ ಇದು. ಗಾಂಧಿ ಅವರನ್ನು ದಕ್ಷಿಣ ಆಫ್ರಿಕಾದ ಬ್ರಿಟಿಷ್ ಅಧಿಕಾರಿ ಸ್ಮಟ್ಸ್ ಹಲವಾರು ವರ್ಷ ಜೈಲಿನಲ್ಲಿ ಇಟ್ಟಿರುತ್ತಾರೆ. ಸ್ಮಟ್ಸ್ಗೆ ಗಾಂಧಿಯವರನ್ನು ಕಂಡರೆ ಆಗುತ್ತಿರಲಿಲ್ಲ; ಗಾಂಧೀಜಿಯ ಕಟ್ಟಾವಿರೋಧಿಯಾಗಿದ್ದರು. ಆದರೆ, ಸ್ಮಟ್ಸ್ ಅವರ ಶಿಸ್ತು, ಆಡಳಿತದ ವೈಖರಿಯನ್ನು ಮೆಚ್ಚಿದ್ದ ಗಾಂಧೀಜಿ ಜೈಲಿನಲ್ಲಿ ಅವರಿಗಾಗಿ ತಮ್ಮ ಕೈಯಾರೆ ಪಾದರಕ್ಷೆಗಳನ್ನು ತಯಾರು ಮಾಡಿ ಕೊಡುಗೆಯಾಗಿ ಅರ್ಪಿಸುತ್ತಾರೆ. ಆಗ ಸ್ಮಟ್ಸ್, ಗಾಂಧೀಜಿಗೆ ‘ಇವುಗಳನ್ನು ಧರಿಸುವ ಯೋಗ್ಯತೆ ನನಗಿಲ್ಲ’ ಎಂದು ಹೇಳುತ್ತಾರೆ.

ಮನುಷ್ಯನಲ್ಲಿ ಒಳ್ಳೆಯ ಗುಣಗಳಿರುವಂತೆ ಕೆಟ್ಟ ಗುಣಗಳೂ ಇವೆ. ತನ್ನದೇ ಆದ ವ್ಯಕ್ತಿತ್ವವಿದೆ. ತನ್ನದೇ ಆದ ಅಭಿಪ್ರಾಯಗಳಿವೆ. ಒಬ್ಬರ ಆಲೋಚನೆ, ಅಭಿಪ್ರಾಯಗಳು ನಮಗೆ ಹಿಡಿಸುವುದಿಲ್ಲವೆಂದ ಮಾತ್ರಕ್ಕೆ ಅವರು ನಮ್ಮ ಶತ್ರುಗಳೆಂದು ತಿಳಿದು ಹಗೆತನ ಸಾಧಿಸುವುದು ಯಾವತ್ತಿಗೂ ಸರಿಯಲ್ಲ. ಸದಾ ಸ್ವಾರ್ಥ, ಸ್ವಂತ ಲಾಭ, ವೃಥಾ ಹಗೆತನ ಸಾಧಿಸುವುದರಲ್ಲಿಯೇ ಕಳೆದರೆ ಬದುಕಿಗ್ಯಾವ ಅರ್ಥವಿದೆ? ‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ’ ಎಂದ ಪುರಂದರದಾಸರ ಕತೆ ಗೊತ್ತೇ ಇದೆ.

ಕೊರೋನಾ ಸಂಕಷ್ಟದಲ್ಲಿ ಜನ ಒಬ್ಬರಿಗೊಬ್ಬರು ಸಹಾಯ ಮಾಡಲು ಹಿಂದೆಮುಂದೆ ನೋಡಲಿಲ್ಲ, ಜಾತಿ ಮತಗಳನ್ನು ಎಣಿಸಲಿಲ್ಲ. ಸಾವಿರಾರು ವಲಸಿಗರು ಮಹಾನಗರಗಳನ್ನು ತೊರೆದು ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಳ್ಳಲು ಕಾಲುನಡಿಗೆಯಲ್ಲಿ ಪಾದಯಾತ್ರೆ ಆರಂಭಿಸಿದಾಗ ಅನ್ನ ನೀರಿಗೆ ಕೊರತೆಯಾಗದಂತೆ ‘ಲಂಗರ್’ ದಾಸೋಹ ನಡೆಸಿದ ಪುಣ್ಯವಂತರೂ ಇದ್ದರು. ದುಡಿಸಿಕೊಂಡು ನ್ಯಾಯವಾಗಿ ಕೊಡಬೇಕಿದ್ದ ಸಂಬಳವನ್ನೂ ಕೊಡದೇ ಕೈಗೆ ಕಾಸೂ ಇಡದೇ ದೌರ್ಜನ್ಯವನ್ನು ಮೆರೆದವರೂ ಇದ್ದರು. ಕೆಲಸದ ಸಹಾಯಕಿಯರಿಗೆ ಮನೆಯ ಒಡೆಯರು ಧಾರಾಳವಾಗಿ ರೇಷನ್, ಹಣ ಕೊಟ್ಟು ಮಾನವೀಯತೆ ತೋರಿದ್ದೂ ಉಂಟು. ಅನೇಕ ಕಾರ್ಪೊರೇಟ್ ಕಂಪನಿಗಳೂ ತಮ್ಮ ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಿ ನೆರವಾದವು. ಇನ್ನೊಂದೆಡೆ ಕೆಲವು ಖಾಸಗಿ ಕಂಪನಿಗಳು ಯಾವ ಸೌಲಭ್ಯವನ್ನೂ ನೀಡದೇ ಅಗತ್ಯಕ್ಕಿಂತ ಹೆಚ್ಚಾಗಿ ದುಡಿಸಿಕೊಂಡವು.

ಖಾಸಗಿ ಕಂಪನಿಯೊಂದರ ದಯಾಳು ಮಾಲೀಕ ತನ್ನ ಕಂಪನಿಯಲ್ಲಿ ಯಾರೂ ಉಪವಾಸ ಬೀಳಕೂಡದು ಎಂದು ಉಚಿತ ಆಹಾರ ಸಾಮಗ್ರಿಗಳಾದ ಅಕ್ಕಿ ಹಿಟ್ಟು ಬೇಳೆ ಎಣ್ಣೆಗಳನ್ನು ಕ್ವಿಂಟಲುಗಟ್ಟಲೆ ದೊಡ್ಡ ವಾಹನದಲ್ಲಿ ತುಂಬಿಸಿ ಕಳಿಸಿದ್ದರು. ಆದರೆ ಅದನ್ನು ವಿಲೇವಾರಿ ಮಾಡಬೇಕಿದ್ದ ಮ್ಯಾನೇಜರ್ ಅರ್ಧದಷ್ಟನ್ನು ಕಾರ್ಮಿಕರಲ್ಲಿ ಹಂಚಿ ಉಳಿದ ಅರ್ಧವನ್ನು ಕಡಿಮೆ ಬೆಲೆಗೆ ಸಿಬ್ಬಂದಿಗೆ ಮಾರಿದ. ಮನುಷ್ಯನ ನೀಚತನಗಳಿಗೆ ಕೊನೆಯೇ ಇಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಮಾಲೀಕನ ಔದಾರ್ಯವನ್ನು ಅವನು ತನ್ನ ಸ್ವಾರ್ಥಕ್ಕಾಗಿ ಮಾರಿಕೊಂಡ.

ದಿಲ್ಲಿಯ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ರೊಬೋಟಿಕ್ ನಾಯಿಯನ್ನು ತನ್ನ ‘ಸೆಂಟರ್ ಆಫ್ ಎಕ್ಸಲೆನ್ಸ್’ ಅಭಿವೃದ್ಧಿಪಡಿಸಿದೆ ಎಂದು ಹೇಳಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ನಗೆಪಾಟಲಾಯಿತು. ಒಂದು ಸುಳ್ಳಿನಿಂದ ಹೋಗುವ ಮಾನ ಸಾವಿರ ಸತ್ಯ ಹೇಳಿದರೂ ಗಳಿಸಲಾಗುವುದಿಲ್ಲ. ಇಂತಹ ಹೊತ್ತಿನಲ್ಲಿ ಶಾಂತಿ, ಸಹಿಷ್ಣುತೆ ಹಾಗೂ ಪ್ರೀತಿಯಿಂದ ಜಗತ್ತನ್ನು ಬದಲಾಯಿಸಿದ ಮಹಾನ್ ಚೇತನ ಗಾಂಧೀಜಿ ಪ್ರಾತಃಸ್ಮರಣೀಯರು. ಅವರ ವ್ಯಕ್ತಿತ್ವದ ಬೆಳಕು ವಿಶ್ವವನ್ನು ಸದಾ ಬೆರಗುಗೊಳಿಸುತ್ತಲಿದೆ. ದೊಡ್ಡವರು ದೊಡ್ಡವರಾಗುವುದು ತಮ್ಮ ದೊಡ್ಡ ಗುಣಗಳಿಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.