‘ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಸತ್ತಮೇಲೆ ಜಗತ್ತು ನಮ್ಮನ್ನು ಅತ್ಯಂತ ಗೌರವದಿಂದ ನೆನೆಸಿಕೊಳ್ಳಬೇಕು. ಅಂಥ ಸಾಧನೆಯನ್ನು ಮಾಡಬೇಕು’ ಹೀಗೆ ಹಿರಿಯನೊಬ್ಬ ಮಾತಾಡುವಾಗ ಯುವಕನೊಬ್ಬ ಕೇಳಿದ, ‘ಅಯ್ಯಾ ಇದು ತುಂಬಾ ವಿಚಿತ್ರ. ಸತ್ತಮೇಲೆ ಜಗತ್ತಿನಲ್ಲಿ ಏನಾದರೂ ನಮಗೇನು ತಿಳಿಯುತ್ತದೆ?’ ಎಂದ. ಹಿರಿಯ ನಕ್ಕು, ಎಲ್ಲರಿಗಿರುವುದೂ ಒಂದೇ ದೇಹ. ಆದರೂ ಕೆಲವರನ್ನು ಹೂಳಿದ ಕಡೆಗೆ ಸ್ಮಶಾನ ಅಂತೀವಿ. ಮತ್ತೆ ಕೆಲವರನ್ನು ಹೂಳಿದ ಕಡೆಯನ್ನು ಗದ್ದುಗೆ ಎಂದು ಗೌರವಿಸುತ್ತೇವೆ. ಗುರು ಸತ್ತಮೇಲೂ ಈ ಜಗತ್ತಿಗೆ ದಾರಿಯನ್ನು ತೋರುತ್ತಿರುತ್ತಾರೆ ಅಲ್ಲವೇ?’ ಎಂದ ಹಿರಿಯ.

ಪಟ್ಟುಬಿಡದೆ, ‘ನೀವು ಅಧ್ಯಾತ್ಮ ಅಂತ ಕಣ್ಣಿಗೆ ಕಾಣದ ಯಾವ ಸಂಗತಿಯನ್ನೋ ಹೇಳುತ್ತಿದ್ದೀರಿ. ನನಗೆ ಬೇಕಿರುವುದು ಅದಲ್ಲ. ಸತ್ತಮೇಲೆ ಮಣ್ಣಲ್ಲಿ ಕರಗಿ ನಮ್ಮ ಅಸ್ತಿತ್ವವೇ ಇರಲ್ಲ. ಆದರೂ ಬೆಲೆ ಎಲ್ಲಿಯದು ಹೇಳಿ’ ಎಂದ ಯುವಕ. ಹಿರಿಯ ಸ್ವಲ್ಪ ಗಂಭೀರವಾಗುತ್ತಾ, ‘ನಿಜ ನೀನು ಬುದ್ಧಿವಂತ. ಮನುಷ್ಯನ ಬೆಲೆಯ ಬಗ್ಗೆ ಕೇಳುತ್ತಿರುವೆ. ನಿನಗೆ ಎರಡು ಘಟನೆಗಳನ್ನು ಹೇಳುತ್ತೇನೆ. ಮಹಾನ್ ವಿಜ್ಞಾನಿ ಐಸಾಕ್ ನ್ಯೂಟನ್ ಮರಣ ಹೊಂದಿದ. ಇಂಥವನನ್ನು ಕಳಕೊಂಡು ಬಿಟ್ಟೆವಲ್ಲಾ ಈಗೇನು ಮಾಡುವುದು ಎಂದು ಜಗತ್ತು ಮಮ್ಮಲ ಮರುಗಿತು. ಅಷ್ಟರಲ್ಲಿ ನ್ಯೂಟನ್ನ ಹಲ್ಲೊಂದು ಹರಾಜಿಗೆ ಬಂತು. ತಕ್ಷಣವೇ ಒಬ್ಬ ಅದನ್ನು ಖರೀದಿಸಿ ತನ್ನ ಉಂಗುರಕ್ಕೆ ಸೇರಿಸಿ, ತನ್ನೊಂದಿಗೆ ಅವನನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದ. ಅದಕ್ಕಾಗಿ ಅವನು ಭಾರಿ ಮೊತ್ತವನ್ನು ತೆತ್ತ. ಜನ ಎಲ್ಲರೂ ನ್ಯೂಟನ್ನನ್ನು ಹೀಗೂ ನಮ್ಮ ಹತ್ತಿರ ಉಳಿಸಿಕೊಳ್ಳಬಹುದು ಎಂದು ನಮಗೆ ಯಾಕೆ ತೋಚಲಿಲ್ಲವೋ ಎಂದು ಪೇಚಾಡಿಕೊಂಡರಂತೆ. ಅದೇ ನೆಪೋಲಿಯನ್ ಈ ಪ್ರಪಂಚವನ್ನೇ ಆಳಲು ಹೊರಟವನು. ಕ್ರೌರ್ಯದ ಪರಮಾವಧಿಯನ್ನು ಮೆರೆದವನು. ಅವನು ಯುದ್ಧದ ಬಗ್ಗೆ ಬರೆದ ಪುಟ್ಟ ಟಿಪ್ಪಣಿಯ ಚೀಟಿಯನ್ನು ಹರಾಜು ಹಾಕಿದಾಗ, ಅದನ್ನು ಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಒಬ್ಬ ಅತ್ಯಂತ ಕಡಿಮೆ ಹಣಕ್ಕೆ ಅದನ್ನು ಕೊಂಡ. ಯಾರೋ ಕೊಂಡವನನ್ನು ಕೇಳಿದ: ‘ರಾಕ್ಷಸನೊಬ್ಬನ ಟಿಪ್ಪಣಿಯಿಂದ ಏನು ಪ್ರಯೋಜನ’. ಕೊಂಡವ ಹೇಳಿದ: ‘ಜಗತ್ತನ್ನು ಚೆಂಡು ಮಾಡಿಕೊಂಡು ಒದೆಯಲು ಹೊರಟವನ ಈ ಟಿಪ್ಪಣಿ ಅತ್ಯಂತ ಕಡಿಮೆ ಮೊತ್ತಕ್ಕೆ ಹರಾಜಾಯಿತು. ಅದನ್ನು ಕೊಳ್ಳಲು ಯಾರೂ ಮುಂದೆ ಬರದಾದಾಗ ನಾನು ಕೊಂಡೆ ಯಾಕೆಂದರೆ ಕ್ರೌರ್ಯವನ್ನು ಯಾವತ್ತೂ ಜಗತ್ತು ಒಪ್ಪಲ್ಲ ಎನ್ನುವ ಪಾಠವನ್ನು ನೀವು ತಿಳಿಯಿರಿ ಎಂದು ನನ್ನ ಮಕ್ಕಳು– ಮೊಮ್ಮಕ್ಕಳಿಗೆ ಹೇಳಲು.’ ಈಗ ಹೇಳು, ಜಗತ್ತು ನಮ್ಮ ಕೆಲಸದಿಂದ ನಮ್ಮನ್ನು ನೆನಪಿಟ್ಟುಕೊಳ್ಳುತ್ತದೆಯೇ ಇಲ್ಲವೇ?’ ಎಂದ ಹಿರಿಯ.

ಯುವಕನಿಗೆ ಅರ್ಥವಾಯಿತು. ಹಿರಿಯ ಹೇಳಿದ, ‘ನಮ್ಮ ಕೆಲಸಗಳು ನಿಸ್ವಾರ್ಥವಾಗಿದ್ದು, ಜನೋಪಯೋಗಿ ಆಗಿದ್ದರೆ ಗೌರವ ತಾನಾಗೇ ಬರುತ್ತದೆ. ಅದಕ್ಕೆ ಮತ್ತೆ ಯಾರ ವಿವರಣೆಯ ಅಗತ್ಯವೂ ಇರುವುದಿಲ್ಲ. ನಮ್ಮ ನಿರ್ಧಾರಗಳು ಇನ್ನೊಬ್ಬರನ್ನು ಬಾಧಿಸುವ, ಅವಮಾನಿಸುವ ಹಾಗಿದ್ದಾಗ ಪ್ರಪಂಚ ನಮ್ಮ ನಂತರವೂ ಕೀಳಾಗಿಯೇ ನೋಡುತ್ತದೆ ನೆನಪಿಟ್ಟುಕೋ.’

ಸಮಾಜಕ್ಕೆ ಎರವಾಗದ ಹಾಗೆ ಬದುಕಿಬಿಟ್ಟರೆ ಅದೇ ದೊಡ್ಡದು. ನಮ್ಮ ಅಸ್ತಿತ್ವದಿಂದ ಯಾರಿಗೂ ಕೇಡು ಸಂಭವಿಸದಿದ್ದರೆ ಅದೇ ಸಾಧನೆ ಅಲ್ಲವೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.