ಅದೊಂದು ವಿಚಿತ್ರ ಸನ್ನಿವೇಶ. ಜನ ಓಡಾಡುವ ದಡದ ರಸ್ತೆಗೆ ಚೇಳೊಂದು ಬಂದು ಬಿದ್ದಿತ್ತು. ಸಾಧುವೊಬ್ಬ ಅದನ್ನು ಉಳಿಸಲು ಬೆರಳುಗಳಿಂದ ಹಿಡಿದು ಕೊಳಕ್ಕೆ ಬಿಡಲು ಮುಂದಾದ. ಹಿಡಿದುಕೊಳ್ಳುವುದೇ ತಡ ಅದು ಕೊಂಡಿಯಿಂದ ಕುಟುಕುತ್ತಿತ್ತು. ಸಾಧು ಬಿಡಲಿಲ್ಲ. ಮತ್ತೆ ಹಿಡಿದುಕೊಂಡ, ಮತ್ತೆ ಉಳಿಸಲು ಪ್ರಯತ್ನ ಪಟ್ಟ. ನೋಡುವ ಜನ ಕಿರುಚಿಕೊಂಡರು. ಹತ್ತಾರು ಸಲ ಇದೇ ಪ್ರಯತ್ನ. ಅದೇ ಕುಟುಕುವ ಏಡಿ. ರಕ್ತ ನೋವು ವೇದನೆ. ಜನರೆಲ್ಲ ಸಾರಿ ಸಾರಿ ಹೇಳಿದರು, ‘ಚೇಳನ್ನು ಮತ್ತೆ ಮತ್ತೆ ಹಿಡಿಯಬೇಡಿ. ಅದು ಕಚ್ಚುತ್ತದೆ, ವಿಷಕಾರಿ’ ಎಂದೆಲ್ಲ ಸಂಕಟದಿಂದ ಹೇಳಿದರು. ಸಾಧು ಕೇಳಲಿಲ್ಲ. ಕೊನೆಗೆ ಹೇಗೋ ಚೇಳನ್ನು ನೀರಿನೊಳಕ್ಕೆ ಬಿಟ್ಟನು. ಜನರ ಪ್ರಶ್ನೆ ಒಂದೇ. ಚೇಳು ಮತ್ತೆ ಮತ್ತೆ ಕಚ್ಚಿದರೂ ಸಾಧು ಏಕೆ ಪ್ರಯತ್ನ ಬಿಡಲೊಲ್ಲ ಅಂತ. ಸಾಧು ನಗುತ್ತ ಉತ್ತರ ಕೊಟ್ಟ, ‘ಕುಟುಕುವುದು ಚೇಳಿಗೆ ರೂಢಿ ಸಹಜ ಸ್ವಭಾವ. ಬಿಡದೆ ಅದನ್ನು ಮತ್ತೆ ಮತ್ತೆ ಎತ್ತಿಕೊಂಡು ಪ್ರಾಣ ಉಳಿಸಲು ಮುಂದಾಗುವುದು ನನ್ನ ರೂಢಿ ಸಹಜ ಸ್ವಭಾವ’. ಸ್ವಭಾವ ರೂಢಿಗಳೇ ಹೀಗೆ. ಕುಟುಕುವುದು ಚೇಳಿಗೆ ರೂಢಿ ಮತ್ತು ಕಾಪಾಡುವುದು ಸಾಧುವಿಗೆ ರೂಢಿ. ಚೇಳಿಗೆ ಏನು ಗೊತ್ತು? ಅದಕ್ಕೆ ಸ್ವರಕ್ಷಣೆ ಎಂದರೆ ವಿಷಯುಕ್ತ ಕೊಂಡಿಯಿಂದ ಕುಟುಕುವುದು ಅಷ್ಟೇ. ಸಾಧುವಿಗೆ ನೋವನ್ನು ಸಹಿಸಿ ಇನ್ನಷ್ಟು ಮಾಗುವುದು. ಜನ ಸಾಮಾನ್ಯರಿಗೆ ಈ ಎರಡು ಸಂಗತಿ ಒಂದು ವಿಸ್ಮಯ.

ಪುರಾಣಗಳಲ್ಲಿ ಹಲವು ನಿದರ್ಶನಗಳಿವೆ. ರೂಢಿಗಳು ಇನ್ನೊಬ್ಬರಿಗೆ ಹಾನಿ ನೋವುಂಟು ಮಾಡಿದರೂ ಆ ರೂಢಿಯನ್ನು ಪರಿಗಣಿಸದ ಪಾತ್ರಗಳಿವೆ. ಶಿಶುಪಾಲನಿಗೆ ಕೃಷ್ಣನನ್ನು ಜರೆಯುವುದೇ ರೂಡಿ, ಪ್ರಹ್ಲಾದನಿಗೆ ವಿಷ್ಣುವನ್ನು ಜಪಿಸುವುದೇ ರೂಢಿ. ಶಕುನಿಗೆ ಕುತಂತ್ರಗಳ ರಚಿಸುವುದೇ ರೂಢಿ, ವಿಭೀಷಣನಿಗೆ ಸಜ್ಜನಿಕೆಯೇ ರೂಢಿ, ಅವರವರ ರೂಢಿಗಳೇ ಅವರವರ ನಡತೆ ಮತ್ತು ಬಾಳನ್ನು ರೂಪಿಸುತ್ತಿರುವಾಗ ಅವೇ ಅವರವರ ಯೋಚನೆಗಳಾಗಿ ನಿರ್ಮಾಣವಾಗುತ್ತವೆ. ಕುಟುಕುವವರು ಚೇಳಾಗಿ. ಕಾಪಾಡುವವರು ಸಾಧುಗಳಾಗಿ ಜೀವನದಲ್ಲಿ ನೆಲೆಯೂರುತ್ತಾರೆ. ಅಚ್ಚರಿಯೆಂದರೆ ಕೆಲವು ರೂಢಿಗಳೇ ಅನೇಕರಿಗೆ ಅನನ್ಯ ಅಸ್ತಿತ್ವ ಮತ್ತು ಮನ್ನಣೆಯನ್ನು ತಂದುಕೊಡುತ್ತವೆ. ಕೂತಲ್ಲಿ ನಿಂತಲ್ಲಿ ತಾಳ ತಂತಿ ಜಪಿಸುವವ ಖ್ಯಾತ ಸಂಗೀತಗಾರ ಆಗಬಲ್ಲ. ಅಲ್ಲಲ್ಲಿ ಸಾಲುಗಳನ್ನು ಬರೆಯಬಲ್ಲವರು ಕವಿ ಲೇಖಕರಾಗಬಲ್ಲರು. ಗೆರೆ ಎಳೆಯುವ ರೂಢಿಯೇ ಮುಂದೆ ಬಹುದೊಡ್ಡ ಕಲಾವಿದರನ್ನಾಗಿಸಬಹುದು. ರೂಢಿಗತ ಸಂಗತಿಗಳೇ ಬಾಳನು ಬೆಳಗಲೂ ಬಲ್ಲದು, ಕೊಲ್ಲಲೂ ಬಹುದು. ಹಾಸುಹೊಕ್ಕಾಗಿ ಬಿಡುವ ರೂಢಿಗಳೇ ಗುಣಾತ್ಮಕವಾದ ಹವ್ಯಾಸವಾದವರ ಕತೆಗಳೇ ಚೆಂದ.

ಪ್ರಾಣ ಭಯ ಮತ್ತು ಸ್ವರಕ್ಷಣೆಗಾಗಿ ಇನ್ನೊಬ್ಬರನ್ನು ಕೊಲ್ಲುವ, ನೋಯಿಸುವ ಮಾರ್ಗದಲ್ಲಿ ಸಹನೆ ಮತ್ತು ಅನುಕಂಪಕ್ಕೆ ಆಸ್ಪದವೇ ಇಲ್ಲ. ಬೋಧಿಸುವುದು ಸಂತೈಸುವುದು ರೂಢಿಯಾಗಿದ್ದ ಬುದ್ಧ, ನೋವು ಕೊಡುವ ಜನರ ರೂಢಿಗಳ ಬಗ್ಗೆ ಕಿಡಿಕಾರಲಿಲ್ಲ. ಅಂಗುಲಿ ಮಾಲಾನಂತಹ ಕ್ರೂರಿಯೂ ಮೊಣಕಾಲೂರಿದ. ದೋಚುವುದು ಮತ್ತು ಯುದ್ಧ ಸಾರುವುದೇ ರೂಢಿಯಾದ ದೇಶಕ್ಕೆ ಶಾಂತಿ ಮಾತುಕತೆ ಹಾಸ್ಯಾಸ್ಪದ. ಎಷ್ಟಾದರೂ ನಿಂದಿಸಲಿ ಬೆದರಿಸಲಿ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳುವುದನ್ನೇ ರೂಢಿ ಮಾಡಿಕೊಂಡ ಶಿಕ್ಷಕ ಸದ್ಯ ಕಹಿಯನ್ನೇ ಉಣಬಡಿಸಿದರೂ ನಾಳೆ ಸಿಹಿಯಾದ ಭವಿಷ್ಯಕ್ಕೆ ನಾಂದಿಯಾಗುವುದೆಂಬ ನಂಬಿಕೆ ಆದರ್ಶಗಳನ್ನು ಇನ್ನೂ ಜೀವಂತವಾಗಿ ಉಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.