ಪ್ರತಿದಿನ ಬೆಳಿಗ್ಗೆ ಪರಿಚಯವಿರಲಿ, ಇಲ್ಲದಿರಲಿ ಎದುರಾದವರಿಗೆಲ್ಲ ನಮಸ್ಕಾರ ಎಂದು ಹೇಳಿ ಮುನ್ನಡೆಯುವುದು ಸಾಕ್ರಟೀಸನ ಅಭ್ಯಾಸಗಳಲ್ಲಿ ಒಂದಾಗಿತ್ತು. ಎಲ್ಲರೂ ಗೌರವದಿಂದ ಪ್ರತಿಯಾಗಿ ನಮಸ್ಕರಿಸುತ್ತಿದ್ದರು. ಒಂದು ದಿನ ಸಾಕ್ರಟೀಸ್ ನಮಸ್ಕಾರ ಹೇಳಿದೊಡನೆ ಮನುಷ್ಯನೊಬ್ಬ ತೀವ್ರ ಅಸಹನೆಯಿಂದ ‘ನೀನು ಯಾರು? ನನಗ್ಯಾಕೆ ನಮಸ್ಕಾರ ಮಾಡ್ತೀಯ’ ಎಂದು ಪ್ರಶ್ನಿಸುತ್ತಾನೆ. ಪ್ರಶ್ನಿಸುವುದನ್ನು ಪ್ರೋತ್ಸಾಹಿಸುತ್ತಿದ್ದ ಸಾಕ್ರಟೀಸನಿಗೆ ತನ್ನ ಸೌಜನ್ಯಯುತ ನಮಸ್ಕಾರವನ್ನು ಪ್ರಶ್ನಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ; ಏನನ್ನೂ ಉತ್ತರಿಸದೆ ಮುಗುಳ್ನಕ್ಕು ಮುನ್ನಡೆದ. ಇದು ಮುಂದುವರಿಯಿತು. ಸಾಕ್ರಟೀಸ್ ನಮಸ್ತೆ ಎನ್ನುವುದು, ಆ ಮನುಷ್ಯ ದಿನದಿನಕ್ಕೂ ಹೆಚ್ಚಿದ ಅಸಹನೆಯಿಂದ ನಿಂದಿಸುವುದು ನಡೆದೇ ಇತ್ತು. ಸಾಕ್ರಟೀಸನಷ್ಟೇ ಜನಪ್ರಿಯತೆ ಅವನಿಗೆ ಬರತೊಡಗಿತು. ಇದನ್ನೆಲ್ಲಾ ಗಮನಿಸುತ್ತಲೇ ಇದ್ದ ಒಬ್ಬ ಹಿರಿಯರು ಒಂದು ದಿನ ಸಾಕ್ರಟೀಸನನ್ನು ತಡೆದು ಕೇಳಿದರು: ‘ಅಲ್ಲಪ್ಪಾ, ನೀನು ಪ್ರತಿದಿನ ಎಲ್ಲರಂತೆ ಆ ಮನುಷ್ಯನಿಗೂ ನಮಸ್ಕಾರ ಮಾಡುವುದು, ದಿನವೂ ಅವನು ನಿನ್ನನ್ನು ಬಾಯಿಗೆ ಬಂದಂತೆ ಅನ್ನುವುದು ನಡೆದೇ ಇದೆ. ಆದರೂ ನೀನ್ಯಾಕೆ ಅವನಿಗೆ ದಿನವೂ ನಮಸ್ಕರಿಸುತ್ತೀಯ?’ ಅದಕ್ಕೆ ಸಾಕ್ರಟೀಸ್ ಕೊಟ್ಟ ಉತ್ತರ ಮಾರ್ಮಿಕವಾಗಿದೆ: ಅವನ ನಿಂದನೆಯಿಂದ ನನಗೆ ನೋವಾಗಲಿಲ್ಲ, ಅಚ್ಚರಿ ಕೂಡ ಆಗಲಿಲ್ಲ. ಅವನು ನನ್ನನ್ನು ನಿಂದಿಸುವ ಕೆಟ್ಟ ಹಟವನ್ನು ಬಿಡಲು ತಯಾರಿಲ್ಲ. ಅಂದಮೇಲೆ ನಾನೇಕೆ ನಮಸ್ಕರಿಸುವ ನನ್ನ ಸನ್ನಡತೆಯನ್ನು ಬಿಡಲಿ?

ಹೌದಲ್ಲವೇ? ಯಾರು ಯಾವುದನ್ನು ಬಿಡುವುದರಿಂದ ವ್ಯಕ್ತಿಗೂ ಸಮಾಜಕ್ಕೂ ಒಳ್ಳೆಯದಾದೀತು? ಜನರು ವಿಕೃತಿಗಳ ಮೂಲಕ ಜನಪ್ರಿಯರಾಗುವುದರಿಂದ ದೂರವಿರಬೇಕು. ಇಂದು ನಾವೆಲ್ಲಾ ವೇಗವೈಭವದ ಜೀವನ ಕ್ರಮದಲ್ಲಿ ಸಜ್ಜನಿಕೆಯನ್ನು ಕಳೆದುಹೋದ ಮೌಲ್ಯವೆಂದೇ ಭಾವಿಸಿದ್ದೇವೆ. ಅದು ಶಾಲೆ ಕಾಲೇಜು ಇರಲಿ, ಮಾರ್ಕೆಟ್ಟು, ರೈಲು ಬಸ್ ಪ್ರಯಾಣ ಏನೇ ಇರಲಿ ಸಾರ್ವಜನಿಕ ಸನ್ನಡತೆ ಎನ್ನುವುದು ಮರೀಚಿಕೆಯಾದಂತಿದೆ. ನಾವು ಆಡುವ ಮಾತಿನಲ್ಲಿ ನಯ, ನಾಗರಿಕತೆ ಮಾಯವಾಗಿದೆ. ನುಡಿ ಎನ್ನುವುದು ಮನುಷ್ಯನ ನೈತಿಕ ಅಭಿವ್ಯಕ್ತಿಯ ಸಾಧನ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ, ಸಿನಿಮಾಗಳಲ್ಲಿ ಕೆಲವರು ಬಳಸುವ ಭಾಷೆ ಸಾಮಾಜಿಕ ನೈತಿಕತೆಯ ಗಡಿಗೆರೆಗಳನ್ನು ಮೀರಿದೆ. ಅದು ಪೂರ್ವಗ್ರಹ ಮತ್ತು ವಿಕಾರಗಳನ್ನೇ ರೂಢಿಗತವಾಗಿಸಿಕೊಂಡ ಸಾರ್ವಜನಿಕ ಲಜ್ಜೆ ಕಳೆದುಕೊಂಡ ಅರೆಬರೆ ವಿದ್ಯಾವಂತ ಸಮುದಾಯದ ನಡೆ. ರಾವಣಗುಣಗಳೇ ಎಲ್ಲೆಡೆ ವಿಜೃಂಭಿಸುತ್ತಿರುವ ಅನಪೇಕ್ಷಿತ ಅನಾಗರಿಕತೆ.

ಆದ್ದರಿಂದಲೇ ಹಿರಿಯರಲ್ಲಿ ನೈತಿಕ ಆತಂಕವೊಂದು ಮನೆ ಮಾಡುತ್ತಿದೆ. ಸಂಬಂಧವೇ ಇಲ್ಲದಿದ್ದರೂ ಉಪದ್ರವ ಕೊಡುವುದನ್ನು ಪ್ರಶ್ನಿಸಲಾಗದ ಅಸಹಾಯಕತೆ ಕಾಡುತ್ತಿದೆ. ಹಬ್ಬಗಳಲ್ಲಿ ಎಲ್ಲರೂ ಒಂದಾಗಿ ಆಟವಾಡುವ, ಕೊಡು-ಕೊಳ್ಳುವ ಸಡಗರಗಳಿಂದ ದೂರವಾಗಿದ್ದೇವೆ. ಎಲ್ಲರನ್ನೂ ಎಲ್ಲದನ್ನೂ ಅನುಮಾನಿಸುವ ಸಿನಿಕತನ ಸಾರ್ವತ್ರಿಕವಾಗಿದೆ.

ಮಾತು ಮತ್ತು ನಡವಳಿಕೆ ಆಧ್ಯಾತ್ಮಿಕವಾಗಿ ಸೋತ ನೆಲದಲ್ಲಿ ಸಾರ್ವಜನಿಕ ನೈತಿಕತೆಯ ಮರುಸೃಷ್ಟಿಗೆ ಹೆಗಲು ಕೊಡುವವರು ಬೇಕಾಗಿದೆ. ಆಳುವ ಶಕ್ತಿಕೇಂದ್ರಗಳಲ್ಲಿ ಕುಸಿದ ನೈತಿಕತೆಯ ಮಾದರಿಯನ್ನು ಅನುಸರಿಸುವ ಸಮಾಜದಲ್ಲಿ ಸನ್ನಡತೆಯ ಹುಡುಕಾಟ ಕಷ್ಟ. ರಾವಣನ ಸೀತಾಪಹರಣದ ಯೋಜನೆಯನ್ನು ತಡೆಯಲೆಳಸಿದ ಅವಲೋಕಿನಿ ದೇವತೆ ‘ಸಮುದ್ರವೇ ಬಿಸಿಯಾಗಿ ಬಿಟ್ಟರೆ ಬೆರೆಸಲು ತಣ್ಣೀರನ್ನು ಎಲ್ಲಿಂದ ತರುವುದು’ ಎನ್ನುತ್ತಾಳೆ. ಆಗಿನ ಒಬ್ಬ ರಾವಣ ಅವಳ ಮಾತನ್ನು ಕೇಳುವುದಿಲ್ಲ. ಈಗ ಅನೇಕ ರಾವಣರು. ಅವರನ್ನು ತಡೆದು ಬುದ್ಧಿ ಹೇಳುವ ದೇವತೆಯರಿಲ್ಲ.

ನಮ್ಮ ಮನಸ್ಸು ಕಪಟವಿಲ್ಲದ ಆಲೋಚನೆ ಮತ್ತು ನಡವಳಿಕೆಗಳಿಂದ ಸ್ಪಂದನಶೀಲಗೊಳ್ಳಬೇಕಿದೆ.
ಸಾಮಾಜಿಕ ಹಿತವನ್ನು ಸೃಷ್ಟಿಸುವುದು ಮಾತ್ರವಲ್ಲ, ಅದನ್ನು ಮುಕ್ತವಾಗಿ ಸ್ವೀಕರಿಸುವ ಯೋಗ್ಯ ಮನಸ್ಸೂ ಇರಬೇಕು. ಮುಖವಾಡಗಳ ಒಳಗಿನ ಕ್ರೌರ್ಯ ಕಳಚಿ ಕೃತಜ್ಞತೆ ಅರಳಬೇಕು. ಆಡುವ ಮಾತುಗಳಲ್ಲಿ ಹೃದಯ ತುಂಬಿ ಬರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.