ವಿಜಯಪತ್ ಸಿಂಘಾನಿಯಾ ಅವರು ರೇಮಂಡ್ ಗ್ರೂಪ್ನ (Raymond Group) ಮಾಜಿ ಅಧ್ಯಕ್ಷರು. ಅವರು ರೇಮಂಡ್ ಸಮೂಹವನ್ನು ವಿಶ್ವಪ್ರಸಿದ್ಧ ಬ್ರ್ಯಾಂಡ್ ಆಗಿಸಿ, ವಿಶ್ವದ ಅತಿ ದೊಡ್ಡ ಸೂಟ್ ತಯಾರಿಕಾ ಕಂಪನಿಗಳಲ್ಲೊಂದು ಆಗುವಂತೆ ಕಟ್ಟಿ ಬೆಳೆಸಿದರು. ಅವರನ್ನು ‘ಟೆಕ್ಸ್ಟೈಲ್ ಕಿಂಗ್’ ಎಂದು ಕರೆಯಲಾಗುತ್ತಿತ್ತು. ‘ದಿ ಕಂಪ್ಲೀಟ್ ಮ್ಯಾನ್’ ಎಂಬ ರೂಪಕದೊಂದಿಗೆ ರೇಮಂಡ್ ಅನ್ನು ಮನೆಮನೆಗೆ ಪ್ರಸಿದ್ಧಗೊಳಿಸಿದರು. ಅವರು ಅದ್ಭುತ ಪೈಲಟ್ ಕೂಡ ಆಗಿದ್ದರು. 2005ರಲ್ಲಿ ಹಾಟ್ ಏರ್ ಬೆಲೂನ್ನಲ್ಲಿ ಅತಿ ಹೆಚ್ಚು ಎತ್ತರಕ್ಕೆ ಹಾರಿದ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

2015ರಲ್ಲಿ ಇಂತಹ ಈ ಮಹಾನ್ ವ್ಯಕ್ತಿಯ ಜೀವನದಲ್ಲಿ ಅತಿ ದೊಡ್ಡ ತಿರುವು ಬಂತು. ಭಾವನಾತ್ಮಕವಾಗಿ ಅವರು ತಮ್ಮ ಕಂಪನಿಯ ಸಂಪೂರ್ಣ ಷೇರುಗಳನ್ನು (ಸುಮಾರು ಶೇ 37) ತಮ್ಮ ಮಗ ಗೌತಮ್ ಸಿಂಘಾನಿಯಾ ಅವರಿಗೆ ಹಸ್ತಾಂತರಿಸಿದರು. ನಂತರ ಅದನ್ನೇ ಅವರು ತಮ್ಮ ‘ಅತ್ಯಂತ ದೊಡ್ಡ ತಪ್ಪು’ ಎಂದು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಕೆಲಕಾಲದ ಬಳಿಕ ಆಸ್ತಿ ವಿವಾದದಲ್ಲಿ ಮಗನೇ ಅವರನ್ನು ಅವರು ನಿರ್ಮಿಸಿದ್ದ ಪ್ರಸಿದ್ಧ ‘ಜೆಕೆ ಹೌಸ್’ನಿಂದ ಹೊರಹಾಕಿದರು. ಸಾವಿರಾರು ಕೋಟಿ ಮೌಲ್ಯದ ಸಾಮ್ರಾಜ್ಯ ಕಟ್ಟಿ ನಿಲ್ಲಿಸಿದ್ದ ಸಿಂಘಾನಿಯ ವೃದ್ಧಾಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂಬ ವರದಿಗಳು ಜನಮನದಲ್ಲಿ ಆಘಾತ ಮೂಡಿಸಿತು.

ಒಬ್ಬ ತಂದೆಯಾಗಿ ವಿಜಯಪತ್ ಸಿಂಘಾನಿಯಾ ದೊಡ್ದ ಆಸ್ತಿಯ ಭಾಗವನ್ನು ಮಗನಿಗೆ ಹಸ್ತಾಂತರಿಸಿದಾಗ ತನ್ನ ಕುಟುಂಬದ ಪರಂಪರೆ ಸುರಕ್ಷಿತ ಕೈಗಳಲ್ಲಿದೆ ಎಂದು ಭಾವಿಸಿದ್ದರು. ಕಡೆಗೆ ಅನೇಕ ಕಷ್ಟಗಳನ್ನು ಅನುಭವಿಸಿದ ಆ ದೊಡ್ದ ಜೀವ ಸಾರ್ವಜನಿಕವಾಗಿ ದುಃಖ ವ್ಯಕ್ತಪಡಿಸಿ, ತಮ್ಮ ಮಗನೇ ಅವರನ್ನು ಬೀದಿಗೆ ತಳ್ಳಿದ ಮತ್ತು ಮೂಲಭೂತ ಸೌಲಭ್ಯಗಳನ್ನೂ ಕಸಿದುಕೊಂಡ ಎಂದು ನೋಯುವಂತಾಯಿತು. ಕೊನೆಗೆ ತಮ್ಮ ಆತ್ಮಗೌರವಕ್ಕಾಗಿ ಹೋರಾಟ ನಡೆಸುತ್ತಾ, ಇತ್ತೀಚೆಗೆ 28 ಮಾರ್ಚ್ 2026ರಂದು ಅವರು ಇಹಲೋಕ ತ್ಯಜಿಸಿದರು.

ಈ ಘಟನೆ ಬದುಕಿನ ಅತ್ಯಂತ ಕಹಿ ಪಾಠವನ್ನು ಕಲಿಸುತ್ತದೆ. ನಮ್ಮ ಮಕ್ಕಳು, ಜೀವನ ಸಂಗಾತಿ ಅಥವಾ ಯಾವುದೇ ಸಂಬಂಧಿಕರು ಎಷ್ಟೇ ಪ್ರಿಯರಾಗಿದ್ದರೂ, ತಾಯಿ-ತಂದೆಯೇ ಆಗಿದ್ದರೂ ನೀವು ಬದುಕಿರುವಾಗಲೇ ಎಲ್ಲವನ್ನೂ ಯಾರಿಗೂ ಸಂಪೂರ್ಣವಾಗಿ ಒಪ್ಪಿಸಬಾರದು. ಅನೇಕ ನಗರಗಳಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮಗಳನ್ನು ನೋಡಿದರೆ ಚಿಂತೆಯಾಗುತ್ತದೆ. ಹಣ ಮಾಡುವ ಉದ್ಯಮದಂತೆ ಜನರು ವೃದ್ಧರಿಗಾಗಿ ಪಿಜಿ ವಸತಿಗಳನ್ನು ನಡೆಸುತ್ತಿದ್ದಾರೆ. ಹೆತ್ತ ಮಕ್ಕಳೇ ತಮ್ಮನ್ನು ಸಾಕಿ ಬೆಳೆಸಿ ವಿದ್ಯೆ ಕಲಿಸಿ ತಾವು ಕೂಡಿಟ್ಟ ಸಂಪತ್ತನ್ನು ಧಾರೆ ಎರೆದು ನೆಮ್ಮದಿಯ ಬದುಕನ್ನು ನೀಡಿದ ತಮ್ಮ ತಂದೆ ತಾಯಿಯರನ್ನು ಅಲ್ಲಿಗೆ ತಂದು ಬಿಡುವ ಕಲ್ಪನೆಯೇ ಅತ್ಯಂತ ಘೋರವಾದುದು.

ಇತ್ತೀಚೆಗೆ ಅನ್ನದಾನಕ್ಕಾಗಿ ವೃದ್ಧಾಶ್ರಮಕ್ಕೆ ಹೋಗಿದ್ದ ಗೆಳತಿಯೊಬ್ಬಳು ಅಲ್ಲಿನ ಸ್ಥಿತಿಯನ್ನು ಕಣ್ಣಾರೆ ಕಂಡು ಕಣ್ಣೀರಾಗಿದ್ದಳು. ಮಕ್ಕಳ ಮೊಮ್ಮಕ್ಕಳ ಪ್ರೀತಿ ವಾತ್ಸಲ್ಯದಲ್ಲಿ ಬಾಳಬೇಕಾದ ಜೀವಗಳನ್ನು ಈ ರೀತಿ ನರಕಕ್ಕೆ ದಬ್ಬುವ ಮಕ್ಕಳು ಇದ್ದರೇನು ಫಲ? ಜೀವವಿರುವ ತನಕ ನಿಮ್ಮ ಕೈಯಲ್ಲಿ ನಿಮ್ಮದಾದ ಹಣವಿರಲಿ, ಆರೋಗ್ಯವನ್ನು ಕಾಪಾಡಿಕೊಳ್ಳಿ. ಯಾರ ಮೇಲೂ ನಿರೀಕ್ಷೆಗಳಿಲ್ಲದ ಆತ್ಮವಿಶ್ವಾಸವಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.