ಹೀಗೊಂದು ಸಂವಾದ ನಡೆಯುತ್ತಿತ್ತು:
ಚಳಿ ಇದೆಯೆ? ಇದೆ, ಇಲ್ಲ
ಬಿಸಿಲು ಇದೆಯೆ? ಇದೆ, ಇಲ್ಲ
ಕತ್ತಲು ಇದೆಯೆ? ಇಲ್ಲ, ಇದೆ
ನೋವಿದೆಯೆ? ಇಲ್ಲ, ಇದೆ
ಇದೆ ಮತ್ತು ಇಲ್ಲದರ ಮಧ್ಯೆ

ಇದೆ ಅನ್ನುವುದು, ಇಲ್ಲ ಅನ್ನುವುದು ಕೂಡಾ ಒಂದು ಮನೋಭಾವ ಎಂದು ರೂಪಿಸಲು ಗುರು ಶಿಷ್ಯರ ಮಧ್ಯೆ ನಡೆದ ಈ ಪ್ರಶ್ನೆ ಉತ್ತರ ಸರಣಿಯಲ್ಲಿ ಅನೇಕ ವಿಲೋಮಗಳನ್ನು ಉದಾಹರಿಸಲಾಗುತ್ತದೆ. ಇದೆ ಮತ್ತು ಇಲ್ಲ ಎಂಬ ಎರಡು ಪರಿಭಾಷೆಗಳ ನಡುವೆ ಬಾಳಿನ ಸಾರವನ್ನೇ ಆ ಗುರು ರೂಪಿಸಿಬಿಡುತ್ತಾನೆ.
ಆಗುವುದು ಮತ್ತು ಆಗದೇ ಇರುವುದು ಕೂಡ ಮತ್ತು ಅದನ್ನು ಸ್ವೀಕರಿಸುವ ಕ್ರಮದ ಬಗ್ಗೆಯೇ ಸಂವಾದ ನಡೆಯುತ್ತದೆ. ಯಾವುದಾದರೂ ಒಂದು ಸಂಗತಿ ಇದೆ ಎಂದರೆ, ಅದು ಇನ್ನೊಂದರ ಗೈರು ಎಂದರ್ಥ.

ಚಳಿ ಇದೆ ಅಂದರೆ, ಅದು ಇದೆ, ಬಿಸಿಲು ಇಲ್ಲ ಎಂದರ್ಥ. ಬಿಸಿಲಿನ ಗೈರು, ಹಾಗಾಗಿ ಚಳಿ ಇದೆ. ಚಳಿ ಈ ಮೊದಲೂ ಇತ್ತು. ಆದರೆ, ಬಿಸಿಲಿನ ಆಗಮನದಿಂದ ಅದು ಇಲ್ಲ ಅಷ್ಟೇ. ಹಾಗಾಗಿ ಅದು ಇದೆ. ಕತ್ತಲು ಕೂಡ ಇದೆ. ಅದು ಬೆಳಕಿನ ಗೈರು ಅಷ್ಟೇ. ಕತ್ತಲು ಇಲ್ಲ. ಯಾಕೆಂದರೆ, ಅಲ್ಲಿ ಬೆಳಕಿನ ಆಗಮನ ಇದೆ. ಇನ್ನು ನೋವು? ಅದು ಇಲ್ಲ ಮತ್ತು ಇದೆ. ಇದೆ ಎಂದರೆ ನಲಿವಿನ ಗೈರು. ಇಲ್ಲ ಎಂದರೆ ಅಲ್ಲಿ ನಲಿವು ಮನೆ ಮಾಡಿದೆ ಎಂದರ್ಥ.

ಇವು ಹೀಗೇ ನೋಡಿ. ಒಂದು ಇದ್ದರೆ ಇನ್ನೊಂದು ಇಲ್ಲ. ಕತ್ತಲು ಈ ಮೊದಲೂ ಇತ್ತು. ಆದರೆ ಅನುಭವಕ್ಕೆ ಬರಲಿಲ್ಲ. ಬೆಳಕು ಇನ್ನೆಲ್ಲೋ ಇದ್ದಾಗ ಇಲ್ಲಿ ಕತ್ತಲು ಆವರಿಸಿರುತ್ತದೆ. ಭೂಮಿಯ ಚಲನೆಯ ಸೊಗಸು ನೋಡಿ... ಅದು ತನ್ನ ತಾನು ಸುತ್ತು ಹಾಕಿದಾಗ ಅಲ್ಲಿ ಬೆಳಕಿದ್ದಾಗ ಇಲ್ಲಿ ಕತ್ತಲು. ಅಲ್ಲಿ ಉದಯ ಇಲ್ಲಿ ಅಸ್ತಮಾನ. ಅಲ್ಲೆಲ್ಲೋ ಕಂಬನಿ ಇನ್ನೆಲ್ಲೋ ಹಬ್ಬ. ಡಿವಿಜಿ ಅವರು ಹೇಳಿದಹಾಗೆ ಮದುವೆ ಮಸಣ ಒಂದೊಂದು ಒಂದು ಕಡೆ ಹಾಜರಿರುತ್ತದೆ. ಅಲ್ಲಿ ಮೌನ ಇಲ್ಲಿ ಬರೀ ಮಾತು. ಸುಖ ಎಂಬುದು ಇಲ್ಲ ಅಂತ ಅಂದಾಗ ಅದು ಕಾಯಂ ಆಗಿ ಇಲ್ಲ ಅಂತಲ್ಲ. ದುಃಖದ ಭರಾಟೆಯಲ್ಲಿ ಅದು ತಾತ್ಕಾಲಿಕ ಅನುಪಸ್ಥಿತಿ. ಇಡೀ ಊರಿನ ಜನರೆಲ್ಲ ಮಳೆ ಇರದೆ ಕಂಗಾಲಾಗಿ ಮುಗಿಲನ್ನು ನೋಡುತ್ತಾ ಕಣ್ಣೀರು ಸುರಿಸುತ್ತಿದ್ದರೆ, ಪುಟ್ಟ ಬಾಲಕನೊಬ್ಬ ಕೊಡೆ ಹಿಡಿದು ಕೂತಂತೆ ಇದು. ನೆಂಟರ ಮನೆಗೋ ಸ್ನೇಹಿತರ ಮನೆಗೋ ಹೋದಾಗ ಅರ್ಧ ಕಪ್ ಚಹಾ ಕೊಟ್ಟಾಗ ‘ಅಯ್ಯೋ ಅರ್ಧ ಕಪ್?’ ಅಂತ ಮೂಗು ಮುರಿಯುವವರು ಮತ್ತು ‘ಓಹ್ ಅರ್ಧ ಕಪ್’ ಎಂದು ಪುಳಕಗೊಳ್ಳುವವರ ಮನಃಸ್ಥಿತಿ ನೆನಪಾಗುತ್ತದೆ.

ಪಾತ್ರೆಗೆ ಅಂಟಿಕೊಂಡ ಒಂದೇ ಒಂದು ಅಗುಳನ್ನು ಮೆದ್ದು ಹೊಟ್ಟೆ ತುಂಬಿದ ಹಾಗೆ ಡರ್ ಎಂದು ತೇಗಿ ತೃಪ್ತಿ ಪಡುವ ಕೃಷ್ಣನ ನೆಲದ ಮನೋಭಾವ ನಮ್ಮನ್ನು ಜೀವಂತ ಇಡಬಲ್ಲದು. ಈ ಮೇಲಿನ ಸಂವಾದ ಮುಕ್ತಾಯ ವಾಗುವ ಬಗೆಯೂ ಬಹಳ ಮಾರ್ಮಿಕ. ಕೆಡುಕು ಇದೆಯೆ? ಇದೆ, ಇಲ್ಲ. ಅದು ಒಳಿತಿನ ತಾತ್ಕಾಲಿಕ ಗೈರು. ಕೆಡುಕು ಕರಗುತ್ತದೆ, ಕಾಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.