ಒಮ್ಮೆ ಒಂದೂರಿನಲ್ಲಿ ಒಬ್ಬ ಯುವಕನಿದ್ದ. ಅವನು ಪರಿಶ್ರಮಿಯಾಗಿದ್ದರೂ ಮನಸ್ಸಿನಲ್ಲಿ ಶಂಕೆ ಇರುತ್ತಿತ್ತು. ತನ್ನ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುವುದೋ ಇಲ್ಲವೋ ಎನ್ನುವುದೇ ಚಿಂತೆ. ಆವೇಶದ ಕಾರಣ ಯಾವಾಗಲೂ ಇನ್ನೊಬ್ಬರ ಮೇಲೆ ಸಿಟ್ಟುಗೊಳ್ಳುತ್ತಿದ್ದ.

ಆ ಊರಿಗೆ ಒಬ್ಬ ಮಹಾತ್ಮರು ಬಂದರು. ಯುವಕ ಮಹಾತ್ಮರ ಬಳಿ ಬಂದು, ‘ಮಹಾತ್ಮರೇ, ನಾನು ಕಠಿಣ ಪರಿಶ್ರಮ ಮಾಡುತ್ತೇನೆ, ಆದರೂ ನನಗೆ ಯಶಸ್ಸು ಸಿಗುತ್ತಿಲ್ಲ. ಏನಾದರೂ ಉಪಾಯ ಹೇಳಿ’ ಎನ್ನುತ್ತಾನೆ.

ಮಹಾತ್ಮರು ನಕ್ಕು, ಒಂದು ತಾಯಿತ ಕೊಡುತ್ತಾರೆ. ‘ಇದು ನಿನ್ನ ಎಲ್ಲ ಬಾಧೆಗಳನ್ನು ದೂರ ಮಾಡುತ್ತದೆ. ಆದರೆ ನೀನು ಒಂದು ದಿನ ರಾತ್ರಿ ಸ್ಮಶಾನದಲ್ಲಿ ಕಳೆಯಬೇಕಾಗುತ್ತದೆ’ ಎಂದರು. ಸ್ಮಶಾನದ ಹೆಸರು ಕೇಳಿದ ಯುವಕ ಭಯದಿಂದ ‘ಒಬ್ಬನೇ ಹೇಗೆ ಸ್ಮಶಾನದಲ್ಲಿ ಕಳೆಯಲಿ’ ಎಂದು ಕಂಪಿಸುತ್ತ ಕೇಳಿದ.

‘ಹೆದರಬೇಡ, ಇದು ಸಾಧಾರಣ ತಾಯಿತವಲ್ಲ, ಎಲ್ಲ ಸಂಕಟದಲ್ಲೂ ನಿನ್ನನ್ನು ಕಾಪಾಡುತ್ತದೆ’.

ಯುವಕ ಇಡೀ ರಾತ್ರಿ ಸ್ಮಶಾನದಲ್ಲಿ ಕಳೆದು ಮರುದಿನ ಮಹಾತ್ಮರಲ್ಲಿ ಹೋದ ‘ಮಹಾತ್ಮರೇ, ನಿಜಕ್ಕೂ ಈ ತಾಯಿತ ಅದ್ಭುತವಾಗಿದೆ. ಕತ್ತಲೆಗೆ ಹೆದರುವ ನನ್ನಂಥ ಪುಕ್ಕಲ ಸ್ಮಶಾನದಲ್ಲಿ ರಾತ್ರಿ ಕಳೆಯುವುದೆಂದರೇನು? ಇದು ತಾಯಿತದ ಮಹಿಮೆಯೇ’ ಎಂದ

ಬಳಿಕ ಆ ಯುವಕ ಸಂಪೂರ್ಣ ಬದಲಾಗುತ್ತಾನೆ. ಎಲ್ಲ ಕಾರ್ಯದಲ್ಲೂ ಯಶಸ್ಸನ್ನು ಗಳಿಸಿ ಊರಿನ ಯಶಸ್ವಿ ಗಣ್ಯರಲ್ಲಿ ಒಬ್ಬನಾಗುತ್ತಾನೆ.

ಒಂದು ವರ್ಷದ ನಂತರ ಆ ಮಹಾತ್ಮರು ಪುನಃ ಆ ಹಳ್ಳಿಗೆ ಬರುತ್ತಾರೆ. ತಕ್ಷಣ ಆ ಯುವಕ ಅವರಲ್ಲಿಗೆ ಹೋಗಿ ಆ ಚಮತ್ಕಾರಿ ತಾಯಿತದ ಗುಣಗಾನ ಮಾಡುತ್ತಾನೆ. ಆಗ ಮಹಾತ್ಮರು ‘ಮಗೂ ಆ ತಾಯಿತ ತೆಗೆದು ಕೊಡು’ ಎಂದು ಆ ತಾಯಿತವನ್ನು ಬಿಚ್ಚಿ ತೋರಿಸುತ್ತಾರೆ. ತಾಯಿತದೊಳಗೆ ಯಾವ ಮಂತ್ರ-ಗಿಂತ್ರ ಯಂತ್ರವೂ ಇರುವುದಿಲ್ಲ. ಕೇವಲ ಧಾತುವಿನ ತುಂಡು. ಸಾಧಾರಣ ತಾಯಿತ ಇಷ್ಟೆಲ್ಲ ಸಫಲತೆಯನ್ನು ಕೊಟ್ಟದ್ದು ಹೇಗೆ?

ಮಹಾತ್ಮರು ತಿಳಿಹೇಳುತ್ತಾ, ‘ನಿನಗೆ ಸಫಲತೆಯನ್ನು ತಂದುಕೊಟ್ಟದ್ದು ಈ ತಾಯಿತವಲ್ಲ. ನಿನ್ನಲ್ಲಿನ ಆತ್ಮವಿಶ್ವಾಸ ಹಾಗೂ ಪರಿಶ್ರಮ. ಮಗೂ ದೇವರು ಪ್ರತಿಯೊಂದು ಜೀವಿಗೂ ವಿಶೇಷ ಶಕ್ತಿಯನ್ನು ಕೊಟ್ಟಿದ್ದಾನೆ. ಅದು ನಂಬುಗೆಯ ಶಕ್ತಿ. ಹಿಂದೆ ನಿನಗೆ ನಿನ್ನಲ್ಲಿ ವಿಶ್ವಾಸ ಇರಲಿಲ್ಲ. ಅದಕ್ಕೇ ನೀನು ಯಶಸ್ವಿಯಾಗುತ್ತಿರಲಿಲ್ಲ. ಈ ತಾಯಿತದಿಂದಾಗಿ ನಿನ್ನೊಳಗಿನ ವಿಶ್ವಾಸ ಜಾಗೃತಗೊಳ್ಳುತ್ತಲೇ ನೀನು ಯಶಸ್ಸಿನತ್ತ ನಡೆದೆ. ಕೈಗೊಂಡ ಕಾರ್ಯಗಳೆಲ್ಲವೂ ಸಫಲವಾದವು. ಆದ್ದರಿಂದ ತಾಯಿತವನ್ನು ನಂಬುವ ಬದಲು ನಿನ್ನ ಕರ್ಮ, ನಿನ್ನ ಆಲೋಚನೆ, ನಿನ್ನ ನಿರ್ಣಯಗಳ ಮೇಲೆ ವಿಶ್ವಾಸವಿಡುವುದನ್ನು ಕಲಿ. ಜ್ಞಾಪಕವಿರಲಿ, ಆಗುವುದೆಲ್ಲ ಒಳಿತಿಗೇ ಅಂದುಕೋ. ಆಗ ನೀನು ಯಶಸ್ಸಿನ ಶಿಖರವನ್ನೇರುವೆ’ ಎಂದರು.

ಯುವಕ ಮಹಾತ್ಮರ ಮಾತನ್ನು ಗಂಭೀರವಾಗಿ ಕೇಳುತ್ತಿದ್ದನು. ಬದುಕಿನಲ್ಲಿ ಸಫಲವಾಗಬೇಕೆಂದರೆ ಮೊದಲು ನಮಗೆ ನಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಬೇಕು. ಸಫಲವಾಗುತ್ತೇನೆಂಬ ಆತ್ಮವಿಶ್ವಾಸವಿರಬೇಕು. ಈ ಆತ್ಮವಿಶ್ವಾಸವೊಂದಿದ್ದರೆ ಯಶಸ್ಸು ತಾನಾಗಿಯೇ ಒಲಿಯುತ್ತದೆ.

ಗೆಳೆಯರೇ, ಆತ್ಮವಿಶ್ವಾಸವೊಂದಿದ್ದರೆ ಜೋತಿಷ್ಯ, ಬೆರಳುಗಳ ತುಂಬ ಬೇರೆ ಬೇರೆ ಗ್ರಹಗಳ ಹರಳಿನ ಉಂಗುರ, ಕೊರಳಲ್ಲಿ ಮಾಲೆ, ತಾಯಿತಗಳನ್ನು ಧರಿಸುವ ಅಗತ್ಯವಿಲ್ಲ. ತಂತ್ರ ಮಂತ್ರಗಳ ಮೊರೆ ಹೋಗಬೇಕಿಲ್ಲ. ಮನಸ್ಸಿನಲ್ಲಿ ವಿಶ್ವಾಸ ಹಾಗೂ ದೃಢ ಸಂಕಲ್ಪವಿದ್ದರೆ ನೀವು ಎಂಥ ಕಠಿಣ ಕಾರ್ಯವನ್ನೂ ಮಾಡಬಲ್ಲಿರಿ. ಆ ವಿಶ್ವಾಸವಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.