ಆ ಬೀದಿಯ ಜನವೇ ಹಾಗೆ. ಇತರರ ಬಗ್ಗೆ ಮಾತಾಡಿಕೊಳ್ಳುವವರ ಸಂತೆ ಅದು. ಒಂದು ವೇಳೆ ಒಬ್ಬ ಬಡವ ತರಕಾರಿ ತಿನ್ನುತ್ತಿದ್ದರೆ ಅದನ್ನು ಅವರು ಅನಿವಾರ್ಯ, ಅಸಹಾಯಕ ಹೋರಾಟ ಎಂದು ಲೊಚಗುಟ್ಟುತ್ತಾರೆ. ಒಂದು ವೇಳೆ ಒಬ್ಬ ಶ್ರೀಮಂತ ಕೇವಲ ತರಕಾರಿ ತಿನ್ನುತ್ತಿದ್ದರೆ ಅದನ್ನು ಒಳ್ಳೆಯ ಆರೋಗ್ಯಕರ ಜೀವನಶೈಲಿ ಎಂದು ಬಣ್ಣಿಸುತ್ತಾರೆ. ಒಬ್ಬ ಬಡವ ಸಾಧಾರಣ ಬೈಕನ್ನು ಓಡಿಸಿದರೆ ಅದನ್ನು ಅವರು ದುಡಿಮೆ ಸಾಲದೇ ವೈಫಲ್ಯ ಎಂದು ಮರುಕಪಡುತ್ತಾರೆ. ಒಬ್ಬ ಶ್ರೀಮಂತ ಸಾಧಾರಣ ಬೈಕನ್ನು ಓಡಿಸಿದರೆ ಅದನ್ನು ಜೀವನಶಿಸ್ತು, ಅಚ್ಚುಕಟ್ಟುತನ ಎನ್ನುತ್ತಾರೆ. ಒಂದು ವೇಳೆ ಬಡವ ಸರಳ ವಾಚನ್ನು ಕಟ್ಟಿಕೊಂಡರೆ ಐಷಾರಾಮಿ ಎನ್ನುತ್ತಾರೆ. ಶ್ರೀಮಂತ ಸರಳವಾದ ವಾಚನ್ನು ಕಟ್ಟಿಕೊಂಡರೆ ಅದನ್ನು ಫ್ಯಾಷನ್ ಎನ್ನುತ್ತಾರೆ.

ಒಂದಿಲ್ಲೊಂದು ಟೀಕೆಗಳಲ್ಲೇ ಬಾಳುವ ಜನಸಂತೆಯಲ್ಲಿ ಟೀಕೆಗೆ ಒಳಗಾಗದ ಮನುಷ್ಯರೇ ಇಲ್ಲ. ಹಾಗಂತ ಆ ಬೀದಿಯನ್ನು ಬಿಟ್ಟು ಅಲ್ಲಿ ಹಾಯದೇ ಓಡಾಡುವಂತಿಲ್ಲ. ಬಾಳ್ವೆ ಅಂದರೆ ಅಲ್ಲಿ ಹಾದು ಹೋಗಲೇಬೇಕು. ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಸರಿಯಾಗೇ ಬರೆದಿದ್ದಾರೆ: ‘ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ’ (ಪದ್ಯ: ಇಕ್ಕಳ)

ಬರಿ ಮಾತು ಮಾತಲ್ಲೇ ಎದುರಿನವರ ಕುಂಡಲಿ ಹೇಳಬಲ್ಲ ಮನುಷ್ಯ ಸ್ವಭಾವವೇ ಅಷ್ಟು. ವಸ್ತುಗಳು ಮನುಷ್ಯನ ಜೀವನವನ್ನು ಆಧರಿಸಿ ಬೆಲೆ ಪಡೆದುಕೊಳ್ಳುತ್ತವೆ ಅಥವಾ ವೇಷಭೂಷಣ ನೋಡಿ ಮಣೆ ಹಾಕುವ ಟೀಕಿಸುವ ಕಾಲಮಾನ ಯಾವತ್ತೂ ನಿಂತಿಲ್ಲ; ನಿಲ್ಲಲ್ಲ ಕೂಡ. ಅಷ್ಟು ದೂರದಿಂದ ನಡೆದುಕೊಂಡು ಬಂದು ಕೃಷ್ಣನ ನೋಡಲು ಹಂಬಲಿಸಿದ್ದ ಸುಧಾಮನ ಹರಕಲು ಬಟ್ಟೆ ಬರೆಯನ್ನು ನೋಡಿಯೇ ಕಾವಲುಗಾರರು ಅವರಣವನ್ನು ಪ್ರವೇಶಿಸುವಲ್ಲಿ ತಡೆಯೊಡ್ಡುತ್ತಾರೆ. ಅಂತಃಪುರದ ಮೇಲಿಂದಲೇ ಗಮನಿಸಿದ ಕೃಷ್ಣ ಓಡಿ ಬಂದು ಸುಧಾಮನನ್ನು ಅಪ್ಪಿಕೊಂಡಾಗ ಶ್ರೀಮಂತಿಕೆಯೇ ಬದಲಾಗುತ್ತದೆ. ನೆರೆದವರೆಲ್ಲ ಮಾತನಾಡುತ್ತಾರೆ. ಕೃಷ್ಣನ ಅಪ್ಪುಗೆ ಮತ್ತು ಪ್ರೀತಿ ಪಡೆದು ಸಿರಿವಂತರಾದವರ ಕತೆ ಇದು. ಕೌರವ ಪಾಂಡವ ವೀರರ ಮನೆಗೆ ಬಾರದ ಇದೇ ಕೃಷ್ಣ ನೇರವಾಗಿ ವಿದುರನ ಮನೆ ಹೊಕ್ಕಾಗ ಜನರು ಮಾತಾಡುತ್ತಾರೆ.

ಅಕ್ಕಪಕ್ಕದ ಮನೆಯವರ ಸಾಂಗತ್ಯ ಪರಿಚಯ ಇರದ ಬಂಗಲೆ ಫ್ಲ್ಯಾಟ್ಗಳ ಸಿರಿತನಕ್ಕೂ ಇದೇ ಅರ್ಥವಿದೆ. ಪಕ್ಕದ ಮನೆಯವರು ಗೊತ್ತಾ ಅಂತ ಕೇಳಿದರೆ ಗೊತ್ತಿಲ್ಲ ಎಂಬ ಉತ್ತರವೇ ಅನೇಕರ ಬಡತನವನ್ನು ತೋರಿಸಬಲ್ಲದು. ಗ್ರಾಮದ ಬಾಳು ಹೀಗಲ್ಲ. ವಿಳಾಸ ಕೇಳಿದರೆ ಅವರ ಮನೆಗೆ ತಲುಪಿಸಿ, ಕೂಡಿಸಿ ಬರುವ ಸಿರಿತನದ ಮನಸ್ಸುಗಳಿವೆ.

‘ಏನು ಬಂದಿರಿ ಹದುಳವಿದ್ದಿರೆ? ಎಂದರೆ
ನಿಮ್ಮ ಮೈಸಿರಿ ಹಾರಿಹೋಹುದೆ?
ಕುಳ್ಳಿರಿ ಎಂದರೆ ನೆಲ ಕುಳಿಹೋಹುದೆ?
ಒಡನೆ ನುಡಿದರೆ ಶಿರ ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ
ಕೂಡಲ ಸಂಗಮದೇವ’ ಎಂದು ಒಲಿದಂತೆ ಹಾಡುವ ಬಸವಣ್ಣ ಹೇಳಿದ್ದು ಇದನ್ನೇ.

ಬಾಳಲು ಹಣ ಬೇಕು ನಿಜ. ಆದರೆ, ಆ ಹಣಕ್ಕೆ ಇನ್ನಷ್ಟು ಘನತೆ ಬರುವುದು ಸೌಜನ್ಯದ ಸ್ಪರ್ಶದಿಂದ. ವಾಚು ತರಕಾರಿ ಗಾಡಿ ಬೈಕು ಉಡುಪು ವಸ್ತು ಎಲ್ಲಕ್ಕೂ ಸೌಜನ್ಯದ ಸಖ್ಯ ದೊರೆತರೆ ಬಹುತೇಕ ವಿಶ್ವದ ಸಿರಿವಂತರ ಸಂಖ್ಯೆಯ ಅನುಪಾತ ಚಲ್ಲಾಪಿಲ್ಲಿ ಆಗಬಹುದೇನೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.