ಬಷೀರ್ ಸಾಹೇಬರು ಅಕ್ಕಿ ವ್ಯಾಪಾರದ ಜೊತೆಗೆ ಮಂಗಳೂರು ಹೆಂಚುಗಳನ್ನು ಮಾರುತ್ತಿದ್ದರು. ಅವರ ಹತ್ತಿರ ವ್ಯವಹಾರಕ್ಕೆ ಬರಿಗೈಯಲ್ಲಿ ಬರಬಹುದಿತ್ತು. ನಾಳೆ ಕೊಡುತ್ತೇನೆ, ವಾರ ಬಿಟ್ಟು ಕೊಡುತ್ತೇನೆ ಎಂದ ಕೆಲವರು ವರ್ಷಗಟ್ಟಲೆ ಕೊಡುತ್ತಿರಲಿಲ್ಲ. ಹಾಗಂತ ಬಷೀರ್ ಸಾಹೇಬರು ಅವರನ್ನು ಹುಡುಕಿಕೊಂಡು ಹೋಗಿ ಹಣ ಕೇಳಿದ ಉದಾಹರಣೆಯೇ ಇಲ್ಲ. ದುಡಿದ ದುಡ್ಡು, ನಿಯತ್ತಿನ ವ್ಯಾಪಾರ, ಬಂದೇ ಬರುತ್ತೆ ಎಂಬ ವಿಶ್ವಾಸ ಅವರದು. ಅವರ ಜನಪ್ರಿಯತೆ ಹೀಗೆಯೇ ಬೆಳೆದು ಅವರ ವ್ಯವಹಾರ ಹೆಚ್ಚುತ್ತಾ ಹೋಯಿತು. ಅವರ ಜೀವನ ಶೈಲಿಯಲ್ಲಿ ಯಾವ ಹೆಚ್ಚುಗಾರಿಕೆಯೂ ಇರಲಿಲ್ಲ. ಉದ್ದನೆಯ ಗಡ್ಡ, ಜುಬ್ಬಾ ಪೈಜಾಮ ಟೋಪಿ ಎಲ್ಲವೂ ಬಿಳಿಯದೇ. ತಮ್ಮಿಂದ ತೆಗೆದುಕೊಂಡು ಹೋದ ವಸ್ತುಗಳು ಹಾಳಾಗಿದ್ದರೆ, ಬಳಸಿದ ನಂತರ ಮಿಕ್ಕಿದ್ದರೆ ತಮಗೇ ವಾಪಸ್ ಕೊಡುವಂತೆ ಹೇಳಿ ಕಳಿಸುತ್ತಿದ್ದರು. ಇದು ಅವರು ಲೌಕಿಕ ಜಗತ್ತಿಗೆ ತೋರಿದ ನಿಯತ್ತು.

ಮಸೀದಿಯ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು. ಪತ್ನಿ ಎಂದೂ ಹೊಸ್ತಿಲು ದಾಟಿ ಮನೆಯ ಮುಂದಿನ ರಸ್ತೆಯನ್ನೂ ನೋಡಿರಲಿಲ್ಲ. ಮಕ್ಕಳಿಗೆ ಪ್ರತಿ ನಿತ್ಯವೂ ಕುರಾನ್ ಓದಿಸುವುದು, ನಮಾಜಿನ ತರೀಖಾ ಹೇಳಿಕೊಡುವುದು, ಐದು ಹೊತ್ತೂ ತಪ್ಪದೇ ಮಸೀದಿಗೆ ಹೋಗಿ ನಮಾಜು ಮಾಡಿ ಬರುವುದು ಅವರ ದಿನಚರಿ.

ಮಕ್ಕಳು ಬೆಳೆದಂತೆ ಸಾಮಾನ್ಯ ಶಿಕ್ಷಣಕ್ಕೆ ಸೇರಿಸಿದರು. ಅವರಿಗೆ ಧಾರ್ಮಿಕ ಶಿಕ್ಷಣದ ಬಗೆಗಿನ ಕಾಳಜಿ ಹೆಚ್ಚು. ಸಾರ್ವಜನಿಕ ಶಿಕ್ಷಣವು ಲಾಭಕೋರವೂ ಅನೈತಿಕವೂ ಆಗಿದೆ ಎಂಬುದು ಅವರ ಸ್ಪಷ್ಟ ನಿಲುವು. ಮಕ್ಕಳನ್ನು ಅಂಥ ಶಿಕ್ಷಣದ ಭಾಗವಾಗಿಸುವುದು ಎಂದರೆ, ಧರ್ಮ ಮತ್ತು ಅದರ ಅಲೌಕಿಕ ಮಹತ್ವದಿಂದ ದೂರವಿಡುವ ಕ್ರಮ ಎಂದೇ ಅವರು ಭಾವಿಸಿದ್ದರು. ಈ ಜೀವನದಲ್ಲಿ ಬದುಕಿ ತೋರಿಸಿ ಸಾಧಿಸುವ ನೈತಿಕತೆಯೇ ಮರಣದ ನಂತರ ದೊರಕುವ ಮುಕ್ತಿಗೆ ರಹದಾರಿ ಎಂದವರು ಆಳವಾಗಿ ನಂಬಿದ್ದರು. ಪ್ರತಿದಿನ ಬೆಳಗಿನ ನಮಾಜಿಗೆ ಮೊದಲು ನಿಯತ್ತು ಮಾಡುವ ವಿಧಾನ ಅವರನ್ನು ತೀವ್ರವಾಗಿ ಪ್ರಭಾವಿಸಿತ್ತು. ಪ್ರತಿ ದಿನವೂ ಯಾರನ್ನೂ ನೋಯಿಸದಂತೆ ನ್ಯಾಯಯುತವಾಗಿ ಜೀವಿಸುವಂತೆ ನನಗೆ ಪ್ರೇರೇಪಿಸು ಎಂದು ದೇವರಲ್ಲಿ ಮೊರೆಯಿಟ್ಟು ಹಾಗೆಯೇ ಬದುಕುತ್ತಿದ್ದರು.

ಅವರ ಬದುಕು ಇತರರಿಗೆ ಆದರ್ಶವಾದಂತೆ ಅವರ ಮಕ್ಕಳಿಗೆ ಆಗಲಿಲ್ಲ. ಮನೆಯೊಳಗಿನ ಧಾರ್ಮಿಕ ಶಿಕ್ಷಣ ಹೊರಗಿನ ಚಟುವಟಿಕೆಗಳಿಗೆ ವಿರುದ್ಧವಾಗಿತ್ತು. ಚಂದ್ರನನ್ನು ಮೀಟುವ, ತಾರೆಗಳ ದಾಟುವ ಕನಸುಗಳು ಬತ್ತಿ ಹೋಗಿ ಕಾಣದೂರಿನ ಸುಖದ ಹಂಬಲವನ್ನು ಬಿತ್ತಿದ ಧಾರ್ಮಿಕತೆಯ ಬಗೆಗೆ ಅವರಿಗೆ ನಿರಾಶೆಯೇ ಹುಟ್ಟಿತ್ತು. ಹೀಗಿರುವಾಗ ಬಷೀರ್ ಸಾಹೇಬರು ತೀರಿಕೊಂಡರು. ಇದು ಬದುಕಿನ ಸಂಕೀರ್ಣತೆ. ಸಮಾಜ ಮತ್ತು ಧರ್ಮ ಹೀಗೆ ಸಮಾನಾಂತರದಲ್ಲಿ ಪ್ರತ್ಯೇಕವಾಗಿ ಸಾಗುತ್ತಿವೆ. ಆದರೆ ಒಂದು ಇನ್ನೊಂದನ್ನು ಪ್ರಭಾವಿಸುತ್ತಾ ಒಳಿತಿನ ದಾರಿಯನ್ನು ನಿರ್ದೇಶಿಸಬೇಕು ಎನ್ನುವುದು ಎಲ್ಲರ ಆಶಯ.

ಧಾರ್ಮಿಕತೆಯನ್ನು ಅಂತರಂಗಕ್ಕೆ ಇಳಿಸಿಕೊಂಡವರ ಸಾಮಾಜಿಕ ನಡೆಗಳು ಅತ್ಯುನ್ನತ ಮಟ್ಟದಲ್ಲಿವೆ ಎಂಬುದು ಖಾತ್ರಿಯಾಗದಿದ್ದರೆ ಅದು ಬಹುಕೃತವೇಷವಲ್ಲದೆ ಬೇರೇನಲ್ಲ. ಹಿಂಸೆ, ದುರಾಸೆ, ಸುಳ್ಳು, ಸೇಡು, ಲಂಚ, ಕೋಪಗಳಿಂದ ಕೂಡಿದವರ ಯೋಗ, ಪೂಜೆ, ನಮಾಜು ತೋರುಂಬ ಲಾಭ ಮಾತ್ರ.

ಬಷೀರ್ ಸಾಹೇಬರು ಬದುಕಿದ್ದಾಗ ಅವರಿಂದ ಸಾಲ ಪಡೆದವರೆಲ್ಲ ಒಬ್ಬೊಬ್ಬರೇ ಬಂದು ಮಕ್ಕಳಿಗೆ ಕೊಟ್ಟು ಅಪ್ಪನಂತೆ ಬದುಕಲು ಹೇಳಿಹೋದರು. ಅಪ್ಪ ಬಿತ್ತಿದ ನೀತಿ ನಿಯತ್ತಿನ ಬೀಜಗಳು ಎಲ್ಲೆಲ್ಲೋ ಮೊಳಕೆಯೊಡೆದು ಚಿಗುರಿ ಮನೆ ಮಕ್ಕಳಾದಿಯಾಗಿ ಕುಳಿತುಣ್ಣುವಂತಾದ ಫಲವಂತಿಕೆಗೆ ಬೆಲೆಕಟ್ಟಲಾದೀತೇ? ಹಿರಿಯರ ನಿಯತ್ತು ನಮ್ಮನ್ನು ಕಾಯುತ್ತಿರುವಾಗ, ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೊಣೆ ನಮಗಿರಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.