ಒಮ್ಮೆ ಹೀಗಾಯಿತು. ಒಂದು ಮಧ್ಯಾಹ್ನ ರಾಮಕೃಷ್ಣ ಪರಮಹಂಸರಿಗೆ ಶಾರದಾದೇವಿಯ ಬದಲಾಗಿ ಒಬ್ಬ ಹೆಂಗಸು ಅತ್ಯಂತ ಭಕ್ತಿಯಿಂದ ಊಟವನ್ನು ತಂದಿಟ್ಟು ಹೋಗುತ್ತಾಳೆ. ತಮ್ಮ ಮುಂದೆ ಊಟ ಇಟ್ಟು ಹೋದ ಹೆಂಗಸಿನ ಬಗ್ಗೆ ಗೊತ್ತಿದ್ದುದರಿಂದ ಪರಮಹಂಸರಿಗೆ ಮುಜುಗರವಾಯಿತು. ಇಂಥಾ ಹೆಂಗಸಿನ ಕೈ ಸೋಕಿದ ಆಹಾರವನ್ನು ತಿನ್ನಲು ಸಾಧ್ಯವೇ ಎಂದು ಚಿಂತಿತರಾದರು. ಅವರ ಮನಸ್ಸು ಊಟದ ಬದಲಿಗೆ ಆ ಹೆಂಗಸಿನ ಬಗ್ಗೆ ಯೋಚಿಸುತ್ತಿತ್ತು. ಯಾಕೆಂದರೆ ಆಕೆ ಸಮಾಜ ನಿರೀಕ್ಷಿಸುವಂಥ ಒಳ್ಳೆಯ ಹೆಂಗಸಾಗಿರಲಿಲ್ಲ. ಪತ್ನಿಯನ್ನು ಕರೆದು ‘ನಿನಗೆ ಸ್ವಲ್ಪವಾದರೂ ನನ್ನ ಬಗ್ಗೆ ಯೋಚನೆಯಿಲ್ಲ, ಅಂಥಾ ಹೆಂಗಸಿನ ಕೈ ಮುಟ್ಟಿದ ಊಟವನ್ನು ನಾನು ಮಾಡಲೇ?’ ಎಂದು ಪ್ರಶ್ನಿಸಿದರು. ಶಾರದಾಮಾತೆ, ‘ಊಟಕ್ಕೆ ಅವಳ ಕೆಟ್ಟತನ ಅಂಟಿಲ್ಲ ತಿನ್ನಬಹುದು’ ಎಂದರು. ಆದರೆ ಪರಮಹಂಸರಿಗೆ ಮಾತ್ರ ಊಟವನ್ನು ಮುಟ್ಟುವ ಮನಸ್ಸಾಗದೆ, ‘ನೀನು ಎಂಥಾ ಕೆಲಸ ಮಾಡಿಬಿಟ್ಟೆ ಅವಳ ವಿಚಾರ ಗೊತ್ತಿದ್ದೂ ನೀನು ಅವಳ ಕೈಲಿ ಯಾಕೆ ಊಟ ಕಳಿಸಿದೆ?’ ಎಂದು ಖಿನ್ನರಾದರು.

ಶಾರದಾದೇವಿ, ‘ನನಗೆ ಎಲ್ಲವೂ ಗೊತ್ತಿದೆ. ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ತೆಗೆದು ಪಕ್ಕಕ್ಕಿಟ್ಟು ಊಟ ಮಾಡಿರಿ’ ಎಂದು ಪರಮಹಂಸರಲ್ಲಿ ಬೇಡಿಕೊಳ್ಳುತ್ತಾರೆ. ಆದರೆ ಪರಮಹಂಸರದ್ದು ಒಂದೇ ಹಟ, ‘ಇನ್ನು ಮುಂದೆ ನೀನಲ್ಲದೆ ಬೇರೆಯವರ ಕೈಲಿ ಊಟ ಕಳಿಸುವುದಿಲ್ಲ ಅಂತ ನನಗೆ ಪ್ರಮಾಣ ಮಾಡು’ ಎನ್ನುತ್ತಾರೆ. ಶಾರದಾದೇವಿ, ಅತ್ಯಂತ ವಿನಮ್ರವಾಗಿ ಕೈಜೋಡಿಸಿ, ‘ದಯವಿಟ್ಟು ಇದೊಂದನ್ನು ಮಾತ್ರ ಕೇಳಬೇಡಿ ನನ್ನಿಂದ ಸಾಧ್ಯವಿಲ್ಲ’ ಎನ್ನುತ್ತಾರೆ. ಪರಮಹಂಸರಿಗೆ ಅಚ್ಚರಿ ತನ್ನ ಯಾವ ಮಾತನ್ನೂ ತೆಗೆದುಹಾಕದ ಶಾರದಾದೇವಿ ಇವತ್ತು ಯಾಕೆ ಹೀಗೆ ಮಾತಾಡುತ್ತಿದ್ದಾರೆಂದು. ಆದರೂ ಹಟ ಬಿಡದೆ ಮತ್ತೆ ಕೇಳುತ್ತಾರೆ. ಶಾರದಾದೇವಿ, ‘ಇಲ್ಲ ಇದು ನನ್ನಿಂದ ಸಾಧ್ಯವಿಲ್ಲ, ನಾನು ನಿಮಗೆ ಊಟವನ್ನು ತರುವಾಗ ಯಾರೋ ಎದುರಾಗುತ್ತಾರೆ. ಅಮ್ಮಾ ನಾವು ಗುರುಗಳಿಗೆ ಕೊಡುತ್ತೇವೆ ಕೊಡಿ ಎನ್ನುತ್ತಾರೆ. ಅಮ್ಮಾ ಎನ್ನುವ ಪದ ಕಿವಿಗೆ ಬಿದ್ದ ತಕ್ಷಣ ನಿಮ್ಮ ಹೆಂಡತಿ ಎನ್ನುವುದನ್ನು ಮರೆಯುತ್ತೇನೆ. ನೀವು ನನಗೆ ಮಾತ್ರ ಸೇರಿದವರು ಎನ್ನುವುದು ಅಳಿದುಹೋಗುತ್ತದೆ. ನನ್ನೊಳಗಿನ ತಾಯ್ತನಕ್ಕೆ ಅಮ್ಮ ಎಂದು ಕರೆದ ಅವರ ಪ್ರೀತಿಯಷ್ಟೇ ಕಾಣುತ್ತದೆ. ಅವರ ಕೈಲಿ ಕಳಿಸಿಕೊಡುತ್ತೇನೆ’ ಎನ್ನುತ್ತಾರೆ.

ಪರಮಹಂಸರು ಮತ್ತೆ ಆಕ್ಷೇಪಿಸುತ್ತಾ, ‘ಸಿಕ್ಕವರು ಕೇಳಿದರೆ ನೀನು ಕೊಟ್ಟುಬಿಡುವುದೇ ಅವರು ಯಾರು ಏನು ಎಂದು ವಿವೇಚಿಸಬೇಕಲ್ಲವೇ?’ ಎನ್ನುತ್ತಾರೆ. ಶಾರದಾದೇವಿ ನಗುತ್ತಾರೆ, ‘ನೀವು ಎಲ್ಲರಿಗೂ ಸೇರಿದವರು-ಕೆಟ್ಟವರು ಒಳ್ಳೆಯವರು ಎಂದು ನೋಡಿ ಆಗಿರುವುದಲ್ಲ ಇದು. ಅವಳೂ ಒಬ್ಬ ತಾಯಿ. ತಾಯಿ ಎಂದರೆ ದೈವಸ್ವರೂಪಿ. ಅವಳು ಜಗತ್ತು ಬಯಸದ ಕೆಲಸ ಮಾಡಿದ್ದಾಳೆ ಅಂದರೆ ಅನಿವಾರ್ಯ ಏನಿತ್ತೋ ನಾವು ನೋಡುವ ನೋಟ ಸರಿಯಾಗಿದ್ದರೆ ಜಗತ್ತೆಲ್ಲಾ ಒಳಿತಾಗೇ ಕಾಣುತ್ತದೆ’ ಎನ್ನುತ್ತಾರೆ. ಶಾರದಾಮಾತೆಯ ಮಾತಿನ ಮಹತ್ವವನ್ನು ಮನಗೊಂಡ ಪರಮಹಂಸರು ಮಡಿ- ಮೈಲಿಗೆ, ಶುದ್ಧ- ಅಶುದ್ಧ, ಶೀಲ- ಕುಲಟೆ ಎನ್ನುವ ಎಲ್ಲವನ್ನೂ ಮರೆತು ಉಣ್ಣಲಾರಂಭಿಸುತ್ತಾರೆ.

ಎಂಥಾ ಜ್ಞಾನಿಯೇ ಆದರೂ ಮಾತೃತ್ವದ ಸ್ಪರ್ಶ ಸಿಗದೇ ಹೋದರೆ ಅದು ಪರಿಪೂರ್ಣ ಆಗಲಾರದು ಅಲ್ಲವೇ. ಶಾರದಾಮಾತೆ ಪರಮಹಂಸರ ಆಧ್ಯಾತ್ಮಕ್ಕೆ ಮಾತೃ ಸ್ವರೂಪಿಣಿಯಾಗಿ ದಕ್ಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.