ಒಂದು ದಿನ ಉದ್ಯೋಗಿಗಳು ಕಚೇರಿಗೆ ಬಂದಾಗ ಗೇಟಿನ ಬಳಿ ದೊಡ್ಡದೊಂದು ನೋಟಿಸ್ ಅಂಟಿಸಿರುವುದನ್ನು ಕಂಡರು: ‘ಈ ಕಂಪನಿಯಲ್ಲಿ ನಿಮ್ಮ ಪ್ರಗತಿಯನ್ನು ತಡೆಯುತ್ತಿದ್ದ ವ್ಯಕ್ತಿ ನಿನ್ನೆ ನಿಧನರಾಗಿದ್ದಾರೆ. ಅವರಿಗೆ ಅಂತಿಮ ನಮನ ಸಲ್ಲಿಸಲು ನಾವು ನಿಮಗೆ ಅವಕಾಶ ನೀಡುತ್ತಿದ್ದೇವೆ, ದಯವಿಟ್ಟು ಒಬ್ಬೊಬ್ಬರಾಗಿ ಮೀಟಿಂಗ್ ಹಾಲ್ಗೆ ಹೋಗಿ ಅವರನ್ನು ನೋಡಿ ಬರಬಹುದು’.

ನೋಟಿಸ್ ಓದಿದ ಎಲ್ಲರಿಗೂ ಮೊದಲು ಸ್ವಲ್ಪ ದುಃಖವಾಯಿತು, ಆದರೆ ನಂತರ ಕುತೂಹಲ ಮೂಡಿತು. ತಮ್ಮ ಬೆಳವಣಿಗೆಯನ್ನು ತಡೆಯುತ್ತಿದ್ದ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಯೊಂದಿಗೆ ಎಲ್ಲರೂ ಹಾಲ್ನತ್ತ ಹೆಜ್ಜೆ ಹಾಕಿದರು. ನೋಡನೋಡುತ್ತಿದ್ದಂತೆ ಹಾಲ್ನ ಹೊರಗೆ ದೊಡ್ಡ ಜನಸಮೂಹವೇ ನೆರೆಯಿತು. ಕಾವಲುಗಾರರು ಎಲ್ಲರನ್ನು ನಿಯಂತ್ರಿಸಿ ಒಬ್ಬೊಬ್ಬರನ್ನೇ ಒಳಗೆ ಬಿಡುತ್ತಿದ್ದರು.

ಒಳಗೆ ಹೋಗಿ ಬರುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಬಹಳ ಗಂಭೀರವಾಗಿ ಹೊರಬರುತ್ತಿದ್ದರು, ಯಾವುದೋ ಹತ್ತಿರದ ಸಂಬಂಧಿ ತೀರಿಕೊಂಡಾಗ ಆಗುವಂತಹ ಭಾವನೆ ಅವರ ಮುಖದಲ್ಲಿತ್ತು. ಈ ಬಾರಿ ಒಳಗೆ ಹೋಗುವ ಸರದಿ ಒಬ್ಬ ಹಳೆಯ ಉದ್ಯೋಗಿಯದ್ದಾಗಿತ್ತು. ಆತನಿಗೆ ಎಲ್ಲದರ ಬಗ್ಗೆಯೂ ದೂರುಗಳೇ—ಕಂಪನಿ ಬಗ್ಗೆ, ಸಹೋದ್ಯೋಗಿಗಳ ಬಗ್ಗೆ, ಸಂಬಳದ ಬಗ್ಗೆ, ಹೀಗೆ ಪ್ರತಿಯೊಂದರಲ್ಲೂ ಆತ ತಪ್ಪು ಹುಡುಕುತ್ತಿದ್ದ.

ಆದರೆ ಇಂದು ಆತ ಸ್ವಲ್ಪ ಖುಷಿಯಾಗಿದ್ದಂತೆ ಕಾಣುತ್ತಿದ್ದ. ‘ಯಾರಿಂದಾಗಿ ನನ್ನ ಜೀವನದಲ್ಲಿ ಇಷ್ಟೊಂದು ಸಮಸ್ಯೆಗಳಿದ್ದವೋ, ಆತ ಕೊನೆಗೂ ಹೋದನಲ್ಲ’ ಎಂದುಕೊಳ್ಳುತ್ತಾ ತನ್ನ ಸರದಿ ಬಂದಾಗ ವೇಗವಾಗಿ ಶವಪೆಟ್ಟಿಗೆಯ ಹತ್ತಿರ ಹೋಗಿ ಕುತೂಹಲದಿಂದ ಇಣುಕಿ ನೋಡಿದ. ಆದರೆ ಅಲ್ಲಿ ಕಂಡದ್ದೇನು? ಶವಪೆಟ್ಟಿಗೆಯ ಒಳಗೆ ಒಂದು ದೊಡ್ಡ ಕನ್ನಡಿ ಇರಿಸಲಾಗಿತ್ತು.

ಇದನ್ನು ಕಂಡು ಆತನಿಗೆ ಸಿಟ್ಟು ಬಂತು ಮತ್ತು ಜೋರಾಗಿ ಕಿರುಚಲು ಹೋದ. ಅಷ್ಟರಲ್ಲಿ ಆ ಕನ್ನಡಿಯ ಪಕ್ಕದಲ್ಲಿದ್ದ ಒಂದು ಸಂದೇಶ ಆತನ ಕಣ್ಣಿಗೆ ಬಿತ್ತು:

‘ಈ ಜಗತ್ತಿನಲ್ಲಿ ನಿಮ್ಮ ಪ್ರಗತಿಯನ್ನು ತಡೆಯಬಲ್ಲ ಏಕೈಕ ವ್ಯಕ್ತಿ ಎಂದರೆ ಅದು ನೀವು ಮಾತ್ರ. ನಿಮ್ಮ ಜೀವನದಲ್ಲಿ ಕ್ರಾಂತಿ ತರಬಲ್ಲ ಏಕೈಕ ವ್ಯಕ್ತಿಯೂ ನೀವೇ’.

ನಿಮ್ಮ ಬಾಸ್ ಬದಲಾದಾಗ, ಗೆಳೆಯರು ಬದಲಾದಾಗ ಅಥವಾ ನಿಮ್ಮ ಕಂಪನಿ ಬದಲಾದಾಗ ನಿಮ್ಮ ಜೀವನ ಬದಲಾಗುವುದಿಲ್ಲ. ನಿಮ್ಮ ಜೀವನ ಬದಲಾಗುವುದು ನೀವು ಬದಲಾದಾಗ ಮಾತ್ರ. ಯಾವಾಗ ನಿಮ್ಮ ಜೀವನಕ್ಕೆ ನೀವೇ ಜವಾಬ್ದಾರರು ಎಂಬ ಸತ್ಯವನ್ನು ಅರಿತುಕೊಳ್ಳುತ್ತೀರೋ, ಆಗ ಬದಲಾವಣೆ ಆರಂಭವಾಗುತ್ತದೆ.

ನೀವು ಬೆಳೆಸಿಕೊಳ್ಳಬಹುದಾದ ಅತ್ಯುತ್ತಮ ಸಂಬಂಧವೆಂದರೆ ಅದು ನಿಮ್ಮೊಂದಿಗೆ ನೀವು ಬೆಳೆಸಿಕೊಳ್ಳುವ ಸಂಬಂಧ. ಈ ಕ್ಷಣವೇ ಆ ಹಳೆಯ ‘ನಾನು’ ಎಂಬ ಅಹಂಕಾರವನ್ನು ಹೂತುಹಾಕಿ ಮತ್ತು ಒಬ್ಬ ಹೊಸ ‘ನಾನು’ ಎಂಬ ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಿ. ನಮ್ಮ ಸೋಲು-ಗೆಲುವಿಗೆ ನಾವೇ ಜವಾಬ್ದಾರರು.

ಜಗತ್ತು ಒಂದು ಕನ್ನಡಿಯಿದ್ದಂತೆ: ಅದು ಮನುಷ್ಯನ ಪ್ರಬಲ ವಿಚಾರಗಳ ಪ್ರತಿಬಿಂಬವನ್ನು ಮಾತ್ರ ನೀಡುತ್ತದೆ. ಶವಪೆಟ್ಟಿಗೆಯಲ್ಲಿದ್ದ ಕನ್ನಡಿ ವಾಸ್ತವವಾಗಿ ನಮಗೆ ಹೇಳುತ್ತಿರುವುದು ಏನೆಂದರೆ— ಹೊರಗಿನ ಪರಿಸ್ಥಿತಿಯನ್ನು ದೂಷಿಸುವ ಬದಲು ನಮ್ಮ ಆಲೋಚನೆ ಮತ್ತು ದೃಷ್ಟಿಕೋನವನ್ನು ಬದಲಿಸಿಕೊಂಡರೆ ಜಗತ್ತೇ ಬದಲಾಗುತ್ತದೆ.

ನಿಮ್ಮ ದೋಷವನ್ನು ನೀವು ಅರಿತುಕೊಂಡರೆ ಜಗತ್ತೂ ನಿಮ್ಮನ್ನು ಗೌರವಿಸುತ್ತದೆ, ಪ್ರೀತಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.