‘ರೀ, ನಾನು ನನ್ನ ಫ್ರೆಂಡ್ ಜೊತೆ ಹೊರಗೆ ಹೋಗಿಬರ್ತೀನಿ’ ಎಂದು ಹೆಂಡತಿ ಹೇಳಿದಳು. ಗಂಡ ‘ಆಯ್ತು ಹೋಗಿ ಬಾ, ಹುಷಾರು’ ಎಂದ. ಯಾಕೆ, ಯಾವ ಫ್ರೆಂಡು, ಹೋಗಲೇಬೇಕಾ.. ಹೀಗೆ ಏನೇನಾದರೂ ಕೇಳಿ ಸಿಡುಕುತ್ತಿದ್ದ ಗಂಡ ಇವತ್ತು ಏನು ಹೀಗೆ ಅಂತ ಅವಳಿಗನಿಸಿತು. ಸ್ವಲ್ಪ ಹೊತ್ತಿನಲ್ಲಿ ಹದಿಹರೆಯದ ಮಗ ಮುಖ ಸಪ್ಪಗೆ ಮಾಡಿಕೊಂಡು ‘ಅಪ್ಪಾ, ನಾನು ಮತ್ತೆ ಫೇಲಾಗಿದ್ದೇನೆ’ ಎಂದ. ಮೊಬೈಲ್ನಲ್ಲಿ ಏನನ್ನೋ ನೋಡುತ್ತಿದ್ದ ಅಪ್ಪ ಮುಖ ಎತ್ತದೆ ‘ಪರ್ವಾಗಿಲ್ಲ, ಮುಂದಿನ ಸಲ ಚೆನ್ನಾಗಿ ಓದು’ ಎಂದರು. ಬಯ್ಸಿಕೊಳ್ಳಲು ತಯಾರಾಗೇ ಬಂದಿದ್ದ ಅವನಿಗೆ ಅಪ್ಪನ ತಣ್ಣನೆಯ ಪ್ರತಿಕ್ರಿಯೆಯಿಂದ ನಿರಾಶೆಯಾಯ್ತು.

ಮರುದಿನ ಮಗಳು ಅಪ್ಪನ ಎದುರಿಗೆ ಬಂದು ‘ನಮ್ಮ ಕಾರನ್ನು ಇನ್ನೊಂದು ಕಾರಿಗೆ ಗುದ್ದಿಸಿದೆ, ಮುಂಭಾಗ ಡ್ಯಾಮೇಜ್ ಆಗಿದೆ’ ಎಂದಳು. ಅಪ್ಪ ಸಿಟ್ಟಾಗುತ್ತಾರೆ ಎಂದು ಭಾವಿಸಿದ್ದ ಮಗಳಿಗೆ ಅಚ್ಚರಿ ಕಾದಿತ್ತು. ‘ಇರಲಿ ಬಿಡು ಮಗಳೇ, ನಾಳೆ ನಾನೇ ಗ್ಯಾರೇಜಿಗೆ ಬಿಡ್ತೀನಿ, ಸದ್ಯ ನಿನಗೇನೂ ಆಗಿಲ್ಲವಲ್ಲಾ?’ ಎಂದುಬಿಟ್ಟರು.

ಮರುದಿನ ತಾಯಿ, ಮಗ, ಮಗಳು ಒಟ್ಟಿಗೆ ಸೇರಿ ‘ನೀವು ಮೊದಲಿನಂತಿಲ್ಲ, ಏನಾದರೂ ಎಡವಟ್ಟಾಯ್ತಾ? ಎಲ್ಲ ಸರಿ ಇದೆ ತಾನೇ?’ ಎಂದು ಕೇಳಿದರು. ‘ಎಲ್ಲ ಸರಿ ಇದೆ. ನನಗೇನೂ ಆಗಿಲ್ಲ. ಆದರೆ ನಾನು ಬದುಕಿನಲ್ಲಿ ಮಹತ್ತರವಾದುದನ್ನು ಕಲಿತಿದ್ದೇನೆ, ಅದರಿಂದ ನನಗೆ ನೆಮ್ಮದಿಯಿದೆ. ಇಷ್ಟು ದಿನ ನಿಮ್ಮ ಮೇಲೆ ಸಣ್ಣಪುಟ್ಟದಕ್ಕೂ ರೇಗಾಡಿ ನಿಮ್ಮನ್ನು ನನ್ನ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದೆ. ನನ್ನ ಇಚ್ಛೆ, ಅಭಿಪ್ರಾಯ, ಆಲೋಚನೆಗಳನ್ನು ನಿಮ್ಮ ಮೇಲೆ ಹೇರುತ್ತಿದ್ದೆ. ಅದರಿಂದ ನಿಮ್ಮ ಬದುಕಿನ ರೀತಿಯಲ್ಲಿ ಏನಾದರೂ ಬದಲಾವಣೆ ಆಗಿದೆಯಾ ಅಂತ ಯೋಚಿಸಿದೆ. ಏನೂ ಇಲ್ಲ. ನೀವು ನನಗೆ ಹೆದರುತ್ತಿದ್ದಿರಿ ಅಷ್ಟೇ. ನನ್ನ ಕೆಲಸ ಹೆದರಿಸುವುದಲ್ಲ. ನಿಮ್ಮನ್ನು ನನ್ನ ದಾರಿಗೆ ತರುವುದೂ ಅಲ್ಲ. ನಿಮಗೆ ನಿಮ್ಮದೇ ಆದ ಬದುಕಿದೆ. ನಿಮ್ಮದೇ ಆಸೆ ಆಲೋಚನೆಗಳು ಇರುತ್ತವೆ. ಅದರಂತೆ ಬದುಕುವುದು ನಿಮ್ಮ ಜವಾಬ್ದಾರಿ. ನಿಮ್ಮಿಂದ ಆದ ತಪ್ಪುಗಳನ್ನು ನಾನು ಸಿಟ್ಟು, ಅಸಹನೆಯಿಂದ ಸರಿಪಡಿಸಲು ಪ್ರಯತ್ನಿಸಿ ನೋಡಿದೆ. ಪ್ರತಿಯೊಂದು ಸನ್ನಿವೇಶವನ್ನು ಎದುರಿಸಿ ನೀವು ತೆಗೆದುಕೊಳ್ಳುವ ನಿರ್ಧಾರವನ್ನು ನಾನು ಹಗುರವಾಗಿ ಕಂಡೆ. ನಿಮ್ಮ ನಿರ್ಣಯಗಳನ್ನು ನಾನು ಗೌರವಿಸಬೇಕಿತ್ತು. ಅದರಿಂದ ಆಗುವ ತಪ್ಪು ಒಪ್ಪುಗಳಿಗೆ ನೀವೇ ಪಾಲುದಾರರು ಮತ್ತು ಫಲಾನುಭವಿಗಳು. ಅದು ನಿಮ್ಮ ಬದುಕು. ಅದರ ನಿಯಂತ್ರಕರು ನೀವು ಮಾತ್ರ. ನಿಮಗಾಗಿ ನಿಮ್ಮ ಬದುಕನ್ನು ನಾನು ಜೀವಿಸಲಾಗದು. ಯಾವುದು ನನ್ನ ನಿಯಂತ್ರಣದಲ್ಲಿ ಇಲ್ಲವೋ ಅದನ್ನು ನಿಯಂತ್ರಿಸಲು ಪ್ರಯತ್ನಿಸಬಾರದು. ನಿಮ್ಮ ಬದುಕಿನಲ್ಲಿ ಏನೇನು ಆಗುತ್ತಿದೆಯೋ ಅದರ ಅರಿವು ನಿಮಗಾಗಬೇಕು. ಅಸ್ವಸ್ಥನಾಗಿರುವವನು ಯಾವಾಗಲೂ ತಳಮಳದಲ್ಲಿರುತ್ತಾನೆ. ಅದರಿಂದೇನು ಪ್ರಯೋಜನ? ಪ್ರಸನ್ನವೂ ಆಹ್ಲಾದಕರವೂ ಆದ ಶಾಂತಗುಣವೇ ನೆಮ್ಮದಿಯ ಮೂಲ’ ಎಂದು ಹೇಳಿದರು.

ಈಗೀಗ ಹೆಂಡತಿ ಇಡೀ ಕುಟುಂಬದ ನೊಗ ಹೊತ್ತವಳಂತೆ ಗಂಡ, ಮಕ್ಕಳ ಬೇಕು ಬೇಡಗಳನ್ನು ಅರಿತು ನಗುನಗುತ್ತಾ ಎಲ್ಲವನ್ನೂ ನಿಭಾಯಿಸುತ್ತಾಳೆ. ಮಗ ಹೆಚ್ಚು ಶ್ರದ್ಧೆಯಿಂದ ಓದಲಾರಂಭಿಸಿ ಪಾಸಾಗುವ ವಿಶ್ವಾಸದಲ್ಲಿದ್ದಾನೆ. ಮಗಳು ಕಾರನ್ನು ಗ್ಯಾರೇಜಿಗೆ ಬಿಟ್ಟು ರಿಪೇರಿ ಮಾಡಿಸಿ ನಿಧಾನವಾಗಿ ಹೋಗಿ ಬಂದು ಮಾಡುತ್ತಿದ್ದಾಳೆ. ಎಲ್ಲರೂ ಕುಳಿತುಣ್ಣುವ ಸಡಗರವನ್ನು ಸಂಭ್ರಮಿಸುತ್ತಿದ್ದಾರೆ. ಇಷ್ಟುದಿನ ಎಲ್ಲರಿಗೂ ಎಲ್ಲವೂ ಸಿಡಿ ಸಿಡಿ, ಹೊರೆ ಅನಿಸಿದ್ದು ಇದೀಗ ಸಲೀಸು ಸರಾಗ ಅನಿಸುತ್ತಿದೆ. ಕುಟುಂಬದಲ್ಲಿ ಒಬ್ಬರೇ ಒಬ್ಬರು ತಮ್ಮ ಕೋಪತಾಪಗಳನ್ನು ತೊರೆದು ಶಾಂತವಾಗಿರಲು ಶುರುಮಾಡಿದರೆ ಸಾಕು ಉಳಿದವರಲ್ಲೂ ಅದು ಅನುರಣಿಸುತ್ತಾ ಬದುಕನ್ನು ಸಹನೀಯಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.