ನರಸಿಂಹಯ್ಯ ಬೆಣ್ಣೆ ದೋಸೆ ತಿನ್ನಲು ಹೋದರು. ಆ ಹೋಟೆಲಿನಲ್ಲಿ ದೋಸೆ ಹುಯ್ಯುವವನ ಹೊರತಾಗಿ ಯಾರೂ ಇರಲಿಲ್ಲ. ಇವರು ದೋಸೆ ಆರ್ಡರ್ ಮಾಡಿ ಮೊಬೈಲ್ನಲ್ಲಿ ಹೋಟೆಲ್ಲಿನ ಇಡೀ ಒಳಾವರಣವನ್ನು ವಿಡಿಯೋ ಮಾಡಿಕೊಂಡರು. ನರಸಿಂಹಯ್ಯ ದೋಸೆ ತಿಂದು ಮುಗಿಸುವಷ್ಟರಲ್ಲಿ ಮಕ್ಕಳು ಮರಿ ಸಮೇತ ಹದಿನೈದು ಇಪ್ಪತ್ತು ಮಂದಿ ಹೋಟೆಲ್ ಒಳಗೆ ಧಾವಿಸಿ ಬಂದು ಕುಳಿತರು. ದೋಸೆ ಹೋಟೆಲ್ ಗಿರಾಕಿಗಳಿಲ್ಲದೇ ಖಾಲಿ ಹೊಡೆಯುತ್ತಿದ್ದ ದೃಶ್ಯವನ್ನು ವೀಡಿಯೋ ಮಾಡಿದ್ದ ಇವರಿಗೆ ಸೌದೆ ಚಾಚುತ್ತಾ ಉರಿ ಹೆಚ್ಚಿಸುತ್ತಿದ್ದ ವ್ಯಕ್ತಿಯ ಕೆಲಸ ಒಂದು ರೂಪಕದಂತೆ ಕಂಡಿತು.

ಸಮಕಾಲೀನ ಸಮಾಜದ ವಸ್ತುಸ್ಥಿತಿ ಹೀಗೆಯೇ ಇದೆ ಅನಿಸಿತು. ಇಡೀ ಜನಜೀವನ ಹೀಗೆ ನೀರು ಚಿಮುಕಿಸಿದ ನಂತರ ಹೊಗೆಯಾಡುತ್ತಾ ನಾನು ಇನ್ನು ದೋಸೆ ಹುಯ್ಯುವಷ್ಟು ಹದವಾದ ಬಿಸಿಯಾಗಿದ್ದೇನೆ ಎನ್ನುವ ಹೆಂಚಿನಂತೆ ಕಾದಿದೆ. ಸಾಮಾನ್ಯ ಜನರು ತಮ್ಮ ಕೆಲಸ ಕಾರ್ಯಗಳ ನಡುವೆ ಏನನ್ನು ಮಾತಾಡುತ್ತಾರೆ, ಯಾವುದು ಅವರ ಮನಸ್ಸನ್ನು ಆವರಿಸಿದೆ, ಅವರನ್ನು ನಿಜಕ್ಕೂ ಕಾಡುತ್ತಿರುವ ಸಮಸ್ಯೆಗಳು ಯಾವುವು ಎಂದು ಆಲೋಚಿಸಿದರೆ ಆತಂಕವಾಗುತ್ತದೆ. ನಿತ್ಯದ ಬವಣೆಗಳಾದ ಹಸಿವು, ನಿರುದ್ಯೋಗ, ಕುದಿವ ಬಿಸಿಲು, ಬೆಲೆ ಏರಿಕೆಗಳ ನಡುವೆ ನೆಮ್ಮದಿಯನ್ನು ಕಾಣಲು ಜನ ರಾಜಕೀಯ ಬೆಳವಣಿಗೆಗಳನ್ನು ಆಸೆಗಣ್ಣುಗಳಿಂದ ನೋಡುತ್ತಾರೆ. ತಮ್ಮ ಅಸಹಾಯಕತೆಯ ಅರಿವಿದ್ದೂ ರಾಜಕಾರಣದಲ್ಲಿ ತಮ್ಮ ಬದುಕನ್ನು ಎತ್ತರಿಸುವಂತಹ ಏನಾದರೂ ನಡೆಯಬಹುದು ಎಂದು ಆಶಿಸುವವರು, ‘ಅಯ್ಯೋ, ಯಾರು ಬಂದರೆ ಏನು ರಾಗಿ ಬೀಸುವುದು ತಪ್ಪುತ್ತದೆಯೇ’ ಎಂದು ಹತಾಶೆಯ ಮಾತಾಡುವವರು ಒಟ್ಟಿಗೆ ಕಾಣಸಿಗುತ್ತಾರೆ. ತಬ್ಬಲಿಗಳೂ ಅಮಾಯಕರೂ ಆದ ಜನರನ್ನು ರಾಜಕೀಯದಲ್ಲಿ ಅಧಿಕಾರ ಎಂಬುದು ಕಾರ್ಯಕ್ರಮಗಳ ಮೂಲಕ ತಲುಪಬೇಕು. ಅದು ಜನರ ಮೂಲಭೂತ ಅಗತ್ಯಗಳನ್ನು ಒದಗಿಸುವ ಸಂವೇದನೆಗಳಿಂದ ಕೂಡಿರಬೇಕು. ನಮ್ಮ ನಿಷ್ಠೆ ಇರಬೇಕಾದದ್ದು ಪ್ರಜಾಸತ್ತೆಗೆ. ಎಲ್ಲರನ್ನೂ ಒಳಗೊಳ್ಳುವ ಆಶಯವೇ ಪ್ರಜಾಪ್ರಭುತ್ವದ ಜೀವಾಳ.

ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾಗಿರಬೇಕಾದ ರಾಜಕಾರಣ ದ್ವೇಷದ ಕುದಿಬಿಂದುವಿನಲ್ಲಿ ನಿಲ್ಲಿಸಿ
ನೈತಿಕವಾಗಿ ಸೋತು ಹೋಗಿದೆ. ವಾಸ್ತವದಲ್ಲಿ ಏನಾಗುತ್ತಿದೆ? ಉದ್ಯೋಗ ಇಲ್ಲದವರೇ ಎಲ್ಲೆಲ್ಲೂ ಕಾಣುತ್ತಿದ್ದಾರೆ. ಅವರ ಅಸಹಾಯಕತೆಯೇ ರಾಜಕಾರಣದ ಬಂಡವಾಳವಾಗುತ್ತಿದೆ. ಜನರ ನಿರೀಕ್ಷೆ ಮತ್ತು ಆಕ್ರೋಶಗಳನ್ನು ತಣಿಸಲಾಗದೆ ರಾಜಕೀಯ ನೈತಿಕತೆ ನಕಾರಾತ್ಮಕ ಪರ್ಯಾಯಗಳನ್ನು ನಂಬಿ ಹೊರಟಂತಿದೆ. ನಾವು ಭಾರತೀಯರು ಎಂಬ ಹೆಮ್ಮೆ ನಮ್ಮದು ಎಂದು ಹೇಳುತ್ತಲೇ ಎಲ್ಲ ಬಗೆಯ ಒಡಕು ತುಂಬುವ ವಿಕಾರಗಳು ಮುನ್ನೆಲೆಗೆ ಬಂದುನಿಂತಿವೆ. ಚರಿತ್ರೆ, ದೇವರು, ಧರ್ಮ, ಜಾತಿ, ಗಂಡು ಹೆಣ್ಣು ಎಂಬ ಸಂಗತಿಗಳು ನಮ್ಮ ಖಾಸಗಿ ಬದುಕಿನ ಭಾಗಗಳಾಗಿವೆ. ಅವು ನಮ್ಮ ಸಾರ್ವಜನಿಕ ಜೀವನದಲ್ಲಿ ಎಂದೂ ಇಲ್ಲದ ಆತಂಕವನ್ನೂ, ಅಭದ್ರತೆಯನ್ನೂ ತಂದಂತಿವೆ.

ರಾಜಕೀಯ ಅಧಿಕಾರದ ನಿಜವಾದ ಪಾಲುದಾರರಾದ ಜನರ ಜೀವನವು ಚರಿತ್ರೆಯಿಂದ ಹಿಂಸೆಯನ್ನು, ಒಬ್ಬರ ದೈವದಿಂದ ಅನ್ಯ ದೈವದ ಅಣಕವನ್ನು, ಧರ್ಮದಿಂದ ಅಧರ್ಮವನ್ನು, ಜಾತಿಯಿಂದ ಅಸಹನೆಯನ್ನು ಆರಿಸಿಕೊಂಡಂತಿದೆ. ಇದೆಲ್ಲವೂ ಒಟ್ಟಾಗಿ ದ್ವೇಷ ಜ್ವಾಲೆಯ ಉಲ್ಬಣಕ್ಕೆ ಕಾರಣವಾದಂತಿದೆ. ಅಂದರೆ ಇಡೀ ಸಮಾಜ ಪರಸ್ಪರ ಮತ್ಸರದಿಂದ ಕುದಿಯುತ್ತಲೇ ಇರುವಂತೆ ನೋಡಿಕೊಳ್ಳುತ್ತಿರುವ ವಿಕಾರಪೂರ್ಣ ರಾಜಕಾರಣ ದೋಸೆ ಹುಯ್ಯಲು ಹೆಂಚನ್ನು ಸದಾ ಸನ್ನದ್ಧವಾಗಿಡುವ ಹೋಟೆಲ್ಲಿನವನ ಮನಃಸ್ಥಿತಿಯನ್ನು ಹೋಲುತ್ತದೆ. ಧರ್ಮ ದೇವರು ಮತ್ತು ಚರಿತ್ರೆಗಳ ಹುಸಿನಿರೂಪಣೆಗಳ ಕುರಿತಾದ ನಂಬಿಕೆಯು ಸತ್ಯ ನಾಶಕ್ಕೆ ನಾಂದಿಯಾಗಿದೆ. ಚುನಾವಣೆಯಲ್ಲಿ ಮತದಾರರೆಂಬ ಗಿರಾಕಿಗಳು ಬಂದ ಒಡನೆಯೇ ದೋಸೆ ಹಾಕಿ ವ್ಯಾಪಾರ ಲಾಭ ಗಿಟ್ಟಿಸುವ ಹೋಟೆಲ್ಲಿನವನ ಜಾಣ್ಮೆಯನ್ನು ಅನುಕರಿಸಿದಂತಾಗಿದೆ.

ಧರ್ಮ, ದೇವರು ನಮ್ಮ ಬೌದ್ಧಿಕ ಕುತೂಹಲವನ್ನು ತಣಿಸಬೇಕೇ ಹೊರತು ನಮ್ಮಲ್ಲಿ ಒಡಕಿನ ಹಾಲಾಹಲವನ್ನು ಸುರಿದು ಸಾಯಿಸಬಾರದು. ನಮ್ಮ ನೆಲ ಸದಾ ಕುಲುಮೆಯ ಹಾಗೆ ಉರಿಯುವಂತೆ ಮಾಡಿ ಅದರ ಬಿಸಿಯಲ್ಲಿ ಮೈಕಾಯಿಸಿಕೊಳ್ಳುವುದರ ವಿರುದ್ಧ ಧರ್ಮ ಮಾತನಾಡಬೇಕು. ಇದು ನಿಜವಾಗಿಯೂ ಜನರು ಅನ್ನ ದೇವರನ್ನು, ಧರ್ಮವು ಜನಸತ್ಯಕಾರಣವನ್ನು ಆರಾಧಿಸುವ ಹೊತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.