ಸಾಕ್ರಟೀಸ್ಗೆ ವಿಷಪ್ರಾಶನವಾಗಿತ್ತು. ಅವನ ಸುತ್ತ ನೆರೆದಿದ್ದ ಶಿಷ್ಯ ಬಳಗದ ಮನದಲ್ಲಿ ದುಗಡವೇ ದುಗುಡ. ಸಾಕ್ರಟೀಸ್ ಮಾತ್ರ ಸಂಕಟದ ಮಧ್ಯೆಯೂ ನಗುತ್ತಿದ್ದ. ಪರೀಕ್ಷಿಸಿದ ವೈದ್ಯ ಹೇಳಿದ: ‘ವಿಷದ ಪ್ರಮಾಣ ಜಾಸ್ತಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಸಾವು ಸಂಭವಿಸಲಿದೆ’. ಗುರುವಿನ ಮರಣವನ್ನು ನೆನೆದು ಶಿಷ್ಯರೆಲ್ಲರೂ ಅಳತೊಡಗಿದರು. ಸಾಕ್ರಟೀಸ್ ಕೇಳಿದ: 'ಯಾಕೆ ಅಳುತ್ತಿದ್ದೀರಿ?’. ಇದೆಂಥ ಅಪದ್ಧ ಪ್ರಶ್ನೆ, ‘ನೀವು ನಮ್ಮ ಗುರುಗಳು. ನಿಮ್ಮಿಂದ ನಾವು ಕಲಿಯಬೇಕಿರುವುದು ಸಾಕಷ್ಟಿದೆ. ನಿಮ್ಮ ಮಾರ್ಗದರ್ಶನವಿಲ್ಲದೆ ನಮ್ಮ ಬದುಕು ಏನಾಗಬಹುದು ಎನ್ನುವ ವಿಷಾದ ನಮ್ಮನ್ನು ಕಾಡುತ್ತಿದೆ’ ಎಂದರು ಶಿಷ್ಯರು. ಸಾಕ್ರಟೀಸನಿಗೆ ಆಶ್ಚರ್ಯ; 'ಇನ್ನೂ ನನ್ನ ಬಳಿ ಕಲಿಯುವುದು ಬಾಕಿ ಇದೆಯೇ? ನಾನು ಮಾತಾಡುತ್ತೇನೆ ಎಂದಾಗ ನೀವು ಯಾರೂ ನನ್ನ ಸಮೀಪಕ್ಕೂ ಬರಲಿಲ್ಲ. ಕೆಲವು ಸಲ ಕೇಳಿದ ಹಾಗೆ ನಟಿಸಿ ಸುಮ್ಮನಾಗುತ್ತಿದ್ದಿರಿ?’ ಎಂದ. ಅದಕ್ಕೆ ಶಿಷ್ಯರು ‘ನಿಮಗೆ ಹಾಗನ್ನಿಸಿರಬಹುದು, ಪ್ರವಚನ ಕೊಡುವಾಗ ನಿಮ್ಮ ಮಾತುಗಳನ್ನೇ ಉದಾಹರಿಸುತ್ತೇವೆ. ಅವು ನಮ್ಮ ಹೃದಯದಲ್ಲಿವೆ’ ಎಂದರು.

ಸಾಕ್ರಟೀಸ್ ಸಂತೋಷದಿಂದ ‘ಓಹ್ ಈಗ ನಾನು ಸತ್ತರೂ ಬದುಕಿದರೂ ಏನೂ ವ್ಯತ್ಯಾಸವಿಲ್ಲ ಅಲ್ಲವೇ’ ಎಂದ. ಶಿಷ್ಯರಿಗೆ ಇನ್ನಷ್ಟು ದುಃಖವಾಯಿತು. ‘ನಮ್ಮಿಂದ ನಿಮ್ಮನ್ನು ಮೃತ್ಯು ಕಸಿದುಕೊಳ್ಳುತ್ತದೆ. ಅದಕ್ಕೆ ಸಾವನ್ನು ನಾವು ದ್ವೇಷಿಸುತ್ತೇವೆ’ ಎಂದರು. ತಕ್ಷಣ ಸಾಕ್ರಟೀಸ್, ‘ದ್ವೇಷ ಎನ್ನುವ ಪದ ತುಂಬಾ ಕೆಟ್ಟದ್ದು; ಸಾವಿಗಿಂತಲೂ. ಸಾವೆಂದರೆ ಇಲ್ಲವಾಗಿಸುವುದು. ಯಾವಾಗ ಮನುಷ್ಯ ಜ್ಞಾನದಲ್ಲಿ, ಅಧ್ಯಾತ್ಮದಲ್ಲಿ ತನ್ನನ್ನು ತಾನು ಇಲ್ಲವಾಗಿಸಿಕೊಳ್ಳಲು ಶ್ರಮಿಸುತ್ತಾನೆಯೋ, ಅದಕ್ಕೆ ಮುಖಾಮುಖಿಯಾಗಿ ನಿಂತು, ‘ನಿನಗಿಂತಲೂ ನಾನು ಧೈರ್ಯಶಾಲಿ’ ಎಂದು ತೋರಿಸಿಕೊಳ್ಳುತ್ತಾನೆಯೋ ಅವನು ನಿಜವಾದ ಸಾಧಕ. ಒಂದು ಮಾತನ್ನು ಹೇಳುತ್ತೇನೆ; ಸಾವನ್ನು ಕಂಡು ಭಯಭೀತನಾದವನೂ, ಸಾವಿಗೆ ಎದುರಾಗಿ ಹೋರಾಡಿದವನೂ ಎಲ್ಲರೂ ಸಾಯುತ್ತಾರೆ. ಹುಟ್ಟಿನ ಹಾಗೆ ಸಾವೂ ಒಂದು ಸ್ಥಿತಿ’ ಸಾಕ್ರಟೀಸ್ ಮಾತು ನಿಲ್ಲಿಸಿದ.

ಹಾಗಾದರೆ ‘ನಮ್ಮ ಬದುಕನ್ನು ಕಸಿದುಕೊಳ್ಳುವ ಸಾವನ್ನು ಬಯಸಬೇಕೇ?’ ಎಂದ ಶಿಷ್ಯರಿಗೆ ಸಾಕ್ರಟೀಸ್ ಹೇಳಿದ: ‘ಬಯಸಿದಾಗ ಬರುವುದು ಯಾವುದೂ ಇಲ್ಲ. ಅದೊಂದು ಪಕ್ವತೆಯ ಕಾಲ. ಸಾವು ನಮ್ಮಿಂದ ಏನನ್ನು ಕಸಿದುಕೊಂಡಿತು ಎಂದು ಕೇಳಿಕೊಳ್ಳಿ. ನಾನು ಗಳಿಸಿದ ಜ್ಞಾನ ನಿರಂತರ ವಾಹಿನಿಯಾಗಿ ನಿಮ್ಮಲ್ಲಿ ಹರಿಯುತ್ತಿದೆ. ಅದನ್ನು ಕೊನೆಗೊಳಿಸುವ ಶಕ್ತಿ ಸಾವಿಗಿಲ್ಲ. ಯಾರು ಜ್ಞಾನದ ಮೂಲಕ ಉಳಿಯುತ್ತಾರೋ ಅವರಿಗೆ ಸಾವೇ ಇರುವುದಿಲ್ಲ. ಸಾವೇ ಇಲ್ಲ ಅಂದ ಮೇಲೆ ದುಃಖ ಎಲ್ಲಿಯದು’.

ಜೀವನದಲ್ಲಿ ಪ್ರತಿಕ್ಷಣವೂ ಪ್ರಫುಲ್ಲಿತರಾಗಬೇಕು. ಓದುವುದು ಸಾಧ್ಯವಾದರೆ ಓದಿ, ಹಾಡಿ. ನಿಮ್ಮಿಚ್ಛೆಯಂತೆ ಬದುಕಿ. ಬದುಕನ್ನು ನಗುನಗುತ್ತಾ ಸ್ವೀಕರಿಸಿದರೆ ಯಾವುದೂ ದುಃಖಕ್ಕೆ ಈಡು ಮಾಡುವ ಘೋರ ಸಂಗತಿಯಾಗಿರುವುದಿಲ್ಲ. ಸಾವಿನ ಎದುರೂ ನಗುವೆ, ಸತ್ತ ನಂತರವೂ ತಾನು ಉಳಿವೆ ಎಂದುಕೊಳ್ಳುವ ಆತ್ಮವಿಶ್ವಾಸ ಸಾಮಾನ್ಯದ ಮಾತಲ್ಲ. ಯಾರು ಬದುಕನ್ನು ಸ್ವೀಕಾರ ಮಾಡುತ್ತಾರೋ ಅವರು ಎಲ್ಲವನ್ನೂ ಗೆದ್ದ ಹಾಗೆ. ಇಂಥಾ ಮನಃಸ್ಥಿತಿಯನ್ನು ರೂಢಿಸಿಕೊಂದರೆ ಯಾವ ಭಾರವೂ ಇಲ್ಲದ ಹಾಗೆ ಬದುಕಬಹುದು ಅಲ್ಲವೇ...

ಸಾಕ್ರಟೀಸ್ ನಿಜವಾದ ತತ್ವಜ್ಞಾನಿ ಎನ್ನಿಸುವುದು ಜಗತ್ತು ಮತ್ತೆ ಮತ್ತೆ ಆತನನ್ನು ನೆನೆಯುವುದು ಇಂಥಾ ತಾತ್ವಿಕತೆಯ ಕಾರಣಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.