ಇಂಥವರ ಕಥೆಗಳು ಅಗಾಧವಾದ ಅರಿವು ಮತ್ತು ಮಾಸದ ಅನುಭವವನ್ನು ಕೊಡಬಲ್ಲವು. ಜಾರ್ಜ್, ವಾಷಿಂಗ್ಟನ್ನ ಒಂದು ದೊಡ್ಡ ರೆಸ್ಟೋರೆಂಟ್ನ ದ್ವಾರಪಾಲಕ. ಬರೋಬ್ಬರಿ ಎಪ್ಪತ್ತು ವರ್ಷ ವಯಸ್ಸು. ಕಳೆದ ಮೂವತ್ತೈದು ವರ್ಷಗಳಿಂದ ರೆಸ್ಟೋರೆಂಟ್ಗೆ ಬಂದವರನ್ನು ಸ್ವಾಗತಿಸಿ ಮುಖ್ಯದ್ವಾರವನ್ನು ತೆರೆಯುವುದು, ಒಳಗೆ ಕರೆಯುವುದು, ಅವರು ಹಿಂದಿರುಗುವಾಗ ತಲೆಬಾಗಿ ವಂದಿಸಿ ಕಳಿಸುವುದು. ಇದೇ ಇದೇ ಕೆಲಸ. ಆ ಬಾಗಿಲ ಹಿಡಿಯ ತುಂಬಾ ಅವನ ಕೈಗಳ ಗುರುತುಗಳು. ಚಾಚೂತಪ್ಪದೆ ನಡೆವ ದಿನಚರಿ. ಬಂದುಹೋದವರೆಲ್ಲ ಗಮನಿಸಲಿ ಬಿಡಲಿ, ಏನೂ ನಿರೀಕ್ಷೆ ಇರದ ಜೀವ. ಅನ್ಯರು ತಮ್ಮ ನೆನಪಿಗಾಗಿ ಫೋಟೊ ತೆಗೆದುಕೊಳ್ಳುವ ಒಂದು ವಸ್ತು ಅಷ್ಟೆ. ಬಾಗಿಲ ಹಿನ್ನೆಲೆಯ ಸೌಂದರ್ಯದ ಎದುರು ಒಂದು ಗೊಂಬೆ ಅಷ್ಟೇ. ಯಾರಿಂದಲೂ ಬಾಗಿಲು ತೆರೆಯಲು ಹಾಕಲು ಬಿಡದ ಜಾರ್ಜ್ ಒಂದು ನಿಮಿಷ ಕೂಡುವವನಲ್ಲ. ಹತ್ತಾರು ಗಂಟೆ ನಿಂತೇ ಇರುವವ. ಯಾರಾದರೂ ನೋಟು ನಾಣ್ಯ ಅಂಗೈಗೆ ತುರುಕುವುದೂ ಅಪರೂಪ. ಮನೋರಂಜನೆ, ರೊಮಾನ್ಸ್, ಐಷಾರಾಮಿ ಅನುಕೂಲಗಳಿಗಾಗಿಯೇ ಬರುವವರಿಗೆ ಎಪ್ಪತ್ತರ ಈ ವೃದ್ಧನ ಕಡೆಗೆ ಗಮನ ಹೇಗೆ ಸಾಧ್ಯ? ಕಣ್ಣೆತ್ತಿ ನೋಡದ ಜನ ಹೊಟ್ಟೆ ಸವರಿಕೊಂಡು ತೇಗುತ್ತ ಹೊರಟುಬಿಡುತ್ತಾರೆ. ಮಾತಾನಾಡಿಸುವವರು ಯಾರು?

ಜಪಾನಿನ ಉದ್ಯಮಿಯೊಬ್ಬ ತನ್ನ ಸಹಚರರ ಜೊತೆ ಬಿಲಿಯನ್ ವ್ಯವಹಾರ ಮಾತುಕತೆಗೆ ಅಂತ ಆ ರೆಸ್ಟೋರೆಂಟ್ಗೆ ಬಂದಾಗ ಸುಕ್ಕು ಕೆನ್ನೆ ಹಣೆ ಕೊರಳು ಮುಂಗೈ ಮತ್ತು ಕಣ್ಣಿಗೆ ಸಣ್ಣ ಪೊರೆ ಬಂದಂತಿರುವ ದ್ವಾರಪಾಲಕ ಜಾರ್ಜ್ನ ಕಂಡು ಜಪಾನಿ ಶೈಲಿಯಲ್ಲಿ ಸೊಂಟ ಬಗ್ಗಿಸಿ ಗೌರವ ಸಲ್ಲಿಸಿದ, ಕೈಕುಲುಕಿದ. ಜಾರ್ಜ್ನ ಹಿನ್ನೆಲೆ ವಿವರಗಳನ್ನು ತಿಳಿದುಕೊಂಡು ಡೋರ್ಮೆನ್ನ ಬಗ್ಗೆ ಜಪಾನಿನಲ್ಲಿ ಇರುವ ಮೌಲ್ಯ ಮತ್ತು ಘನತೆಯ ಬಗ್ಗೆ ವಿವರಣೆ ನೀಡಿದ. ಲೋಕ ಮತ್ತು ವಹಿವಾಟಿನ ಸ್ಥಳವಾದ ರೆಸ್ಟೋರೆಂಟ್ನ ಮಧ್ಯೆ ಸೇತುವೆ ಕಲ್ಪಿಸುವ ಜಾರ್ಜ್ನ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ. ಅವನ ಕೈ ಬೆರಳುಗಳು ಮುಂದೆ ಬಂದು ಬಾಗಿಲು ತೆರೆಯದೇ ಇದ್ದರೆ, ಗ್ರಾಹಕರಿಗೆ ಮುಗುಳ್ನಗೆ ಸಲ್ಲಿಸದೇ ಇದ್ದರೆ ರೆಸ್ಟೋರೆಂಟ್ಗೆ ಅರ್ಥ ಮತ್ತು ಅಸ್ತಿತ್ವವೇ ಇಲ್ಲ. ಎಪ್ಪತ್ತರ ಈ ಇಳಿ ವಯಸ್ಸಿನಲ್ಲೂ ಇಷ್ಟು ನಿಷ್ಠೆ ಮತ್ತು ಪ್ರೀತಿಯಿಂದ ಕೆಲಸ ಮಾಡುವುದು ಸುಲಭವಲ್ಲ. ಎಷ್ಟು ಜನ ಇಂತಹ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೀರಿ? ಕೈಕುಲುಕಿ ನಕ್ಕು ಮಾತಾಡಿಸಿದ್ದೀರಿ? ದರ್ಪದಿಂದ ನಾಣ್ಯವನ್ನು ಅಂಗೈಗೆ ಎಸೆದು ಹೊರಡುವ ಜನಕ್ಕೆ ಈ ಋಷಿಯ ಬಗ್ಗೆ ಹೇಗೆ ಅರ್ಥವಾದೀತು?

ನಿಜ ಅಲ್ಲವೆ? ಸುಡು ಬಿಸಿಲಲ್ಲಿ ನಿಂತು ಪಾರ್ಕಿಂಗ್ಗೆ ವಿಷಲ್ ಊದುತ್ತ ದಾರಿ ತೋರಿಸುವವ, ಶೋರೂಂ ಬಾಗಿಲು ಕಾಯುವವ, ಸರ್ವರ್, ಸಪ್ಲಯರ್ ಹೀಗೇ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹಾಗೆಲ್ಲ ಅವರು ಹಣಕ್ಕೆ ನೇರವಾಗಿ ಕೈಚಾಚುವ ಹಾಗಿಲ್ಲ. ಆದರೆ ಅವರನ್ನು ಈ ಲೋಕ ಕಡೆಗಣಿಸುವ ಪರಿ ಇದೆಯಲ್ಲ, ಅದು ಮಾನವೀಯತೆಯನ್ನು ಅಣಕಿಸುತ್ತದೆ. ಹಣ ಬೇಡ ಬಿಡಿ, ಒಂದು ಮಾನವೀಯ ನೋಟ, ಒಂದು ಕುಶಲೋಪರಿ ಮಾತು, ಒಂದು ಸಣ್ಣ ಧನ್ಯತೆಯ ಮುಗುಳು, ಒಂದು ಹಲೋ, ಒಂದು ಥ್ಯಾಂಕ್ಸ್ ಅವರ ವಯಸ್ಸು, ಆಯಾಸ, ಸಂಕಟವನ್ನು ಕಡಿಮೆ ಮಾಡಬಲ್ಲುದಾದರೆ ಅದಕ್ಕೂ ಏಕೆ ಜಿಪುಣತನ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.