ಥಾಮಸ್ ಆಲ್ವಾ ಎಡಿಸನ್ರನ್ನು ಸಂದರ್ಶಕ ಪ್ರಶ್ನಿಸಿದ, ‘ಸಾವಿರಾರು ಪ್ರಯತ್ನಗಳು, ಸೋಲಿನ ಸರಮಾಲೆ, ನಿಮ್ಮನ್ನೆಂದೂ ಕಂಗೆಡಿಸಲಿಲ್ಲವೇ?’ ನಕ್ಕ ಎಡಿಸನ್, ‘ಅದನ್ನು ಸೋಲೆಂದು ಯಾಕೆ ಕರೆಯುತ್ತಿರುವಿರಿ? ನಾನು ಗೆಲ್ಲುವ ಹತ್ತು ಸಾವಿರ ದಾರಿಗಳಲ್ಲಿ ಪಯಣಿಸಿದ್ದೇನೆ ಎಂದು ನಿಮಗೆ ಅನ್ನಿಸಲಿಲ್ಲವೆ’ ಎಂದು ಮರುಪ್ರಶ್ನಿಸುತ್ತಾರೆ. ಸಂದರ್ಶಕ ಕಕ್ಕಾಬಿಕ್ಕಿಯಾಗುತ್ತಾನೆ. ನಕ್ಕ ಎಡಿಸನ್, ‘ಸೋಲುಗಳು ನಮ್ಮನ್ನು ಕಂಗೆಡಿಸಬಾರದು, ಅವು ನಮ್ಮ ಮುಂದಿನ ಗುರಿಯ ಕಡೆಗೆ ಹೊರಡುವ ದಾರಿಯನ್ನು ಸುಗಮಗೊಳಿಸುತ್ತಿರುತ್ತವೆ. ಇವತ್ತು ಕತ್ತಲಾಯಿತು ಎಂದರೆ ಇನ್ನು ಬೆಳಕು ಆಗುವುದಿಲ್ಲ ಎಂದು ನಿರ್ಧಾರಕ್ಕೆ ಬರುತ್ತೇವೆಯೇ? ಇಲ್ಲ. ನಾಳೆ ಬೆಳಕಾಗುತ್ತದೆ, ಆಗ ನಾನು ಈ ಕೆಲಸವನ್ನು ಮಾಡುತ್ತೇನೆ ಎಂದು ನಿರ್ಧರಿಸಿಕೊಳ್ಳುತ್ತೇವೆ ಅಲ್ಲವೇ? ಹಾಗೆ ಸೋಲುಗಳು ಕೂಡಾ. ಗೆಲುವಿನ ಕ್ಷಣಗಳಿಗಾಗಿ ಕಾಯುವಂತೆ ಮಾಡುತ್ತವೆ’ ಎಂದರು.

ಸಂದರ್ಶಕನಿಗೆ ನಿಜಕ್ಕೂ ಕುತೂಹಲ ಅನ್ನಿಸಿ, ‘ಹೇಳಿ ಎಡಿಸನ್, ನೀವು ಕ್ಷಣ ಕಾಲವಾದರೂ ಕೈ ಚೆಲ್ಲಿ ಕೂಡಲಿಲ್ಲವೇ? ನಿಮ್ಮ ಬದುಕು ನಿಮ್ಮ ಸಂಶೋಧನೆ ಎಲ್ಲವೂ ಅನಿಶ್ಚಿತ ಅನ್ನಿಸಲಿಲ್ಲವೇ’ ಎಂದು ಕೇಳಿದ. ‘ನೀವು ನಿಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿದ್ದರೆ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಗೆಲ್ಲುವ ಎಲ್ಲ ದಾರಿಗಳೂ ತಮ್ಮದೊಂದೊಂದು ಮಾರ್ಗಗಳಿವೆ ಎಂದು ತೋರಿಸುತ್ತವೆ. ಮುಖ್ಯವಾಗಿ ನಿಮ್ಮ ಮನಸ್ಸಿನಲ್ಲಿ ಅದನ್ನು ಪಡೆದೇ ತೀರುತ್ತೇನೆ ಎನ್ನುವ ತೀರ್ಮಾನ ಇರಬೇಕು. ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿರಬೇಕು, ಇವೆರಡೂ ನಿಮ್ಮನ್ನು ನೀವು ಬಯಸಿದ ಗೆಲುವಿನ ಬಳಿಗೆ ಕರೆದೊಯ್ದು ನಿಲ್ಲಿಸುತ್ತವೆ’ ಎಂದರು.

ಸಂದರ್ಶಕ ಮತ್ತೆ ಕೇಳಿದ, ‘ನಿಮ್ಮ ಬದುಕು, ವರ್ತನೆ ಜಗತ್ತಿಗೆ ತುಂಬಾ ವಿಚಿತ್ರವಾಗಿ ಕಂಡಿವೆ. ನೀವು ಬಲ್ಬನ್ನು ತಯಾರು ಮಾಡಿದ ನಂತರ ಹುಡುಗನೊಬ್ಬನಿಗೆ ಕೊಟ್ಟು ಅದನ್ನು ಹೋಲ್ಡರ್ಗೆ ಹಾಕಲಿಕ್ಕೆ ಹೇಳಿದಿರಿ, ಆದರೆ ಆ ಹುಡುಗ ಅದನ್ನು ಬೀಳಿಸಿ ಒಡೆದ. ರಾತ್ರಿಯೆಲ್ಲಾ ಕಷ್ಟ ಪಟ್ಟು ಮತ್ತೆ ಬಲ್ಬ್ ತಯಾರಿಸಿ ಮತ್ತೆ ಅದೇ ಹುಡುಗನ ಕೈಗೆ ಕೊಟ್ಟು ಹಾಕಲಿಕ್ಕೆ ಹೇಳಿದಿರಂತೆ. ಅವನು ಆ ಬಲ್ಬನ್ನು ಮುಟ್ಟಲಿಕ್ಕೂ ಹೆದರಿನಂತೆ. ಆದರೂ ನೀನೇ ಹಾಕು ಎಂದಿರಂತೆ? ಯಾಕೆ ಹಾಗೆ ಮಾಡಿದಿರಿ? ನಿಮ್ಮ ಶ್ರಮ ವ್ಯರ್ಥ ಅನ್ನಿಸಲಿಲ್ಲವೇ’ ಎಂದ. ‘ನನ್ನ ಸೋಲುಗಳು ಗೆಲುವಾಗಿ ಮಾರ್ಪಟ್ಟ ದಿನ ನನ್ನೊಳಗೆ ಆತ್ಮವಿಶ್ವಾಸ ಹುಟ್ಟಿಬಿಟ್ಟಿತ್ತು. ಬಲ್ಬ್ ತಯಾರಿಸುವುದು ಸ್ವಲ್ಪ ಶ್ರಮದಾಯಕ ವಿಚಾರವಾಗಿತ್ತೇ ವಿನಾ ಅದು ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸುವ ಸಂಗತಿಯಾಗಿರಲಿಲ್ಲ. ಆದರೆ, ಆ ಹುಡುಗನಿಗೆ ಹಾಗಿರಲಿಲ್ಲ. ಅವನು ಅದನ್ನು ಹೋಲ್ಡರ್ಗೆ ಹಾಕಿ ಬೆಳಗಿಸಲಿಲ್ಲ ಎಂದರೆ ಜೀವಮಾನವಿಡೀ ಅದೇ ತಪ್ಪಿತಸ್ಥ ಭಾವನೆಯಿಂದ ನರಳಿ ಬಿಡುತ್ತಿದ್ದ. ಇಷ್ಟು ದಿನಗಳು ಅನುಮಾನಿಸದೆ ನನ್ನೊಂದಿಗೆ ಕುಳಿತಿದ್ದಾನೆ. ಅಂಥವನನ್ನು ಜೊತೆಯಲ್ಲಿ ಕರೆದೊಯ್ಯುವುದು ನನ್ನ ಕರ್ತವ್ಯ ಅಲ್ಲವೇ’ ಎಂದರು ಎಡಿಸನ್.

ಮತ್ತೆ ಸಂದರ್ಶಕ ಕೇಳಿದ, ‘ಹಾಗಾದರೆ ಆ ಹುಡುಗ ಇಲ್ಲದಿದ್ದರೆ ನೀವು ಬಲ್ಬನ್ನು ಕಂಡು ಹಿಡಿಯುತ್ತಿರಲಿಲ್ಲವೇ?’ ಎಡಿಸನ್ ನಕ್ಕು, ‘ನಮ್ಮ ಎದೆಯಲ್ಲಿನ ಪ್ರಬಲವಾದ ಬಯಕೆಗಳು ಸುಮ್ಮನೆ ಹುಟ್ಟಿರುವುದಿಲ್ಲ. ಯಾರು ನಮ್ಮನ್ನು ಗಮನಿಸದಿದ್ದರೂ, ನಮ್ಮನ್ನು ಪ್ರೋತ್ಸಾಹಿಸದಿದ್ದರೂ ಅವು ಇದ್ದೇ ಇರುತ್ತವೆ. ಅದನ್ನು ನಾವು ನಂಬಬೇಕು. ಅವು ನಮ್ಮ ಕೈ ಹಿಡಿಯುತ್ತವೆಯೋ ಅಥವಾ ನಾವು ಅವುಗಳ ಕೈ ಹಿಡಿಯುತ್ತೀವೋ ತಿಳಿಯದು. ಸಾರ್ಥಕತೆಯ ಕಡೆಗೆ ಮಾತ್ರ ಸಾಗುತ್ತೇವೆ’ ಎಂದರು.

ನಿಜ. ಆತ್ಮವಿಶ್ವಾಸವೊಂದಿದ್ದರೆ ಕೈಚೆಲ್ಲುವ ದಿನಗಳು ಬರುವುದೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.