ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಇ.ವಿ. ಬಳಕೆಗೆ ಬೇಕಿದೆ ಇನ್ನಷ್ಟು ಉತ್ತೇಜನ

Last Updated 10 ಅಕ್ಟೋಬರ್ 2021, 2:54 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ಮಾಲಿನ್ಯ ತಡೆಗೆ ಮತ್ತು ತೈಲ ಆಮದು ವೆಚ್ಚದ ಹೊರೆ ತಗ್ಗಿಸಲು ಕೇಂದ್ರ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ತಯಾರಿಗೆ ಮತ್ತು ಬಳಕೆ ಉತ್ತೇಜಿಸುತ್ತಿದೆ. ಅದಕ್ಕಾಗಿ ಯೋಜನೆ (ಫೇಮ್‌) ಜಾರಿಗೊಳಿಸಿದೆಯಾದರೂ, ಗುರಿ ಸಾಧನೆಪೂರ್ತಿಯಾಗಿ ಆಗಿಲ್ಲ.

ದೇಶದ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳು ಮತ್ತು ಖಾಸಗಿ ಬಳಕೆಯ ಶೇ 40ರಷ್ಟು ವಾಹನಗಳು 2030ರ ವೇಳೆಗೆ ಸಂಪೂರ್ಣವಾಗಿ ವಿದ್ಯುತ್‌ ಚಾಲಿತ ಆಗಿರಬೇಕು ಎನ್ನುವ ಮಹತ್ವಾಕಾಂಕ್ಷೆ ಸರ್ಕಾರದ್ದು. ಅದಕ್ಕಾಗಿ,₹ 895 ಕೋಟಿ ನೀಡಿ, ಫೇಮ್‌ ಯೋಜನೆಯನ್ನು ಎರಡು ವರ್ಷಗಳ ಅವಧಿಗೆ2015ರ ಏಪ್ರಿಲ್‌ನಲ್ಲಿ ಜಾರಿಗೊಳಿಸಲಾಯಿತು. ಆದರೆ, ಯೋಜನೆವಿಸ್ತರಿಸುವ ಬೇಡಿಕೆ ಉದ್ಯಮ ವಲಯದಿಂದ ಬಂದಿದ್ದರಿಂದ 2019ರ ಏಪ್ರಿಲ್‌ನಲ್ಲಿ (ಫೇಮ್‌–2) ಜಾರಿಗೊಳಿಸಿ, ಮೂರು ವರ್ಷಗಳ ಅವಧಿ ನಿಗದಿಪಡಿಸಲಾಗಿತ್ತು. ಗುರಿ ತಲುಪಲು ಸಾಧ್ಯವಾಗದೇ ಮತ್ತೆ ಎರಡು ವರ್ಷ ವಿಸ್ತರಿಸಲಾಗಿದೆ. ‘ಫೇಮ್‌–2’ಗಾಗಿ ₹ 10 ಸಾವಿರ ಕೋಟಿ ಮೀಸಲಿಡಲಾಗಿದೆ.

ಫೇಮ್‌–2 ಅಡಿಯಲ್ಲಿ, 2022ರ ಮಾರ್ಚ್‌ ಒಳಗಾಗಿ ಗರಿಷ್ಠ ವೇಗದ 10 ಲಕ್ಷ ದ್ವಿಚಕ್ರ ವಾಹನ ಮಾರಾಟದ ಗುರಿ ಇದೆ. 2019ರ ಜನವರಿ–ಡಿಸೆಂಬರ್‌ನ 27,224 ದ್ವಿಚಕ್ರ ವಾಹನ ಮಾರಾಟವಾಗಿದ್ದರೆ, 2020ರ ಇದೇ ಅವಧಿಯಲ್ಲಿ ಈ ಸಂಖ್ಯೆ 25,735. ಸಬ್ಸಿಡಿ ಇದ್ದರೂ ಕೆಲವು ಷರತ್ತುಗಳಿಂದಾಗಿ ವಾಹನ ಖರೀದಿಗೆ ಹಿನ್ನಡೆಯಾಗುತ್ತಿದೆ ಎನ್ನುತ್ತಾರೆ ಸಂಘದ ಪ್ರಧಾನ ನಿರ್ದೇಶಕ ಸೋಹಿಂದರ್ ಗಿಲ್‌.

ಸಬ್ಸಿಡಿ ಹೆಚ್ಚಳ
ಫೇಮ್‌–2 ಅಡಿ, ದ್ಚಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರವು ಶೇಕಡ 50ರಷ್ಟು ಹೆಚ್ಚಿಸಿದೆ. ಆರಂಭದಲ್ಲಿ, ಎಲ್ಲಾ ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರತಿ ಕೆಡಬ್ಲ್ಯುಎಚ್‌ಗೆ (per KWh) ₹ 10 ಸಾವಿರ ಸಬ್ಸಿಡಿ ನಿಗದಿಪಡಿಸಲಾಗಿತ್ತು. ಇದೀಗ ದ್ವಿಚಕ್ರ ವಾಹನಗಳಿಗೆ ಪ್ರತಿ ಕೆಡಬ್ಲ್ಯುಎಚ್‌ಗೆ ₹ 15 ಸಾವಿರ ಸಬ್ಸಿಡಿ ನಿಗದಿ ಮಾಡಲಾಗಿದೆ. ಬೃಹತ್‌ ಉದ್ದಿಮೆಗಳ ಇಲಾಖೆಯು ಈಚೆಗೆ ತಂದ ಬದಲಾವಣೆ ಪ್ರಕಾರ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ನೀಡುವ ಆರ್ಥಿಕ ಉತ್ತೇಜನ ಮೊತ್ತವನ್ನು ವಾಹನಗಳ ಒಟ್ಟು ವೆಚ್ಚದ ಶೇ 40ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಇದು ಶೇ 20ರಷ್ಟಿತ್ತು.

ಫೇಮ್–2 ಸಬ್ಸಿಡಿ
* ಕಾರು ತಯಾರಿಕಾ ವೆಚ್ಚ ₹ 15 ಲಕ್ಷ ಆಗಿದ್ದರೆ, ಅದರ ‌ಖರೀದಿಗೆ ₹ 1.5 ಲಕ್ಷದವರೆಗೆ

* ಪ್ರತಿ ವಿದ್ಯುತ್‌ ಚಾಲಿತ ಬಸ್‌ ತಯಾರಿಕೆಗೆ ಅಂದಾಜು ₹ 2 ಕೋಟಿ ವೆಚ್ಚವಾಗಲಿದ್ದು, ಅದಕ್ಕೆ ₹ 50 ಲಕ್ಷ

* ವಿದ್ಯುತ್‌ ಚಾಲಿತ ಇ–ರಿಕ್ಷಾ ತಯಾರಿಕೆಗೆ ₹ 5 ಲಕ್ಷ ವೆಚ್ಚವಾಗಲಿದ್ದು, ಅದಕ್ಕೆ ₹ 50 ಸಾವಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT