ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 14–10–1969

Last Updated 13 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

‘ಸೂಯಜ್ –8’ ಅಂತರಿಕ್ಷಕ್ಕೆ: ಬಾಹ್ಯಾಕಾಶದಲ್ಲಿ ರಷ್ಯದ ಏಳು ಗಗನಯಾತ್ರಿಗಳು
ಮಾಸ್ಕೊ, ಅ. 13– ಬಾಹ್ಯಾಂತರಿಕ್ಷದಲ್ಲಿ ಪೃಥ್ವಿಯನ್ನು ಪ್ರದಕ್ಷಿಣೆ ಹಾಕುತ್ತಿರುವ ಐವರು ಗಗನಯಾತ್ರಿಕರ ಜತೆಗೂಡಲು ರಷ್ಯವು ಮತ್ತಿಬ್ಬರನ್ನು ಸೂಯೆಜ್‌ನ ಎಂಟರಲ್ಲಿ ಇಂದು ಹಾರಿಸಿತು.

ರಬಾತ್ ಸಮ್ಮೇಳನಕ್ಕೆ ಭಾರತ ಹೋಗಿದ್ದು ಸರಿ: ಪ್ರಧಾನಿ ಸಮರ್ಥನೆ
ನವದೆಹಲಿ, ಅ. 13– ರಬಾತ್‌ನಲ್ಲಿ ನಡೆದ ವಿಶ್ವ ಇಸ್ಲಾಮಿಕ್ ಶೃಂಗ ಸಮಾವೇಶದಲ್ಲಿ ಭಾರತ ಭಾಗವಹಿಸುವ ನಿರ್ಧಾರ ಕೈಗೊಂಡಿದ್ದನ್ನು ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಬಲವಾಗಿ ಸಮರ್ಥಿಸಿದ್ದಾರೆ.

ಶ್ರೀ ಸಿ.ಸಿ. ದೇಸಾಯಿ ಹಾಗೂ ಇನ್ನಿತರ ನಾಲ್ಕು ಮಂದಿ ಸ್ವತಂತ್ರ ಪಕ್ಷದ ಸಂಸತ್ ಸದಸ್ಯರಿಗೆ ಬರೆದ ಉತ್ತರದಲ್ಲಿ ಪ್ರಧಾನಿ ಅವರು ‘ರಬಾತ್‌ ಸಮ್ಮೇಳನವು ಔಪಚಾರಿಕವಾಗಿ ಇಸ್ಲಾಮಿಕ್ ಸಮ್ಮೇಳನ ಎನಿಸಿದ್ದರೂ ಅದರ ಉದ್ದೇಶ ಸಂಪೂರ್ಣವಾಗಿ ರಾಜಕೀಯವಾದದ್ದು’ ಎಂದಿದ್ದಾರೆ.

ತಮ್ಮ ಪದಚ್ಯುತಿಯೇ ಆರೋಪಗಳ ಉದ್ದೇಶ– ಎಸ್ಸೆನ್
ನವದೆಹಲಿ, ಅ. 13– ಸಕಾರಣವಲ್ಲದೆಯೇ ತಮ್ಮ ವಿರುದ್ಧ ಆಪಾದನೆ ಹೊರಿಸುವ ಯತ್ನಗಳನ್ನು ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಪ್ರತಿಭಟಿಸಿದರು. ಕಾಂಗ್ರೆಸ್ ಅಧ್ಯಕ್ಷತೆಯಿಂದ ತಮ್ಮನ್ನು ಪದಚ್ಯುತಗೊಳಿಸುವುದೇ ಈ ಎಲ್ಲಾ ಆಪಾದನೆ ಉದ್ದೇಶವಾಗಿರುವಂತೆ ಕಾಣಬರುತ್ತಿರುವುದಾಗಿಯೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT