ಜನತಂತ್ರ ವ್ಯವಸ್ಥೆಯಲ್ಲಿ ಜನ ಏನನ್ನಾದರೂ ಹೇಳಬಹುದು ಎಂಬುದು ಸತ್ಯ. ಆದರೆ, ರೋಗಗ್ರಸ್ತ ಮನಸ್ಸುಗಳೆಲ್ಲ ಒಟ್ಟಾಗಿ ಶ್ರೀಗಂಧವನ್ನೇ ಮಲಿನಗೊಳಿಸಿ ದುರ್ವಾಸನೆ ಎಂದು ಬಿಂಬಿಸಬಹುದು ಎನ್ನುವುದಕ್ಕೆ ‘ಕಾಕ್ರೋಚ್ ಜನತಾ ಪಕ್ಷ’ದ ವೈಭವೀಕರಣ ಮತ್ತು ಪ್ರಚಾರದ ಹೆಸರಲ್ಲಿ ನಡೆಯುತ್ತಿರುವ ಅಪಪ್ರಚಾರ ನಿದರ್ಶನದಂತಿದೆ. ರಾಷ್ಟ್ರಭಕ್ತರನ್ನು ಸಂವಿಧಾನ ವಿರೋಧಿಗಳೆಂದು ಜಿರಲೆ ಪಕ್ಷವನ್ನು ಕಟ್ಟಲು ಯತ್ನಿಸುತ್ತಿರುವ ವರು ಬಿಂಬಿಸುತ್ತಿದ್ದಾರೆ.

ಯಾವ ದೇಶದಲ್ಲಿ ಲೋಕ ತಿದ್ದುವ ಹೆಸರಲ್ಲಿ ದೇಶ ದ್ರೋಹಕ್ಕೆ ಸಮನಾದ ಒಳಗದ್ದಲ ಎಬ್ಬಿಸಲು ಹೊರಟ ಬುದ್ಧಿ ಜೀವಿಗಳು ಗರಬಡಿದು ನಿಲ್ಲುತ್ತಾರೋ ಆ ದೇಶದ ರಾಜ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದ್ದಾನೆಂದು ಅರ್ಥ. ರಾಜತಂತ್ರ ವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡಿದ್ದ ಚಾಣಕ್ಯನ ಈ ಮಾತನ್ನು, ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳು ನೆನಪಿಸುವಂತಿವೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನಿಸಿದವರು, ಅಂಬೇಡ್ಕರ್ ಪಾರ್ಥಿವ ಶರೀರವನ್ನು ಸಂಸ್ಕಾರ ಮಾಡಲು ದೆಹಲಿಯಲ್ಲಿ ಜಾಗ ನೀಡದೆ ಅವರ ಮೃತ ಶರೀರವನ್ನು ಮುಂಬೈಗೆ ಸಾಗ ಹಾಕಿದವರು, ಇಂದು ಅದೇ ಬಾಬಾ ಸಾಹೇಬರು ಬರೆದ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ‘ಸಂವಿಧಾನ ಉಳಿಸಿ’ ಎಂದು ಗೋಗರೆಯುತ್ತಿರುವುದು ಪ್ರಜಾ ಪ್ರಭುತ್ವದ ಅಣಕ. ಜಿರಲೆಗಳ ಹೆಸರಿ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರಭಕ್ತರನ್ನು ಅಣಕಿಸುವ ಮಾದರಿ ಯಲ್ಲಿ ‘ದೇಶ ಉಳಿಸುವವರು ನಾವು’ ಎಂದು ಪ್ರಚಾರ ಪಡೆಯಲೆತ್ನಿಸಿ, ಜಿರಲೆಗಳ ಹೆಸರಲ್ಲಿ ಹೊಸ ರಂಗ ಕಲೆಯ ಪ್ರದರ್ಶನಕ್ಕೆ ಒಂದಷ್ಟು ಜನರು ಮುಂದಾಗಿದ್ದಾರೆ.

ಜಿರಲೆ ಪಕ್ಷದೊಂದಿಗೆ ಗುರ್ತಿಸಿಕೊಂಡವರನ್ನು ಭಾರತದ ಜನತಂತ್ರ ವ್ಯವಸ್ಥೆಯ ಗಟಾರವನ್ನು ಶುದ್ಧೀಕರಿಸಹೊರಟ ಅಣ್ಣಾ ಹಜಾರೆ ಅವರಂತಹ ಸತ್ಯವಂತನ ಮೊಮ್ಮಕ್ಕಳೆಂಬಂತೆ ಬಿಂಬಿಸಹೊರಟಿರುವುದು ದೇಶದ ಜನಸಾಮಾನ್ಯರಲ್ಲಿ ದಿಗ್ಭ್ರಮೆ ಹುಟ್ಟಿಸಿದೆ. ಅನೇಕ ಬುದ್ಧಿಜೀವಿಗಳು ಪ್ರಚಾರದ ಮೂಲಕವೇ ಬದುಕು ಕಟ್ಟಿಕೊಂಡಿದ್ದಾರೆ. ಅವರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಅಭಿಪ್ರಾಯಗಳನ್ನು ಸಂವಿಧಾನದ ಭಾಗ ಎನ್ನುವಂತೆ ಬಿಂಬಿಸಿ, ದೇಶವಿರೋಧಿ ಕೃತ್ಯಗಳನ್ನು ಅಮಾಯಕ ಯುವಕರ ಹತಾಶೆಯ ನಡೆ ಎಂಬಂತೆ ವಿಶ್ಲೇಷಿಸುತ್ತಾರೆ; ಭಯೋತ್ಪಾದನೆ ವಿರೋಧಿಸುವವರಿಗೆ ಸಂವಿಧಾನ ವಿರೋಧಿಗಳೆಂದು ಪಟ್ಟ ಕಟ್ಟುತ್ತಿದ್ದಾರೆ. ವಿದೇಶ ದಲ್ಲಿ ಇರುವ ವ್ಯಕ್ತಿಯ ಮೂಲಕ ಜಾಲತಾಣದ ಮೂಲಕ ಅಸ್ತಿತ್ವಕ್ಕೆ ಬಂದ ಜಿರಲೆ ಪಕ್ಷಕ್ಕೆ ಸೇರಿದವರನ್ನು ಕುಸಿದುಹೋಗುತ್ತಿರುವ ದೇಶದ ಪ್ರಜಾಸತ್ತೆಯನ್ನು ರಕ್ಷಿಸ ಹೊರಟರಂತೆ ಬಿಂಬಿಸಲಾಗುತ್ತಿದೆ.

ಈ ಆಧುನಿಕ ದೇಶಭಕ್ತರು, ದೇಶದ ಭದ್ರತೆಗಾಗಿ ಗಡಿ ಬೇಲಿ ನಿರ್ಮಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬೊಬ್ಬೆ ಹೊಡೆಯಬಲ್ಲರು. ಪಶ್ಚಿಮ ಬಂಗಾಳ ದಲ್ಲಿ ಮುಗ್ಧ ವೈದ್ಯೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಯಿತು. ಆ ನತದೃಷ್ಟ ಹೆಣ್ಣಿನ ತಾಯಿ ಬಿಜೆಪಿ ಯಿಂದ ಶಾಸಕಿಯಾಗಿ ಆಯ್ಕೆಯಾಗಿ, ಮಗಳ ಹತ್ಯೆಗೆ ನ್ಯಾಯ ಕೊಡಿಸುವ ಮಾತನಾಡಿದಾಗ ಅದನ್ನು ಹಿಂದೂ–ಮುಸ್ಲಿಂ ಸಂಘರ್ಷದ ಗೆಲುವು ಎಂದು ಆರೋಪಿಸಲಾಯಿತು.

ಈಗ ಜಿರಲೆ ಪಕ್ಷವನ್ನು ಪ್ರತಿಪಾದಿ ಸುತ್ತಿರುವ ಕೆಲವರು, ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಲೇ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಅಪಪ್ರಚಾರ ಮಾಡಿದ್ದರು. ಅಸಹಿಷ್ಣುತೆ ವಿರೋಧಿಸಿ ಅನೇಕ ಸಾಹಿತಿಗಳು ತಮಗೆ ಸಿಕ್ಕಿದ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತಿದ್ದಾರೆ ಎಂಬ ವರದಿಗಳು ಪ್ರಕಟವಾದವು. ಸಹಜವಾಗಿಯೇ ಆತಂಕಗೊಂಡ ನಾನು ಮೇಲ್ಮನೆಯ ಶಾಸಕನಾಗಿದ್ದಾಗ, ಯಾವ ಯಾವ ಸಾಹಿತಿಗಳು ಪ್ರಶಸ್ತಿ ಫಲಕ, ಅದರೊಂದಿಗಿರುವ ನಗದನ್ನು ಸರ್ಕಾರಕ್ಕೆ ಮರಳಿಸಿದ್ದಾರೆ ಎಂದು ಸರ್ಕಾರದಿಂದ ಮಾಹಿತಿ ಕೋರಿದ್ದೆ. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಉಮಾಶ್ರೀ ಅವರು, ‘ಯಾವುದೇ ಸಾಹಿತಿಗಳು ಪ್ರಶಸ್ತಿ ಫಲಕ, ನಗದು ಮತ್ತು ಪ್ರಶಸ್ತಿ ಪತ್ರ ಮರಳಿಸಿಲ್ಲ. ಪ್ರಶಸ್ತಿ ಪತ್ರದ ಜೆರಾಕ್ಸ್ ಪ್ರತಿಯನ್ನಷ್ಟೇ ಸರ್ಕಾರಕ್ಕೆ ಕೊಟ್ಟಿದ್ದಾರೆ’ ಎಂದು ಉತ್ತರಿಸಿದ್ದರು. ಪ್ರಶಸ್ತಿಯ ಜೆರಾಕ್ಸ್ ಪ್ರತಿ ಕೊಟ್ಟು ಪ್ರಚಾರ ಪಡೆದ ಬುದ್ಧಿಜೀವಿಗಳೇ ಇಂದು ಜಿರಲೆ ಪ್ರತಿನಿಧಿಗಳಾಗಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.

ಜಿರಲೆ ಪಕ್ಷದ ಪ್ರಣಾಳಿಕೆಯನ್ನು ಬೆಂಬಲಿಸುವವರ ಬುದ್ಧಿವಂತಿಕೆ ನೋಡಿ: ಎಸ್ಐಆರ್ ಮೂಲಕ ವಿದೇಶಿಯ ರಿಗೆ ಮತ ನಿರಾಕರಣೆ ಮಾಡುವಾಗ, ಭಾರತದ ಪ್ರಜೆಗಳಲ್ಲ ದವರಿಗೆ ಮತದಾನದ ಹಕ್ಕು ನಿರಾಕರಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತುತ್ತಾರೆ. ನೈಜ ಭಾರತೀಯರಿಗೆ ಮಾತ್ರ ಮತದಾನದ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ, ಭಾರತದ ನ್ಯಾಯಾಂಗವೇ ಹಾಳಾಗಿದೆ ಎಂದು ಬೊಬ್ಬೆ ಹಾಕುತ್ತಾರೆ.

ದೇಶ ದ್ವೇಷದ ಕುಲುಮೆಯಾಯಿತು ಎಂದು ಬರಹದ ಮೂಲಕ ಬುದ್ಧಿವಂತಿಕೆ ತೋರಿಸುವವರು, ಪಹಲ್ಗಾಮ್ನಲ್ಲಿ ದಾಳಿ ನಡೆದಾಗ ಏನು ಮಾಡುತ್ತಿದ್ದರು? ಉಗ್ರಗಾಮಿಗಳು 25 ಪ್ರವಾಸಿಗರನ್ನು ಹಿಂದೂ ಎಂಬ ಕಾರಣಕ್ಕೆ ಗುಂಡಿಕ್ಕಿ ಕೊಂದರಲ್ಲ... ಆಗ ಯಾವ ರೀತಿ ಪ್ರತಿಕ್ರಿಯಿಸಿದರು. ಸತ್ಯ ಹೇಳುವವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಇಂಥವರಿಂದಲೇ ಸತ್ಯ ಸತ್ತು ಹೋಗುವ ಅಪಾಯವಿದೆ.

ಜಿರಲೆ ಪಕ್ಷದ ಹೆಸರಲ್ಲಿ ಹೊಸ ನಾಟಕವಾಡಲು ಹೊರಟ ವರು ಭಾರತ ಹಿಂದಿನಂತಿಲ್ಲ ಎಂಬುದನ್ನು ಅರಿಯಬೇಕು. ಒಂದು ಕಾಲದಲ್ಲಿ ಚಿನ್ನ ಅಡವಿಟ್ಟ ಭಾರತ, ಇಂದು ಜಗತ್ತಿನ 68 ರಾಷ್ಟ್ರಗಳಿಗೆ ಸಾಲ ಕೊಡುವ ದೇಶವಾಗಿದೆ. ಇದು, ಜಿರಲೆ, ಸೊಳ್ಳೆ, ಹೆಗ್ಗಣಗಳಿಗೆ ಹೆದರುವ ಕಾಲವಲ್ಲ.

ಲೇಖಕ: ಬಿಜೆಪಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.