ಸಾಂಪ್ರದಾಯಿಕ ರಾಜಕೀಯ ವಿಶ್ಲೇಷಣೆಯ ಲೆಕ್ಕಾಚಾರಕ್ಕೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನಿಲುಕದು. ಇದು ಚತುರ. ಆದರೆ, ಅರ್ಥಹೀನ ಪ್ರಶ್ನೆಗಳನ್ನು ಕೇಳುತ್ತದೆ: ಇದನ್ನು ಮಾಡಿದವರು ಯಾರು? ಅದರ ಉದ್ದೇಶ ಏನು? ಮುಂದಿನ ನಡೆ ಏನು? ನೆರಳನ್ನು ತೂಗಿ ನೋಡುವ ಅದರ ಪ್ರಯತ್ನವು ಅದರದ್ದೇ ಕಲ್ಪನೆಗಳನ್ನು ಅಥವಾ ದುಃಸ್ವಪ್ನ ಗಳನ್ನು ಬಯಲುಗೊಳಿಸುತ್ತದೆ. ಇಂತಹ ಸನ್ನಿವೇಶದಲ್ಲಿ ರಾಜಕೀಯ ಮನಸ್ಸುಗಳು ಒಬ್ಬ ಕವಿ ಅಥವಾ ಮನಃಶಾಸ್ತ್ರಜ್ಞನಿಂದ ಏನನ್ನಾದರೂ ಕಲಿತುಕೊಳ್ಳಬಹುದು.

ಸಿಜೆಪಿ ರಾಜಕೀಯ ಪಕ್ಷ ಅಲ್ಲ. ಇದು ಸಾಮಾನ್ಯ ಜನರಿಗಿಂತ ಕಡಿಮೆಯೂ ಅಲ್ಲ, ಹೆಚ್ಚೂ ಅಲ್ಲ. ಇದೊಂದು ಸಮುದಾಯ, ಗುಂಪು ಅಲ್ಲ. ಇದು ಅದುಮಿಟ್ಟ ಭಾವನೆಗಳ ಅಭಿವ್ಯಕ್ತಿ. ಇದು ಚಳವಳಿಯೊಂದರ ಹತ್ತಿರವೂ ಇಲ್ಲ. ಇದು ಆ ಒಂದು ಕ್ಷಣ ಅಷ್ಟೇ. ಹಾಗಾಗಿಯೇ ಇದು ಮುಖ್ಯವಾಗುತ್ತದೆ. ನಿರಂಕುಶಾಧಿಕಾರದ ದಮನದಿಂದ ಗಣರಾಜ್ಯವನ್ನು ಮರಳಿ ಪಡೆಯಬಹುದಾದ ಅಪೂರ್ವವಾದ ಕೋಲ್ಮಿಂಚು ಇದು.

ಭಾರೀ ಬಹುಮತವುಳ್ಳ ಸರ್ಕಾರದ ಮಧ್ಯಂತರ ಅವಧಿಯಲ್ಲಿ ಅಧಿಕಾರದಲ್ಲಿ ಇರುವವರ ಅಕ್ರಮಗಳನ್ನು ಬಯಲುಗೊಳಿಸಲು ಎಲ್ಲಿಂದಲೋ ಬಂದ ಪ್ರತಿಭಟನಾ ಚಳವಳಿಯಂತೆ ಮೊದಲ ನೋಟಕ್ಕೆ ಇದು ಕಾಣಿಸುತ್ತದೆ. 1973–74ರ ಗುಜರಾತ್ ಮತ್ತು ಬಿಹಾರ ಚಳವಳಿ, 1983ರ ಅಸ್ಸಾಂ ಚಳವಳಿ, 2012ರ ಅಣ್ಣಾ ಹಜಾರೆ ಚಳವಳಿ,
2021ರ ರೈತ ಹೋರಾಟಗಳೆ ಲ್ಲವೂ ಕಳಾಹೀನ ವಿರೋಧ ಪಕ್ಷಗಳನ್ನು ಹಿಂದಿಕ್ಕಿ, ಅಜೇಯ ಎಂಬಂತೆ ತೋರುತ್ತಿದ್ದ ಸರ್ಕಾರಗಳಿಗೆ ಸವಾಲೆಸೆದಿವೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅದೇ ಸ್ಥಿತಿಯಲ್ಲಿದೆ. ಬಿಜೆಪಿ 2024ರಲ್ಲಿ
ಪ್ರಯಾಸದಿಂದ ಅಧಿಕಾರ ಹಿಡಿದಿದೆ ಮತ್ತು ಅದಕ್ಕೂ ಹಿಂದಿನ ದಶಕದಲ್ಲಿ ಇದ್ದ ಪ್ರಾಬಲ್ಯ ಮತ್ತು ನ್ಯಾಯಸಮ್ಮತಿಯನ್ನು ಈಗ ಹೊಂದಿಲ್ಲ. ನ್ಯಾಯಸಮ್ಮತಿಯಲ್ಲಿ ಆಗಿರುವ ಬಿರುಕು ಮುಂದುವರಿದಿದ್ದರೂ ಪಶ್ಚಿಮ ಬಂಗಾಳ ವಿಧಾನ
ಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರಾಬಲ್ಯವನ್ನು ಮರಳಿ ಗಳಿಸಿಕೊಂಡಿದೆ. ಬಿಜೆಪಿಯ ಚುನಾವಣೆ ಗೆಲ್ಲುವ ಸಾಮರ್ಥ್ಯವು ಸಂಪೂರ್ಣಗೊಂಡಿದೆ ಎಂಬ ಸನ್ನಿವೇಶದಲ್ಲಿ ಸಿಜೆಪಿ ಹೊರಹೊಮ್ಮಿರುವುದು ಕಾಕತಾಳೀಯವೇನೂ ಅಲ್ಲ. ನೀಟ್ ರದ್ದತಿ ಮತ್ತು ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಹೇಳಿಕೆ ಸಾಂದರ್ಭಿಕವೇ ಹೊರತು ಕಾರಣವಲ್ಲ.

ಸಿಜೆಪಿ, ವಾಸ್ತವದಲ್ಲಿನ ನೈಜವಾದ ರಾಜಕೀಯ ಚೈತನ್ಯದ ಅಭಿವ್ಯಕ್ತಿ ಅಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ರೂಪು ಗೊಂಡ ಸಂಯೋಜಿತ ಆಕ್ರೋಶ; ನೆಲದಲ್ಲಿ ಬಲವಾಗಿ ಬೇರೂರಿ ಬೆಳೆಯಬಲ್ಲ ಇನ್ನೊಂದು ಚಳವಳಿ ಅಥವಾ ಕಾರ್ಯಸಾಧುವಾದ ರಾಜಕೀಯ ಪರ್ಯಾಯ.

ಇದಕ್ಕೆ ಸ್ಥಾಪಕನಿದ್ದರೂ, ಆತ ನಾಯಕ ಆಗಿರಬೇಕಾಗಿಲ್ಲ. ಇದರ ಫಾಲೋವರ್ಗಳಲ್ಲಿ ಹೆಚ್ಚಿನವರು ನೈಜ ರಾಜಕೀಯ ಚಟುವಟಿಕೆಯಲ್ಲಿ ಆಸಕ್ತಿಯೇ ಇಲ್ಲದ ಪ್ರೇಕ್ಷಕರು ಅಥವಾ ಕುತೂಹಲವಷ್ಟೇ ಇರುವ ಯುವಜನರು. ಶಕ್ತಿಶಾಲಿ ಚಳವಳಿಯನ್ನು ಕಟ್ಟಬಲ್ಲ ಹಸಿಹಸಿ ಚೈತನ್ಯ ಇದು.

ವಿಡಂಬನೆ ಮತ್ತು ಊಹಿಸಲಸದಳವಾದ ನಡೆಯೇ ನಿರಂಕುಶಾಧಿಕಾರಕ್ಕೆ ಇರುವ ಅಹಿಂಸಾತ್ಮಕವಾದ ಪ್ರತಿರೋಧ ಎಂದು ಸರ್ಬಿಯಾದ ಚಿಂತಕ ಮತ್ತು ಸಾಮಾಜಿಕ ಹೋರಾಟಗಾರ ಸರ್ಜಾ ಪೊಪೊವಿಕ್ ಅವರು ಹೇಳಿರುವುದಕ್ಕೆ ಅನುಗುಣವಾಗಿಯೇ ವ್ಯವಸ್ಥೆಯನ್ನು ಎದುರಿಸಲು ಜಿರಲೆಯನ್ನು ಮೀಮ್ ಆಗಿ ಬಳಸಲಾಗಿದೆ. ಇಂತಹ ಪ್ರತಿರೋಧಗಳು ನಿರಂಕುಶಾಧಿಕಾರಿಗಳನ್ನು ದ್ವಂದ್ವಕ್ಕೆ ತಳ್ಳುತ್ತವೆ. ಅದಕ್ಕೆ ಅವಕಾಶ ಕೊಟ್ಟರೆ ಅವರು ದುರ್ಬಲ ಎಂದಾಗುತ್ತದೆ; ದಮನ ಮಾಡಿದರೆ ಕ್ರೂರಿಗಳು ಮತ್ತು ಅಸಂಗತರು ಎಂದಾಗುತ್ತದೆ. ಪ್ರಜಾಸತ್ತಾತ್ಮಕ ಪ್ರತಿರೋಧವು ಪಾಠ ಕಲಿಯಬಹುದಾದ ದ್ವಂದ್ವದ ಮಾದರಿಯೊಂದನ್ನು ಸಿಜೆಪಿ ತಿಳಿದೋ ತಿಳಿಯದೆಯೋ ನಮ್ಮ ಮುಂದಿಟ್ಟಿದೆ.

ಸಮಕಾಲೀನ ಭಾರತದ ರಾಜಕೀಯ ವಾಸ್ತವವನ್ನು ಸ್ಪಷ್ಟವಾಗಿ ಹೇಗೆ ನೋಡಬಹುದು ಎಂಬುದನ್ನು ಸಿಜೆಪಿ ನಮಗೆ ಕಲಿಸಿಕೊಟ್ಟಿದೆ. ಮೊದಲನೆಯದಾಗಿ, ಚುನಾವಣಾ ಯಶಸ್ಸಿನ ಕುರಿತು ಎಷ್ಟೇ ಅಬ್ಬರ ಮಾಡಿದರೂ ಜನರಲ್ಲಿ ಅದರಲ್ಲಿಯೂ ವಿಶೇಷವಾಗಿ ಯುವಜನರಲ್ಲಿ ಇರುವ ಅಸಮಾಧಾನ ಮತ್ತು ಆತಂಕವನ್ನು ಮರೆಮಾಚಲು ಸಾಧ್ಯವಿಲ್ಲ. ಎರಡನೆಯದಾಗಿ, ಮೀಮ್ ಒಂದನ್ನು ನಿಷೇಧಿಸಲು ಸರ್ವಶಕ್ತವಾದ ಸರ್ಕಾರವು ರಾಷ್ಟ್ರೀಯ ಭದ್ರತೆಯನ್ನು ನೆಪವಾಗಿ ತಂದರೆ, ಸಾಮಾಜಿಕ ಮಾಧ್ಯಮದ ಟ್ರೆಂಡ್ನ ಮಾನ ಕಳೆಯಲು ಸಾಮಾಜಿಕ ಮಾಧ್ಯಮದ ಟ್ರೋಲ್ ಸೇನೆಯನ್ನು ಬಳಸಿಕೊಂಡರೆ, ಅಧಿಕಾರದಲ್ಲಿ ಇರುವವರು ಒಳಗಿನಿಂದ ದುರ್ಬಲರಾಗಿದ್ದಾರೆ ಎಂದೇ ಅರ್ಥ. ಮೂರನೆಯದಾಗಿ, ಸಿಜೆಪಿಗೆ ಇರುವ 2.3 ಕೋಟಿ ಫಾಲೋವರ್ಸ್ ಎಲ್ಲ ವಿರೋಧ ಪಕ್ಷಗಳಿಗೆ ಸಂದೇಶ: ನೀವು ಸುಸಂಘಟಿತಗೊಳ್ಳಬೇಕಾದ ಅಗತ್ಯ ಈಗ ಇದೆ ಎಂಬುದೇ ಆ ಸಂದೇಶ.

ವಾಡಿಕೆಯ ರಾಜಕೀಯ ಸಿನಿಕತನ, ಅಂತರ ಕಾಯ್ದುಕೊಳ್ಳುವಿಕೆ ಅಥವಾ ದೂರ ತಳ್ಳುವಿಕೆಗಳನ್ನು ಆಚೆಗೆ ಇರಿಸಿ, ಸಿಜೆಪಿಗೆ ಪ್ರತಿಕ್ರಿಯೆ ನೀಡಲು ಹೊಸ ದಾರಿಯೊಂದನ್ನು ಕಂಡುಕೊಳ್ಳಬೇಕಿದೆ. ವ್ಯಾಪಕವಾಗಿರುವ ಹತಾಶೆಯನ್ನು ಎದುರಿಸಲು ರಾಜಕೀಯ ಒಗ್ಗಟ್ಟಿನ ಹೊಸ ವ್ಯಾಕರಣವನ್ನು ಶೋಧಿಸಲು ವಿನೋದ್ ಕುಮಾರ್ ಶುಕ್ಲಾ ಅವರ ಹಿಂದಿ ಕವಿತೆಯೊಂದು ನೆರವಾಗುತ್ತದೆ: ‘ಆತನಿಗೆ ನಾನು ಗೊತ್ತಿಲ್ಲ/ ಆದರೆ ನನ್ನ ನೆರವಿನ ಕೈ ಆತನಿಗೆ ಗೊತ್ತಿದೆ... ನಾವು ಪರಸ್ಪರರು ಗೊತ್ತಿಲ್ಲ/ ಆದರೆ ಜೊತೆಯಾಗಿ ಹೆಜ್ಜೆ ಹಾಕುವುದು ಗೊತ್ತಿಗೆ ನಮಗೆ’. ಇದು ಕ್ರಾಂತಿಕಾರಿಗಳ ಸ್ನೇಹವಲ್ಲ; ಅಪರಿಚಿತರ ಸಾಂಗತ್ಯ. ಪರಸ್ಪರ ಹಂಚಿಕೊಂಡ ಅಸ್ಮಿತೆಯಿಂದಾದ ಬಂಧವಲ್ಲ, ಬದಲಿಗೆ ಹಂಚಿಕೊಂಡ ದೌರ್ಬಲ್ಯಗಳ ಬಂಧವಾಗಿದೆ.

ಈ ಯುವಜನರಿಗೆ ನಾವು ಗೊತ್ತಿರಲಿಕ್ಕಿಲ್ಲ. ಆದರೆ, ನಾವು ನೀಡಿದ ನೆರವನ್ನು ಅವರು ಗುರ್ತಿಸಬಹುದು. ನಮಗೆ ಪರಸ್ಪರ ಪರಿಚಯವಿಲ್ಲ. ಆದರೆ, ಈ ಕತ್ತಲ ಕಾಲದಲ್ಲಿ ಜೊತೆಯಾಗಿ ನಡೆಯಲು ನಾವು ಕಲಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.