ಮಾಧ್ಯಮಗಳಲ್ಲಿ ಇತ್ತೀಚೆಗೆ ವೈರಲ್ ಆದ ದೃಶ್ಯಾವಳಿ ಅಚ್ಚರಿ, ಖುಷಿ ಕೊಡುವಂತಿತ್ತು. ಧಾರವಾಡ ಜಿಲ್ಲೆ ಕಲಘಟಗಿಯ ಹೊರವಲಯವು ಥೇಟ್ ‘ಕಾಶ್ಮೀರ’ದಂತೆ ಬದಲಾಗಿತ್ತು. ರಸ್ತೆ ತುಂಬೆಲ್ಲ ಆಲಿಕಲ್ಲು. ಹಿಮದ ರಾಶಿಯ ಮೇಲೆ ಕಾರುಗಳು ನಿಧಾನವಾಗಿ ಸಾಗುವ ದೃಶ್ಯದೊಂದಿಗೆ, ‘ಇದು ಕಾಶ್ಮೀರ ಅಲ್ಲ;ಕಲಘಟಗಿ’ ಎಂಬ ಶೀರ್ಷಿಕೆ ಗಮನಸೆಳೆಯುವಂತಿತ್ತು. ನೋಡುವವರಿಗೆ ಇದು ತುಸು ಮುದಗೊಳಿಸುವ ಸಂಗತಿಯೇ ಹೌದು. ಆದರೆ...

ಬರೀ ಎರಡು ದಶಕಗಳ ಹಿಂದೆ ವಿದೇಶಗಳಲ್ಲಿ ನಡೆಯುತ್ತಿದ್ದ ಭೂಶೃಂಗ ಸಭೆ, ಪರಿಸರ ಸಂಬಂಧಿ ಸಮಾವೇಶಗಳಲ್ಲಿ ‘ಹವಾಮಾನ ವೈಪರೀತ್ಯ’ ಪದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿತ್ತು. ಮಾನವ ಸಮುದಾಯಕ್ಕೆ ಪ್ರಾಕೃತಿಕ ವಿಕೋಪಗಳೇನೂ ಹೊಸದಲ್ಲವಲ್ಲ? ಹೀಗಾಗಿ ಅದೇ ಒಂದಷ್ಟು ವಿಸ್ತಾರರೂಪ ದಲ್ಲಿ ‘ಹವಾಮಾನ ವೈಪರೀತ್ಯ’ವಾಗಿ ಕಾಣಿಸಿಕೊಳ್ಳುತ್ತಿದೆ ಎಂದೇ ಬಹುತೇಕರು ಪರಿಗಣಿಸಿದ್ದರು. ಆದರೀಗ ಜಾಗತಿಕ ಹವಾಮಾನ ಬದಲಾವಣೆ ನೇರ ನಮ್ಮ ಬುಡಕ್ಕೇ ಬಂದು ಕೂತಿದೆ. ಮೊನ್ನೆಯಷ್ಟೇ ಕಾಣಿಸಿಕೊಂಡ ‘ಕಾಶ್ಮೀರವಲ್ಲ; ಇದು ಕಲಘಟಗಿ’ ಪರಿಸ್ಥಿತಿಯು ಇದರ ಒಂದು ಝಲಕ್ ಅಷ್ಟೇ.

ರಾಜ್ಯದ ವಿವಿಧ ಕಡೆಗಳಲ್ಲಿ ಈಒಂದು ವಾರದಲ್ಲಿ ಭರ್ಜರಿ ಮಳೆ. ಜತೆಗೆ ಆಲಿಕಲ್ಲು! ಮಾವು, ದ್ರಾಕ್ಷಿ ಇತರೆ ಫಸಲಿನ ಆಸೆಯಲ್ಲಿದ್ದ ರೈತರ ಮೊಗದಲ್ಲೀಗ ನೋವು. ಬೇಸಿಗೆ ಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವುದು ಸಹಜ. ಅದರಲ್ಲೂ ‘ಯುಗಾದಿಗೆ ನಾಲ್ಕು ಹನಿ ಮಳೆ ಯಾಗೇ ಆಗ್ತದೆ’ ಎಂಬ ನುಡಿಯು ಈ ಮಳೆಯ ಸಾಧ್ಯತೆಯನ್ನು ಬಿಂಬಿಸುತ್ತದೆ. ಈ ಸಮಯದಲ್ಲಿ ಫಸಲು ಕಟಾವಿನ ಹಂತದಲ್ಲಿ ಇರುತ್ತದೆ. ಸಾಧಾರಣ ಮಳೆಯು ಹೆಚ್ಚೇನೂ ಹಾನಿ ಮಾಡದು. ಆದರೆ. ಮೊನ್ನೆ ಸುರಿದ ಆಲಿಕಲ್ಲು ಮಳೆಯು, ರೈತರ ನಿರೀಕ್ಷೆಯನ್ನು ನಿರ್ನಾಮ ಮಾಡಿಬಿಟ್ಟಿದೆ.

ಉತ್ತರ ಕರ್ನಾಟಕದ ಪ್ರಮುಖ ತೋಟಗಾರಿಕೆ ಬೆಳೆಯಲ್ಲೊಂದಾದ ಮಾವಿನ ಉದಾಹರಣೆ ಗಮನಿಸಿ. ಹಿಂಗಾರು ಮಳೆ ಅಕ್ಟೋಬರ್ ಹೊತ್ತಿಗೆ ಕಡಿಮೆಯಾಗುತ್ತದೆ. ಆಗ ಮಾವಿನ ಬೆಳವಣಿಗೆ ಶುರು; ಮುಂದಿನ ಹಂತವಾಗಿ ಜನವರಿಯಲ್ಲಿ ಕಾಯಿ, ಮಾರ್ಚ್ ತಿಂಗಳಲ್ಲಿ ಕಟಾವು. ‘ಎಳ್ಳ ಮಾವಾಸ್ಯೆಗೆ ಎಳ್ಳು ಕಾಳು; ಹೋಳಿ ಹುಣ್ಣಿಮೆಗೆ ಹೋಳು ಮಾವು’ ಎಂಬ ನುಡಿಗಟ್ಟನ್ನು ಹಳ್ಳಿಗರು ಬಳಸುವುದು ಇದಕ್ಕೇ. ವಿಪರ್ಯಾಸವೆಂದರೆ, ಈ ಸಲ ಮಳೆಯ ಅವಧಿ ನವೆಂಬರ್ವರೆಗೂ ವಿಸ್ತರಿಸಿತು. ಶುಷ್ಕ ಹವಾಮಾನ ಹಾಗೂ ನೀರಿನ ಕೊರತೆಯ ಒತ್ತಡಕ್ಕೆ (ಸ್ಟ್ರೆಸ್) ಒಳಗಾಗಿ ಡಿಸೆಂಬರ್ ತಿಂಗಳಲ್ಲಿ ಹೂವಿನಿಂದ ಕಂಗೊಳಿಸಬೇಕಿದ್ದ ಮಾವಿನ ಮರಗಳು, ಆ ಪ್ರಕ್ರಿಯೆ ಯನ್ನು ಮರೆತೇ ಬಿಟ್ಟವು. ಇದರ ಪರಿಣಾಮ, ಫೆಬ್ರುವರಿಯಲ್ಲಿ ಹೂವು, ಮೇ ಹೊತ್ತಿಗೆ ಇಳುವರಿ ಕಟಾವು.

ಹವಾಮಾನ ವೈಪರೀತ್ಯ ಎಂಥ ವಿಚಿತ್ರವೆಂದರೆ, ಬರೀ ಹತ್ತು ಕಿಲೋ ಮೀಟರ್ ದೂರದಲ್ಲೇ ಮಳೆಯಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಈ ಬಾರಿಯ ಹಿಂಗಾರಿನಲ್ಲಿ ಕೊಪ್ಪಳ ಜಿಲ್ಲೆಯ ಕೆಲವು ಕಡೆಗಳಲ್ಲಿ ಅವಧಿ ಮೀರಿ ಮಳೆ ಸುರಿದಿಲ್ಲ; ಅಂಥ ಕಡೆಗಳಲ್ಲಿ ಮಾವು ಕರಾರುವಕ್ಕಾಗಿ ಅತ್ಯುತ್ತಮ ಫಸಲು ಕಂಡು, ಕಟಾವಿಗೆ ಸಿದ್ಧವಾಗಿತ್ತು. ದುರಂತ ಎಂದರೆ, ಮೊನ್ನೆ ಸುರಿದ ಆಲಿಕಲ್ಲು ಮಳೆ ಹಾಗೂ ಬಿರು ಗಾಳಿಗೆ ಫಸಲು ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹವಾಮಾನದ ಈ ವಿಪರೀತ ನಡವಳಿಕೆ ರೈತ ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ.

ಇದು ಬರೀ ಮಾವಿನ ಕತೆಯಲ್ಲ; ಇನ್ನೇನು ಭತ್ತ ಕೊಯ್ಲು ಮಾಡಬೇಕು... ಅಷ್ಟರಲ್ಲೇ ಭಾರಿ ಮಳೆಯು ಪೈರನ್ನು ನೆಲಸಮಗೊಳಿಸಿದೆ. ಕಾಳುಗಳಿಂದ ತುಂಬಿದ್ದ ತೆನೆಗಳು ಕೆಸರಿನಲ್ಲಿ ಹೂತುಹೋಗಿವೆ. ಉತ್ತರ ಕರ್ನಾಟಕದ ಮಳೆ ಆಶ್ರಿತ ಬೆಳೆಯಾದ ಬಿಳಿಜೋಳ, ಕುಸುಬೆ ಪೈರು ನೆಲಕಚ್ಚಿವೆ. ಏನೂ ಮಾಡದ ನಿಸ್ಸಹಾಯಕ ಸ್ಥಿತಿ ರೈತರದು. ‘ನೀರಾವರಿ ಸೌಲಭ್ಯ ಇರುವ ರೈತರು, ವರ್ಷವಿಡೀ ದಾಳಿಂಬೆ ಬೆಳೆಯು ತ್ತಾರೆ. ಈಗ ಆಗಿರುವ ಆಲಿಕಲ್ಲು ಮಳೆಯು ಗಿಡದ ಕಾಂಡಕ್ಕೆ ಹೊಡೆತ ಕೊಟ್ಟು ಇಡೀ ತೋಟ ಸೋಂಕಿಗೆ ತುತ್ತಾಗಿ ಮುಂದಿನ ನಾಲ್ಕೈದು ವರ್ಷಗಳ ಕಾಲ ಬಾಧೆಗೆ ಈಡಾಗು ತ್ತದೆ. ಇದಂತೂ ಕೃಷಿಕರಿಗೆ ದೊಡ್ಡ ನಷ್ಟ’ ಎಂದು ಕೊಪ್ಪಳದ ದಾಳಿಂಬೆ ಬೆಳೆಗಾರ ಶಂಕರ ರಡ್ಡಿ ಕಳವಳ ವ್ಯಕ್ತಪಡಿಸುತ್ತಾರೆ.

ಸಾಮಾನ್ಯವಾಗಿ ಮುಂಗಾರು ಮಳೆ ಸುರಿಯುವಾಗ ಕೆಲವೊಮ್ಮೆ ಆಲಿಕಲ್ಲು ಬೀಳುತ್ತಿದ್ದವು. ಬೊಗಸೆಯಲ್ಲಿ ಆಲಿಕಲ್ಲು ಹಿಡಿದು ಸಂಭ್ರಮಿಸುವ ಕಾಲವೊಂದಿತ್ತು. ಆದರೆ ಈಗ ‘ಕಾಲಬದಲಾಗಿದೆ’ ಎಂಬ ಮಾತಿಗೆ ಹೆಚ್ಚೆಚ್ಚು ನಿದರ್ಶನ ಸಿಗುತ್ತಿವೆ. ಬರೀ ರೈತ ಸಮುದಾಯಕ್ಕಷ್ಟೇ ಅಲ್ಲ; ಆಹಾರ ಉತ್ಪಾದನೆಗೆ ಗಂಭೀರ ಸ್ವರೂಪದ ಆತಂಕವನ್ನು ‘ಹವಾಮಾನ ವೈಪರೀತ್ಯ’ ತಂದೊಡ್ಡಿದೆ. ಸಂಪನ್ಮೂಲಗಳ ವಿವೇಚನಾರಹಿತ ಬಳಕೆ, ಪ್ರಕೃತಿಯೆಡೆ ತೀವ್ರ ನಿರ್ಲಕ್ಷ್ಯ, ಮಾಲಿನ್ಯದ ಹೆಚ್ಚಳ ಸೇರಿ ದಂತೆ ಹಲವು ಕಾರಣಗಳು ಇದರ ಹಿಂದಿವೆ.

ಜಾಗತಿಕ ಹವಾಮಾನ ವೈಪರೀತ್ಯಕ್ಕೆ ಪರಿಹಾರ ಏನೆಂಬುದು ಗೊತ್ತಿದ್ದರೂ ಎಲ್ಲರದ್ದೂ ಜಾಣಕುರುಡು! ಎಲ್ಲಕ್ಕಿಂತ ನಾಚಿಕೆಗೇಡು ಎಂದರೆ, ಮಾನವ ಸಮುದಾಯ ವನ್ನು ಕಂಗೆಡಿಸುತ್ತಿರುವ ಈ ದುಸ್ಥಿತಿಗೆ ಮಾನವನೇ ಕಾರಣ ಎಂಬ ಸಂಗತಿಯನ್ನು ನಾಜೂಕಾಗಿ ಮರೆಮಾಚಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.