‘ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಕಾವಲುನಾಯಿಗಳು’ ಎನ್ನುವ ಮಾತಿನ ಮೌಲ್ಯವನ್ನರಿಯದ ಮಂದಿ ಆಡಳಿತದಲ್ಲಿಇದ್ದರೆ, ತಮಗೆ ಇಷ್ಟವಾಗದ ಧ್ವನಿ ಎತ್ತಿದವರಿಗೆಲ್ಲ ದೇಶ ದ್ರೋಹದ ಪಟ್ಟ ಕಟ್ಟುತ್ತಾ, ಅಂತಹವರ ಬಾಯಿ ಕಟ್ಟಿಹಾಕುವ
ಸರ್ವ ಪ್ರಯತ್ನಗಳನ್ನೂ ಮಾಡುತ್ತಾರೆ. ಆ ಮೂಲಕ ಸಮಾಜ
ದಲ್ಲಿ ಒಂದು ರೀತಿಯ ಭಯೋತ್ಪಾದನೆ ರೂಪುಗೊಂಡು, ನಿರಂಕುಶಪ್ರಭುತ್ವಕ್ಕೆ ದಾರಿಯಾಗುತ್ತದೆ. ಇಂಥದೊಂದು ಸ್ಥಿತಿಯನ್ನು ಕೋಟ ಶ್ರೀನಿವಾಸ ಪೂಜಾರಿ ಅವರ ‘ಜಿರಲೆಗಳ ಹೆಸರಿನಲ್ಲಿ ಬುದ್ಧಿಜೀವಿಗಳ ತರಲೆ’ ಲೇಖನ (ಪ್ರ.ವಾ., ಮೇ 30) ಸೂಚಿಸುವಂತಿದೆ.

ತೆಲುಗಿನ ಕವಿ ಗುರಜಾಡ ಅಪ್ಪಾರಾವ್ ಅವರು, ‘ದೇಶವೆಂದರೆ ಮಣ್ಣು ಅಲ್ಲವೋ, ದೇಶವೆಂದರೆ ಮನುಷ್ಯರು ಕಣೋ’ ಎಂದು ಹೇಳಿದ್ದಾರೆ. ದುರದೃಷ್ಟವಶಾತ್, ದೇಶದ ಹಿತರಕ್ಷಣೆಯ ಬಗ್ಗೆ ಭಾವಾವೇಶದಿಂದ ಮಾತನಾಡುವ ಅನೇಕ ರಾಜಕಾರಣಿಗಳಿಗೆ ದೇಶವೆಂದರೆ ಮಣ್ಣೇ ಹೊರತು, ಜೀವಂತ ಜನರಲ್ಲ! ಅದರಲ್ಲೂ ಜನಸಾಮಾನ್ಯರ ಅಸ್ತಿತ್ವದ ಬಗ್ಗೆ ಅವರಿಗೆ ಲಕ್ಷ್ಯವೇ ಇಲ್ಲ.

ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ, ಅವರ ಕಟು ಟೀಕಾಕಾರರಲ್ಲಿ ರಾಮಮನೋಹರ ಲೋಹಿಯಾ ಪ್ರಮುಖರಾಗಿದ್ದರು. ಅವರು ಚುನಾವಣೆಯಲ್ಲಿ ಸೋತು ಲೋಕಸಭೆಗೆ ಬಾರದೆಹೋದಾಗ, ‘ಇಂದು ಲೋಕಸಭೆ ಕಳಾಹೀನ ಆಗಿದೆ’ ಎಂದು ನೆಹರೂ ಬೇಸರದಿಂದ ಹೇಳಿದ್ದರಂತೆ. ಉಪ ಚುನಾವಣೆಯಲ್ಲಿ ಲೋಹಿಯಾ ಅವರು ಗೆದ್ದು ಲೋಕಸಭೆಗೆ ಬಂದಾಗ, ‘ಈಗ ನಮ್ಮ ಸಭೆಗೆ ಕಳೆ ಬಂದಿದೆ’ ಎಂದರಂತೆ. ಅದೇ ರೀತಿಯಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ತಮ್ಮ ಕಚೇರಿಯನ್ನು ಪ್ರವೇಶಿಸಿದಾಗ, ಯಾರೋ ಕಿಡಿಗೇಡಿಗಳು ಅಲ್ಲಿದ್ದ ನೆಹರೂ ಫೋಟೊವನ್ನು ತೆಗೆದುಬಿಟ್ಟಿದ್ದರಿಂದ ಸಿಡಿಮಿಡಿಗೊಂಡು ಮತ್ತೆ ಆ ಫೋಟೊವನ್ನು ಅಲ್ಲೇ ಹಾಕಿಸಿದರಂತೆ. ಇಂತಹ ದೊಡ್ಡವರ ನಡೆಗಳಿಂದ ನಾವು ಪಾಠ ಕಲಿಯದಿದ್ದರೆ ದೇಶಭಕ್ತರಿರಲಿ, ಮನುಷ್ಯರು ಅನ್ನಿಸಿಕೊಳ್ಳುವ ಯೋಗ್ಯತೆಯನ್ನೂ ಕಳೆದುಕೊಳ್ಳುತ್ತೇವೆ.

ಇದ್ದಕ್ಕಿದ್ದಂತೆ ಜಿರಲೆ ಜನತಾ ಪಕ್ಷ (ಸಿಜೆಪಿ) ಹುಟ್ಟಿದ್ದು ಎಲ್ಲರಿಗೂ ಅಚ್ಚರಿಯ ಸಂಗತಿ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಬಾಯಿಯಿಂದ ದಯನೀಯ ಸ್ಥಿತಿಯಲ್ಲಿರುವ ನಿರುದ್ಯೋಗಿ ಯುವಕರ ಬಗ್ಗೆ ‘ಜಿರಲೆ’, ‘ಪರಾವಲಂಬಿಗಳು’ ಎಂಬ ಪದಗಳು ಪ್ರಯೋಗವಾದದ್ದೇ ನೆಪವಾಗಿ ಜಿರಲೆ ಪಕ್ಷದ ಸ್ಥಾಪನೆಯಾಗಿಬಿಟ್ಟಿತು! ಅದು ಅಂತರ್ಜಾಲದ ಮಾಯಾ ಮೋಹನಾಂಗಿಯಾಗಿ ಪರಿಣಮಿಸಿಬಿಟ್ಟಿತು! ಕೆಲವೇ ದಿನಗಳಲ್ಲಿ ಕೋಟಿಗಟ್ಟಲೆ ಅನುಯಾಯಿಗಳು ಹುಟ್ಟಿಕೊಂಡರು. ಈ ಬೆಳವಣಿಗೆ ಯುವಜನರಲ್ಲಿರುವ ಸಮಯಸ್ಫೂರ್ತಿಗೆ ಒಂದು ಅದ್ಭುತ ನಿದರ್ಶನ ಎನ್ನಬಹುದು. ಇದು ವಿಜ್ಞಾನದ ಹಾಗೂ ತಂತ್ರಜ್ಞಾನದ ಪವಾಡವೂ ಆಗಿದೆ.

ವಿಡಂಬನಾತ್ಮಕವಾಗಿ ಹುಟ್ಟಿಕೊಂಡ ‘ಸಿಜೆಪಿ’ ಮುಂದೆ ಯಾವ ರೀತಿಯಲ್ಲಿ ತನ್ನ ಪ್ರಭಾವ ಬೀರುತ್ತದೋ ತಿಳಿಯದು. ಆದರೆ, ನಮ್ಮ ದೇಶದ ಬಿಗುವಿನ ವಾತಾವರಣದಲ್ಲಿ ಅದು, ಸತ್ಯದ ನೋವು ಸ್ಫೋಟಗೊಂಡಿರುವ ಸಂಕೇತದಂತಿದೆ. ನಮ್ಮಿಂದ ದೂರದಲ್ಲೆಲ್ಲೊ ಸಿಡಿದ ಬೀಜ ನಮ್ಮ ದೇಶದಲ್ಲಿ ಚಿಗುರಾಗಿ ಪಲ್ಲವಿಸಿ, ಇಡೀ ಜಗತ್ತು ಕಣ್ಣುಬಿಟ್ಟುಕೊಂಡು ನೋಡುವ ಹಾಗೆ ಆಯಿತು. ಶಾಲೆಗಳಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸಲೆಂದು ಶಿಕ್ಷಕರು ‘ಅಣಕು ಲೋಕಸಭೆ’ ಎಂಬ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಾರೆ. ಅಂಥದೊಂದು ಅರಿವಿನ ತಾಲೀಮಿನ ರೂಪದಲ್ಲಿ ಸದ್ಯಕ್ಕೆ ಈ ಸಿಜೆಪಿ ಜ್ವಾಲಾಮುಖಿ ಕಾಣಿಸುತ್ತಿದೆ. ಅದನ್ನು ಶ್ರೀನಿವಾಸ ಪೂಜಾರಿಯವರು ‘ರೋಗಗ್ರಸ್ತ ಮನಸ್ಸು’ ಎಂದು ಜರೆದಿದ್ದಾರೆ. ದೇಶದ ಯುವಜನರನ್ನು ಅವರು ಅಪನಂಬಿಕೆಯಿಂದ ಕಂಡರೂ, ‘ಬುದ್ಧಿಜೀವಿಗಳ ತರಲೆ’ ಎಂದು ಅಪವ್ಯಾಖ್ಯಾನ ಮಾಡಿದರೂ ಅದು ಹಾಗಾಗಲು ಸಾಧ್ಯವಿಲ್ಲ. ಬದಲಿಗೆ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ಶ್ರೀನಿವಾಸ ಪೂಜಾರಿ ಅವರ ನಡೆ ಇದೆ.

1952ರ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದು ಕಮ್ಯುನಿಸ್ಟ್ ಪಕ್ಷದ ಎಸ್.ಎ. ಡಾಂಗೆ ಹಾಗೂ ವಿ.ಡಿ. ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ಒಂದು ಪತ್ರದಲ್ಲಿ ಬರೆದಿರುವ ದಾಖಲೆ ಇದ್ದರೂ, ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಅವರನ್ನು ಸೋಲಿಸಿದರು ಎಂಬ ಸುಳ್ಳನ್ನು ಮಾನ್ಯ ಪೂಜಾರಿಯವರು ಪುನರುಚ್ಚರಿಸಿರುವುದು ಅವರು ಗೊಬೆಲ್ಲನ ಸಿದ್ಧಾಂತವನ್ನು ಅನುಸರಿಸುತ್ತಿರುವುದರ ನಿದರ್ಶನವಾಗಿದೆ. ‘ಸಂವಿಧಾನವನ್ನು ಉಳಿಸಿ’ ಎನ್ನುವ ಕಾಂಗ್ರೆಸ್ ಪಕ್ಷದ ಮತ್ತು ಪ್ರಗತಿಪರರ ಮಾತುಗಳನ್ನು ‘ಜಿರಲೆ’ ಸಮಾಚಾರದೊಂದಿಗೆ ತಳಕು ಹಾಕಿರುವುದು ಅಸಂಗತವಾಗಿದೆ.

ಎಸ್ಐಆರ್ ಕುತಂತ್ರದ ಮೂಲಕ ಕೋಟ್ಯಂತರ ಮತದಾರರ ಹಕ್ಕುಗಳನ್ನು ಕಸಿಯುತ್ತಿರುವುದಲ್ಲದೆ, ಅವರ ಪೌರತ್ವವನ್ನೂ ಪ್ರಶ್ನಿಸಲಾಗುತ್ತಿದೆ. ಈ ಅಸಾಂವಿಧಾನಾತ್ಮಕ ಚಟುವಟಿಕೆಯ ವಿರುದ್ಧ ಎದ್ದಿರುವ ಕೂಗನ್ನು ಆಕ್ಷೇಪಿಸುವುದು ‘ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಬಳಿಯಿತು’ ಎಂಬ ಗಾದೆ ಮಾತನ್ನು ನಿಜಗೊಳಿಸುವಂತಿದೆ. 68 ರಾಷ್ಟ್ರಗಳಿಗೆ ಸಾಲ ಕೊಟ್ಟಿರುವುದಾಗಿ ಹೇಳುವ ಶ್ರೀಯುತರು, 60 ವರ್ಷಗಳಲ್ಲಿ ಆಗಿದ್ದ ಭಾರತದ ₹53 ಲಕ್ಷ ಕೋಟಿ ಸಾಲವನ್ನು ಈಗಿನ ಸರ್ಕಾರ ಬರೀ ಹತ್ತು ವರ್ಷಗಳಲ್ಲಿ ಸುಮಾರು ₹200 ಲಕ್ಷ ಕೋಟಿಗೆ ಏರಿಸಿರುವ ಸಾಧನೆಯನ್ನು ಮರೆಮಾಚುತ್ತಿರುವುದು ಏಕೆ?

‘ಜಿರಲೆ ಪಾರ್ಟಿ’ಯ ವಿದ್ಯಮಾನದ ಪರಿಣಾಮಗಳು ಏನೇ ಇರಲಿ, ಅದು ಕೋಟ್ಯಂತರ ಜನರಿಗೆ ವಾಸ್ತವವನ್ನು ಅರಿವಿಗೆ ತರುವ ಆಶಾದಾಯಕ ಪ್ರಯತ್ನವಂತೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.