ಇನ್ನೂ ಬಿಡುಗಡೆಯಾಗದ ‘ಕೆ.ಡಿ.’ ಎನ್ನುವ ಬಹುಭಾಷಾ ಚಿತ್ರದ ಹಾಡು ಅಶ್ಲೀಲದ ಗಡಿಯನ್ನು ದಾಟಿದೆ ಎನ್ನುವ ವಿವಾದ ಸೃಷ್ಟಿಯಾಗಿದೆ. ಹೀಗೆ ಅಶ್ಲೀಲತೆಯತ್ತ ಸಾಗುತ್ತಿರುವ ಇವತ್ತಿನ ಸಾಕಷ್ಟು ಕಲೆಗಳಲ್ಲಿ ದಿಢೀರನೆ ಇಂತಹ ಬದಲಾವಣೆಗಳೇನೂ ಆಗಿಲ್ಲ. ಇವೆಲ್ಲವೂ ನಿಧಾನವಾಗಿ ಹಂತ ಹಂತವಾಗಿರೂಪುಗೊಳ್ಳುತ್ತಾ ಬಂದಿವೆ. ಹಿಂದೆ ರಾಜರುಗಳು ಸುಂದರ ಯುವತಿಯರಿಗೆ ಸ್ವಲ್ಪ ಸ್ವಲ್ಪವೇ ವಿಷವುಣ್ಣಿಸುತ್ತಾ ವಿಷಕನ್ಯೆ ಯರನ್ನು ಸಿದ್ಧಗೊಳಿಸಿ ಶತ್ರುರಾಜರುಗಳನ್ನು ಕೊಲ್ಲಲು ಅವರನ್ನು ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಇದು ವೈಜ್ಞಾನಿಕವಾಗಿ ಎಷ್ಟು ಸತ್ಯ ಎನ್ನುವ ಪ್ರಶ್ನೆ ಬೇರೆ. ವಿಷಕನ್ಯೆ ಪರಿಕಲ್ಪನೆಯಲ್ಲಿ, ನಮ್ಮ ಸಮಾಜಕ್ಕೆ ಅಶ್ಲೀಲತೆಯ ವಿಷವನ್ನು ಸುಮಾರು 80ರ ದಶಕದಿಂದಲೇ ಹೀಗೆ ನಿಧಾನವಾಗಿ ಉಣಬಡಿಸಲಾಗುತ್ತಿದೆ.

ಈ ಎಂಬತ್ತರ ದಶಕ ಏಕೆ ಪ್ರಮುಖವಾಗುತ್ತದೆ ಎಂದರೆ,ಇದು ಸಮಾಜವಾದ ಇಳಿಮುಖವಾಗಿ ವಿಶ್ವದಾದ್ಯಂತ ಬಂಡವಾಳಶಾಹಿ ವ್ಯವಸ್ಥೆ ಗಾಢವಾಗಿ ಆವರಿಸಿಕೊಳ್ಳಲು ಪ್ರಾರಂಭವಾದ ಕಾಲ. ಬಂಡವಾಳಶಾಹಿಯ ಮೂಲಗುಣ ವೆಂದರೆ, ಅದು ಎಲ್ಲವನ್ನೂ ಮಾರಾಟ ಮಾಡಬಲ್ಲ ವಸ್ತುಗಳನ್ನಾಗಿ ಪರಿವರ್ತಿಸುತ್ತದೆ. ಮೇಲುನೋಟಕ್ಕೆ ಇದು ಅಂತಹವಿಶೇಷವಾಗಿ ಕಾಣಿಸುವುದಿಲ್ಲ. ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಸೃಷ್ಟಿಯಾಗುವುದು, ಅದರಿಂದ ಹಣದ ಕೈಬದಲಾವಣೆಯಾಗುತ್ತಾ, ಜನ
ಸಮುದಾಯಕ್ಕೆ ಜೀವನೋಪಾಯ ಕಲ್ಪಿಸುವುದು ಲಾಗಾಯ್ತಿನಿಂದಲೂ ನಡೆದುಬಂದ ಪ್ರಕ್ರಿಯೆ. ಆದರೆ, ಇದು
ವಸ್ತು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುವ ಕಾಲವೊಂದಿತ್ತು. ಈಗ ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸಾಹಿತ್ಯ, ಕಲೆ, ಸಂಶೋಧನೆಗಳಂತಹ ದೂರಗಾಮಿ ಪರಿಣಾಮಗಳುಳ್ಳ ಮತ್ತು ಹಣ ಹೂಡುವಿಕೆ–ಗಳಿಸುವಿಕೆ ಗಿಂತ ಮಿಗಿಲಾದ ಉದ್ದೇಶಗಳುಳ್ಳ ಕ್ಷೇತ್ರಗಳನ್ನೂ ಈಗ ಬರೀ ಲಾಭದ ಮಾನದಂಡಗಳ ಮೇಲೆ ತೂಗಲಾಗುತ್ತದೆ.

ವ್ಯಕ್ತಿಯೊಬ್ಬನ ಪ್ರೇಮ, ಮಮತೆಯಂತಹ ಮೃದು ಭಾವನೆಗಳು ಮತ್ತು ತೀರಾ ಆಪ್ತವಾದ ಕಾಮವೂ ಇವತ್ತು
ಮಾರುಕಟ್ಟೆಯ ವಸ್ತುಗಳಾಗಿವೆ. ಇಂತಿಂತಹ ಉಡುಗೊರೆ ಗಳನ್ನು ಕೊಟ್ಟರೆ ನಿಮ್ಮವರನ್ನು ಹೆಚ್ಚು ಪ್ರೇಮಿಸಬಹುದು; ಇಂತಿಂತಹ ಸೋಪು, ನ್ಯಾಪಿಗಳಿಂದ ತಾಯಂದಿರು ಮಕ್ಕಳನ್ನು ಹೆಚ್ಚು ಪ್ರೀತಿಸಬಹುದು; ಇಂತಿಂತಹ ಕಾಮವರ್ಧಕಗಳನ್ನು ಬಳಸಿ ನಿಮ್ಮ ಸಂಗಾತಿಯನ್ನು ತೃಪ್ತಿ ಪಡಿಸಬಹುದು–ಇವೆಲ್ಲವೂ ಇವತ್ತಿನ ಜಾಹೀರಾತಿನ ವಸ್ತು ಗಳು ಮತ್ತು ಇದರಲ್ಲಿ ನಮಗೆ ವಿಶೇಷವೇನೂ ಕಾಣುವುದಿಲ್ಲ.

ಇಲ್ಲಿ ಗಮನಿಸಬೇಕಾದದ್ದು, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ವಸ್ತುಗಳ ಆವಿಷ್ಕಾರಕ್ಕೆ ಭೌತ, ರಾಸಾಯನಿಕ ಮತ್ತು ಜೀವವಿಜ್ಞಾನದ ಸಂಶೋಧನೆಗಳನ್ನು ಬಳಸಿ ಕೊಂಡರೆ, ಅದನ್ನು ಮಾರಾಟ ಮಾಡಲು ಪ್ರಚಾರಕ್ಕಾಗಿ ಮನೋವಿಜ್ಞಾನ ಮತ್ತು ನರ ವಿಜ್ಞಾನದ ಸಂಶೋಧನೆಗಳನ್ನು ಉಪಯೋಗಿಸುತ್ತವೆ. ವಸ್ತುಗಳನ್ನು ತಯಾರಿಸುವುದಕ್ಕೆ ಮತ್ತು ಮಾರುವುದಕ್ಕೆ ಬಂಡವಾಳಶಾಹಿ ವ್ಯವಸ್ಥೆ ಯಾವುದೇ ನೈತಿಕ ಮಾನದಂಡ ಗಳನ್ನು ಬಳಸುವುದಿಲ್ಲ. ಹೆಚ್ಚು ಹಣ ಹೂಡು ಮತ್ತು ಹೆಚ್ಚು ಹೆಚ್ಚು ಗಳಿಸುತ್ತಾ ಹೋಗು, ಇವಿಷ್ಟೇ ಅವರ ಮೂಲಮಂತ್ರ. ಇದಕ್ಕೆ ಉದ್ಯೋಗ ಸೃಷ್ಟಿ, ಜಿಡಿಪಿ ಹೆಚ್ಚಳ, ಜೀವನ ಮಟ್ಟದ ಸುಧಾರಣೆ ಮುಂತಾದ ಮುಖವಾಡಗಳನ್ನು ಹಾಕಿ ತಜ್ಞರಿಗೆ ಯಾಮಾರಿಸಿ ಜನ ಸಾಮಾನ್ಯರ ಮಾನ್ಯತೆ ಗಳಿಸುತ್ತಾರೆ. ಇವತ್ತು ಸಿನಿಮಾಗಳು ಕೂಡ ಬಂಡವಾಳಶಾಹಿ ಮಾರುಕಟ್ಟೆಯ ವಸ್ತುಗಳು ಮಾತ್ರ. ಇದು ಕಲೆ ಎನ್ನುವ ಭ್ರಮೆಯಿಂದ ನಾವು ಹೊರಬರಬೇಕಿದೆ.

ಮಾನವರಲ್ಲಿ ಲೈಂಗಿಕತೆ ಎನ್ನುವುದು ಬರೀ ಸಂತಾನಾಭಿವೃದ್ಧಿಯ ಗುರಿ ಹೊಂದಿರುವುದಿಲ್ಲ. ಇತರ ಸ್ತನಿಗಳಂತಲ್ಲದೆ ಮಾನವ ಶಿಶುಗಳು ಸ್ವತಂತ್ರವಾಗಿ ಬದುಕುವುದನ್ನು ಕಲಿಯಲು ಹಲವಾರು ವರ್ಷಗಳು ಪೋಷಕರ ಮೇಲೆ ಅವಲಂಬಿತ ವಾಗಿರುತ್ತವೆ. ಅಲ್ಲಿಯವರೆಗೆ ಶಿಶುಗಳಿಗೆ ತಂದೆ–ತಾಯಿಗಳಿಬ್ಬರ ಭಾವನಾತ್ಮಕ, ಸಾಮಾಜಿಕ, ಆರ್ಥಿಕ ಹೀಗೆ ಎಲ್ಲಾ ರೀತಿಯ ಸಂಪೂರ್ಣ ಬೆಂಬಲ ಅಗತ್ಯವಾಗಿರುತ್ತದೆ. ಇದು ಸಾಧ್ಯವಾಗಬೇಕಾದರೆ ತಂದೆ–ತಾಯಿ ಮಧ್ಯೆ ಒಂದು ಭಾವನಾತ್ಮಕ ಬೆಸುಗೆಯ ಅಗತ್ಯವಿರುತ್ತದೆ. ಈ ಬೆಸುಗೆಗೆ ಲೈಂಗಿಕತೆ ಉತ್ತಮ ತಳಹದಿ ಹಾಕುತ್ತದೆ. ಬಾಂಧವ್ಯವನ್ನು ಬೆಸೆಯಲಾಗದ ಮಾನವರ ಲೈಂಗಿಕತೆ ದೈಹಿಕ ಅಗತ್ಯಗಳನ್ನು ಪೂರೈಸಿದರೂ ಮಾನಸಿಕ ಅತೃಪ್ತಿಯನ್ನು ಉಳಿಸುತ್ತದೆ.

ಬಂಡವಾಳಶಾಹಿಯನ್ನು ಸಂಪೂರ್ಣವಾಗಿ ಆವರಿಸಿ ಕೊಂಡಿರುವ ಸಾಕಷ್ಟು ಪಾಶ್ಚಿಮಾತ್ಯ ದೇಶಗಳಲ್ಲಿ ಇವತ್ತು ಅಶ್ಲೀಲ ಚಿತ್ರಗಳನ್ನು ತಯಾರಿಸುವುದಕ್ಕೆ ಒಂದು ಉದ್ಯಮದ ದರ್ಜೆ ನೀಡಿ ‘ಪೋರ್ನ್ ಇಂಡಸ್ಟ್ರಿ’ ಎಂದು ಕರೆಯಲಾಗು ತ್ತದೆ. ಈ ಉದ್ಯಮದಿಂದ ಬರುವ ಆದಾಯವೂ ಜಿಡಿಪಿಯ ಒಂದು ಭಾಗವಾಗಿರುತ್ತದೆ. ಇಂತಹ ಚಿತ್ರಗಳಲ್ಲಿ ನಟಿಸುವವರನ್ನು ‘ಪೋರ್ನ್ ಸ್ಟಾರ್’ ಎಂದು ಗೌರವದಿಂದ ಕರೆಯಲಾಗು ತ್ತದೆ. ಮುಂದೊಂದು ದಿನ ಅಶ್ಲೀಲ ಚಿತ್ರಗಳಿಗಾಗಿ ಆಸ್ಕರ್ ಪ್ರಶಸ್ತಿ ಸೃಷ್ಟಿಯಾದರೂ ಅಚ್ಚರಿಪಡಬೇಕಾಗಿಲ್ಲ!

ಶೃಂಗಾರ, ರೋಚಕತೆಗಳು ಲೈಂಗಿಕತೆಯ ಅವಿಭಾಜ್ಯ ಅಂಗಗಳು. ಇವುಗಳಿಗೆ ಮತ್ತು ಅಶ್ಲೀಲತೆಗೂ ಇರುವ ಗೆರೆಬಹಳ ತೆಳುವಾದದ್ದು. ಹಾಗಾಗಿಯೇ ಅಶ್ಲೀಲತೆಯ ಪ್ರಶ್ನೆ ಬಂದಾಗಲೆಲ್ಲಾ ಅದರ ಸಮರ್ಥಕರು ಅಜಂತಾ ಎಲ್ಲೋರಾದ ಮಿಥುನ ಶಿಲ್ಪಗಳು, ಜಯದೇವ ಕವಿಯ ಅಷ್ಟಪದಿಗಳು, ವಾತ್ಸಾಯನನ ಕಾಮಸೂತ್ರ, ಡಿ.ಎಚ್. ಲಾರೆನ್ಸ್ನ ಕಾದಂಬರಿಗಳು ಮುಂತಾದವುಗಳಲ್ಲಿ ಸಮರ್ಥನೆ ಹುಡುಕು ತ್ತಾರೆ. ಈ ಎಲ್ಲವೂ ಬಂಡವಾಳಶಾಹಿಯ ವ್ಯಾಪಾರದ ವಸ್ತುಗಳಾಗಿರಲಿಲ್ಲ ಎಂಬುದನ್ನು ಮರೆಮಾಚುತ್ತಾರೆ.

ಬಂಡವಾಳಶಾಹಿಗಳಿಗೆ ಕಾಮವೇ ಮಾರಾಟದ ವಸ್ತು ವಾಗಿರುವಾಗ ಮಕ್ಕಳಿಗೆ ನೈತಿಕಶಿಕ್ಷಣ ಹೇಗೆ ಕೊಡುವುದು ಎನ್ನುವ ಪ್ರಶ್ನೆಗೆ ಯಾರಾದರೂ ಉತ್ತರಿಸುತ್ತಾರೆಯೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.