ಯಾವುದು ಅಭಿವ್ಯಕ್ತಿ ಸ್ವಾತಂತ್ರ್ಯ, ಯಾವುದು ಅಲ್ಲ ಎನ್ನುವುದನ್ನು ಆಡಳಿತ ವ್ಯವಸ್ಥೆ ಹೇಗೆಲ್ಲ ವ್ಯಾಖ್ಯಾನಿಸಬಹುದು ಎನ್ನು ವುದಕ್ಕೆ ಇತ್ತೀಚಿನ ಎರಡು ಮಾದರಿಗಳು: ಪುಳಕಿತ್ ಮಣಿ ಅವರ ಹಾಸ್ಯದ ವಿಡಿಯೊ ಹಾಗೂ ಧುರಂಧರ್ ಸಿನಿಮಾ.

ಹಾಸ್ಯ ಕಲಾವಿದ ಪುಳಕಿತ್ ಮಣಿ ಎನ್ನುವವರು ಇತ್ತೀಚೆಗೆ ರೂಪಿಸಿದ ಒಂದು ರೀಲ್ ಕೋಟ್ಯಂತರ ಜನರ ಗಮನ ಸೆಳೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಸಚಿವರ ಜೊತೆ ಯಾವ ರೀತಿ ನಡೆದುಕೊಳ್ಳುತ್ತಾರೆ ಎನ್ನುವು ದನ್ನು ಅಣಕ ಮಾಡಿ, ಹಾಸ್ಯ ಪ್ರಸಂಗದ ರೀತಿಯಲ್ಲಿ ಪುಳಕಿತ್ ತೋರಿಸಿದ್ದರು. ಪ್ರಧಾನಿ ಅವರ ಮಾತು, ನಗು, ಅಪ್ಪಿ ಕೊಳ್ಳುವ ಶೈಲಿಯ ಅನುಕರಣೆ ಹಾಗೂ ಫೋಟೊಗೆ ನಿರ್ದಿಷ್ಟ ಭಂಗಿಯಲ್ಲಿ ನಿಲ್ಲುವ ಧೋರಣೆಯನ್ನು ವಿಡಿಯೊದಲ್ಲಿ ಅನು ಕರಿಸಲಾಗಿತ್ತು. ಒಂದು ಕೋಟಿ 60 ಲಕ್ಷಕ್ಕೂ ಹೆಚ್ಚು ಮಂದಿ ಆ ವಿಡಿಯೊ ವೀಕ್ಷಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆಯ 79(3)(ಬಿ) ಸೆಕ್ಷನ್ ಅನ್ನು ಉಲ್ಲಂಘಿಸಲಾಗಿದೆ ಎಂದು ಸರ್ಕಾರವು ನೋಟಿಸ್ ನೀಡಿ,ಆ ರೀಲ್ ಅನ್ನು ಕಿತ್ತುಹಾಕಿತು. ಆ ರೀಲ್ ಅನ್ನು ಅಪ್ಲೋಡ್ ಮಾಡಿದ್ದು ಮಾರ್ಚ್ 5ರಂದು. ಮಾರ್ಚ್ 18ರಂದು ಅದನ್ನುಭಾರತದಲ್ಲಿ ‘ಬ್ಲಾಕ್’ ಮಾಡಲಾಯಿತು. ಅದೇ ಸಂದರ್ಭದಲ್ಲಿ ಕೆಲವು ‘ಎಕ್ಸ್’ ಖಾತೆಗಳನ್ನೂ ಭಾರತದಲ್ಲಿ ನಿಷ್ಕ್ರಿಯಗೊಳಿಸ ಲಾಯಿತು. ಹಾಗೆ ನಿಷ್ಕ್ರಿಯವಾದ ಬಹುತೇಕ ಖಾತೆಗಳಲ್ಲಿ ಸರ್ಕಾರದ ವಿರುದ್ಧ ಟೀಕೆಗಳಿದ್ದವು.

ಪುಳಕಿತ್ ಮಣಿ ಅವರ ವಿಡಿಯೊ ಕಿತ್ತುಹಾಕಿರುವುದನ್ನು ಪ್ರತಿಭಟಿಸಿ ರುವ ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠಿ ಅವರು, ತಮ್ಮ ಖಾತೆ ಯಲ್ಲಿ ಆ ವಿಡಿಯೊವನ್ನು ಮತ್ತೆ ಪೋಸ್ಟ್ ಮಾಡಿ, ಇನ್ನೊಂದು ರೀಲ್ ಮಾಡಿ ತೇಲಿಬಿಟ್ಟರು. ದಿಢೀರನೆ ದೊಡ್ಡ ಸಂಖ್ಯೆಯಲ್ಲಿ ಖಾತೆಗಳನ್ನು ಹೀಗೆ ಕಿತ್ತುಹಾಕುವ ವಿದ್ಯಮಾನದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತಣ್ಣಗೆ ಪ್ರತಿಭಟನೆಯ ಅಲೆಯೊಂದು ಎದ್ದಿದೆ. ಆ ಪ್ರತಿರೋಧವನ್ನು ನಾವು ಒಂದು ಬಿಂದು ಎಂದು ಭಾವಿಸಿದರೆ, ‘ಧುರಂಧರ್’ ಹಿಂದಿ ಸಿನಿಮಾದ ಎರಡು ಭಾಗಗಳನ್ನು ಇನ್ನೊಂದು ಬಿಂದು ಎಂದು ನೋಡಬಹುದು.

‘ಧುರಂಧರ್’ ಸಿನಿಮಾದ ಎರಡನೆಯ ಭಾಗದಲ್ಲಿ ನೋಟು ಅಮಾನ್ಯೀಕರಣಕ್ಕೆ ಸಮರ್ಥನೆಯೊಂದನ್ನು ನೀಡ ಲಾಗಿದೆ. ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಮೊದಲು ಚಲಾವಣೆ ಮಾಡಲೆಂದೇ ಪಾಕಿಸ್ತಾನದಲ್ಲಿ ಮುದ್ರಿಸಲಾಗಿದ್ದ ₹60 ಸಾವಿರ ಕೋಟಿ ಮೌಲ್ಯದ ನಕಲಿ ನೋಟುಗಳು ಭಾರತ ಪ್ರವೇಶಿಸದಂತೆ ತಡೆಯಲು ನೋಟು ಅಮಾನ್ಯೀಕರಣ ಮಾಡಲಾಯಿತು ಎನ್ನುವ ಪ್ರಧಾನಿ ಹೇಳಿಕೆಯ ತುಣುಕನ್ನೂ ಬಳಸಿಕೊಂಡು ಸಿನಿಮಾದಲ್ಲಿ ಬಿಂಬಿಸಲಾಗಿದೆ. ಈ ಹಿಂದೆ ಪ್ರಧಾನಿ ಸಚಿವಾಲಯವೂ ಇಂಥದೊಂದು ವಿದ್ಯಮಾನದ ಕುರಿತು ಮಾಹಿತಿ ನೀಡಿಲ್ಲ. ಜನಪ್ರಿಯ ಸಿನಿಮಾವೊಂದರಲ್ಲಿ ಇದನ್ನು ತೋರಿಸಿದಾಗ, ಸೆನ್ಸಾರ್ ಮಂಡಳಿ ಹೇಗೆ ಈ ದೃಶ್ಯವನ್ನು ಪ್ರದರ್ಶನಕ್ಕೆ ಹಾಗೆಯೇ ಬಿಟ್ಟಿತು ಎಂಬ ಪ್ರಶ್ನೆ ಮೂಡುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಎರಡು ಬಿಂದುಗಳಲ್ಲಿ ಒಂದು, ಸರ್ಕಾರದ ವಿರುದ್ಧವಾದುದು; ಇನ್ನೊಂದು ಪರವಾದುದು.

ಮೂರನೇ ಬಿಂದುವಿನ ರೂಪ ದಲ್ಲಿ ತಮಿಳಿನ ಜನಪ್ರಿಯ ನಟ ವಿಜಯ್ ಅವರ ಅಭಿನಯದ ‘ಜನನಾಯಗನ್’ ಸಿನಿಮಾವನ್ನು ಗಮನಿಸಬಹುದು. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕರೂ ಆದ ವಿಜಯ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರ ಜನಪ್ರಿಯತೆಯನ್ನು ಕಂಡು ಬಿಜೆಪಿ ಅವರೊಟ್ಟಿಗೆ ಚುನಾವಣಾ ಹೊಂದಾಣಿಕೆಗೆ ಮುಂದಾಗಿತ್ತು. ವಿಜಯ್ ಆ ಆಹ್ವಾನವನ್ನು ತಿರಸ್ಕರಿಸಿದರು ಎಂದು ಟಿವಿಕೆ ಪಕ್ಷದ ಪದಾಧಿಕಾರಿ ಆಧವ್ ಅರ್ಜುನ ಅವರು ಇತ್ತೀಚೆಗೆ ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ವಿಜಯ್ ನಟನೆಯ ಸಿನಿಮಾ ತೆರೆಕಾಣುವುದು ಕೇಂದ್ರ ಸರ್ಕಾರಕ್ಕೆ ಬೇಕಾಗಿರಲಿಲ್ಲ. ಸಂಕ್ರಾಂತಿ ಸಂದರ್ಭದಲ್ಲಿ, ಜನವರಿ 9ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಿಸಿ, ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಚಿತ್ರತಂಡ ಅವಕಾಶ ಕಲ್ಪಿಸಿತ್ತು. ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿನ ಕೆಲವು ಅಂಶಗಳಿಗೆ ಕತ್ತರಿ ಹಾಕಬೇಕೆಂದು ತಕರಾರೆತ್ತಿತು. ಮಂಡಳಿಯ ಸದಸ್ಯ ರೊಬ್ಬರು ಪರಿಶೀಲನಾ ಸಮಿತಿಗೆ ಪ್ರಮಾಣಪತ್ರ ನೀಡುವ ನಿರ್ಧಾರ ವರ್ಗಾಯಿಸಿದರು. ದೀರ್ಘಕಾಲದ ನಂತರವೂ ಪ್ರಮಾಣಪತ್ರ ಸಿಗದೆ ಹೋದಾಗ, ಸಿನಿಮಾ ನಿರ್ಮಾಣ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೊರೆಹೋಯಿತು. ಅಲ್ಲಿ ಕ್ಷಿಪ್ರ ನ್ಯಾಯದಾನ ಸಿಗಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಮದ್ರಾಸ್ ಹೈಕೋರ್ಟ್ನ ನಿರ್ಧಾರಕ್ಕೇ ಈ ವಿಚಾರದ ತೀರ್ಮಾನ ಬಿಡುವುದಾಗಿ ಸುಪ್ರೀಂ ಕೋರ್ಟ್ ಹೇಳಿತು. ಪರಿಶೀಲಿಸಿ, ನಿರ್ಧಾರ ಕೈಗೊಳ್ಳುವಂತೆ ಸೆನ್ಸಾರ್ ಮಂಡಳಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದ ನಂತರವೂ ಸಿನಿಮಾ ಬಿಡುಗಡೆಗೆ ಮುಹೂರ್ತ ಕೂಡಿಬಂದಿಲ್ಲ.

ಚುನಾವಣಾ ಆಯೋಗದ ಅಧಿಕಾರಿಗಳ ಸಲಹೆಯನ್ನು ಸೆನ್ಸಾರ್ ಮಂಡಳಿ ಕೇಳಿದೆ ಎಂಬ ವರದಿಗಳು ಈಗ ಹರಿ ದಾಡುತ್ತಿವೆ. ಈಗ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ, ಚುನಾವಣಾ ನೀತಿಸಂಹಿತೆಯೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ.

ಮೊದಲ ಹಾಗೂ ಮೂರನೇ ಬಿಂದುಗಳು ಸರ್ಕಾರದ ವಿರುದ್ಧದ ದನಿ ಇರುವಂಥವು. ಎರಡನೆಯದು ಪರವಾದ ಬಿಂದು. ಹೀಗಾಗಿ ಅದಕ್ಕೆ ಸಮ್ಮತಿ. ಟೀಕೆ ಅಪಥ್ಯವಾದ್ದರಿಂದ ಅದು ಅಪಥ್ಯ. ಆಡಳಿತದ ಕಣ್ಣಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದೇ ಅರ್ಥ: ಸರ್ಕಾರಕ್ಕೆ ಮುಜುಗರ ಆಗದಂತೆ ನಡೆದುಕೊಳ್ಳುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.