‘ಸಂಘರ್ಷದ ಜಗತ್ತಿಗೆ ಬೇಕಿರುವುದು ಹೃದಯವಂತಿಕೆಯ ನಾಯಕತ್ವ. ಕಣ್ಣು ಮುಚ್ಚಿ ಯೋಚಿಸು; ಅದೊಂದೇ ಕಣ್ಣು ಪಡೆಯುವ ಮಾರ್ಗ’. ಲಂಕೇಶರ ಪ್ರಸಿದ್ಧ ನಾಟಕ ‘ಗುಣಮುಖ’ದಲ್ಲಿನ ಸಾಲುಗಳಿವು. ಅಲಾವಿ ಖಾನ್ ಎಂಬ ಬಡ ಹಕೀಮ, ಕಾಯಿಲೆಯಿಂದ ಬಳಲುತ್ತಿದ್ದ ದಿಲ್ಲಿಯ ಚಕ್ರವರ್ತಿ ನಾದಿರ್ ಷಾನಿಗೆ ಹೇಳುವ ಈ ಮಾತುಗಳು, ಯುದ್ಧದಾಹದಿಂದ ದೃಷ್ಟಿ ಕಳೆದುಕೊಂಡಿರುವ ವರ್ತಮಾನಕ್ಕೆ ಅಗತ್ಯವಾದ ಔಷಧಿಯನ್ನು ಕಾಣಿಸುವಂತಿದೆ.

ಪರ್ಷಿಯಾ ದೇಶದ ಸಾಮಾನ್ಯ ಸೈನಿಕನಾಗಿದ್ದ ನಾದಿರ್, ತನ್ನ ಪ್ರಚಂಡ ಶಕ್ತಿ ಸಾಮರ್ಥ್ಯದಿಂದ ಸಣ್ಣ ವಯಸ್ಸಿನಲ್ಲಿಯೇ ಒಂದೂವರೆ ಲಕ್ಷ ಯೋಧರ ಸೈನ್ಯ ಕಟ್ಟಿದ್ದ. ಭಾರತದ ಮೇಲೆ ದಾಳಿ ಮಾಡುವ ಮುನ್ನ, ಇರಾನ್, ಟರ್ಕಿ, ರಷ್ಯಾದ ಮೇಲೆ ದಂಡೆತ್ತಿ ಹೋಗಿ, ಸಂಪತ್ತನ್ನು ದೋಚಿ ದೌರ್ಜನ್ಯವೆಸಗಿ, ಅಲ್ಲಿನ ಜನರಲ್ಲಿ ಭೀತಿ ಹುಟ್ಟಿಸಿದ್ದ. ಇದೇ ನಾದಿರ್ ಷಾ, ಮೊಗಲರನ್ನು ಸೋಲಿಸಿ ದಿಲ್ಲಿಯ ಚಕ್ರವರ್ತಿಯಾಗಿದ್ದ.

ಅಧಿಕಾರದ ಹಸಿವಿನಲ್ಲಿ ರಕ್ತದ ರುಚಿ ಅಂಟಿಸಿಕೊಂಡಿದ್ದ ನಾದಿರ್, ಕೊಂದು ತಿನ್ನುವ ಆಟದಲ್ಲಿ ನಿರತನಾಗಿ ಇಂದ್ರಿಯಗಳನ್ನೇ ಕಳೆದುಕೊಳ್ಳತೊಡಗಿದ್ದ. ಕಣ್ಣು, ಕಿವಿ, ಮೂಗು ಕಳೆದುಕೊಂಡು ತನ್ನ ಖಡ್ಗದ ಮೂಲಕ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುತ್ತಿದ್ದ. ಯುದ್ಧದ ಕ್ರೌರ್ಯ ಅವನನ್ನು ರೋಮಾಂಚನ
ಗೊಳಿಸುತ್ತಿತ್ತು. ಆದರೆ, ನಿರಂತರ ಗೆಲುವು ತಂದೊಡ್ಡಿದ ಆಯಾಸದಿಂದ ಮಾನಸಿಕವಾಗಿ, ದೈಹಿಕವಾಗಿ ಅಸ್ವಸ್ಥನಾಗಿದ್ದ ನಾದಿರ್, ಭಾರತಕ್ಕೆ ಬರುವ ಹೊತ್ತಿಗೆ ಅಕ್ಷರಶಃ ಹುಚ್ಚನಂತೆ ಆಡುತ್ತಿದ್ದ.

ಹಿಟ್ಲರ್ ನೇತೃತ್ವದ ನಾಜಿ ಆಡಳಿತದಲ್ಲಿ ನಡೆದ ವ್ಯವಸ್ಥಿತ ಜನಾಂಗೀಯ ಹಿಂಸೆ ಮತ್ತು ಮಾನವೀಯ ಮೌಲ್ಯ
ಗಳ ಧ್ವಂಸ ಕೃತ್ಯಗಳ ಹಿಂದೆಯೂ ಅಧಿಕಾರದ ಕ್ರೌರ್ಯವಿದೆ. ಈ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ‘ನ್ಯೂರೆಂಬರ್ಗ್ ವಿಚಾರಣೆಗಳು’ ಸಹಾಯಕವಾಗಿವೆ.

ನ್ಯೂರೆಂಬರ್ಗ್ ವಿಚಾರಣೆಯೆಂಬುದು ಮಾನವನ ಇತಿಹಾಸದಲ್ಲಿ ಕಾನೂನು, ನೈತಿಕತೆ ಮತ್ತು ಮನೋವಿಜ್ಞಾನವನ್ನು ಪುನರ್ ವ್ಯಾಖ್ಯಾನಿಸಿದ ಮುಖ್ಯ ಘಟನೆ. ಈ ವಿಚಾರಣೆಗಳು ಯುದ್ಧ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಮಾತ್ರ ಸೀಮಿತವಾಗದೆ, ನಾಜಿ ನಾಯಕರ ಮನೋವೈಜ್ಞಾನಿಕ ಸ್ಥಿತಿಯನ್ನು ವಿಶ್ಲೇಷಿಸುವ ಅಪೂರ್ವ ಪ್ರಯತ್ನಗಳೂ ಆಗಿವೆ. ಹರ್ಮನ್, ರುಡಾಲ್ಫ್ ಹೆಸ್ ಮುಂತಾದ ಜನರಲ್ಗಳ ವಿಶ್ಲೇಷಣೆಗಳಿಂದ ‘ಕೆಟ್ಟತನ’ ಎಂಬುದು ಮಾನಸಿಕ ರೋಗಆಗಿರದೆ, ಅದು ಸಂದರ್ಭ, ಸಿದ್ಧಾಂತ ಮತ್ತು ಅಧಿಕಾರದ ಪ್ರಭಾವದಿಂದ ರೂಪುಗೊಳ್ಳುವ ಸಂಕೀರ್ಣ ಮನೋ ವೈಜ್ಞಾನಿಕ ಪ್ರಕ್ರಿಯೆಯಾಗಿದೆ ಎಂಬುದು ಸ್ಪಷ್ಟವಾಯಿತು.

ಕ್ರೌರ್ಯ ಮತ್ತು ಅಧಿಕಾರದ ಹಿಂದಿನ ಕಾರಣಗಳನ್ನು ವಿಶ್ಲೇಷಿಸುವ ನ್ಯೂರೆಂಬರ್ಗ್ ವಿಚಾರಣೆಗಳು, ಅಪರಾಧ ಮನೋವೃತ್ತಿಯ ಮೂಲಗಳನ್ನು ಅರಿಯುವ ವೈಜ್ಞಾನಿಕ ಪ್ರಯತ್ನಗಳಾಗಿವೆ. ಜಗತ್ತಿನ ದೃಷ್ಟಿಗೆ ಮಹಾನ್ ಕ್ರೂರಿಗಳಂತೆ ಕಾಣಿಸಿರುವ ಯಾರೂ ತಲೆ ತಿರುಕರಲ್ಲ, ದಡ್ಡರಲ್ಲ! ಅವರೆಲ್ಲ ಉತ್ತಮ ಶಿಕ್ಷಣ ಪಡೆದಂತಹ ಮೇಧಾವಿಗಳು. ಸಮಸ್ಯೆ ಇದ್ದದ್ದು ಅವರ ಸಾಮಾಜಿಕ ವರ್ತನೆಯಲ್ಲಿ.

ಹಿಂದಿನ ಕಾಲದಲ್ಲಿ ಆರೋಗ್ಯವನ್ನು ರೋಗವಿಲ್ಲದ ಸ್ಥಿತಿಯೆಂದು ಪರಿಗಣಿಸಲಾಗುತ್ತಿತ್ತು. ಆದರೆ, ಆಧುನಿಕ ವೈದ್ಯಕೀಯ ವಿಜ್ಞಾನವು ಆರೋಗ್ಯವನ್ನು ಸಮಗ್ರ ಮತ್ತು ಚಲನೆಯಲ್ಲಿರುವ ಸ್ಥಿತಿ ಎಂದು ಪರಿಗಣಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ‘ಆರೋಗ್ಯವೆಂದರೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಸಂಪೂರ್ಣ ಸುಖಕರ ಸ್ಥಿತಿ; ಬರೀ ರೋಗದ ಅನುಪಸ್ಥಿತಿ ಅಲ್ಲ’. ಆದರೆ, ವೈದ್ಯಕೀಯ ಕ್ಷೇತ್ರವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರೂ, ವ್ಯಕ್ತಿಯ ಸಾಮಾಜಿಕ ಆರೋಗ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ.

‘ಗುಣಮುಖ’ ನಾಟಕದ ನಾದಿರ್ ಹಾಗೂ ಸರ್ವಾಧಿಕಾರಿ ಹಿಟ್ಲರ್ ಮನಃಸ್ಥಿತಿಯನ್ನು ಈಗ ಎಲ್ಲೆಲ್ಲೂ ಕಾಣಬಹುದು. ನಾದಿರ್ ಗುಣಮುಖನಾದ. ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ. ಪ್ರಸ್ತುತ, ವಿಶ್ವದಾದ್ಯಂತ ಅಪರಾಧಿಗಳಿಗೆ ಕಾನೂನು ಶಿಕ್ಷೆಯಿದೆ. ಆದರೆ, ಅಪರಾಧಿ ನಡವಳಿಕೆಯ ಅನಾರೋಗ್ಯಕಾರಿ ಮನಃಸ್ಥಿತಿಗೂ ಬೇರುಮಟ್ಟದ ಚಿಕಿತ್ಸೆ ಬೇಕಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ತಾಂತ್ರಿಕ ಪ್ರಗತಿಯೊಂದಿಗೆ ಮಾನವನ ಜೀವನಶೈಲಿಯೂ ಬದಲಾಗುತ್ತಿದೆ. ಆದರೆ, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಈ ವೈರುಧ್ಯವು ಮಾನಸಿಕ ಒತ್ತಡ, ಸಾಮಾಜಿಕ ಅಸಮತೋಲನ ಮತ್ತು ಅಸ್ವಸ್ಥ ವರ್ತನೆಗಳಿಗೆ ಕಾರಣವಾಗುತ್ತಿದೆ. ಆರೋಗ್ಯಕರ ವ್ಯಕ್ತಿತ್ವ ನಿರ್ಮಾಣ
ದಲ್ಲಿ ನೈತಿಕ ಶಿಕ್ಷಣದ ಅಗತ್ಯವನ್ನು ಅರಿಯುವುದು ಅತ್ಯಂತ ಮುಖ್ಯ.

ನಾದಿರ್ ಷಾನ ಕಾಯಿಲೆಯನ್ನು ಗುಣಪಡಿಸಲು ಬರುವ ಹಕೀಮ, ಅಂಗಿಯನ್ನು ಬಿಚ್ಚುವಂತೆ ಚಕ್ರವರ್ತಿಗೆ ಹೇಳುತ್ತಾನೆ. ಅಂಗಿ ಬಿಚ್ಚಿಡುವುದೆಂದರೆ, ಎಲ್ಲ ಅಹಂಕಾರ, ಮೇಲರಿಮೆ ಹಾಗೂ ಒಳಗಿನ ರಾಕ್ಷಸನನ್ನು ಕಳಚಿ ಪಕ್ಕಕ್ಕಿಡುವುದು. ಈ ಪ್ರಕ್ರಿಯೆ ಈಗಿನ ಸಮಾಜಕ್ಕೆ ಅಗತ್ಯವಾಗಿದೆ. ಉನ್ನತ ಶಿಕ್ಷಣ ಮತ್ತು ತಂತ್ರಜ್ಞಾನ ನಮ್ಮ ಕಣ್ಣು ಮಾತ್ರ ತೆರೆಸುತ್ತವೆ. ಸಹಾನುಭೂತಿ, ಅನುಕಂಪ ಮತ್ತು ಪ್ರೀತಿಯು ಜಗತ್ತನ್ನು ವಿಶಾಲವಾದ ಒಳಗಣ್ಣಿನಿಂದ ನೋಡಲು ಕಲಿಸುತ್ತವೆ.

ಅತಿ ಬುದ್ಧಿವಂತನಾಗುವ ಪ್ರಕ್ರಿಯೆಯಲ್ಲಿ ಮನುಷ್ಯ ತನ್ನ ವಿವೇಕ ಕಳೆದುಕೊಳ್ಳುತ್ತಾ ಹೋಗುತ್ತಿದ್ದಾನೆ ಎನ್ನುವುದಕ್ಕೆ ಗಡಿಯ ಒಳಗೂ ಗಡಿಯ ಹೊರಗೂ ನಡೆಯುತ್ತಿರುವ ಯುದ್ಧಗಳೇ ಸಾಕ್ಷಿ. ಈ ಬೆಳವಣಿಗೆಯನ್ನು ಗಮನಿಸಿದಾಗ, ಜಗತ್ತನ್ನು ಜಾಣರು ಆಳಿದ್ದು ಸಾಕು, ಇನ್ನು ಹೃದಯವಂತರು ಆಳಲಿ ಅನ್ನಿಸುತ್ತದೆ. ಮಾನವೀಯ ಸಮಾಜದ ನಿರ್ಮಾಣಕ್ಕೆ ಬೇಕಾದುದು ಅಂತಃಕರಣ; ಅಣುಬಾಂಬ್ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.