‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಚುನಾವಣೆ ನಡೆಯದೆ ಐದು ವರ್ಷಗಳೇ ಕಳೆದುಹೋಗಿವೆ. ಜೂನ್ ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ, ಈಗ ಚುನಾವಣಾ ಸಿದ್ಧತೆ ಆರಂಭ ಗೊಂಡಿದೆ.

ಬಿಬಿಎಂಪಿಗೆ ‘ಜಿಬಿಎ’ ಎಂದು ನಾಮಕರಣ ಮಾಡಿ, ಅದನ್ನು ಐದು ನಗರಪಾಲಿಕೆಗಳಾಗಿ ವಿಂಗಡಿಸುವುದರ ಜೊತೆಗೆ ವಾರ್ಡ್ ವಿಂಗಡಣೆಯನ್ನೂ ಮಾಡಿರುವ ಸರ್ಕಾರ, ಮೀಸಲಾತಿಯನ್ನೂ ನಿಗದಿಗೊಳಿಸಿದೆ. ಈ ದಿಸೆಯಲ್ಲಿ ಅಂತಿಮ ಅಧಿಸೂಚನೆಯನ್ನೂ ಹೊರಡಿಸಿದೆ. ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನೂ ಪ್ರಕಟಿಸಿದೆ. ಈ ಎಲ್ಲಾ ಸಿದ್ಧತೆಗಳೊಡನೆ ಜಿಬಿಎಗೆ ಚುನಾವಣೆ ನಡೆಸಲು ಸರ್ಕಾರಕ್ಕೆ ಯಾವುದೇ ಅಡಚಣೆ ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುವುದು ಸಹಜ.

ಕೆ. ಕೃಷ್ಣಮೂರ್ತಿ ವರ್ಸಸ್ ಭಾರತ ಒಕ್ಕೂಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎರಡು ಅಧಿಷರತ್ತುಗಳನ್ನು ವಿಧಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸರ್ಕಾರಕ್ಕೆ 2010ರಲ್ಲಿ ಆದೇಶಿಸಿದೆ. ಒಟ್ಟಾರೆ ಮೀಸಲಾತಿಯ ಕೋಟಾ ಶೇ 50ರ ಮಿತಿ ಮೀರುವ ಹಾಗಿಲ್ಲ ಹಾಗೂ ‘ಟ್ರಿಪಲ್ ಟೆಸ್ಟ್’ ಕ್ರಮ ಅನುಸರಿಸಿ ರಾಜಕೀಯವಾಗಿ ಹಿಂದುಳಿದ ಜಾತಿ ಅಥವಾ ವರ್ಗಗಳನ್ನು ಗುರ್ತಿಸುವುದೇ ಆ ಷರತ್ತುಗಳು. ಆ ಟ್ರಿಪಲ್ ಟೆಸ್ಟ್ ಇಂತಿದೆ: ಸ್ವತಂತ್ರ ಮತ್ತು ಸಮರ್ಪಿತ ಆಯೋಗವೊಂದರ ರಚನೆ, ಪ್ರಾಯೋಗಿಕ ದತ್ತಾಂಶಗಳನ್ನು ಇಟ್ಟುಕೊಂಡು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸು ವುದು ಹಾಗೂ ಮೀಸಲಾತಿಯ ಒಟ್ಟು ಮಿತಿ ಶೇ 50ರಷ್ಟು ಮೀರಬಾರದು.

ಸುಪ್ರೀಂ ಕೋರ್ಟ್ನ ಆದೇಶ ವನ್ನು ಪಾಲಿಸುವಲ್ಲಿ 2010ರಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕಿತು. ಶೇ 50ರ ಮಿತಿಯನ್ನು ಜಾರಿಗೊಳಿಸಿ, ಸ್ಥಳೀಯ ಸಂಸ್ಥೆಗಳ ಹಿಂದುಳಿದ ವರ್ಗಗಳ ಮೀಸಲಾತಿ ಸಂಖ್ಯೆಗಳನ್ನೇನೊ ಕಡಿಮೆಗೊಳಿಸಿತು. ಆದರೆ, ‘ಟ್ರಿಪಲ್ ಟೆಸ್ಟ್’ ಕೈಗೆತ್ತಿಕೊಳ್ಳಲಿಲ್ಲ. 2015ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದಾಗಲೂ ಸರ್ಕಾರ ‘ಟ್ರಿಪಲ್ ಟೆಸ್ಟ್’ ಉಸಾಬರಿಗೆ ಹೋಗಲಿಲ್ಲ.

ವಿಕಾಸ್ ರಾವ್ ಗೌಳಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ‘ಟ್ರಿಪಲ್ ಟೆಸ್ಟ್’ ನಡೆಸುವಂತೆ ತಾಕೀತು ಮಾಡಿದೆ. ಮಧ್ಯಪ್ರದೇಶದ ಪ್ರಕರಣ ಒಂದರ ಲ್ಲಿಯೂ ‘ಟ್ರಿಪಲ್ ಟೆಸ್ಟ್’ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಮಹಾರಾಷ್ಟ್ರದಲ್ಲಿ ಇದನ್ನು ಕ್ರಮಬದ್ಧವಾಗಿ ಮಾಡಿಲ್ಲ ಎಂಬ ಪ್ರಶ್ನೆ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮುಂದೆ ಬಂದಾಗ, ‘ಟ್ರಿಪಲ್ ಟೆಸ್ಟ್’ ಮಾಡುವುದು ಆಯಾ ರಾಜ್ಯಗಳ ಕರ್ತವ್ಯ; ನ್ಯಾಯಾಲಯದ ಆದೇಶ ಪಾಲಿಸದಿದ್ದಲ್ಲಿ ಎಲ್ಲ ಕ್ಷೇತ್ರ ಅಥವಾ ವಾರ್ಡ್ಗಳನ್ನು ಸಾಮಾನ್ಯ ಕ್ಷೇತ್ರ ಅಥವಾ ವಾರ್ಡ್ ಎಂದು ಪರಿಗಣಿಸಿ ಚುನಾವಣೆ ನಡೆಸಿ ಎಂದು ಕಟ್ಟಪ್ಪಣೆ ವಿಧಿ ಸಿತು. ಹೀಗಾಗಿ, ಯಾವುದೇ ರಾಜ್ಯ ವಾಗಲಿ ಅಥವಾ ಕರ್ನಾಟಕವೇ ಆಗಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡದೆ ಚುನಾವಣೆ ನಡೆಸುವುದು ಸುಲಭದ ಮಾತಲ್ಲ.

ಸುಪ್ರೀಂ ಕೋರ್ಟ್ ಕಟ್ಟಪ್ಪಣೆಯ ಇಕ್ಕಟ್ಟಿಗೆ ಸಿಲುಕಿದ ಕರ್ನಾಟಕ ಸರ್ಕಾರವು 2022ರಲ್ಲಿ ‘ಟ್ರಿಪಲ್ ಟೆಸ್ಟ್’ ಮಾಡುವ ಕಾರ್ಯಕ್ಕೆ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗವನ್ನು ರಚಿಸಿ, ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಹೇಳಿತು. ಆಯೋಗ ಬರೀ 46 ದಿನಗಳಲ್ಲಿಯೇ ವರದಿ ಸಲ್ಲಿಸಿ ಇತಿಹಾಸವನ್ನೇ ನಿರ್ಮಿಸಿತು! ಅತ್ಯಲ್ಪ ಅವಧಿಯಲ್ಲಿ ಆಯೋಗ ಪ್ರಾಯೋಗಿಕ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಿತು ಹಾಗೂ ಯಾವ ಅಳತೆಗೋಲನ್ನು ಅನುಸರಿಸಿ ಆ ವರ್ಗಗಳನ್ನು ಗುರ್ತಿಸಿತು ಎಂಬುದೇ ಯಾರಿಗೂ ತಿಳಿದಿಲ್ಲ.

2023ರಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದ ಸಂಪುಟದಲ್ಲಿ ಭಕ್ತವತ್ಸಲ ಆಯೋಗದ ವರದಿಯನ್ನು ಚರ್ಚಿಸಿ, ಆಯೋಗದ ಕೆಲವೊಂದು ಸಲಹೆಗಳನ್ನು ಒಪ್ಪಿ ಕೆಲವೊಂದನ್ನು ತಿರಸ್ಕರಿಸಲಾಗಿದೆ ಎಂಬ ವಿಷಯ ಪತ್ರಿಕೆ ಗಳಲ್ಲಿ ವರದಿಯಾಗಿತ್ತು. ಅಲ್ಲಿಗೆ ಈ ವಿಷಯದ ಚರ್ಚೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಸರ್ಕಾರವಾದರೂ ನ್ಯಾಯಾಲಯದ ಆದೇಶದ ಪ್ರಕಾರ ಆಯೋಗವು ವರದಿ ಸಿದ್ಧಪಡಿಸಿದೆಯೇ ಎಂಬ ಅಂಶದ ಬಗ್ಗೆ ತಲೆಬಿಸಿ ಮಾಡಿ ಕೊಳ್ಳದೆ ಹಾಗೆಯೇ ಮುಂದುವರಿಯಿತು. ಮುಂದೆ ಸರ್ಕಾರ‘ಟ್ರಿಪಲ್ ಟೆಸ್ಟ್’ ಬಗ್ಗೆ ಜನತೆಗೆ ಏನನ್ನೂ ಹೇಳದೆ, ಮರೆಮಾಚಿತು.

ಪ್ರಸ್ತುತ ಸರ್ಕಾರ ‘ಟ್ರಿಪಲ್ ಟೆಸ್ಟ್’ ಕ್ರಮ ಅನುಸರಿಸುವು ದನ್ನು ತನ್ನಲ್ಲಿಯೇ ಮುಚ್ಚಿಟ್ಟುಕೊಂಡು ಜಿಬಿಎ ಚುನಾವಣೆ ಗಾಗಿ ವಾರ್ಡ್ಗಳನ್ನು ವಿಂಗಡಿಸಿರುವುದಲ್ಲದೆ, ಮೀಸಲಾತಿ ಯನ್ನು ನಿಗದಿಪಡಿಸಿರುವುದು ಹಿಂದುಳಿದ ವರ್ಗಗಳಿಗೆ ಮರ್ಮಾಘಾತವನ್ನು ನೀಡಿದೆ. ಹಿಂದುಳಿದ ವರ್ಗಗಳಲ್ಲಿ ಕಾನೂನು ಬಲ್ಲವರು ಸರ್ಕಾರದ ಈ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೆ?

ಹಿಂದುಳಿದ ವರ್ಗ, ಅದರಲ್ಲೂ ದಮನಿತ ಹಿಂದುಳಿದ ವರ್ಗಗಳಿಗೆ ರಾಜಕೀಯವಾಗಿ ನ್ಯಾಯೋಚಿತ ಪ್ರಾತಿನಿಧ್ಯವನ್ನು ನೀಡಿ ರಾಜಕೀಯ ಸಬಲತೆಯತ್ತ ಸಾಗಲು ದಾರಿಯನ್ನು ಸುಗಮಗೊಳಿಸುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯ. ಸಂದರ್ಭ ಒದಗಿದಾಗಲೆಲ್ಲ ಸಾಮಾಜಿಕ ನ್ಯಾಯಕ್ಕೆ ಕಂಕಣ ಬದ್ಧ ಎಂದು ಸರ್ಕಾರ ಪದೇ ಪದೇ ಹೇಳುತ್ತದೆ. ಆದರೆ, ಎಲ್ಲವನ್ನೂ ಧಿಕ್ಕರಿಸಿ, ದಬ್ಬಾಳಿಕೆ ಮೇಲೆ ಚುನಾವಣೆ ನಡೆಸು ವುದು ಸಾಮಾಜಿಕ ನ್ಯಾಯ ಎನ್ನಿಸಿಕೊಳ್ಳುವುದೆ?

ಲೇಖಕ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.