ರೈತರ ಆತ್ಮಹತ್ಯೆಯ ಅಂಕಿಅಂಶಗಳಿಗೆ ಸಂಬಂಧಿಸಿದ ‘ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೊ’ದ 2024ರ ವರದಿ ಆತಂಕ ಹುಟ್ಟಿಸುವಂತಿದೆ (ಪ್ರ.ವಾ., ಮೇ 8). 2023ಕ್ಕೆ ಹೋಲಿಸಿದರೆ, 2024ರಲ್ಲಿ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ 2.22ರಷ್ಟು ಕಡಿಮೆ ಆಗಿದೆ ಎಂದು ವರದಿ ಹೇಳುತ್ತಿದೆ. ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಯ ಪ್ರಮಾಣದಲ್ಲಿ ಏರಿಕೆ ಆಗಿರುವುದನ್ನು ಗುರ್ತಿಸಲಾಗಿದೆ. ವರದಿಯಲ್ಲಿ ಹೇಳಿರುವಂತೆ, ರಾಜ್ಯದಲ್ಲಿ 2023 ಮತ್ತು 2024ರಲ್ಲಿ ಕ್ರಮವಾಗಿ 2,423 ಹಾಗೂ 2,971 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ಶೇ 22.61ರಷ್ಟು ಹೆಚ್ಚಳ).

ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಅನೇಕ ಕಾರಣಗಳಿವೆ. ಕೃಷಿ ಚಟುವಟಿಕೆಯಿಂದ– ಅದರಲ್ಲೂ ಒಣಬೇಸಾಯವನ್ನೇ ಆಶ್ರಯಿಸಿದವರಿಗೆ– ಸಾಕಷ್ಟು ಆದಾಯ ದೊರೆಯುತ್ತಿಲ್ಲ. ಕಳಪೆ ಬೀಜಗಳ ಬಳಕೆ, ಅಧಿಕ ಬೆಲೆಗೆ ಖರೀದಿಸಿದ ರಸ ಗೊಬ್ಬರ, ಸಕಾಲಕ್ಕೆ ಆಗದ ಮಳೆ, ಕ್ರಿಮಿಕೀಟಗಳಿಂದ ಫಸಲಿಗೆ ಹಾನಿ ಸೇರಿದಂತೆ ಏನೆಲ್ಲ ತೊಂದರೆಗಳನ್ನೆದುರಿಸಿ, ಬೆಳೆ ಕೈಗೆ ಬರುವ ಹೊತ್ತಿಗೆ ರೈತರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಬೆಳೆಯನ್ನು ಹೊಲದಿಂದಲೇ ನೇರವಾಗಿ ಮಾರುಕಟ್ಟೆಗೆ ಸಾಗಿಸುವ ಅನಿವಾರ್ಯತೆ ರೈತನದು. ಗಗನಕ್ಕೇರಿದ್ದ ಬೆಲೆ, ರೈತನ ಕೈಗೆ ಬೆಳೆ ಬರುವ ವೇಳೆಗೆ ಪಾತಾಳಕ್ಕಿಳಿ ದಿರುತ್ತದೆ.

ಕೃಷಿ ಉತ್ಪನ್ನಗಳನ್ನು ರೈತ ರಿಂದಲೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ನಮ್ಮ ಲ್ಲಿಲ್ಲ. ರೈತರು ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳು ಇದ್ದಾರೆ. ರೈತರ ಬೆಳೆಗಳು ಮಾರುಕಟ್ಟೆಗೆ ಬಂದ ಸಂದರ್ಭ ಅಧಿಕ ಆವಕದ ಪರಿಣಾಮ ಧಾರಣೆ ಕುಸಿಯುತ್ತದೆ. ಕಡಿಮೆ ಬೆಲೆಗೆ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮಧ್ಯವರ್ತಿಗಳು ನಂತರ ಅಧಿಕ ಬೆಲೆಗೆ ಮಾರಾಟ ಮಾಡಿ ಲಾಭಗಳಿಸುತ್ತಾರೆ. ಬಿಸಿಲು, ಮಳೆ, ಚಳಿಗೆ ಮೈಯೊಡ್ಡಿ ದುಡಿದು ಹೈರಾಣಾಗುವ ರೈತರಿಗೆ ತಮ್ಮ ಕೃಷಿ ಉತ್ಪಾದನೆಯಿಂದ ಲಾಭವಾಗುತ್ತಿಲ್ಲ. ನಗರ ಪ್ರದೇಶಗಳ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ರೈತರ ಕೃಷಿ ಉತ್ಪನ್ನಗಳ ವಹಿವಾಟು ನಡೆಸುವ ಮಧ್ಯವರ್ತಿ ಗಳಿಗೆ ರೈತರ ದುಡಿಮೆಯ ಫಲ ಪ್ರಾಪ್ತವಾಗುತ್ತಿದೆ.

ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಬಳಿಕೆಯಾಗು ತ್ತಿದೆ. ಕಾರ್ಖಾನೆಗಳು, ವಿಶ್ವವಿದ್ಯಾಲಯಗಳು, ಸರ್ಕಾರದ ಆಡಳಿತ ಕಚೇರಿಗಳು, ಇವೆಲ್ಲವುಗಳ ಸ್ಥಾಪನೆಗೆ ಸಾವಿರಾರು ಎಕರೆ ಕೃಷಿಭೂಮಿ ಬಳಕೆಯಾಗುತ್ತಿದೆ. ರಸ್ತೆಗಳ ವಿಸ್ತರಣೆ, ಹೆದ್ದಾರಿಗಳ ನಿರ್ಮಾಣಕ್ಕಾಗಿಯೂ ಕೃಷಿಭೂಮಿ ವಶಪಡಿಸಿ ಕೊಳ್ಳಲಾಗುತ್ತಿದೆ. ನಗರ ಪ್ರದೇಶಗಳಿಗೆ ಸಮೀಪದಲ್ಲಿರುವ ಹಳ್ಳಿಗಳ ರೈತರಿಂದ ಧನವಂತರು ಕೃಷಿಭೂಮಿಯನ್ನು ಖರೀದಿಸಿ, ವಸತಿ ಸಮುಚ್ಚಯಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುತ್ತಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಂದಾಗಿ ಅದೆಷ್ಟೋ ರೈತ ಕುಟುಂಬಗಳು ಉದ್ಯಮಿಗಳಿಗೆ ಭೂಮಿ ಯನ್ನು ಮಾರಾಟ ಮಾಡಿ ನಗರ ಗಳಿಗೆ ವಲಸೆ ಹೋಗುತ್ತಿವೆ. ರೈತರು ಕೃಷಿ ಉದ್ಯೋಗದಲ್ಲೇ ತೊಡಗಿಸಿ ಕೊಳ್ಳುವಂತೆ ಒತ್ತಾಯಿಸುವ ನೈತಿಕತೆಯನ್ನು ಸರ್ಕಾರ ಮತ್ತು ಸಮಾಜ ಕಳೆದುಕೊಂಡಿವೆ. ರೈತರು ಕೃಷಿ
ಕ್ಷೇತ್ರದಲ್ಲಿನ ದುಡಿಮೆ ಸ್ಥಗಿತಗೊಳಿಸಿ ದಲ್ಲಿ ಅದರ ನೇರ ಪರಿಣಾಮ ಜನರ ದೈನಂದಿನ ಬದುಕಿನ ಮೇಲಾಗುತ್ತದೆ.

ಟೆಕ್ಕಿಗಳು ಕೃಷಿ ಕ್ಷೇತ್ರಕ್ಕೆ ಕಾಲಿಡು ತ್ತಿದ್ದು, ಕೃಷಿಯಲ್ಲಿ ಲಾಭವಿದೆ ಎನ್ನುವ ಅಭಿಪ್ರಾಯ ಕೆಲವರಲ್ಲಿದೆ. ಆರ್ಥಿಕ ವಾಗಿ ಉತ್ತಮ ಸ್ಥಿತಿಯಲ್ಲಿರುವ ಟೆಕ್ಕಿಗಳಿಗೆ ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಕೆಲಸದ ಏಕತಾನತೆಯಿಂದ ಬೇಸತ್ತವರಿಗೆ ಕೃಷಿ ಕೆಲಸ ಒಂದು ಬದಲಾವಣೆ ಅಷ್ಟೇ. ರೈತರ ಸ್ಥಿತಿ ಹಾಗಲ್ಲ. ಕೃಷಿ ಅವರಿಗೆ ಹವ್ಯಾಸವಲ್ಲ, ಜೀವನೋಪಾಯ.

ರಾಜಕಾರಣ ರೈತರ ಸಂಕಷ್ಟಗಳಿಗೆ ಸ್ಪಂದಿಸಿದ್ದು ಕಡಿಮೆ. ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ರೈತರನ್ನು ಶೋಷಣೆ ಮಾಡುತ್ತಿವೆ. ಕೈಗಾರಿಕೋದ್ಯಮಿಗಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಿ ರತ್ನಗಂಬಳಿ ಹಾಸಿ ಸ್ವಾಗತಿಸುವ ಸರ್ಕಾರ, ರೈತರ ಸಮಸ್ಯೆಗಳಿಗೆ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತದೆ. ನಗರ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಿದಷ್ಟು ಗ್ರಾಮೀಣ ಪ್ರದೇಶಗಳಿಗೆ ನೀಡುತ್ತಿಲ್ಲ. ಬೆಳೆಹಾನಿಗೆ ಒದಗಿಸುತ್ತಿರುವ ಪರಿಹಾರಧನ ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಯಂತಾಗಿದೆ. ಈ ಅಲ್ಪ ಧನಸಹಾಯವನ್ನು ಪಡೆಯಲು ರೈತರು ಹಲವು ದಾಖಲೆಗಳನ್ನು ಒದಗಿಸಬೇಕು. ಸಂಬಂಧ ಪಟ್ಟ ಇಲಾಖೆಯ ನೌಕರರ ‘ಕ್ಷೇಮ’ ವಿಚಾರಿಸಿಕೊಳ್ಳಬೇಕು.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಮಿತ್ರರೊಬ್ಬರು, ಇಂದಿನ ವಿದ್ಯಾರ್ಥಿಗಳಲ್ಲಿ ರೈತರಾಗುವ ಬಯಕೆಯಿಲ್ಲ ಎಂದು ಕಳವಳ ವ್ಯಕ್ತಪಡಿಸುತ್ತಾರೆ. ವಿದ್ಯಾರ್ಥಿಗಳು ಇರಲಿ, ಸ್ವತಃ ರೈತರಿಗೇ ತಮ್ಮ ಮಕ್ಕಳು ಕೃಷಿ ಉದ್ಯೋಗದಲ್ಲಿ ಮುಂದುವರಿಯಬೇಕೆನ್ನುವ ಇಚ್ಛೆ ಇಲ್ಲ. ಒಕ್ಕಲುತನ ತಮ್ಮೊಂದಿಗೇ ಕೊನೆಗೊಳ್ಳಲೆಂದು ಬಯಸುವ ರೈತಾಪಿ ಜನರ ಸಂಖ್ಯೆ ಅಧಿಕವಾಗಿದೆ. ಅದೆಷ್ಟೋ ರೈತರು ತಮ್ಮ ಮಕ್ಕಳಿಗೆ ನಗರ ಪ್ರದೇಶಗಳ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ಈಗ ಯುವ ರೈತರಿಗೆ ಎದುರಾಗಿರುವ ಮದುವೆ ಸಮಸ್ಯೆ ಭವಿಷ್ಯದಲ್ಲಿ ಕೃಷಿ ಉದ್ಯೋಗಕ್ಕೆ ಶಾಶ್ವತ ವಾಗಿ ತೆರೆ ಎಳೆದಲ್ಲಿ ಅಚ್ಚರಿಯೇನಿಲ್ಲ.

ಒಂದೆಡೆ ಕೃಷಿಭೂಮಿ ಕ್ಷೀಣಿಸುತ್ತಿದೆ, ಇನ್ನೊಂದೆಡೆ ರೈತರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಬಡವರು ಮತ್ತು ಮಧ್ಯಮವರ್ಗದವರು ಗಗನಕ್ಕೇರುತ್ತಿರುವ ಆಹಾರ ಧಾನ್ಯ ಗಳ ಬೆಲೆಯಿಂದ ತತ್ತರಿಸಿದ್ದಾರೆ. ಜನಸಂಖ್ಯೆ ಮತ್ತು ಆಹಾರ ಉತ್ಪಾದನೆ ಪ್ರಮಾಣದ ನಡುವೆ ಅಸಮತೋಲನವಿದೆ. ಇಂಥ ವಿಷಮ ಸನ್ನಿವೇಶದಲ್ಲಿ ಅನ್ನದಾತರ ಆತ್ಮಹತ್ಯೆ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಸಮಸ್ಯೆಗೆ ಪರಿಹಾರ ವೆಂದರೆ, ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ರೈತರ ಬದುಕು ಹಸನಾಗುವುದು. ಅದನ್ನು ಸಾಧ್ಯವಾಗಿಸುವುದು ಸರ್ಕಾರದ ಕರ್ತವ್ಯ, ಸಮಾಜದ ನೈತಿಕ ಹೊಣೆಗಾರಿಕೆ. ಅಭಿವೃದ್ಧಿಯ ಮಾನದಂಡಗಳಲ್ಲಿ ರೈತರ ಯೋಗಕ್ಷೇಮವೂ ಸೇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.