ಕರ್ನಾಟಕದ ರೈತ ಚಳವಳಿಯಲ್ಲಿ ಹಸಿರು ಟವೆಲ್ಗೆ ವಿಶೇಷ ಮಹತ್ವವಿದೆ. ಅದು, ಬರಿಯ ವಸ್ತ್ರವಾಗಿರದೆ, ರೈತರ ಆತ್ಮಾಭಿಮಾನದ ಸಂಕೇತವಾಗಿತ್ತು. ಆ ಹಸಿರು ಟವೆಲ್ ಈಗ ದಲ್ಲಾಳಿಗಳ ಪಾಲಿಗೆ ಲಾಭದಾಯಕವಾಗಿ ಕಾಣಿಸುತ್ತಿದೆ.

1980ರ ದಶಕದಲ್ಲಿ ಕನ್ನಡನಾಡಿನ ಜಡ ರಾಜಕಾರಣ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅದಮ್ಯ ಚೈತನ್ಯ ತುಂಬುವ ತೊರೆಯಾಗಿ ಪ್ರವಹಿಸಿದ್ದ ರೈತ ಚಳವಳಿ ಇಂದು ಏದುಸಿರು ಬಿಡುವ ಸ್ಥಿತಿ ತಲಪಿದೆ. ರೈತರಿಗೆ ಅಪಾರ ಆತ್ಮವಿಶ್ವಾಸ ತುಂಬಿದ ಸಂಘಟನೆಗಳು ಈಗ ಸ್ವತಃ ಶಕ್ತಿ ಕಳೆದುಕೊಂಡಿವೆ.

ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಎಚ್.ಎಸ್. ರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಕಡಿದಾಳು ಶಾಮಣ್ಣ,
ಎನ್.ಡಿ. ಸುಂದರೇಶ್, ಬಾಬಾಗೌಡ ಪಾಟೀಲ ಮೊದಲಾದ ಮಹನೀಯರು ಹಗಲಿರುಳು ಶ್ರಮಿಸಿ ಕರ್ನಾಟಕದ ಶ್ರಮಿಕ ವರ್ಗಕ್ಕೆ, ಅದರಲ್ಲೂ ಮುಖ್ಯವಾಗಿ ನಾಡಿನ ರೈತವರ್ಗಕ್ಕೆ ಒಂದು ಉಜ್ವಲ ಕನಸು ಕಟ್ಟಿಕೊಟ್ಟಿದ್ದರು. ಆ ಕನಸಿಗೆ ಸುಭದ್ರವಾದ ಸೈದ್ಧಾಂತಿಕ ಬುನಾದಿ ಹಾಕಿ, ಅದರ ಮೇಲೆ ಚಳವಳಿ ಕಟ್ಟಲಾಗಿತ್ತು. ನಂಜುಂಡಸ್ವಾಮಿ ಅವರ ನಂತರ ಮುರಿದ ಮನೆಯಂತಾದ ಚಳವಳಿ, ರೈತ ನಾಯಕರ ಪ್ರತಿಷ್ಠೆ ಹಾಗೂ ಪ್ರಜಾಸತ್ತಾತ್ಮಕವಲ್ಲದ ಧೋರಣೆಗಳಿಂದ ತಾಲ್ಲೂಕು, ಹಳ್ಳಿಗಳ ಮಟ್ಟದಲ್ಲೂ ಒಡೆದ ಮನೆಯಂತಾಗಿದೆ.

ರೈತ ಚಳವಳಿ ಮುಗ್ಗರಿಸಲು ಇದಿಷ್ಟೇ ಕಾರಣ ಅಲ್ಲ. ಮುಖ್ಯವಾಗಿ
ಅದು ತನ್ನ ಕಾರ್ಯಕರ್ತರನ್ನು ಸೈದ್ಧಾಂತಿಕವಾಗಿ ತರಬೇತು ಗೊಳಿಸದೇ ಹೋದುದು, ಸಂಘಟನೆ
ಹಾಗೂ ಸಂರಚನೆಯಲ್ಲಿ ಪ್ರಜಾ ಸತ್ತಾತ್ಮಕ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳದೇ ಹೋದುದು, ಜನಪರ ಧ್ವನಿಯಾಗುವ ಬದಲಾಗಿ ಸರ್ಕಾರ ಮತ್ತು ಜನರ ನಡುವೆ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುವುದಕ್ಕೆ ಮಾತ್ರ ತನ್ನ ಕ್ರಿಯಾ ಶೀಲತೆ ಸೀಮಿತಗೊಳಿಸಿಕೊಂಡಿದ್ದು,
ಇವೆಲ್ಲವೂ ರೈತ ಚಳವಳಿಯ ಹಿನ್ನಡೆಗೆ ಕಾರಣಗಳಾಗಿವೆ.

ರಾಜ್ಯಮಟ್ಟದ ಹಿರಿಯ ನಾಯಕರಲ್ಲಿನ ಭಿನ್ನಮತದಿಂದಾಗಿ ರೈತ ಸಂಘ ಎರಡು ಮೂರು ಬಣಗಳಾಗಿ ಒಡೆಯಿತು. ಸೈದ್ಧಾಂತಿಕ ಬದ್ಧತೆಯಿಲ್ಲದ ನಾಯಕರು ರೈತ ಸಂಘವನ್ನು ತಮ್ಮ ಜೀವನೋಪಾಯದ ಮಾರ್ಗವನ್ನಾಗಿ ಮಾಡಿಕೊಂಡ ಕಾರಣಕ್ಕೆ ಅದು ಜಿಲ್ಲಾಮಟ್ಟದಲ್ಲಿ ಒಡೆದು ಹೋಳಾಗುತ್ತಲೇ ಇದೆ. ನಾಡಿನ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮ ಸಮಾಜದ ಕನಸನ್ನು ಸಾಕಾರಗೊಳಿಸುವ ಹಾದಿಯಲ್ಲಿ ಸಾಮಾಜಿಕ ನ್ಯಾಯದ ದೀವಿಗೆಯನ್ನು ಹೊತ್ತಿಸಬೇಕಾಗಿದ್ದ ಸಂಘ, ತನಗೊಂದು ದೀರ್ಘಾವಧಿಯ ಕನಸಿದೆ ಎಂಬುದನ್ನೇ ಮರೆಯಿತು. ಅದೇ ಕಾರಣಕ್ಕೆ ಜನರು ಈಗ ಹಸಿರು ಟವೆಲ್ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ.

ಜಾಗತೀಕರಣದ ತುರೀಯಾವಸ್ಥೆಯ ವರ್ತಮಾನದಲ್ಲಿ ರೈತ ಸಂಘದ ಅಗತ್ಯ ಹಿಂದಿಗಿಂತಲೂ ಹೆಚ್ಚಾಗಿದೆ. ಆದರೂರೈತ ಸಂಘ ಹಾಗೂ ಅದರ ನಾಯಕರು ಮೈ ಕೊಡವಿಕೊಂಡು ಏಳಲಿಕ್ಕೆ, ಎದ್ದು ಕ್ರಿಯಾಶೀಲರಾಗಲಿಕ್ಕೆ ತಯಾರಿಲ್ಲ. ಅವರು, ಹಂಚಿ ಹೋಗಿರುವ ತಮ್ಮ ಶಕ್ತಿಯ ಅರಿವಿಲ್ಲದೆ, ಪರಸ್ಪರರತ್ತ ಬೆರಳು ತೋರುತ್ತ ದೂರುವುದರಲ್ಲಿ ಮಗ್ನರಾಗಿದ್ದಾರೆ.

ರೈತ ಸಂಘದ ಸದಸ್ಯತ್ವ ಎನ್ನುವುದು, ರೈತರ ಸಮಸ್ಯೆಗಳ ಅರಿವು–ಪರಿಹಾರ ಮತ್ತು ಕಟಿಬದ್ಧ ಹೋರಾಟಕ್ಕೆ ಸಂಕೇತ ಎಂದಾಗಿತ್ತು. ಅದೀಗ ವಾರ್ಷಿಕ ಶುಲ್ಕಕ್ಕೆ ಸಿಗುವ ಕಾರ್ಡು ಎಂಬಂತಾಗಿದೆ.

ರೈತನೊಬ್ಬ ಸಂಘದ ಸದಸ್ಯನಾದರೆ, ರೈತ ಚಳವಳಿಯ ಹುಟ್ಟು, ಬೆಳವಣಿಗೆ, ಹೋರಾಟದ ಇತಿಹಾಸವನ್ನು ಒಳಗೊಂಡ ಒಂದು ಚಿಕ್ಕ ಪುಸ್ತಿಕೆಯನ್ನಾದರೂ ಅವನಿಗೆ ಕೊಡಬೇಕು. ಬದ್ಧತೆ ಹೊಂದಿರುವವರನ್ನು ಗುರ್ತಿಸಿ, ಅವರಿಗೆ ನಾಯಕತ್ವ ಕೊಡಬೇಕು. ಈಗ ಏನಾಗಿದೆ ಎಂದು ನೋಡಲು ಹೊರಟರೆ ನಿರಾಸೆಯಾಗುತ್ತದೆ. ಕೆಲವು ಬಣಗಳು ವಿರೋಧಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಮತ್ತೆ ಕೆಲವು ಬಣಗಳು ಆಡಳಿತ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡು ಅಖಾಡದಲ್ಲಿ ಗುರ್ತಿಸಿಕೊಂಡಿವೆ. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಮಾವನ ಕಡೆ ಎಂಬ ಸೋಗಿನ ನಾಯಕರನ್ನು ನಂಬುವುದು ಹೇಗೆ?

ರೈತರ ಆತ್ಮಾಭಿಮಾನದ ಸಂಕೇತವಾಗಿದ್ದ ಹಸಿರು ಟವೆಲ್ ಇಂದು ತನ್ನ ಕಿಮ್ಮತ್ತು ಕಳೆದುಕೊಂಡಿದೆ. ಹಿಂದೆಲ್ಲ ಸರ್ಕಾರಿ ಅಧಿಕಾರಿಗಳು ರೈತ ಸಂಘಕ್ಕೆ ಅಳುಕುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ತಾಲ್ಲೂಕಿಗೆ, ಜಿಲ್ಲೆಗೆ ಹೊಸದಾಗಿ ಬರುವ ಅಧಿಕಾರಿಗಳನ್ನು ರೈತ ಸಂಘದವರು ಮಾಲೆ ಹಾಕಿ ಸ್ವಾಗತಿಸುತ್ತಾರೆ. ಅಧಿಕಾರಿ ಭ್ರಷ್ಟನಾಗಿದ್ದರೆ, ಅವನನ್ನು ಒಲಿಸಿಕೊಂಡೋ ಭಯ ಹುಟ್ಟಿಸಿಯೋ ತಮ್ಮ ಕಾರ್ಯ ಸಾಧಿಸಿಕೊಳ್ಳುವವರಿದ್ದಾರೆ. ಅಧಿಕಾರಿಯು ಪ್ರಾಮಾಣಿಕನಾಗಿದ್ದರೆ, ಅವನಿಗೆ ಕಾಟ ಕೊಟ್ಟು ತಮ್ಮ ದಾರಿಗೆ ತಂದುಕೊಳ್ಳುತ್ತಾರೆ. ಈ ಎಲ್ಲ ಕಾರಣಗಳಿಗಾಗಿ ಜನಸಾಮಾನ್ಯರು, ಅಧಿಕಾರಿಗಳು ಹಸಿರು ಟವೆಲ್ ಅನ್ನು ಅನುಮಾನದಿಂದ ನೋಡುವಂತಾಗಿದೆ.

ಬೇರೆ ಬೇರೆ ಕಾರಣಗಳಿಂದಾಗಿ ರೈತ ಸಮುದಾಯ ಹಿಂದೆಂದಿಗಿಂತಲೂ ಹೆಚ್ಚಿನ ಬಿಕ್ಕಟ್ಟು ಎದುರಿಸುತ್ತಿದೆ. ಇಂಥ ಹೊತ್ತಿನಲ್ಲಿ ಜನರ ಆಶಾಕಿರಣ ಆಗಿರಬೇಕಿದ್ದ ರೈತ ಸಂಘಟನೆಗಳು ಭಸ್ಮಾಸುರನಂತೆ ತಮ್ಮ ಕೈಯನ್ನು ತಮ್ಮ ತಲೆಯ ಮೇಲೆಯೇ ಇರಿಸಿಕೊಳ್ಳುವ ದಾರಿಯಲ್ಲಿವೆ. ಇದು ರೈತ ಸಂಘದ ಪರಂಪರೆಗೆ ಮಾಡುವ ದ್ರೋಹ. ರೈತ ನಾಯಕರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ರೈತ ಸಂಘ ರೈತರ ಹಿತಾಸಕ್ತಿಗೆ ಸೀಮಿತಗೊಳ್ಳದೆ, ನಾಡು–ನುಡಿಯ ಆತ್ಮಸಾಕ್ಷಿಯಂತೆ ಕಾರ್ಯನಿರ್ವಹಿಸುತ್ತಿತ್ತು. ನಾಡಿನಸಾಂಸ್ಕೃತಿಕ ಚರಿತ್ರೆಯ ಭಾಗವಾಗಿತ್ತು. ಆ ದಿನಗಳು ಮರುಕಳಿ
ಸುವುದು ನಾಡಿನ ಸ್ವಾಸ್ಥ್ಯದ ದೃಷ್ಟಿಯಿಂದ ಅಪೇಕ್ಷಣೀಯ.

⇒ಲೇಖಕ: ರೈತ ಮತ್ತು ಕವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.