ಅದು ಎಂಬತ್ತರ ದಶಕದ ಕೊನೆಯ ಭಾಗ. ನಾನಾಗ ಎಂಜಿನಿಯರಿಂಗ್ ಓದುತ್ತಿದ್ದೆ. ಮನೆಯಲ್ಲಿ ನಾವೆಲ್ಲರೂ ಅಪ್ಪನನ್ನು ‘ಅಣ್ಣ’ ಎಂದೇ ಕರೆಯುತ್ತಿ ದ್ದೆವು. ಅಣ್ಣನ ಮುಖದಲ್ಲಿದ್ದ ವರ್ಚಸ್ಸು, ಜನರಿಗಾಗಿ ಸದಾ ಮಿಡಿಯುತ್ತಿದ್ದ ಅವರ ತುಡಿತ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿತ್ತು. ಅನಿರೀಕ್ಷಿತವಾಗಿ ಕ್ಯಾನ್ಸರ್ ಎಂಬ ಕಾಯಿಲೆ ಅವರನ್ನು ಆವರಿಸಿದಾಗ ನಮ್ಮ ಇಡೀ ಜಗತ್ತೇ ಸ್ತಬ್ಧವಾದಂತಾಯಿತು. ಅಣ್ಣನಿಗೆ ಸುಧಾರಿತ ಚಿಕಿತ್ಸೆ ಕೊಡಿಸಲು ನಾವು ಕಡಲಾಚೆಯ ದೇಶಕ್ಕೆ ಹೋಗಬೇಕಾಯಿತು.

ವಿದೇಶದ ಆಸ್ಪತ್ರೆಯ ಗಾಜಿನ ಗೋಡೆಗಳ ನಡುವೆ ಅಣ್ಣನಿಗೆ ಚಿಕಿತ್ಸೆ ನಡೆಯುತ್ತಿದ್ದಾಗ, ನನ್ನ ಮನಸ್ಸನ್ನು ಅಸ್ಪಷ್ಟವಾದ ನೋವು ಕಾಡುತ್ತಿತ್ತು. ‘ಒಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಸುಧಾರಿತ ಚಿಕಿತ್ಸೆ ಪಡೆಯಲು ಇಷ್ಟೊಂದು ಪ್ರಯಾಸಪಡಬೇಕಾದರೆ, ಜನಸಾಮಾನ್ಯರಿಗೆ ಇಂತಹ ಕಾಯಿಲೆ ಬಂದರೆ ಅವರು ಯಾರ ಮನೆ ಬಾಗಿಲು ತಟ್ಟಬೇಕು?’ ಆ ಪ್ರಶ್ನೆ ಎಂಜಿನಿಯರಿಂಗ್ ಪಾಠಗಳಿಗಿಂತಲೂ ಗಂಭೀರವಾಗಿ ನನ್ನನ್ನು ಕಾಡತೊಡಗಿತ್ತು.

ಕಾಲಚಕ್ರ ಉರುಳಿ ನಾನೀಗ ಆರೋಗ್ಯ ಸಚಿವನಾಗಿದ್ದೇನೆ. ನಾಡಿನ ಕಟ್ಟಕಡೆಯ ಮನುಷ್ಯನಿಗೂ ಆರೋಗ್ಯಸೇವೆ ಎಂಬ ಸಂಕಲ್ಪದೊಂದಿಗೆ, ಪ್ರತಿ ಜಿಲ್ಲೆಯಲ್ಲೂ ಉಚಿತ ಕಿಮೋಥೆರಪಿ ಚಿಕಿತ್ಸಾ ಸೌಲಭ್ಯ ಮತ್ತು ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಿದ್ದೇವೆ.

ಈಗ ನಾವು ಹೋರಾಡಬೇಕಾಗಿರುವುದು ಅಸಾಂಕ್ರಾಮಿಕ ರೋಗಗಳ ವಿರುದ್ಧ. ಒತ್ತಡ, ಜೀವನಶೈಲಿ, ಬದಲಾದ ಬದುಕಿನ ರೀತಿಯಿಂದಲೇ ಅದೆಷ್ಟೋ ಕಾಯಿಲೆಗಳು ಸದ್ದಿಲ್ಲದೆ ನಮ್ಮನ್ನು ಕಾಡುತ್ತಿವೆ. ಈ ಚಿಂತನೆಯಿಂದಲೇ ರೂಪಿತವಾದದ್ದು ‘ಗೃಹ ಆರೋಗ್ಯ’ ಯೋಜನೆ. ‘ನಿಮ್ಮ ಆರೋಗ್ಯ ನಿಮ್ಮ ಮನೆ ಬಾಗಿಲಿಗೆ’ ಎಂಬುದು ಬರೀ ಘೋಷಣೆಯಲ್ಲ. ನಮ್ಮ ಆಶಾ ಕಾರ್ಯಕರ್ತೆಯರು ಮಳೆ, ಗಾಳಿ, ಬಿಸಿಲೆನ್ನದೆ ಹಳ್ಳಿ ಹಳ್ಳಿಗಳ ಪ್ರತಿ ಮನೆಗೆ ತೆರಳಿ, ಕ್ಷೇಮ ವಿಚಾರಿಸುತ್ತಿದ್ದಾರೆ.

‘ಗೃಹ ಆರೋಗ್ಯ’ ಯೋಜನೆಯಡಿ ನಾವು ಬರೀ ಮೇಲ್ಪದರದ ತಪಾಸಣೆ ಮಾಡುತ್ತಿಲ್ಲ. ಬದಲಾಗಿ, ಮನುಷ್ಯನ ಬದುಕನ್ನು ಕಬಳಿಸುವ 14 ಬಗೆಯ ಪ್ರಮುಖ ಅಸಾಂಕ್ರಾಮಿಕ ರೋಗಗಳ ಪತ್ತೆಯನ್ನು ಗುರಿಯಾಗಿಸಿಕೊಂಡಿದ್ದೇವೆ. ಇತ್ತೀಚಿನ ವರದಿಗಳ ಪ್ರಕಾರ, ಈವರೆಗೆ ಸುಮಾರು 60 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಲಾಗಿದ್ದು, 1.33 ಕೋಟಿಗೂ ಅಧಿಕ ಜನರಿಗೆ ಜಾಗೃತಿ ಮೂಡಿಸಲಾಗಿದೆ. ಒಂದು ಕೋಟಿಗೂ ಹೆಚ್ಚು ಜನರ ತಪಾಸಣೆ ನಡೆಸಿದಾಗ ಕಂಡುಬಂದ ಅಂಕಿ–ಅಂಶಗಳು ಆತಂಕಕಾರಿ ಮಾತ್ರವಲ್ಲ, ನಮಗೆ ದಾರಿದೀಪವೂ ಆಗಿವೆ.

ಮಧುಮೇಹದ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿರುವುದು ತಪಾಸಣೆಯಲ್ಲಿ ಕಂಡುಬಂದಿದೆ. ಮನೆಯ ಜವಾಬ್ದಾರಿ, ಕುಟುಂಬದ ಹಿತಾಸಕ್ತಿ ಕಾಯುವಲ್ಲಿ ಮಹಿಳೆ ಯರು ತಮ್ಮ ಆರೋಗ್ಯದ ಕಾಳಜಿಗೆ ಆದ್ಯತೆ ನೀಡುತ್ತಿಲ್ಲ. ಈಗಾಗಲೇ 19.46 ಲಕ್ಷಕ್ಕೂ ಹೆಚ್ಚು ಮಧುಮೇಹಿ ಗಳನ್ನು ಗುರ್ತಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದೇವೆ. ಹಾಗೆಯೇ, 25.12 ಲಕ್ಷಕ್ಕೂ ಹೆಚ್ಚು ಜನರಲ್ಲಿ ಅಧಿಕ ರಕ್ತದೊತ್ತಡ ಪತ್ತೆಯಾಗಿದ್ದು, ಔಷಧೋಪಚಾರದ ವ್ಯವಸ್ಥೆ ಮಾಡಲಾಗಿದೆ.

ಕ್ಯಾನ್ಸರ್ ಅನ್ನು ಆರಂಭಿಕ ಹಂತ ದಲ್ಲೇ ಪತ್ತೆಹಚ್ಚುವ ಯೋಜನೆಗಳು ಸಫಲವಾಗುತ್ತಿವೆ. 76 ಲಕ್ಷಕ್ಕೂ ಹೆಚ್ಚು
ಜನರನ್ನು ಬಾಯಿ ಕ್ಯಾನ್ಸರ್ ತಪಾಸಣೆಗೆ ಒಳಪಡಿಸಿದ್ದರೆ, ಲಕ್ಷಾಂತರ ಮಹಿಳೆಯರನ್ನು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೆ ಒಳಪಡಿಸಲಾಗಿದೆ. ಸುಮಾರು 1,483 ಜನರಲ್ಲಿ ಗಂಭೀರ ರೋಗ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ಆರಂಭಿಸ ಲಾಗಿದೆ. ಈ ಪ್ರತಿಯೊಂದು ಪತ್ತೆಯೂ ನಮಗೆ ಒಂದು ಜೀವ ಉಳಿಸಿದ ಸಾರ್ಥಕತೆ ನೀಡುತ್ತಿದೆ.

51.72 ಲಕ್ಷ ಜನರನ್ನು ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ, 26,000ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಕಂಡುಬಂದಿದೆ. ಇದು ಬರೀ ರೋಗಿಗಳ ಸಂಖ್ಯೆಯಲ್ಲ, ಜನರು ತಮ್ಮ ಮಾನಸಿಕ ತೊಳಲಾಟಗಳ ಬಗ್ಗೆ ಸಂಕೋಚ ಬಿಟ್ಟು ಮಾತನಾಡುತ್ತಿದ್ದಾರೆ ಎನ್ನುವುದರ ಸಂಕೇತ. ಇದರೊಂದಿಗೆ ನರವೈಜ್ಞಾನಿಕ ಅಸ್ವಸ್ಥತೆಗಳು (19,244 ಪ್ರಕರಣಗಳು), ಉಸಿರಾಟದ ತೊಂದರೆ (1.52 ಲಕ್ಷ ಜನ), ಮಧುಮೇಹದಿಂದ ಪಾದದ ಸಮಸ್ಯೆ (13,218 ಪ್ರಕರಣಗಳು), ದೀರ್ಘಕಾಲದ ಕಿಡ್ನಿ ಕಾಯಿಲೆ ಮತ್ತು ರಕ್ತಹೀನತೆಯಂತಹ 14 ಬಗೆಯ ಕಾಯಿಲೆಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುತ್ತಿದ್ದೇವೆ.

‘ಗೃಹ ಆರೋಗ್ಯ’ ಯೋಜನೆಯನ್ನು ನಗರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಗೂ ವಿಸ್ತರಿಸಲು ಮುಂದಾಗಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿ ಸೇರಿದಂತೆ ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲೂ ಜನರ ಮನೆಗಳಿಗೆ ಈ ಯೋಜನೆ ಕೊಂಡೊಯ್ಯುತ್ತಿ ದ್ದೇವೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು, ಶುಶ್ರೂಷಕರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಬಂದಾಗ ಅವರಿಗೆ ಸಹಕಾರ ನೀಡಿ. ನಿಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಮಾತನಾಡಿ, ಸಲಹೆ ಮತ್ತು ಚಿಕಿತ್ಸೆ ಪಡೆಯಿರಿ.

ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸರಿಸಮಾನವಾದ ತಂತ್ರಜ್ಞಾನ ಮತ್ತು ನುರಿತ ವೈದ್ಯರು ಲಭ್ಯ ಇದ್ದಾರೆ. ‘ಗೃಹ ಆರೋಗ್ಯ’ ಯೋಜನೆಯ ಲಾಭ ಪಡೆಯು ವುದು ನಿಮ್ಮ ಹಕ್ಕು. ಸ್ವಲ್ಪ ಲಕ್ಷಣಗಳು ಕಂಡರೂ ಅಂಜದೆ ಆರೋಗ್ಯ ಕಾರ್ಯಕರ್ತರಲ್ಲಿ ಮುಕ್ತವಾಗಿ ಮಾತನಾಡಿ. ಆ ಮೂಲಕ ಆರೋಗ್ಯ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲೇ ಗುರ್ತಿಸಿ, ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ಅಣ್ಣ ನಮ್ಮೊಂದಿಗಿದ್ದಿದ್ದರೆ ಸಾಮಾನ್ಯ ಜನರ ಮನೆಬಾಗಿಲಿಗೆ ಆರೋಗ್ಯಸೇವೆ ತಲಪುತ್ತಿರುವುದನ್ನು ಕಂಡು ಹೆಮ್ಮೆಪಡುತ್ತಿದ್ದರು.

ಲೇಖಕ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.