ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದವು ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. 2022ರಲ್ಲಿ ಉಡುಪಿಯ ಕಾಲೇಜಿನಲ್ಲಿ ಆರಂಭವಾದ ಈ ವಿವಾದವು ತೀವ್ರಗೊಂಡ ನಂತರ, ಅಂದಿನ ಸರ್ಕಾರ ಶಾಲಾಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿತು; ರಾಜ್ಯದಾದ್ಯಂತ ಸರ್ಕಾರಿ ಶಾಲಾಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿತು. ಪ್ರಸ್ತುತ ಆ ಆದೇಶವನ್ನು ಹಿಂದಕ್ಕೆ ಪಡೆದಿರುವ ಈಗಿನ ಸರ್ಕಾರ, ಶಾಲಾಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಪೂರಕವಾಗಿ ಹಿಜಾಬ್ ಧರಿಸಲು ಅವಕಾಶ ನೀಡಿದೆ.

2022ರ ಹಿಜಾಬ್ ಮತ್ತು ಕೇಸರಿ ವಿವಾದಕ್ಕೂ ಮುನ್ನ ಶಾಲಾಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಯಾವುದೇ ಏಕರೂಪದ ಅಧಿಕೃತ ಅನುಮತಿ ಮತ್ತು ನಿಷೇಧ ಇರಲಿಲ್ಲ. ಉಡುಪಿ ಕಾಲೇಜಿನಲ್ಲಿ ಮುಸ್ಲಿಂ ಹುಡುಗಿಯರು ತಾವು ತರಗತಿಗಳಲ್ಲಿಯೂ ಹಿಜಾಬ್ ಧರಿಸುವುದಾಗಿ ಪಟ್ಟು ಹಿಡಿದ ನಂತರ, ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿನಿಯರ ನಡುವೆ ಬಗೆಹರಿಯಬೇಕಿದ್ದ ವಿಷಯ, ಆ ಕಾಲೇಜಿನ ಹುಡುಗರು ಕೇಸರಿ ಶಾಲು ಧರಿಸಿ ಬರುವುದರೊಟ್ಟಿಗೆ ವಿವಾದದ ಸ್ವರೂಪ ಪಡೆದುಕೊಂಡಿತು. ಆ ಪ್ರಕರಣದಲ್ಲಿ ಬಳಕೆಗೊಂಡ ಕೇಸರಿ ಶಾಲು ಆ ಹೊತ್ತಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಬಳಸಿಕೊಂಡು ಸೃಷ್ಟಿಯಾದ ರಾಜಕೀಯ ಪ್ರತಿಕ್ರಿಯೆಯಾಗಿತ್ತು. ಪ್ರಕರಣವನ್ನು ವಿವಾದಾತ್ಮಕಗೊಳಿಸುವ ವೋಟ್ ಬ್ಯಾಂಕ್ ರಾಜಕಾರಣದ ಭಾಗವಾಗಿ ಹಿಜಾಬ್ ನಿಷೇಧಕ್ಕೆ ಕಾರಣವಾಯಿತು. ಆ ಪ್ರಕರಣದ ನಂತರ ಮುಸ್ಲಿಂ ಹೆಣ್ಣುಮಕ್ಕಳು ಬಳಸುವ ಶಿರವಸ್ತ್ರವಾಗಿ ಮಾತ್ರ ಉಳಿಯದೆ, ರಾಜಕೀಯ ಅಸ್ತ್ರವಾಗಿ ಹಿಜಾಬ್ ಬಳಕೆಯಾಗುತ್ತಿದೆ. ಇದರ ಪರಿಣಾಮ, ಮುಸ್ಲಿಂ ಹೆಣ್ಣುಮಕ್ಕಳು ಆನುಭವಿಸಿದ ಮತ್ತು ಅನುಭವಿಸುತ್ತಿರುವ ನೋವು, ಅಪಮಾನ, ಹಿಂಸೆಗಳು ನೇಪಥ್ಯದಲ್ಲಿಯೇ ಉಳಿದಿವೆ.

ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ನಿಷೇಧಗೊಂಡ ನಂತರ ಹಲವು ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣದಿಂದ ದೂರವಾದರು. ಮತ್ತಷ್ಟು ಹೆಣ್ಣುಮಕ್ಕಳು ಕಲಿಯುವ ವಯಸ್ಸಿನಲ್ಲಿ ತಾಳಿ ಬಿಗಿಸಿಕೊಂಡು ಗಂಡನ ಮನೆಯ ಹಾದಿ ಹಿಡಿದರು. ಸರ್ಕಾರಿ ಶಾಲಾಕಾಲೇಜುಗಳಲ್ಲಿ ಹಿಜಾಬ್ಗೆ ಅವಕಾಶವಿಲ್ಲದ ಕಾರಣ, ಕೆಲವರು ಖಾಸಗಿ ವಿದ್ಯಾಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದರಾದರೂ, ಬಡಪೋಷಕರಿಗೆ ಆ ಆಯ್ಕೆ ಇಲ್ಲವಾದುದರಿಂದ ಅವರ ಮಕ್ಕಳು ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹಗಳತ್ತ ನಡೆದರು. ಕೆಲವು ಹೆಣ್ಣುಮಕ್ಕಳು ಓಪನ್ ಸ್ಕೂಲ್ ಮೂಲಕ ವಿದ್ಯಾಭ್ಯಾಸ ಮುಂದುವರಿಸಿದರಾದರೂ, ಮತ್ತೆ ಕೆಲವರು ವಿವಾದದ ತೀವ್ರತೆಯಿಂದ, ಮಾನಸಿಕ ಒತ್ತಡ, ಸಾಮಾಜಿಕ ಟೀಕೆ ಎದುರಿಸಬೇಕಾಯಿತು. ಪ್ರಸ್ತುತ, ಶಾಲಾಕಾಲೇಜುಗಳಲ್ಲಿ ಹಿಜಾಬ್ಗೆ ಅನುಮತಿ ದೊರೆತಿರುವುದು ಮುಸ್ಲಿಂ ಹೆಣ್ಣುಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಈ ಹೆಣ್ಣುಮಕ್ಕಳ ಹಿತ ಕಾಯುವ ಸರ್ಕಾರದ ಉದ್ದೇಶ ನೈಜವಾಗಿದ್ದಲ್ಲಿ ಮೂರು ವರ್ಷಗಳವರೆಗೂ ಕಾಯುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ಉಳಿದೇ ಉಳಿಯುತ್ತದೆ. ಅಂದರೆ, ಹಿಜಾಬ್ಗೆ ಅನುಮತಿ ನೀಡಿರುವುದು ಕೂಡ ರಾಜಕೀಯ ನಿರ್ಧಾರವೇ ಆಗಿರುವಂತಿದೆ.

ಹಿಜಾಬ್ ಪರವಾದ ಸರ್ಕಾರದ ಆದೇಶವನ್ನು ತಮ್ಮ ಹೋರಾಟಕ್ಕೆ ಸಂದ ಗೆಲುವಾಗಿ ಮುಸ್ಲಿಂ ಹೆಣ್ಣುಮಕ್ಕಳು ಸಂಭ್ರಮಿಸುತ್ತಿದ್ದಾರೆ. ಆದರೆ, ಇದು ಆ ಸಮುದಾಯದ ಹೆಣ್ಣುಮಕ್ಕಳ ಆತ್ಯಂತಿಕ ಗೆಲುವೇ ಎಂಬ ಪ್ರಶ್ನೆಯಂತೂ ಇದ್ದೇ ಇದೆ. ಮುಸ್ಲಿಂ ಧರ್ಮವಷ್ಟೇ ಅಲ್ಲ, ಜಗತ್ತಿನ ಬಹುತೇಕ ಧರ್ಮಗಳಲ್ಲಿ ಧಾರ್ಮಿಕ ಕುರುಹುಗಳು ಮಹಿಳೆಯರನ್ನು ನಿಯಂತ್ರಿಸಲು ಗಂಡಸರಿಗೆ ಅನುಕೂಲಕರ ಸಾಧನಗಳಾಗಿವೆ. ಧಾರ್ಮಿಕ ವಸ್ತ್ರಸಂಹಿತೆಗಳು ಹೆಣ್ಣಿನ ದೇಹ ಮತ್ತು ನಡವಳಿಕೆಗಳ ಮೇಲೆ ಹಿಡಿತ ಸಾಧಿಸುವ ಪುರುಷ ಹುನ್ನಾರಗಳಾಗಿವೆ. ಮಹಿಳೆಯರ ಸಭ್ಯತೆ ಮತ್ತು ಮಾನ ಮರ್ಯಾದೆಯನ್ನು ಕಾಪಾಡುವಲ್ಲಿ ಪುರುಷರ ದೃಷ್ಟಿಕೋನವನ್ನು ಸರಿಪಡಿಸುವ ಬದಲು, ಮಹಿಳೆಯರ ಓಡಾಟವನ್ನು ನಿರ್ಬಂಧಿಸುವ ಮೂಲಕ ಪರೋಕ್ಷವಾಗಿ ಹೆಣ್ಣುಮಕ್ಕಳನ್ನು ಇವು ಶೋಷಣೆಗೆ ಗುರಿಮಾಡುತ್ತವೆ. ಮಹಿಳೆಯರು ಪುರುಷನಿಗಿಂತ ಕೀಳು ಅಥವಾ ಅವರು ಪುರುಷನಿಗೆ ಆಕರ್ಷಣೆಯ ವಸ್ತುಗಳು ಎಂಬ ಭಾವನೆಗಳನ್ನು ಬಿತ್ತುವ ಮೂಲಕ ಸಮಾಜದ ಮುಖ್ಯವಾಹಿನಿಯಿಂದ ಹೆಣ್ಣುಮಕ್ಕಳನ್ನು ದೂರವಿಡುವಲ್ಲಿಯೂ ಧಾರ್ಮಿಕ ವಸ್ತ್ರಗಳು ಅಸ್ತ್ರಗಳಾಗುತ್ತವೆ.

ಅನೇಕ ಮಹಿಳೆಯರು ಧಾರ್ಮಿಕ ವಸ್ತ್ರಗಳನ್ನು ತಮ್ಮ ಸ್ವಂತ ಇಚ್ಛೆ, ಧಾರ್ಮಿಕ ನಂಬಿಕೆ ಮತ್ತು ಸಂಸ್ಕೃತಿಯ ಮೇಲಿನ ಗೌರವದಿಂದಲೇ ಧರಿಸುತ್ತಾರೆ. ಇದು ನಮ್ಮ ವೈಯಕ್ತಿಕ ಸ್ವಾತಂತ್ರ್ಯದ ಸಂಕೇತವೇ ಹೊರತು ಶೋಷಣೆಯಲ್ಲ ಎನ್ನುತ್ತಾರೆ. ಈ ಮನೋಭಾವದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ, ಎಲ್ಲ ಧರ್ಮಗಳಲ್ಲೂ ಇದ್ದಾರೆ.

ಪಿತೃಪ್ರಧಾನ ವ್ಯವಸ್ಥೆಯ ದೊಡ್ಡ ಯಶಸ್ಸು, ಶೋಷಣೆಗೆ ಒಳಗಾದವರೂ ಆ ವ್ಯವಸ್ಥೆಯನ್ನು ಸ್ವಯಂಪ್ರೇರಿತರಾಗಿ ಒಪ್ಪಿಕೊಳ್ಳುವಂತೆ ಮಾಡುವುದಾಗಿದೆ. ಮೈತುಂಬಾ ಸೀರೆ, ತಲೆಯ ಮೇಲೆ ಸೆರಗು, ಬುರ್ಖಾ, ಘುಂಗಟ್, ಹಿಜಾಬ್ಗಳ ಹಿಂದಿನ ಹಿತಾಸಕ್ತಿಗಳು ನಿಜಕ್ಕೂ ಯಾರದ್ದು? ಇವೆಲ್ಲವೂ ಹೆಣ್ಣುಮಕ್ಕಳ ಆಯ್ಕೆಯೇ ಎಂಬ ಸೂಕ್ಷ್ಮ ಪ್ರಶ್ನೆಯೊಂದು ಮುಸ್ಲಿಂ ಹೆಣ್ಣುಮಕ್ಕಳಲ್ಲಿ ಮಾತ್ರವಲ್ಲ, ಧಾರ್ಮಿಕ ವಸ್ತ್ರಾಚರಣೆಯಲ್ಲಿ ತೊಡಗುವ ಎಲ್ಲಾ ಸಮುದಾಯದ ಹೆಣ್ಣುಮಕ್ಕಳಲ್ಲಿಯೂ ಮೂಡಬೇಕು. ಇನ್ನಾದರೂ ಮಹಿಳೆಯರು ಧಾರ್ಮಿಕ ವಸ್ತ್ರಗಳಾಚೆಗಿನ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕಿದೆ.

ಮುಸ್ಲಿಂ ಹೆಣ್ಣುಮಕ್ಕಳ ಪರವಾದ ಸರ್ಕಾರದ ಕಾಳಜಿ, ಶಾಲಾ–ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡುವುದಕ್ಕೆ ಮಾತ್ರ ಸೀಮಿತವಾಗಬಾರದು. ಅನಕ್ಷರತೆ, ಬಡತನ, ಧಾರ್ಮಿಕ ಕಟ್ಟುಪಾಡುಗಳಂತಹ ಸವಾಲುಗಳನ್ನು ಎದುರಿಸುತ್ತಿರುವ ಸಮುದಾಯದ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯೂ ಸರ್ಕಾರದ್ದಾಗಿದೆ.

ಲೇಖಕಿ: ಅಧ್ಯಾಪಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.