ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡಾವಳಿಗಳು ಶುರುವಾಗಿವೆ. ಈ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯುಕ್ತರು ನೀಡಿರುವ ಪತ್ರಿಕಾ ಸಂದರ್ಶನದಲ್ಲಿ (ಪ್ರ.ವಾ., ಮೇ 23) ‘2002ರಲ್ಲಿ ನಡೆದ ಎಸ್ಐಆರ್’ ಎಂಬ ಭಾಷಾಪ್ರಯೋಗ ಮಾಡಿದ್ದಾರೆ. ಇದು ಉತ್ತರದಾಯಿತ್ವ ಇಲ್ಲದ ಮಾತು. 1950ರ ಪ್ರಜಾಪ್ರತಿನಿಧಿ ಕಾಯ್ದೆಯ ಪಠ್ಯದಲ್ಲಿ ‘ಎಸ್ಆರ್’ (ಸಾರ ರೂಪದ ಪರಿಷ್ಕರಣೆ) ಹಾಗೂ ‘ಐಆರ್’ (ತೀವ್ರ ಪರಿಷ್ಕರಣೆ) ಪ್ರಕ್ರಿಯೆಗಳು ಇವೆಯೇ ಹೊರತು, ‘ಎಸ್ಐಆರ್’ ಪ್ರಸ್ತಾಪವೇ ಇಲ್ಲ.

2002ರಲ್ಲಿ ನಡೆದದ್ದು ‘ಐಆರ್’ ಮತ್ತೂ ಈಗ ಸಂವಿಧಾನ ಬದ್ಧತೆ ಇಲ್ಲದೆ ಕೈಗೊಂಡಿರುವುದು ಎಸ್ಐಆರ್. ಇದು, ಪ್ರಸ್ತುತ ಚುನಾವಣಾ ಆಯೋಗದ ‘ಉತ್ಪಾದನೆ’ ಎನ್ನುವುದನ್ನು ಸಾರ್ವಜನಿಕರು ಗಮನಿಸಬೇಕು. ಅಂತೆಯೇ, 2002ರಲ್ಲಿ ‘ಐಆರ್’ ನಡೆದ ವೇಳೆ, ಜನರಿಗೆ ತಮ್ಮ ಪೌರತ್ವ ಸಾಬೀತು ಮಾಡಲು ಒತ್ತಾಯಿಸುವ 11 ದಾಖಲೆಗಳ ಪ್ರಮಾಣವನ್ನು ಕೇಳಲಾಗಿತ್ತೇ ಎಂಬ ಪ್ರಶ್ನೆಗೂ ಚುನಾವಣಾ ಆಯೋಗವು ಉತ್ತರಿಸುತ್ತಿಲ್ಲ.

ಸಂದೇಹಾಸ್ಪದ ನಡೆಗಳ ನಡುವೆಯೇ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಿತು. ‘ಎಸ್ಐಆರ್’ನ ಎಲ್ಲ ಹಂತಗಳನ್ನೂ ನಡೆಸಿ, ಮತದಾರರ ಕರಡುಪಟ್ಟಿ ತಯಾರಾದ ನಂತರ ಆಯೋಗವು ‘ತಾರ್ಕಿಕವಾಗಿ ತಾಳೆಯಾಗದಿರುವಿಕೆ’ ಎಂಬ ಹೊಸ ಪ್ರಕಾರವನ್ನು ಆವಿಷ್ಕರಿಸಿ, ಕರಡು ಪಟ್ಟಿಯಲ್ಲಿದ್ದ 1.2 ಕೋಟಿ ಮತದಾರರನ್ನು ಮತ್ತೆ ಕಟಕಟೆಗೆ ತಂದು ನಿಲ್ಲಿಸಿತು; ಆ ನಡೆ ಪಶ್ಚಿಮ ಬಂಗಾಳದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿತು. ಆ ಕ್ರಮದ
ನ್ಯಾಯವಂತಿಕೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಕೋರ್ಟ್ ಮಧ್ಯಪ್ರವೇಶ ಮಾಡಿತಾದರೂ, ಸಮಸ್ಯೆ ಇತ್ಯರ್ಥವಾಗದೆ ವಿಚಾರಣೆ ಮುಂದುವರಿದಿದೆ. ಹೀಗೆ, ಹುಟ್ಟಿನೊಂದಿಗೆ ಸಮಸ್ಯೆಗಳನ್ನು ಹೊಂದಿರುವ ‘ಎಸ್ಐಆರ್’ ಪ್ರಕ್ರಿಯೆ ಈಗ ಕರ್ನಾಟಕದಲ್ಲಿ ಶುರುವಾಗಿದೆ. ಇಲ್ಲಿಯೂ ಈ ‘ತಾರ್ಕಿಕವಾಗಿ ತಾಳೆಯಾಗದಿರುವಿಕೆ’ ಎಂಬ ವಿಲಕ್ಷಣ ನಡಾವಳಿಯನ್ನು ಕೈಗೊಳ್ಳುವುದಾಗಿ ಆಯೋಗವು ತಿಳಿಸಿರುವುದು ಆತಂಕದ ವಿಚಾರ.

2002–2003ರ ಮತದಾರರ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಗಳನ್ನು ತಾಳೆ ಹಾಕಿದಾಗ ಕಂಡುಬರುವ ಈ ಕೆಳಗಿನ ಐದು ಬಗೆಯ ವ್ಯತ್ಯಾಸಗಳನ್ನು ಆಯೋಗವು ‘ತಾರ್ಕಿಕವಾಗಿ ತಾಳೆಯಾಗದಿರುವಿಕೆ’ ಎನ್ನುತ್ತದೆ.

ಆ ವ್ಯತ್ಯಾಸಗಳು ಹೀಗಿವೆ: 1. ಮತದಾರರು ಅಥವಾ ಅವರ ಪಾಲಕರ ನಮೂದಾದ ಹೆಸರಿನಲ್ಲಿ ಇರುವ (ಸಾಸಿವೆ ಕಾಳಿನಷ್ಟಾದರೂ ಸರಿಯೇ) ವ್ಯತ್ಯಾಸ. ಉದಾಹರಣೆಗೆ, ‘ಫಣಿರಾಜ ಕೆ’, ‘ಫಣಿರಾಜ ಕೆ.’/ ‘ಕೆ. ಫಣಿರಾಜ’ ಇತ್ಯಾದಿ ಇದ್ದಲ್ಲಿ ಸಮಸ್ಯೆ ಖಚಿತ; 2. ಮತದಾರರು ಹಾಗೂ ಅವರ ಪಾಲಕರ ವಯಸ್ಸಿನ ಅಂತರ 15 ವರ್ಷಗಳಿಗಿಂತ ಕಡಿಮೆ ಅಥವಾ 50 ವರ್ಷಗಳಿಗಿಂತ ಹೆಚ್ಚಾಗಿರುವುದು; 3. ಮತದಾರರು ಹಾಗೂ ಅವರ ಅಜ್ಜ/ಅಜ್ಜಿಯರ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ ಇರುವುದು; 4. ಮತದಾರರ ತಂದೆ, ತಾಯಿ, ಗಂಡನ ಹೆಸರುಗಳು ಸಂಬಂಧಿತ ದಾಖಲೆಗಳಲ್ಲಿ ಕರಾರುವಕ್ಕಾಗಿ ಒಂದೇ ರೀತಿಯಲ್ಲಿ ಇರದೇ ಇರುವುದು (1ರಲ್ಲಿರುವ ಉದಾಹರಣೆ); 5. ಮತದಾರರ ತಾಯಿ–ತಂದೆಯರಿಗೆ 6ಕ್ಕಿಂತ ಹೆಚ್ಚು ಸಂತಾನ ಇರುವುದು.

ಮೇಲಿನ ಐದು ಬಗೆಯ ವ್ಯತ್ಯಾಸಗಳು ಉಂಟಾಗುವುದಕ್ಕೆ ಯಾರು ಕಾರಣ? ಮತದಾರರೇ ಅಥವಾ ಸಾಮಾಜಿಕ–ಅಧಿಕಾರಶಾಹಿ ವ್ಯವಸ್ಥೆಯೇ? ಎನ್ನುವುದು ಸಮಾಜ ಶಾಸ್ತ್ರಜ್ಞರು ಸಂಶೋಧಿಸಬೇಕಾದ ವಿಷಯವೇ ಸರಿ. ಅದು ಹೇಗಿದ್ದರೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೂ ಇವುಗಳಿಗೂ ಏನು ಸಂಬಂಧ ಎಂದು ಕೇಳಿದರೆ ಚುನಾವಣಾ ಆಯುಕ್ತರು ‘ಅರ್ಹ ಮತದಾರರಾಗಲಿಕ್ಕೆ ಅವರು ಭಾರತದ ಪ್ರಜೆ ಆಗಿರಬೇಕಲ್ಲವೇ?’ ಎಂದು ಮರು ಪ್ರಶ್ನಿಸುತ್ತಾರೆ. ಚುನಾವಣಾ ಆಯೋಗಕ್ಕೆ ಅಧಿಕಾರ ಇರುವುದು, 1950ರ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ವ್ಯಕ್ತಿಯೊಬ್ಬ ಅರ್ಹ ಮತದಾರ ಹೌದೋ ಅಲ್ಲವೋ ಎನ್ನುವುದನ್ನು ಖಾತರಿಪಡಿಸಿಕೊಳ್ಳುವುದೇ ಹೊರತು, ಅರ್ಹ ಮತದಾರ ಭಾರತದ ಪ್ರಜೆ ಹೌದೋ ಅಲ್ಲವೋ ಎಂದು ನಿರ್ಧರಿಸುವುದಲ್ಲ.

1955ರ ‘ಭಾರತದ ಪೌರತ್ವ ಕಾಯ್ದೆ’ಯ ಪ್ರಕಾರ ಆ ಅಧಿಕಾರ ಇರುವುದು ಸಂಸತ್ತಿಗೆ, ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಸಹಮತದಲ್ಲಿ ಮಾಡುವ ಕಾಯ್ದೆಯ ತಿದ್ದುಪಡಿಗೆ.

2019–20ರಲ್ಲಿ, ದೇಶದ ಸಾಮಾಜಿಕ ವಾಸ್ತವಗಳನ್ನು ಕಡೆಗಣಿಸಿ, ಅಧಿಕಾರಶಾಹಿ ಸರ್ವಾಧಿಕಾರ ಧೋರಣೆಯಿಂದ ಬಹು ಜನರಿಗೆ ಇರದ ‘ಕಾಗದ’ಗಳ ಆಧಾರದಲ್ಲಿ ‘ಪೌರತ್ವ ನೋಂದಣಿ’ ಮಾಡುವ ಉಪಕ್ರಮಕ್ಕೆ ಒಕ್ಕೂಟ ಸರ್ಕಾರ ಪ್ರಯತ್ನಿಸಿತ್ತು. ಆದರೆ, ಪ್ರಬಲ ಜನವಿರೋಧ ಎದುರಾಗಿದ್ದಕ್ಕಾಗಿ ಆ ಕ್ರಮವನ್ನು ನಿಲ್ಲಿಸಬೇಕಾಯ್ತು.

ಇದೀಗ ಚುನಾವಣಾ ಆಯೋಗದ ಮೂಲಕ 11 ಕಾಗದಗಳು ಹಾಗೂ ‘ತಾರ್ಕಿಕವಾಗಿ ತಾಳೆಯಾಗದಿರುವಿಕೆ’ ಎನ್ನುವ ಸಾಮಾಜಿಕವಾಗಿ ಅವಾಸ್ತವಿಕವಾದ ನಡೆಗಳ ಮೂಲಕ ‘ಪೌರತ್ವ’ ಸಾಬೀತುಮಾಡಲು ಹೊರಟಿದ್ದಾರೆ; ಕೆಲವೇ ತಿಂಗಳುಗಳ ಕಿರು ಅವಧಿಯಲ್ಲಿ ‘ನಾಗರಿಕತ್ವಹರಣ’ ಶಸ್ತ್ರಕ್ರಿಯೆಗೆ ಮುಂದಾಗಿದ್ದಾರೆ. ಆ ಅಪಾಯಕಾರಿ ಪ್ರಕ್ರಿಯೆ ಕರ್ನಾಟಕದಲ್ಲೂ ಶುರುವಾಗಿದೆ. ಕರ್ನಾಟಕ ಸರ್ಕಾರ ಹಾಗೂ ಪ್ರಜೆಗಳು ಎಚ್ಚರದಿಂದ ತಡೆಯೊಡ್ಡದಿದ್ದರೆ, ಮತ್ತೊಂದು ಸಂವಿಧಾನ ವಿರೋಧಿ ಅಧಿಕಾರ ಚಲಾವಣೆ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.