1980–90ರ ಆಸುಪಾಸಿನ ಸಮಯ. ಹೋಟೆಲ್ನಲ್ಲಿ ಚಹಾ ಅಥವಾ ಇಡ್ಲಿ ದರ ಕೊಂಚ ಏರಿಕೆಯಾದರೆ ಸಾಕು, ಮಾರನೇ ದಿನವೇ ತಹಶೀಲ್ದಾರ್ ಕಚೇರಿ ಎದುರು ಜೋರು ಪ್ರತಿಭಟನೆ ನಡೆಯುತ್ತಿತ್ತು. ಹೋಟೆಲ್ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದರೆ ಅಥವಾ ಕಾರ್ಖಾನೆಯಲ್ಲಿ ಕಾರ್ಮಿಕರ ಸಂಬಳ ಸಕಾಲಕ್ಕೆ ಪಾವತಿ ಆಗದಿದ್ದರೆ ನೌಕರರು ಬೀದಿಗಿಳಿಯುತ್ತಿ ದ್ದರು. ನ್ಯಾಯಯುತ ಬೇಡಿಕೆ ಈಡೇರುವವರೆಗೆ ಧರಣಿ ಕೊನೆಗೊಳ್ಳುತ್ತಿರಲಿಲ್ಲ.

‘ಒಂದು ಮನೆಯನ್ನಲ್ಲ, ತುಂಡು ಭೂಮಿಯನ್ನಲ್ಲ, ಇಡೀ ಭೂಮಂಡಲವನ್ನೇ ಕೇಳುವೆವು’ ಎಂದು ಕಾರ್ಮಿಕರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದರು. ಬೀಡಿ ಕಟ್ಟುವವರು, ಕಟ್ಟಡ ನಿರ್ಮಿಸುವವರು, ಕೃಷಿ ಕೂಲಿ ಕಾರ್ಮಿಕರು, ಹೀಗೆ ಬೇರೆ ಬೇರೆ ವಲಯದ ಶ್ರಮಿಕರು ಕೆಂಬಾವುಟಗಳನ್ನು ಹಿಡಿದು ರಸ್ತೆ ಮಧ್ಯೆಯೇ ಕೂರುತ್ತಿದ್ದರು. ಕಾರ್ಮಿಕರ ಒಗ್ಗಟ್ಟಿನ ಎದುರು ಪೊಲೀಸರು ಲಾಠಿ, ಅಶ್ರುವಾಯು ಅಸಹಾ ಯಕ ಆಗುತ್ತಿದ್ದವು.

ಹೋರಾಟ ಮಾಡುತ್ತಿದ್ದವರಲ್ಲಿ ಬಹುತೇಕರು ಅನಕ್ಷರ ಸ್ಥರು ಮತ್ತು ಆರ್ಥಿಕವಾಗಿ ದುರ್ಬಲರು. ಧರಣಿ ನಡೆಸಿದರೆ ಅಥವಾ ಆಡಳಿತದ ಅವ್ಯವಸ್ಥೆ ಪ್ರಶ್ನಿಸಿದರೆ, ನ್ಯಾಯ ಸಿಗುವ ಗಾಢನಂಬಿಕೆ ಅವರಲ್ಲಿತ್ತು. ಸರ್ಕಾರ ಯಾವುದೇ ಪಕ್ಷದ್ದೇ ಇರಲಿ, ‘ಮುಖ್ಯಮಂತ್ರಿ ಕಾರ್ಮಿಕರ ಅಹ ವಾಲು ಆಲಿಸಬೇಕು, ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವೇ ಕುರ್ಚಿ ಖಾಲಿ ಮಾಡಬೇಕು’ ಎಂಬ ಎಚ್ಚರಿಕೆಯ ಸಂದೇಶ ಮೊಳಗುತ್ತಿತ್ತು.

ಪ್ರತಿ ವರ್ಷ ಮೇ 1ರಂದು ನಡೆಯುವ ಕಾರ್ಮಿಕರ ಬೃಹತ್ ಸಮಾವೇಶದಲ್ಲಿ ಆಯಾ ಸಂಘಟನೆ ಗಳ ಮುಖಂಡರು, ಹೋರಾಟದ ಮುಂದಿನ ರೂಪುರೇಷೆ ಬಗ್ಗೆ ಚರ್ಚಿಸುತ್ತಿದ್ದರು. ಇಂತಿಂಥ ದಿನ ಗಳಂದು ಮುಷ್ಕರ ನಡೆಸುವ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗುತ್ತಿತ್ತು. ಬಹುತೇಕ ಕಾರ್ಮಿಕರು ಕೆಂಪು ಸಮವಸ್ತ್ರದಲ್ಲಿ ಪಾಲ್ಗೊಳ್ಳುತ್ತಿದ್ದರು. ಬಹುಮಹಡಿ ಕಟ್ಟಡಗಳ ಮೇಲಿನಿಂದ ನೋಡಿದರೆ, ಕೆಂಪು ನದಿಯೊಂದು ಹರಿಯುತ್ತಿದೆ ಎಂಬಂತೆ ಭಾಸವಾಗುತ್ತಿತ್ತು.

ಈಗ ಚಹಾ ದರವಷ್ಟೇ ಅಲ್ಲ, ಅಗತ್ಯ ವಸ್ತುಗಳ ದರ ಪದೇ ಪದೇ ಏರಿಕೆ ಆಗುತ್ತಲೇ ಇದೆ. ಹೋಟೆಲ್, ಕಾರ್ಖಾನೆ, ಗಾರ್ಮೆಂಟ್ಸ್ ಸೇರಿ ಉದ್ಯೋಗದ ಬಹುತೇಕ ಸ್ಥಳಗಳಲ್ಲಿ ಕಾರ್ಮಿಕರು ನಿತ್ಯ ಬೇರೆ ಬೇರೆ ಸ್ವರೂಪದಲ್ಲಿ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಆದರೆ, ಧ್ವನಿ ಎತ್ತಲು ಆಗುತ್ತಿಲ್ಲ. ಧ್ವನಿ ಎತ್ತುವವರ ರಕ್ಷಣೆಗೆ ಅಥವಾ ಬೆಂಬಲಕ್ಕೆ ದೃಢವಾಗಿ ನಿಲ್ಲುವಷ್ಟು ಶಕ್ತಿ ಕಾರ್ಮಿಕ ಸಂಘಟನೆಗಳಲ್ಲಿ ಉಳಿದಿಲ್ಲ.

ಮೂವತ್ತು ನಲವತ್ತು ವರ್ಷಗಳ ಹಿಂದೆ ಇದ್ದಷ್ಟೇ ಚೈತನ್ಯವನ್ನು ಸಂಘಟನೆಗಳು ಈಗಲೂ ಕಾಯ್ದುಕೊಂಡಿದ್ದರೆ, ಕಾರ್ಮಿಕರಲ್ಲಿ ಅತಂತ್ರ ಭಾವ ಕಾಡು ತ್ತಿರಲಿಲ್ಲ. ಕಾರ್ಮಿಕ ಕಾಯ್ದೆ ಯನ್ವಯ ದೊರೆಯಬೇಕಿದ್ದ ಸವಲತ್ತುಗಳು ಸಿಗುತ್ತಿದ್ದವು. ಇದಾವುದೂ ಈಗ ಸಾಧ್ಯವಾಗುತ್ತಿಲ್ಲ.

ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಯ ಪರಿವರ್ತನೆ ಯಿಂದ ಹೋರಾಟದ ಸ್ವರೂಪ ಈಗ ಬದಲಾಗಿದೆ. ಸಂಘಟನೆಗಳೂ ಪ್ರಬಲವಾಗಿ ಉಳಿದಿಲ್ಲ. ‘ಕಾರ್ಮಿಕ ರಿಗೆ ಕನಿಷ್ಠ ಕೂಲಿ ನೀಡಬೇಕು’ ಎಂಬ ನಿಯಮ ಕಾಗದದಲ್ಲಿ ಉಳಿದಿದೆಯೇ ಹೊರತು, ಉದ್ಯೋಗದ ಬಹುತೇಕ ಸ್ಥಳಗಳಲ್ಲಿ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಸಂಘಟಿತ ಕಾರ್ಮಿಕರು ಒಂದು ರೀತಿಯ ಸವಾಲುಗಳನ್ನು ಎದುರಿಸಿದರೆ, ಅಸಂಘಟಿತ ವಲಯದಲ್ಲಿ ಇರುವ ನೌಕರರು ಸಾಮೂಹಿಕವಾಗಿ ಒಂದೆಡೆ ಸೇರಿ ತಮ್ಮ ಬದುಕಿನ ಅಗತ್ಯ ಗಳನ್ನು ಹಕ್ಕಿನ ರೂಪದಲ್ಲಿ ಪಡೆಯಲು ಆಗದ ಸ್ಥಿತಿ ಇದೆ. ಉದ್ಯೋಗದ ಸ್ವರೂಪಗಳು ಬದಲಾಗಿದ್ದು, ಎಲ್ಲವನ್ನೂ ಒಂದೇ ಚೌಕಟ್ಟಿನಲ್ಲಿ ತರುವುದು ಕಷ್ಟದ ಕೆಲಸವಾಗಿದೆ.

‘ಸಂಕಷ್ಟದಲ್ಲಿ ಇರುವ ಕಾರ್ಮಿಕರ ನೆರವಿಗೆಂದೇ ಕಾರ್ಮಿಕ ಇಲಾಖೆ ಇದೆ. ಸೌಲಭ್ಯಗಳನ್ನು ಪಡೆದುಕೊಳ್ಳಿ’ ಎಂದು ಸರ್ಕಾರ ಹೇಳುತ್ತದೆ. ಆದರೆ, ಆ ಸೌಲಭ್ಯಗಳು ಸುಲಭ ವಾಗಿ ದಕ್ಕುವುದಿಲ್ಲ. ಬದುಕಿನ ಜಂಜಾಟ, ದೈನಂದಿನ ದುಡಿಮೆಯ ಮಧ್ಯೆಯೇ ಬಿಡುವು ಮಾಡಿಕೊಂಡು ಇಲಾಖೆಯ ಕಚೇರಿಗೆ ತೆರಳಿದರೂ, ಅಲ್ಲಿನ ವ್ಯವಸ್ಥೆ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮತ್ತು ಕೇಳಲಾಗುವ ದಾಖಲೆ ಪತ್ರಗಳನ್ನು ಒದಗಿಸುವಲ್ಲಿ ಕಾರ್ಮಿಕರು ಹೈರಾಣಾಗುತ್ತಾರೆ. ಅಗತ್ಯ ದಾಖಲೆಗಳನ್ನು ನೀಡಿದರೂ ಸೌಲಭ್ಯಗಳ ನಿರೀಕ್ಷೆಯಲ್ಲಿ ಇಡೀ ಬದುಕು ಕಳೆದುಹೋಗುತ್ತದೆ ಎನ್ನುವ ಸ್ಥಿತಿಯಿದೆ.

ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಹಲವು ಉದ್ಯಮಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಯಾವಾಗ ಕೆಲಸ ಕಳೆದುಕೊಳ್ಳುವ ಸನ್ನಿವೇಶ ಬರುವುದೋ ಎಂಬ ಆತಂಕದಲ್ಲೇ ಇರುತ್ತಾರೆ. ಕೋವಿಡ್ ನಂತರದ ದಿನಗಳಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟು ಮಾಡಿರುವ ಪರಿಣಾಮ ಅಷ್ಟಿಷ್ಟಲ್ಲ. ಇಮೇಲ್ ಮೂಲಕವೇ ಸಾವಿರಾರು ನೌಕರರನ್ನು ಕೆಲಸದಿಂದ ತೆಗೆದುಹಾಕುವ ಸಂದರ್ಭ ಇಂದಿನದು. ಉದ್ಯೋಗದ ಭದ್ರತೆ ನೀರ ಮೇಲಿನ ಗುಳ್ಳೆಯಂತಾಗಿದೆ. ಸಂಘಟನೆಯ ಬಗ್ಗೆ ಯೋಚಿಸಲಿಕ್ಕೆ ಯಾರಿಗೆ ಸಮಯವಿದೆ.

ಇತ್ತೀಚಿನ ವರ್ಷಗಳಲ್ಲಿ ‘ಮೇ ದಿನ’ದ ಆಚರಣೆಯು ಸಾಂಕೇತಿಕ ಹಾಗೂ ಯಾಂತ್ರಿಕ ಸ್ವರೂಪ ಪಡೆದುಕೊಂಡಿದೆ. ಈ ಆಚರಣೆ ಕಾರ್ಮಿಕರ ಗಟ್ಟಿ ಧ್ವನಿಯಾಗಿ ಹೊರಹೊಮ್ಮ ಬೇಕಿದೆ. ಕನಿಷ್ಠಕೂಲಿ, ಉದ್ಯೋಗ ಭದ್ರತೆ, ಉದ್ಯೋಗ ಸ್ಥಳದಲ್ಲಿ ಸುರಕ್ಷತೆ, ಕಾರ್ಮಿಕರ ಪರ ಕಾಯ್ದೆಗಳ ಪರಿಣಾಮ ಕಾರಿ ಜಾರಿಗೆ ಸಂಘಟನೆಗಳು ಒತ್ತು ನೀಡಬೇಕಿದೆ. ಸಂಘಟನೆಯಲ್ಲಿ ಪ್ರಾಮಾಣಿಕತೆ ಉಳಿಸಿಕೊಳ್ಳಬೇಕಾಗಿದೆ. ಕಾರ್ಮಿಕ ಶಕ್ತಿಯ ಕೆಂಪುಹೊಳೆ ಜೀವನದಿಯಾಗಿ ರೂಪುಗೊಳ್ಳಬೇಕಿದೆ. ಅದರಿಂದ ಕಾರ್ಮಿಕರಿಗೂ ಒಳಿತು, ರಾಜಕಾರಣದಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೂ ಪೂರಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.