ಜೊನಾಥನ್, ತೂಯಿ ಮಾಲಿಲ ಮತ್ತು ಅದ್ವೈತ! ಇವು ವಿಶ್ವ ಪ್ರಸಿದ್ಧರ ಹೆಸರುಗಳಲ್ಲ. ನಕ್ಷತ್ರ, ನೀಹಾರಿಕೆಗಳೂ ಅಲ್ಲ. ಸಮಾಜಸೇವೆ ಮಾಡುತ್ತ ಎಲೆಮರೆಯ ಕಾಯಿಯಂತೆ ಬದುಕಿದ ಮಹನೀಯರ ಹೆಸರುಗಳೂ ಅಲ್ಲ. ಒಲಿಂಪಿಕ್ ಕ್ರೀಡಾಕೂಟದ ತಾರೆಗಳೂ ಅಲ್ಲ. ಯುದ್ಧ ಬಳಕೆಯ ಕ್ಷಿಪಣಿ–ರಾಕೆಟ್ಗಳೂ ಅಲ್ಲ! ಕಾದಂಬರಿಯೊಂದರ ಪಾತ್ರಗಳೂ ಅಲ್ಲ. ಇವು, ಜಗತ್ತಿನ ಇತಿಹಾಸದಲ್ಲೇ ಅತಿಹೆಚ್ಚು ಕಾಲ ಬದುಕಿದ ಆಮೆಗಳ ಹೆಸರು!

‘ಜೊನಾಥನ್’ ಹೆಸರಿನ ಆಮೆಗೆ ಈಗ ಬರೋಬ್ಬರಿ 194 ವರ್ಷ. ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಮಧ್ಯದಲ್ಲಿರುವ ಸೇಂಟ್ ಹೆಲೆನಾ ದ್ವೀಪದ ಗವರ್ನರ್ ಅವರ ತೋಟದಲ್ಲಿ ರಾಜಾತಿಥ್ಯ ಪಡೆಯುತ್ತಿರುವ ಜಗತ್ತಿನ ಅತ್ಯಂತ ವಯಸ್ಸಾದ ಜೀವಂತಪ್ರಾಣಿ ಎಂಬ ಗಿನ್ನೆಸ್ ದಾಖಲೆಯ ಹಿರಿಮೆ ಈ ಆಮೆಯದು. ಸೇಂಟ್ ಹೆಲೆನಾ ದ್ವೀಪದ ನಾಣ್ಯದ ಮೇಲೆ ಇದರ ಚಿತ್ರವಿದೆ. ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವ್ ಸಾಕಿದ್ದ, ಕೋಲ್ಕತ್ತ ಮೃಗಾಲಯಕ್ಕೆ ಬಂದು ಭಾರತದ ಇತಿಹಾಸಕ್ಕೆ ಸಾಕ್ಷಿಯಾದ ‘ಅದ್ವೈತ’ ಎಂಬ ಆಮೆ ಬರೋಬ್ಬರಿ 256 ವರ್ಷಗಳವರೆಗೆ (1750–2006) ಜೀವಿಸಿ ಇತಿಹಾಸ ನಿರ್ಮಿಸಿತ್ತು. ಟೊಂಗಾ ರಾಜಮನೆತನದಲ್ಲಿ ರಾಯಲ್ ಗೌರವ ಪಡೆದಿದ್ದ ‘ತೂಯಿ ಮಾಲಿಲ’ ಆಮೆ 188 ವರ್ಷ ಬದುಕಿತ್ತು.

ವೇಗವಾಗಿ ಓಡುವ ಜಗತ್ತಿನಲ್ಲಿ, ‘ಸ್ವಲ್ಪ ನಿಲ್ಲಿ, ನಿಧಾನವೇ ಪ್ರಧಾನ’ ಎಂದು ನಮಗೆ ನೆನಪಿಸುವ ಜೀವಿಗಳಿದ್ದರೆ ಅವು ಆಮೆಗಳು. ಪರಿಸರ ವಿಜ್ಞಾನದ ದೃಷ್ಟಿಯಿಂದ ನೋಡಿದರೆ, ಆಮೆಗಳು ಸಾಗರ ಮತ್ತು ಭೂಮಿಯ ಪರಿಸರ ವ್ಯವಸ್ಥೆಯ ಅತ್ಯಂತ ಪ್ರಮುಖ ಕೊಂಡಿಗಳು. ಗರಿಷ್ಠ ನಲವತ್ತು ವರ್ಷ ಬದುಕುವ ಕಡಲಾಮೆಗಳು, ಕಡಲ ಅಡಿಯ ಹುಲ್ಲನ್ನು ಮೇಯ್ದು ಸಮುದ್ರದ ಆರೋಗ್ಯವನ್ನು ಕಾಯ್ದುಕೊಂಡರೆ, 150ರಿಂದ 300 ವರ್ಷ ಬದುಕುವ ಭೂಮಿಯ ಮೇಲಿನ ಆಮೆಗಳು ಬೀಜ ಪ್ರಸರಣಕ್ಕೆ ನೆರವಾಗುತ್ತವೆ. ಡೈನೋಸಾರ್ಗಳ ಕಾಲದಿಂದಲೂ ಬದುಕುಳಿದು ಬಂದಿರುವ ಈ ಜೀವಿಗಳು ಜಗತ್ತಿನ ಅತ್ಯಂತ ಹಳೆಯ ಪ್ರಾಣಿಗಳು; ಜೀವವಿಕಾಸದ ಹಾದಿಯ ಸಾಕ್ಷಿಕಲ್ಲುಗಳು.
.ಮರಳಲ್ಲಿದೆ ಕಡಲ ಆಮೆಗಳ ಭವಿಷ್ಯ: ಜನಿಸೋದು ಗಂಡೋ? ಹೆಣ್ಣೋ? ನಿರ್ಣಯ ತಾಪಮಾನದ್ದು!.ವಿಡಿಯೊ ಸ್ಟೋರಿ: ನೀರಿನಾಳದ ಕೌತುಕ ಈ ಕಡಲಾಮೆ...
‘ಆಮೆ ಮತ್ತು ಮೊಲ’ದ ಕಥೆ ತಲೆಮಾರುಗಳಿಂದ ತಲೆಮಾರುಗಳಿಗೆ ಸಾಗುತ್ತಾ ಬಂದಿದೆ. ಈ ಕಥೆ ಇಂದಿನ ಕಾಲದ ಜೀವನಶೈಲಿಯ ಕುರಿತು ನಮ್ಮನ್ನು ಮರುಚಿಂತನೆಗೆ ಹಚ್ಚುವಂತಿದೆ. ಆಮೆ ನಿಧಾನವಾಗಿ ನಡೆದು ಗೆದ್ದಿತು, ಮೊಲ ಅಹಂಕಾರದಿಂದ ಸೋತಿತು ಎಂಬುದು ಹಳೆಯ ನೀತಿ. ಇಂದಿನ ಕಾರ್ಪೊರೇಟ್ ಜಗತ್ತಿಗೆ ಇದನ್ನು ಹೋಲಿಸಿದರೆ, ಆಮೆ ನಮಗೆ ‘ಬರ್ನ್ಔಟ್’ ಆಗದಂತೆ ಬದುಕುವುದು ಹೇಗೆ ಎಂದು ಕಲಿಸುತ್ತದೆ. ಸಮಸ್ಯೆಗಳು ಬಂದಾಗ ಧೃತಿಗೆಡದೆ ಮನಸ್ಸಿನ ಕವಚದೊಳಗೆ ಅಡಗಿ ಆತ್ಮಾವಲೋಕನ ಮಾಡಿಕೊಳ್ಳಿ; ಪರಿಸ್ಥಿತಿ ಸರಿಯಾದಾಗ ಮತ್ತೆ ನಿಧಾನವಾಗಿ, ಆದರೆ ದೃಢವಾಗಿ ಮುನ್ನಡೆಯಿರಿ ಎಂಬ ನೀತಿಯನ್ನು ಕಥೆ ಸಾರುತ್ತದೆ.

ಮೊಲ ಇಂದಿನ ಯುವಪೀಳಿಗೆಯ ಪ್ರತಿನಿಧಿ. ಆರಂಭದಲ್ಲಿ ಸಿಕ್ಕಾಪಟ್ಟೆ ವೇಗ, ದಿನವಿಡೀ ಕೆಲಸ. ಆಮೇಲೆ ದಣಿವು, ಕೊನೆಗೆ ಡಿಪ್ರೆಷನ್! ನಿಧಾನವೇ ಪ್ರಧಾನ ಎಂಬುದು ಕೇವಲ ಗಾದೆಮಾತಲ್ಲ, ಅದು ಆಮೆಗಳ ಬದುಕಿನ ಯಶಸ್ಸಿನ ಗುಟ್ಟು. ಬೆನ್ನಿನ ಮೇಲೆ ಸುಂದರವಾದ, ಗಟ್ಟಿಯಾದ ಕವಚವನ್ನು ಆಮೆಗಳು ಜನ್ಮತಃ ಹೊಂದಿರುತ್ತವೆ. ಯಾರಾದರೂ ತೊಂದರೆ ಕೊಟ್ಟರೆ ಅಥವಾ ಜಗತ್ತಿನ ಜಂಜಾಟ ಬೇಡ ಎನಿಸಿದರೆ, ತಲೆಯನ್ನು ಒಳಗಡೆ ಎಳೆದುಕೊಂಡು ‘ಡು ನಾಟ್ ಡಿಸ್ಟರ್ಬ್’ ಮೋಡ್ಗೆ ಹೋಗಿಬಿಡುತ್ತವೆ. ಇಂತಹ ಅದ್ಭುತವಾದ ಸೆಲ್ಫ್ ಐಸೊಲೇಶನ್ ಅನುಕೂಲ ಮನುಷ್ಯನಿಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!

ನಿಯಂತ್ರಣಕ್ಕೆ ಸಿಗದ ಪ್ಲಾಸ್ಟಿಕ್ ಮಾಲಿನ್ಯ ಸಾಗರ ಜೀವಿಗಳ ಪ್ರಾಣಕ್ಕೆ ಕಂಟಕವಾಗುತ್ತಿದೆ. ನಾವು ಬಳಸಿ ಸಮುದ್ರಕ್ಕೆ ಎಸೆಯುವ ಪ್ಲಾಸ್ಟಿಕ್ ಕವರ್ಗಳನ್ನು ಜೆಲ್ಲಿ ಫಿಶ್ ಎಂದು ಭಾವಿಸಿ ತಿನ್ನುವ ಆಮೆಗಳು ಸಾವನ್ನಪ್ಪುತ್ತಿವೆ. ಮುದ್ದು ಆಮೆಗಳು ಅದೃಷ್ಟ ತರುತ್ತವೆ ಎಂಬ ಮೂಢನಂಬಿಕೆಯಿಂದ ಮತ್ತು ಮಾಂಸಕ್ಕಾಗಿ ಆಮೆಗಳ ಕಳ್ಳಸಾಗಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕಡಲ ಮಾಲಿನ್ಯ ಹೆಚ್ಚುತ್ತಿರುವುದರಿಂದಾಗಿ ಹಾಗೂ ಕಡಲತೀರಗಳ ನಗರೀಕರಣ ತೀವ್ರವಾಗುತ್ತಿರುವು
ದರಿಂದಾಗಿ ಆಮೆಗಳ ಮೊಟ್ಟೆಯಿಡುವ ಜಾಗಗಳೇ ಮಾಯವಾಗುತ್ತಿವೆ.

ಆಮೆಗಳ ಸುರಕ್ಷತೆಗೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಆಮೆಯ ಫೋಟೊ ಹಾಕಿ ‘ಹ್ಯಾಪಿ ಟರ್ಟಲ್ ಡೇ’ ಎಂದರೆ ಸಾಲದು. ನಮ್ಮಿಂದಾಗುವ ಸಣ್ಣ ಸಹಾಯಗಳಾದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಬಳಸಿದ್ದನ್ನು ಬೇಕಾಬಿಟ್ಟಿ ಎಸೆಯದೆ ರೀಸೈಕಲ್ ಘಟಕಗಳಿಗೆ ತಲಪಿಸುವುದು, ಪ್ರವಾಸಕ್ಕೆ ಹೋದಾಗ ಕಡಲ ತೀರಗಳನ್ನು ಸ್ವಚ್ಛವಾಗಿಡುವುದು, ಆಮೆಗಳನ್ನು ಮನೆಯಲ್ಲಿ ಅಕ್ರಮವಾಗಿ ಸಾಕದೆ, ಅವುಗಳ ಮುಕ್ತ ಬದುಕಿಗೆ ಅವಕಾಶ ನೀಡುವುದು ಮತ್ತು ಶಾಲಾಕಾಲೇಜು ಪಠ್ಯಗಳಲ್ಲಿ ಆಮೆಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಕ್ರಮಗಳ ಪಾಠ ಅಳವಡಿಸುವುದು ಮತ್ತು ಈ ಮಾಹಿತಿಯನ್ನು ಸಂವಹನದ ವೇದಿಕೆಗಳಲ್ಲೂ ಹಂಚಿಕೊಳ್ಳಬೇಕು.

ಜಗತ್ತಿನ ಅತ್ಯಂತ ಹಳೆಯ ಮತ್ತು ವಿಶಿಷ್ಟ ಜೀವಿಗಳಾದ ಆಮೆಗಳನ್ನು ಸಂರಕ್ಷಿಸುವುದು ಹಾಗೂ ಅವುಗಳ ಆವಾಸಸ್ಥಾನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ 23ನ್ನು ‘ವಿಶ್ವ ಆಮೆದಿನ’ವಾಗಿ ಆಚರಿಸಲಾಗುತ್ತದೆ. ಈ ಕಾಳಜಿ ಒಂದು ದಿನಕ್ಕೆ ಸೀಮಿತವಾಗದೆ, ಅನುದಿನದ ಅಭ್ಯಾಸ ಆಗಬೇಕಿದೆ. ಪುರಾಣ–ಸಂಸ್ಕೃತಿಯ ಬಗ್ಗೆ ಭಾವುಕತೆಯನ್ನು ಹೊಂದಿರುವ ನಾವು ಕೂರ್ಮಾವತಾರದ ಪ್ರತಿನಿಧಿ ಬಗ್ಗೆ ಕಾಳಜಿ ವಹಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.