ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ನಲ್ಲಿ ಚಿನ್ನಗೆದ್ದು ದಾಖಲೆ ಬರೆದ 15ರ ಪೋರ ಅನೀಶ್‌ ಬಾನಾವಾಲ

Last Updated 13 ಏಪ್ರಿಲ್ 2018, 14:22 IST
ಅಕ್ಷರ ಗಾತ್ರ

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ: ಚಿನ್ನ ಪದಕ ಗಳಿಕೆ ಸಾಧನೆಯಲ್ಲಿ ಮುನ್ನಡೆಯುತ್ತಿರುವ ಭಾರತೀಯ ಕೀಡಾಪಟುಗಳು ಶುಕ್ರವಾರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಕುಸ್ತಿಯಲ್ಲಿ ಹಾಗೂ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಪುರುಷರ 25 ಮೀಟರ್ಸ್‌ ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಅನೀಶ್‌ ಬಾನಾವಾಲ ಚಿನ್ನಗೆದ್ದಿದ್ದಾರೆ.

15 ವರ್ಷ ವಯಸ್ಸಿನ ಅನೀಶ್‌ ಬಾನಾವಾಲ ಈ ಸಾಧನೆ ತೋರಿದ್ದು, ಕಿರಿಯ ವಯಸ್ಸಿನಲ್ಲಿಯೇ ಚಿನ್ನ ಗೆದ್ದಿರುವುದು ಇದೊಂದು ಐತಿಹಾಸಿಕ ದಾಖಲೆಯಾಗಿದೆ.

ಅನೀಶ್‌ ಪಾಲಿಗೆ ಇದು ಮೊದಲನೇ ಕಾಮನ್‌ವೆಲ್ತ್‌ ಕ್ರೀಡಾಕೂಟ ಹಾಗೂ ಈ ಕೂಡದ ಮೊದಲ ಪದಕ.

ಇಂದು ನಡೆದ ಫೈನಲ್‌ನಲ್ಲಿ ಅನೀಶ್‌ 30 ಅಂಕ ಕಲೆಹಾಕಿ ತಮ್ಮ ಹೆಸರಿನಲ್ಲಿ ಕೂಟ ದಾಖಲೆ ನಿರ್ಮಿಸಿಕೊಂಡರು.

ಅನೀಶ್‌ ಬಾನಾವಾಲ ಚಿನ್ನಗೆದ್ದ ಸಂಭ್ರಮದಲ್ಲಿ ಚಿತ್ರ: ರಾಯಿಟರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT