1938ರಲ್ಲಿ ಬಿ.ಎಫ್. ಸ್ಕಿನ್ನರ್ ಎನ್ನುವ ಮನಃಶಾಸ್ತ್ರಜ್ಞ ಒಂದು ಪ್ರಯೋಗ ಮಾಡಿದ. ಹ್ಯಾಂಡಲ್ ಒಂದನ್ನು ಒತ್ತಿದರೆ ಆಹಾರ ಹೊರಬರುವಂತಹ ಪೆಟ್ಟಿಗೆಯೊಂದನ್ನು ಸಿದ್ಧಪಡಿಸಿ, ಅದರಲ್ಲಿ ಇಲಿಯೊಂದನ್ನು ಕೂಡಿಹಾಕಿದ. ಮೊದಮೊದಲು ಪ್ರತಿಸಾರಿ ಹ್ಯಾಂಡಲ್ ಅನ್ನು ಒತ್ತಿದಾಗ ಇಲಿಗೆ ಆಹಾರ ಸಿಗುತ್ತಿತ್ತು. ಹಾಗಾಗಿ, ಅದು ಆಹಾರದ ಅಗತ್ಯವಿದ್ದಾಗ ಮಾತ್ರ ಹ್ಯಾಂಡಲ್ ಒತ್ತುತ್ತಿತ್ತು. ಸ್ಕಿನ್ನರ್ ಇದನ್ನು ಬದಲಾಯಿಸಿ ಕೆಲವೊಮ್ಮೆ ಎರಡು, ನಾಲ್ಕು, ಎಂಟು, ಹೀಗೆ ಎಷ್ಟು ಸಾರಿ ಒತ್ತಿದರೆ ಆಹಾರ ಸಿಗುತ್ತದೆ ಎನ್ನುವುದು ಗೊತ್ತಾಗದಂತಹ ಅನಿಶ್ಚಿತ ಸಾಧ್ಯತೆಯನ್ನು ರೂಪಿಸಿದ. ಇದರಿಂದ ಇಲಿ ನಿರಂತರವಾಗಿ ಹ್ಯಾಂಡಲ್ ಒತ್ತುತ್ತಲೇ ಇರುತ್ತಿತ್ತು. ಈ ಪ್ರವೃತ್ತಿಯನ್ನು ಸ್ಕಿನ್ನರ್ ‘Variable Ratio Reinforcing Schedule’ ಎಂದು ಕರೆದ. ಇದೇಕೆ ಹೀಗಾಗುತ್ತದೆ ಎಂದು ಅವನಿಗೆ ಆಗ ಅರ್ಥ ಆಗದಿದ್ದರೂ, ಅವನ ಪ್ರಯೋಗ ಮುಂದೆ ‘ವರ್ತನಾ ಮನಃಶಾಸ್ತ್ರ’ದ ಅಧ್ಯಯನಕ್ಕೆ ಬಹಳ ಸಹಾಯ ಮಾಡಿತು.

ಸ್ಕಿನ್ನರ್ನ ಮಾದರಿಯನ್ನು ಬಳಸಿ ಇವತ್ತು ಸಾಮಾಜಿಕ ಮಾಧ್ಯಮ ಕಂಪನಿಗಳು ನಮ್ಮ ಮಿದುಳನ್ನು ಪೆಟ್ಟಿಗೆಯಲ್ಲಿ ಬಂಧಿಸಲಾಗಿರುವ ಇಲಿಗಳಂತೆ ಬದಲಾಯಿಸಿವೆ. ನಮ್ಮ ಕೈಯಲ್ಲಿರುವ ಮೊಬೈಲ್ಗಳು ತಾಂತ್ರಿಕವಾಗಿ ಮುಂದುವರಿದ, ಚಂದವಾಗಿ ರೂಪುಗೊಂಡ, ಎಲ್ಲೆಂದರಲ್ಲಿ ಬಳಸಲು ಸಾಧ್ಯವಿರುವ ಬಹೂಪಯೋಗಿ ಇಲಿಪೆಟ್ಟಿಗೆಗಳಂತಿವೆ.

ನೀವು ಯಾವುದಾದರೂ ಸಾಮಾಜಿಕ ಮಾಧ್ಯಮದಲ್ಲಿ ಒಂದುಪೋಸ್ಟ್ ಅಥವಾ ವಿಡಿಯೊ ಹಾಕು
ತ್ತೀರಿ ಎಂದುಕೊಳ್ಳಿ. ಕೆಲವೊಮ್ಮೆ ಅದಕ್ಕೆ ಲೈಕ್ಗಳು ಹೆಚ್ಚಾಗಿ ಬರಬಹುದು. ಮತ್ತೆ ಹಲವಾರು ಬಾರಿ ನಿರೀಕ್ಷೆಯಷ್ಟು ಲೈಕ್ಗಳು ಸಿಗದೆ ನಿಮಗೆ ನಿರಾಸೆ ಆಗಿರಬಹುದು. ಆದರೆ, ಸಾಮಾಜಿಕ ಮಾಧ್ಯಮ ಬಳಸುವ ಎಲ್ಲರಿಗೂ ಆಗುವ ಒಂದು ಸಾಮಾನ್ಯ ಅನುಭವವೆಂದರೆ, ಯಾವುದಾದರೂ ಒಂದು ಪೋಸ್ಟ್ಗೆ ನಿರೀಕ್ಷೆಗೆ ಮೀರಿ ಸಾವಿರಾರು ಅಥವಾ ಲಕ್ಷಗಟ್ಟಲೆ ಲೈಕ್ಸ್–ಕಾಮೆಂಟ್ಸ್ ಬರುವಂತಹದ್ದು. ವಿಡಿಯೊ ಆಗಿದ್ದರೆ ಅತಿಹೆಚ್ಚು ಜನರು ನೋಡಿರುತ್ತಾರೆ. ಹೀಗೆ ಒಮ್ಮೆ ಆದ ಅನುಭವ ಅದರ ಪುನರಾವರ್ತನೆಯ ನಿರೀಕ್ಷೆಯಲ್ಲಿ ನಿರಂತರವಾಗಿ ಹೊಸ ಹೊಸ ಪೋಸ್ಟ್ಗಳನ್ನು ಅಥವಾ ವಿಡಿಯೊಗಳನ್ನು ಹಾಕುತ್ತಲೇ ಇರಲು ಪ್ರಚೋದನೆಯಾಗುತ್ತದೆ. ಕೆಲವು ಪೋಸ್ಟ್ಗಳಿಗೆ ಇದ್ದಕ್ಕಿದ್ದಂತೆ ಸಿಗುವ ಅತಿಹೆಚ್ಚಿನ ಲೈಕ್ಗಳು ನಿಜವಾದ ಪ್ರತಿಕ್ರಿಯೆಗಳೇ ಅಥವಾ ಸಾಮಾಜಿಕ ಮಾಧ್ಯಮಗಳ ವಿನ್ಯಾಸಕಾರರು ಅದನ್ನು ಬಳಸುತ್ತಲೇ ಇರುವಂತೆ ಎಲ್ಲರನ್ನೂ ಪ್ರಚೋದಿಸಲು ಸೃಷ್ಟಿಸಿರುವ ಆಲ್ಗಾರಿದಮ್ಗಳೆ? ಇದು ಹೊರಗಿನವರಿಗೆ ತಿಳಿಯಲಾರದು. ಆದರೆ, ಆಲ್ಗಾರಿದಮ್ಗಳ ಮೂಲಕ ಲೈಕ್ಸ್–ಷೇರ್ ಮತ್ತು ಕಾಮೆಂಟ್ಸ್ಗಳ ಅಂಕಿಅಂಶಗಳನ್ನು ತಿರುಚಬಹುದು ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.

ಸ್ಕಿನ್ನರ್ ಗುರ್ತಿಸಿದ್ದ ಪ್ರವೃತ್ತಿಯನ್ನು ಸಾಮಾಜಿಕ ಮಾಧ್ಯಮಗಳು ಬಹಳ ನಾಜೂಕಾಗಿ ನಮ್ಮೊ
ಳಗೆ ಅವುಗಳ ವ್ಯಸನವನ್ನು ಹುಟ್ಟುಹಾಕಲು ಬಳಸುತ್ತಿವೆ ಎನ್ನುವುದರ ಕುರಿತು ಸಾಕಷ್ಟು ತಜ್ಞರು ಎಚ್ಚರಿಸು
ತ್ತಿದ್ದಾರೆ. ನಮ್ಮೆಲ್ಲರ ವ್ಯಸನವೇ ಅವರ ಖಜಾನೆಗಳನ್ನು ಭರ್ತಿ ಮಾಡುತ್ತಿದೆ ಎನ್ನುವುದಕ್ಕೆ ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ಗಳ ಒಡೆತನ ಹೊಂದಿರುವ ಮೆಟಾ ಕಂಪನಿಯ ನಿರಂತರ ಏರುತ್ತಿರುವ ಲಾಭವೇ ದಾಖಲೆ ಒದಗಿಸುತ್ತದೆ.

ತನ್ನ ಪ್ರಯೋಗದ ಫಲಿತಾಂಶಗಳನ್ನು ಬಳಸಿ ಮಾನವರಲ್ಲಿ ವ್ಯಸನವನ್ನು ಹುಟ್ಟಿಸಬಹುದು ಎನ್ನುವುದು ಸ್ಕಿನ್ನರ್ಗೆ ಅರ್ಥವಾಗದಿದ್ದರೂ, ಇವತ್ತಿನ ನರವಿಜ್ಞಾನದ ಸಂಶೋಧನೆಗಳು ಅದಕ್ಕೆ ಉತ್ತರ ಕಂಡುಕೊಂಡಿವೆ. ಡೊಪೊಮೈನ್ ಎನ್ನುವ ನರರಾಸಾಯನಿಕ ನಮಗೆ ಬದುಕನ್ನು ಆಸಕ್ತಿದಾಯಕ ಆಗಿಸಲು ಅತ್ಯಗತ್ಯ. ಯಾವುದಾದರೂ ಅನುಭವದಿಂದ ಮಿದುಳಿನಲ್ಲಿ ಡೊಪೊಮೈನ್ ಉತ್ಪಾದನೆಯಾದಾಗ ನಮಗೆ ಸಂತೋಷ, ಸಾರ್ಥಕತೆಯ ಭಾವ ಮೂಡುತ್ತದೆ ಎಂದು ಈವರೆಗೆ ನಂಬಲಾಗಿತ್ತು. ಆದರೆ, ಇದು ಅರ್ಧಸತ್ಯ ಮಾತ್ರ ಎಂದು ನಂತರದ ಸಂಶೋಧನೆಗಳಿಂದ ತಿಳಿದುಬಂದಿದೆ. ಕ್ರಿಯೆಗೆತಕ್ಕ ಪ್ರತಿಫಲ ದೊರೆತಾಗ ಡೊಪೊಮೈನ್ ಉತ್ಪಾದನೆ ಆಗುವುದಲ್ಲದೆ, ಪ್ರತಿಫಲದ ನಿರೀಕ್ಷೆ ಕೂಡ ಈ ನರರಾಸಾಯನಿಕಗಳ ಮಟ್ಟವನ್ನು ಮಿದುಳಿನಲ್ಲಿ ಹೆಚ್ಚಿಸುತ್ತದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಜೂಜಾಡುವವರಲ್ಲಿ ಈ ಪ್ರವೃತ್ತಿ ನಿಚ್ಚಳವಾಗಿ ಕಂಡುಬರುತ್ತದೆ. ಎಷ್ಟುಬಾರಿ ಸೋತರೂ ಮುಂದಿನ ಸಾರಿ ಗೆಲ್ಲುವ ನಿರೀಕ್ಷೆ ಅವರನ್ನು ಜೂಜಿನೆಡೆ ಮತ್ತೆ ಮತ್ತೆ ಸೆಳೆಯುತ್ತದೆ. ಅಂದರೆ, ಸುಖದ ನಿರೀಕ್ಷೆಯು ಕೂಡ ಮಿದುಳಿನಲ್ಲಿ ಡೊಪೊಮೈನ್ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ. ಹೀಗೆ ಜೂಜನ್ನು ಆಡುತ್ತಿರುವವರೆಗೆ ಡೊಪೊಮೈನ್ನ ಕೊರತೆ ಕಾಡುವುದಿಲ್ಲ. ಡೊಪೊಮೈನ್ ಸೃಜಿಸಬಲ್ಲ ಕ್ರಿಯೆಗಳ ಕಡೆಗಿನ ನಿರಂತರವಾದ ಸೆಳೆತವೇ ವ್ಯಸನದ ಮೂಲವಾಗಿರುತ್ತದೆ.

ಸಾಮಾಜಿಕ ಮಾಧ್ಯಮಗಳ ಬಳಕೆಯೂ ಖಚಿತವಾಗಿ ಹೀಗೆಯೇ ಕೆಲಸ ಮಾಡುತ್ತದೆ. ಈ ಪೋಸ್ಟ್ಗೆ ಅಲ್ಲದಿದ್ದರೆ ಮುಂದಿನದಕ್ಕೆ ಅಥವಾ ಅದಕ್ಕೂ ಮುಂದಿನದಕ್ಕೆ ಲೈಕ್ಗಳು,ಕಾಮೆಂಟ್ಗಳು ಹೆಚ್ಚಬಹುದು, ಅಥವಾ ಅದನ್ನು ಹೆಚ್ಚುಹೆಚ್ಚು ಜನರು ಹಂಚಿಕೊಳ್ಳಬಹುದು ಎನ್ನುವ ನಿರೀಕ್ಷೆಯಿಂದಾಗಿ ಮತ್ತೆ ಮತ್ತೆ ಅದರಲ್ಲಿ ತೊಡಗಿಕೊಳ್ಳುತ್ತೇವೆ. ಜೊತೆಗೆ, ಅಲ್ಗಾರಿದಮ್ಗಳ ಮೂಲಕ ಆಗಾಗ ಸೂಕ್ತ ಸಂದೇಶಗಳನ್ನು ಕಳಿಸಿ ನಮ್ಮನ್ನು ಅದರತ್ತ ಸೆಳೆಯಲಾಗುತ್ತದೆ. ಹೀಗೆ ನಮ್ಮ ಸಮಯ, ಕ್ರಿಯಾಶೀಲತೆಯನ್ನು ಕಳೆದುಕೊಳ್ಳು
ತ್ತಲೇ ಕಾರ್ಪೊರೇಟ್ ಖಜಾನೆಗಳನ್ನು ತುಂಬಿಸುತ್ತಿರುತ್ತೇವೆ.

ಸ್ಕಿನ್ನರ್ನ ಇಲಿಪೆಟ್ಟಿಗೆಯಿಂದ ನಾವೆಲ್ಲರೂ ಬಿಡಿಸಿಕೊಂಡು ಹೊರಬರುವುದು ಹೇಗೆ ಎನ್ನುವುದು ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಹೊರಬರಬೇಕು ಎನ್ನುವ ಯೋಚನೆಯಿಂದಲೂ ಅನೇಕರು ದೂರ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.