ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup | ಗೆದ್ದ ತಂಡಕ್ಕೆ ₹33 ಕೋಟಿ ಬಹುಮಾನ

Published 25 ಸೆಪ್ಟೆಂಬರ್ 2023, 8:15 IST
Last Updated 25 ಸೆಪ್ಟೆಂಬರ್ 2023, 8:51 IST
ಅಕ್ಷರ ಗಾತ್ರ

ನವದೆಹಲಿ: ಐಸಿಸಿ ಪುರಷರ ಏಕದಿನ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ಮೊತ್ತ ಘೋಷಣೆಯಾಗಿದ್ದು, ಗೆದ್ದ ತಂಡಕ್ಕೆ ಸುಮಾರು ₹33.3 ಕೋಟಿ ನೀಡಲಾಗುತ್ತದೆ.

ಈ ಬಾರಿಯ ಏಕದಿನ ವಿಶ್ವಕಪ್‌ ಪಂದ್ಯಕ್ಕೆ ಬಹುಮಾನದ ಮೊತ್ತವಾಗಿ ಸುಮಾರು ₹83 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಗೆದ್ದ ತಂಡ ₹33 ಕೋಟಿ ಪಡೆದರೆ, ರನ್ನರ್‌ಅಪ್‌ ತಂಡ ₹16.6 ಕೋಟಿ ಪಡೆಯಲಿದೆ.

ಸೆಮಿಫೈನಲ್‌ನಲ್ಲಿ ಸೋಲುವ ಎರಡು ತಂಡಗಳಿಗೆ ತಲಾ ಅಂದಾಜು ₹6 ಕೋಟಿ ಸಿಗಲಿದೆ. ಗುಂಪು ಹಂತದಲ್ಲಿ ಪ್ರತಿ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಅಂದಾಜು ₹32 ಲಕ್ಷ ಸಿಗಲಿದ್ದು, ಗುಂಪು ಹಂತದಿಂದ ಹೊರ ಹೋದ ತಂಡಗಳಿಗೆ ತಲಾ ಅಂದಾಜು ₹83 ಲಕ್ಷ ಸಿಗಲಿದೆ ಎಂದು ಐಸಿಸಿ ತಿಳಿಸಿದೆ.

2025ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಪುರುಷರ ಮತ್ತು ಮಹಿಳೆಯರ ಪಂದ್ಯಗಳಿಗೆ ಸಮಾನ ಮೊತ್ತವನ್ನು ಘೋಷಿಸಿರುವುದಾಗಿ ತಿಳಿಸಿದೆ.

ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಹತೆ ಪಡೆದಿರುವ ಹತ್ತು ತಂಡಗಳು ಪಂದ್ಯದಲ್ಲಿ ಸೆಣಸಲಿವೆ. ಅಕ್ಟೋಬರ್ 5ರಿಂದ ಪಂದ್ಯಗಳು ಪ್ರಾರಂಭವಾಗಲಿದ್ದು, ನವೆಂಬರ್‌ 19ರಂದು ಫೈನಲ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT