ಶ್ರೀರಾಮನವಮಿ ದಿನದ ಹಿನ್ನೆಲೆಯಲ್ಲಿ ಮಾರ್ಚ್ 27ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಪಶುಪಾಲನಾ ಇಲಾಖೆ ಆದೇಶ ಹೊರಡಿಸಿದೆ. ಈ ನಿಷೇಧದಿಂದ ಸರ್ಕಾರ ಯಾರನ್ನು ಮೆಚ್ಚಿಸಲು ಹೊರಟಿದೆಯೋ ತಿಳಿಯದು.

ರಾಮನವಮಿ ದಿನ ಮಾತ್ರವಲ್ಲ, ಮತ್ತೆ ಕೆಲವು ಆಚರಣೆಗಳ ಸಂದರ್ಭದಲ್ಲೂ ಮಾಂಸ ಮಾರಾಟವನ್ನು ನಿಷೇಧಿಸ ಲಾಗುತ್ತದೆ. ಇದು, ಈ ಮಣ್ಣಿನ ಬಹುಸಂಖ್ಯಾತರ ಆಹಾರದ ಹಕ್ಕಿನ ಮೇಲೆ ನಡೆಯುವ ದಬ್ಬಾಳಿಕೆಯಲ್ಲದೆ ಬೇರೇನೂ ಅಲ್ಲ.

ಆಹಾರಕ್ಕೆ ಸಂಬಂಧಿಸಿದಂತೆ ಪೂರ್ವಗ್ರಹಗಳನ್ನು ಅಳಿಸಬೇಕಾದುದು ಪ್ರಜಾಸತ್ತಾತ್ಮಕ ಸರ್ಕಾರದ ಕರ್ತವ್ಯ. ದುರದೃಷ್ಟವಶಾತ್, ಸರ್ಕಾರ ತಾನು ನಿರ್ವಹಿಸಬೇಕಾದ ಕರ್ತವ್ಯಕ್ಕೆವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ; ಆಹಾರ ಪದ್ಧತಿಯಲ್ಲಿ ತಾರತಮ್ಯ ಎಸಗುತ್ತಿದೆ. ಶಾಲೆಗಳಲ್ಲಿ ಮೊಟ್ಟೆ ಕೊಡುವುದನ್ನು ಪ್ರತಿಭಟಿಸುವ ಹಾಗೂ ದಲಿತರು ಅಡುಗೆ ಮಾಡುತ್ತಾರೆ ಎನ್ನುವ ಕಾರಣದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುವ ಪೋಷಕರು ಇದ್ದಾರೆ. ಇಂಥ ಮನಃಸ್ಥಿತಿ ಯನ್ನು, ಮಾಂಸ ಮಾರಾಟ ನಿಷೇಧದ ಆದೇಶವು ಪರೋಕ್ಷವಾಗಿ ಬೆಂಬಲಿಸುವಂತಿದೆ ಹಾಗೂ ಆಹಾರಪದ್ಧತಿಯ ಬಗೆಗಿನ ಮೌಢ್ಯಕ್ಕೆ ಉತ್ತೇಜನ ಕೊಡುವಂತಿದೆ.

ಮಾಂಸಾಹಾರ ಸೇವಿಸಿ ಮಂದಿರ ಪ್ರವೇಶಿಸಿದ ವಿಷಯಕ್ಕೆ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪತ್ರಕರ್ತರು ಹಿಂದೊಮ್ಮೆ ಪ್ರಶ್ನಿಸಿದ್ದರು. ಆಗ ಮುಖ್ಯಮಂತ್ರಿ, ತಮ್ಮ ಆಹಾರದ ಸ್ವಾತಂತ್ರ್ಯವನ್ನು ಬಲವಾಗಿ ಪ್ರತಿಪಾದಿಸಿದ್ದರು. ನಿಮ್ಮಿಷ್ಟದ ಆಹಾರ ಸೇವಿಸುವ ಹಕ್ಕು ನಿಮಗೂ ಇದೆ ಎಂದು ಸಂವಿಧಾನದ ಪಾಠ ಮಾಡಿದ್ದರು. ‘ಯುಗಾದಿ, ಶಿವರಾತ್ರಿಯ ದಿನವೂ ಮಾಂಸ ತಿನ್ನುವೆ’ ಎಂದು ಸದನದಲ್ಲಿಯೇ ಹೇಳಿದ್ದಾರೆ. ಆದರೆ, ಅವರ ಸರ್ಕಾರದಲ್ಲಿಯೇ ಮಾಂಸ ಮಾರಾಟಕ್ಕೆ ನಿಯಮಿತವಾಗಿ ನಿಷೇಧ ಹೇರಲಾಗುತ್ತಿದೆ. ಜಯಂತಿ, ಹಬ್ಬಗಳ ನೆಪದಲ್ಲಿ ಮಾಂಸಾ ಹಾರದ ಮೇಲೆ ನಿರ್ಬಂಧ ವಿಧಿಸುವುದು ಆಹಾರದ ಹಕ್ಕು ಗಳನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ.

ಸರ್ಕಾರದ ಮಾಂಸ ಮಾರಾಟ ನಿಷೇಧದ ಆದೇಶಗಳು ಅನೈತಿಕ ಪೊಲೀಸ್ಗಿರಿ ಮಾಡುವವರ ಕೈಗೆ ಬಡಿಗೆಯನ್ನು ಕೊಟ್ಟಂತೆ ಆಗುವ ಸಾಧ್ಯತೆಯೂ ಇದೆ. ಕಸಾಯಿಖಾನೆಯಲ್ಲಿ ಕೆಲಸ ಮಾಡುವ ಕೂಲಿಗಳ ಸಂಪಾದನೆಗೂ ಕುತ್ತು ತರುತ್ತದೆ.

ಶಿವನಿಗೆ ತನ್ನ ಕಣ್ಣನ್ನೇ ಅರ್ಪಿಸಿ ಭಕ್ತಿಯ ಪರಾಕಾಷ್ಠೆ ಮೆರೆದ ಕಣ್ಣಪ್ಪ ಪುರಾಣ ಪ್ರಸಿದ್ಧ. ಪರಮಾತ್ಮನಿಗೆ ದೃಷ್ಟಿ ದಾನಮಾಡಿದ ಪರಮಭಕ್ತ ಬೇಡರ ಕಣ್ಣಪ್ಪ ಪುರಾಣ, ಕಾವ್ಯ, ಸಿನಿಮಾಗಳ ಮೂಲಕವೂ ಚಿರಪರಿಚಿತ. ಶಿವನಿಗೆ ಮಾಂಸ ವನ್ನು ನೈವೇದ್ಯ ಮಾಡಿ ಮೆಚ್ಚಿಸಿದ ಕಣ್ಣಪ್ಪನ ಪರಂಪರೆಯ ಸಂಸ್ಕೃತಿ ನಮ್ಮದು. ಬಹುತ್ವ ಭಾರತದಲ್ಲಿ ಆಹಾರ ವೈವಿಧ್ಯವೂ ಸಂಸ್ಕೃತಿಯ ಪ್ರಧಾನ ಭಾಗ. ಅದನ್ನು ನಿಷೇಧಿಸುವುದು ಸಂಸ್ಕೃತಿಗೆ ವಿರುದ್ಧವಾದ ನಡೆ. ಅಲ್ಲದೆ, ಮಾಂಸಾಹಾರದ ಬಗ್ಗೆ ಗೌರವ ಹೊಂದಿದ್ದ ಶ್ರೀರಾಮನ ಆರಾಧನೆಯ ದಿನ ಮಾಂಸಾಹಾರ ನಿಷೇಧಿಸುವುದು ರಾಮನಿಗೆ ತೋರುವ ಗೌರವವೂ ಅಲ್ಲ.

ಅಯೋಧ್ಯೆಯ ಯುವರಾಜ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ರೊಂದಿಗಿನ ವನವಾಸದಲ್ಲಿ ಗಂಗಾನದಿಯನ್ನು ದಾಟಿ ಚಿತ್ರಕೂಟಕ್ಕೆ ಹೋಗುವ ಸಂದರ್ಭದಲ್ಲಿ, ಸೀತಾಮಾತೆ ತಮ್ಮನ್ನು ಕಾಪಾಡುವಂತೆ ಗಂಗೆಯನ್ನು ಬೇಡಿಕೊಳ್ಳುತ್ತಾಳೆ. ಮರಳಿ ಬರುವಾಗ ಆರಾಧನೀಯ ಗಂಗಾಮಾತೆಗೆ ಮಾಂಸಾಹಾರಗಳ ಭಕ್ಷ್ಯದ ನೈವೇದ್ಯ ಅರ್ಪಿಸುವು ದಾಗಿ ಹರಕೆ ಹೊತ್ತುಕೊಳ್ಳುತ್ತಾಳೆ. ಆ ಸಂದರ್ಭವನ್ನು ಕುವೆಂಪು ಅವರು ತಮ್ಮ ‘ಶ್ರೀರಾಮಾಯಣ ದರ್ಶನಂ’ನಲ್ಲಿ, ‘ಕ್ಷೇಮದಿಂ ಮರಳ್ವಂತೆ ಪ್ರೇಮದಿಂ ಪರಕೆಗೈ/ ಕಾಯಿ ಜೀವೇಶನಂ ಕರುಣೆಯಿಂದೋವಿ, ಓ/ ತಾಯೆ ಪಿಂತಿರುಗಿ ಬಂದಾಮೇಲೆ ನಿನಗೀವೆನೌ/ ಮಾಂಸಭೂತೌದನ ಸುರಾಘಟ ಸಹಸ್ರದಾ/ ನಿರ್ದುಷ್ಟ ಪುಷ್ಟ ಸಂತುಷ್ಟ ನೈವೇದ್ಯಮಂ/ ನಿನಗಿಷ್ಟಮಂ ದೇವಿ ಕೈ ಮುಗಿದೆನಿದೋ ಗಂಗೆ!’ ಎಂದು ಕಟ್ಟಿಕೊಟ್ಟಿದ್ದಾರೆ. ರಾಮ ಹಾಗೂ ಸೀತೆಯರಿಗೆ ಇಲ್ಲದ ಮಡಿವಂತಿಕೆ ‘ಜಿಬಿಎ’ಗೇಕೆ?

ಮಾಂಸಾಹಾರದ ಬಗ್ಗೆ ಮಡಿವಂತಿಕೆಯ ಭಾವನೆ ಹುಟ್ಟಿಸುವ ಅಥವಾ ಮಾಂಸಾಹಾರ ಕೀಳು ಎನ್ನುವ ಭಾವನೆಯನ್ನು ಸರ್ಕಾರ ಹುಟ್ಟಿಸಬಾರದು. ಬಹುಸಂಖ್ಯಾತ ಮಾಂಸಾಹಾರ ಪ್ರೇಮಿಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು, ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆಯೂ ಹೌದು. ಮಾಂಸ ಮಾರಾಟ ನಿಷೇಧದ ಆದೇಶ, ನಾಗರಿಕರ ಆಚಾರ ವಿಚಾರ ಹಾಗೂ ಆಹಾರ ಪದ್ಧತಿಯ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನದಂತೆ ಕಾಣಿಸುತ್ತದೆ.

ಮಾಂಸಾಹಾರದಲ್ಲಿಯೂ ಮೇಲು–ಕೀಳಿನ ಮೌಢ್ಯವಿದೆ. ಅದನ್ನು ಶಿವಶರಣೆ ಕಾಳವ್ವೆ ‘ಕುರಿ ಕೋಳಿ ಕಿರಿಮೀನುತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು/ ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿ ಯೆಂಬರು/ ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?’ ಎಂದು ಪ್ರಶ್ನಿಸುವ ಮೂಲಕ ದಬ್ಬಾಳಿಕೆಯ ವಿರುದ್ಧ ದನಿ ಎತ್ತಿದ್ದರು. ಅಂತಹ ವೈಚಾರಿಕ ವಿವೇಕವನ್ನು ಮೂಡಿಸಬೇಕಾದುದು ಸರ್ಕಾರದ ಕರ್ತವ್ಯವೇ ಹೊರತು, ಮೌಢ್ಯವನ್ನು ಪೊರೆಯುವುದಲ್ಲ.

ಹಬ್ಬ ಹರಿದಿನ, ಇತ್ಯಾದಿ ಸಂದರ್ಭದಲ್ಲಿ ಮಾಂಸಾಹಾರ ವನ್ನು ನಿಷೇಧಿಸುವ ಅರ್ಥಹೀನ ಕ್ರಮವನ್ನು ಸರ್ಕಾರ ಇನ್ನಾದರೂ ಕೈಬಿಡಲಿ. ಆಹಾರವು ಖಾಸಗಿ ಸಂಗತಿ ಎನ್ನುವ ಸಾಮಾನ್ಯ ಜ್ಞಾನಎಲ್ಲರದೂ ಆಗಲಿ. ಜನರ ಖಾಸಗಿ ಜೀವನದ ಆಗುಹೋಗು ಗಳ ಬಗ್ಗೆ, ಊಟದ ತಟ್ಟೆಯಲ್ಲಿ ಯಾವಾಗ ಏನಿರಬೇಕು ಎನ್ನುವುದರ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಸಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.