ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ದುರಂತಗಳಿಂದ ಕಲಿಯದ ಪಾಠ

Last Updated 24 ಜನವರಿ 2021, 19:30 IST
ಅಕ್ಷರ ಗಾತ್ರ

ಪುಣೆಯ ಸೀರಂ ಔಷಧ ತಯಾರಿಕಾ ಕಾರ್ಖಾನೆ ಹಾಗೂ ಶಿವಮೊಗ್ಗದ ಗಣಿ ಸಂಬಂಧಿತ ದುರಂತಗಳಲ್ಲಿ ಇತ್ತೀಚೆಗೆ ಕಾರ್ಮಿಕರ ಸಾವು, ಆಸ್ತಿ-ಪಾಸ್ತಿ ನಷ್ಟದಂಥ ವಿದ್ಯಮಾನಗಳು ಜನರಲ್ಲಿ ಜೀವಭಯ ಸೃಷ್ಟಿಸುತ್ತವೆ. 1984ರ ಡಿಸೆಂಬರ್‌ನಲ್ಲಿ ಭೋಪಾಲ್‌ನಲ್ಲಿ ಭೀಕರ ವಿಷಾನಿಲ ದುರಂತ ಸಂಭವಿಸಿ ದಶಕಗಳೇ ಕಳೆದರೂ ನಮಗಿನ್ನೂ ಅದು ಸುರಕ್ಷತೆಯ ಪಾಠದ ಭಾಗವಾಗಿಯೇ ಇಲ್ಲ. ದೇಶದ ಕಾರ್ಖಾನೆಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಸರಣಿ ಅಪಘಾತಗಳೇ ಇದಕ್ಕೆ ನಿದರ್ಶನ.

ಮನೆ, ಕಚೇರಿ, ಕಾರ್ಖಾನೆ, ರಸ್ತೆ... ಹೀಗೆ ನಾವು ಎಲ್ಲೇ ಇರಲಿ ‘ಸಂಭವನೀಯ ಅಪಘಾತಗಳ ವಿಶ್ಲೇಷಣೆ’ ನಮ್ಮ ಆದ್ಯತೆಯ ಸಂಸ್ಕೃತಿಯಾದರೆ ಮಾತ್ರ ಇಂತಹ ಅವಘಡಗಳನ್ನು ತಡೆಗಟ್ಟಬಹುದು. ಸುರಕ್ಷತೆಯ ವೈಫಲ್ಯದಿಂದ ಅವಘಡಗಳಾದಾಗ ಸಂತಾಪ, ಪರಿಹಾರ, ಆರೋಪ, ಪ್ರತ್ಯಾರೋಪಗಳು ಹೆಚ್ಚು ಚರ್ಚೆಯಾಗುತ್ತವೆ. ಆದರೆ ಅಷ್ಟೇ ಮುಖ್ಯವಾಗಿ, ಅಪಘಾತದ ಮೂಲ ಕಾರಣಗಳ ಬಗ್ಗೆ ಅರಿವು ಹಾಗೂ ಹಿಂದಿನ ದುರಂತಗಳಿಂದ ಕಲಿತ ಪಾಠಗಳು ಚರ್ಚೆಯ ವಿಚಾರವಾಗುವುದೇ ಇಲ್ಲ.⇒ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT