ಒಮ್ಮೊಮ್ಮೆ ಬದುಕು ಎಷ್ಟು ವಿಚಿತ್ರ ತಿರುವಿನಲ್ಲಿ ನಿಂತು ಬಿಟ್ಟಿರುತ್ತದೆ ಎಂದರೆ, ವಾಪಸು ಬರಲೂ ಸಾಧ್ಯವಿಲ್ಲ. ಮುಂದಿನ ಹಾದಿಯಂತೂ ವಿಪರೀತ ಕಠಿಣ. ಏನು ಮಾಡುವುದು ಎಂದು ಕೈ ಚೆಲ್ಲಿ ಕುಳಿತುಕೊಳ್ಳುವಂತಾಗುತ್ತದೆ.

ಉದಾಹರಣೆಗೆ ನೀವು ಯಾವುದೋ ಒಂದು ವ್ಯವಹಾರ ನಡೆಸುತ್ತಿದ್ದೀರಿ. ಹಲವಾರು ವರ್ಷ ಚೆನ್ನಾಗಿ ನಡೆದ ಬಳಿಕ ಏಕಾಏಕಿ ಕುಸಿಯಲು ಆರಂಭಿಸಿದರೆ ಹೇಗಾಗುತ್ತದೆ? ಮನೆ–ಮಠ ಮಾರುವ ಅನಿವಾರ್ಯ ಉಂಟಾದರೆ ಏನಾಗುತ್ತದೆ ಹೇಳಿ? ಬದುಕಲು ಸಾಧ್ಯವೇ ಇಲ್ಲ ಎಂದು ಹತಾಶರಾಗುತ್ತೀರಿ. ಎಂಥವರೂ ಧೃತಿಗೆಡುವುದೇ ಆಗ. ಕಷ್ಟ ಬಂದಾಗ ಎದೆಗುಂದಬಾರದು ಎನ್ನುವುದು ಸುಲಭ, ಆದರೆ, ಅದರಂತೆ ನಡೆದುಕೊಳ್ಳುವುದು ಎಷ್ಟು ಕಠಿಣ ಎಂಬ ವಾಸ್ತವದ ಅರಿವಾಗುವುದೂ ಆಗಲೇ. ವ್ಯವಹಾರವನ್ನು ಪೂರ್ತಿಯಾಗಿ ಕೈ ಬಿಡಲೂ ಸಾಧ್ಯವಿಲ್ಲ. ಅದರಲ್ಲೇ ಮುಂದುವರಿಯಬೇಕೆಂದುಕೊಂಡರೆ ಮತ್ತೆ ಅಪಾರ ಬಂಡವಾಳ ಬೇಕು. ಮತ್ತೆ ಸಾಲ ಮಾಡಬೇಕು. ಆರ್ಥಿಕ ಕಷ್ಟ ಬಂದಾಗ ಆವರೆಗೆ ಜತೆಗಿದ್ದ ಸ್ನೇಹಿತರು, ಹಿತೈಷಿಗಳು, ಪರಿಚಯದ ವ್ಯಾಪಾರಸ್ಥರೆಲ್ಲ ದೂರ ಸರಿದು ಬಿಡುವುದು ಸಾಮಾನ್ಯ. ಯಾರ ಹತ್ತಿರವೂ ಒಂದು ಮಾತು ಹೇಳಿಸಿಕೊಳ್ಳದೇ ಇದ್ದವರು ಈಗ ಯಾರ್ಯಾರದ್ದೋ ಮಾತುಗಳನ್ನು ಸಹಿಸಿಕೊಳ್ಳಬೇಕಲ್ಲ ಎಂಬ ಒಂದೇ ಒಂದು ಚಿಂತೆ ಸಾಕು, ನಿಮ್ಮನ್ನು ನಾಶ ಮಾಡಲು.

ಹೌದು, ಬೇರೆ ಯಾವುದೇ ಒತ್ತಡಗಳನ್ನು ಹೇಗಾದರೂ ನಿವಾರಿಸಿಕೊಳ್ಳಬಹುದು. ಆದರೆ, ಈ ಆರ್ಥಿಕ ಸಮಸ್ಯೆ ಇದೆಯಲ್ಲ? ಅದರ ಅನಿವಾರ್ಯ, ಒತ್ತಡಗಳೇ ಬೇರೆ. ಅದು ನಮ್ಮ ಕೈ ಮೀರಿದ ಸಮಸ್ಯೆ. ನಾವೇ ನಿವಾರಿಸಿಕೊಳ್ಳಬೇಕಾದರೂ, ಅದು ಯಾವತ್ತೂ ನಮ್ಮ ಕೈ ಅಳತೆಯಿಂದಾಚೆಗೇ ಇರುತ್ತದೆ. ಹೀಗಾಗಿ ಅದರಿಂದ ಏನೆಲ್ಲ ಅವಮಾನವನ್ನೂ ಅನುಭವಿಸಬೇಕಾಗುತ್ತದೆ.

ಅದೇ ನಮ್ಮ ಮಾನಸಿಕ ಸ್ಥೈರ್ಯದ ಪರೀಕ್ಷೆ ನಡೆಯುವ ಕಾಲ. ಹತಾಶೆಯಿಂದ ಹೊರಬರಲು ಮುಖ್ಯವಾಗಿ ಮಾಡಬೇಕಾದ ಕೆಲಸವೆಂದರೆ, ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು. ನಾವಿರುವ ಸ್ಥಿತಿಯನ್ನು ಒಪ್ಪಿಕೊಳ್ಳದೇ ಇರುವವರೇ ಹೆಚ್ಚು ಹತಾಶೆಗೆ ಒಳಗಾಗುತ್ತಾರೆ. ಹೀಗಾಗಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿರುವುದು ಬೇಡ. ಸುಳ್ಳು ಸುಳ್ಳೇ ಘನತೆಗೆ ಜೋತುಬಿದ್ದರೆ ಇನ್ನಷ್ಟು ನಾಶಕ್ಕೆ ಕಾರಣವಾಗುತ್ತದೆ. ‘ಹೌದು, ಬಿದ್ದದ್ದಾಗಿದೆ, ಅದಕ್ಕೆ ಕಾರಣ ಏನು, ಏನು ಮಾಡಬೇಕು’ ಎಂದು ಚಿಂತಿಸುತ್ತ, ಪರಿಹಾರಗಳನ್ನು ತಾಳ್ಮೆಯಿಂದ ಜಾರಿಗೆ ತರುವವನೇ ನಿಜವಾದ ಜಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.