ಜೀವನದಲ್ಲಿ ಏನೇನೋ ಗುರಿಗಳಿರುತ್ತವೆ. ಅವೆಷ್ಟೋ ಮಹತ್ವಾಕಾಂಕ್ಷೆಗಳು. ತಾನು ಹೀಗಾಗಬೇಕು, ಹಾಗಾಗಬೇಕು, ಅದನ್ನು ಸಾಧಿಸಬೇಕು, ಇದನ್ನು ಸಾಧಿಸಬೇಕು...ಇತ್ಯಾದಿ ಇತ್ಯಾದಿ. ಸಹಜ ಬಿಡಿ. ಒಬ್ಬೊಬ್ಬರದು ಒಂದೊಂದು ರೀತಿ; ಒಂದೊಂದು ಮಾರ್ಗ. ಒಟ್ಟಾರೆ ಎಲ್ಲರೂ ಅದರತ್ತಲೇ ಓಡುತ್ತಿರುತ್ತಾರೆ.

ಅಂಥ ಸಾಧನೆಯ ಮಾರ್ಗದಲ್ಲಿ ಏನೇನೋ ಅಡ್ಡಿ ಆತಂಕಗಳು ಎದುರಾಗುತ್ತವೆ. ಅವನ್ನೆಲ್ಲ ಸಂಬಾಳಿಸಿಕೊಂಡು ಮುನ್ನಡೆಯುತ್ತಿರುವಾಗಲೇ ಮತ್ತೇನೋ ಗೊಂದಲ. ತಾನು ಆಯ್ದುಕೊಂಡದ್ದಕ್ಕಿಂತ ಉತ್ತಮವಾದದ್ದು ಬೇರಿನ್ನೇನೋ ಇದ್ದಿರಬಹುದೇ ? ಇದರ ಬದಲು ಅದನ್ನು ಆಯ್ದುಕೊಂಡಿದ್ದರೆ ಸುಲಭವಾಗುತ್ತಿತ್ತೇನೋ ಅನ್ನುವ ಜಿಜ್ಞಾಸೆ. ನಮ್ಮದೇ ಸಮಕಾಲೀನರು, ಸಮಾನ ಮನಸ್ಕರು, ಸಹೋದ್ಯೋಗಿಗಳು, ಸಹಪಾಠಿಗಳು ಇಷ್ಟು ಬೇಗ ಅದೇನೇನೋ ಮಾಡಿ ಎಷ್ಟೆಲ್ಲ ಸಾಧಿಸಿಬಿಟ್ಟಿದ್ದಾರೆ. ಅವರು ಇವತ್ತು ಅತ್ಯಂತ ಸುಖಿಗಳಂತೆ ಕಾಣಿಸುತ್ತಾರೆ. ಅವರಿಗೆ ಹಾಗಿದ್ದರೆ ಯಾವುದೇ ಸಮಸ್ಯೆಗಳೇ ಎದುರಾಗಿಲ್ಲವೇ? ಹಾಗಿದ್ದೂ, ಅವೆಲ್ಲವನ್ನೂ ದಾಟಿಕೊಂಡು ಇಷ್ಟು ಬೇಗ ಅಷ್ಟೆಲ್ಲವನ್ನೂ ಮಾಡಿಕೊಂಡದ್ದು ಹೇಗೆ? ಹಾಗಾದರೆ ನನ್ನಲ್ಲಿರುವ ಕೊರತೆಯೇನು? ಅವರಿಗಿಂತ ಹೆಚ್ಚು ಕಷ್ಟಪಟ್ಟು, ಪ್ರಾಮಾಣಿಕವಾಗಿ ದುಡಿದರೂ ನನಗೇಕೆ ಸಾಧ್ಯವಾಗುವುದೇ ಇಲ್ಲ...?

ಅಬ್ಬಾ ಇಷ್ಟು ಯೋಚಿಸಿಬಿಟ್ಟರೆ, ಈ ಹಂತದ ಅತೃಪ್ತಿ ನಿಮ್ಮನ್ನು ಕಾಡಿಬಿಟ್ಟರೆ ಮುಗಿದೇ ಹೋಯಿತು. ಮುಂದೆ ಇನ್ನೇನೂ ಮಾಡಲು ಸಾಧ್ಯವೇ ಆಗುವುದಿಲ್ಲ. ಗುರಿ ಸಾಧನೆಯ ಮಾತು ಹಾಗಿರಲಿ, ಕನಿಷ್ಠ ನೆಮ್ಮದಿಯೂ ಜೀವನದಲ್ಲಿ ಇಲ್ಲದೇ ಹೋಗಿಬಿಡುತ್ತದೆ.

ಅದೆಲ್ಲವನ್ನೂ ಒತ್ತೊಟ್ಟಿಗಿಡಿ. ನಿಮ್ಮ ಜೀವನದ ಮುಖ್ಯ ಗುರಿ ಒಂದೇ ಆಗಿರಬೇಕು. ಅದೇನಾದರಾಗಲಿ ಒಬ್ಬ ವ್ಯಕ್ತಿಯನ್ನು ಮಾತ್ರವೇ ಸುಖವಾಗಿಡುವುದು, ಆತನನ್ನು ಸರಿದಾರಿಯಲ್ಲಿ ನಡೆಸುವುದಷ್ಟೇ ನಿಮ್ಮ ಅಂತಿಮ ಹೊಣೆಯಾಗಬೇಕು. ಆ ವ್ಯಕ್ತಿಯ ಮುಖದಲ್ಲಿ ಒಮ್ಮೆಯೂ ಚಿಂತೆಯ ಗೆರೆ ಮೂಡದಂತೆ ನೋಡಿಕೊಂಡರಾಯಿತು. ಇಷ್ಟು ಮಾಡಿಬಿಟ್ಟರೆ, ಇನ್ನೆಂದು ನಿಮ್ಮಲ್ಲಿ ಅಸಂತೋಷ, ಆಸಮಾಧಾನ, ಗೊಂದಲದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂಥ ವ್ಯಕ್ತಿ ಯಾರು ಗೊತ್ತೇ ? ಪ್ರತಿದಿನವೂ ಕನ್ನಡಿಯಲ್ಲಿ ನೀವು ಗುರುತಿಸುತ್ತೀರಲ್ಲಾ ಆತನೇ !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.