‘ಅವರು ಯಾವಾಗಲೂ ಹಾಗೆಯೇ. ಎಷ್ಟೆಂದರೂ ಅಷ್ಟೇ. ಬದಲಾಗುವುದೇ ಇಲ್ಲ, ಹಾಗಾಗಿ ಹಣೆಬರಹವೇ ಅಷ್ಟು ಅಂದ್ಕೊಂಡು ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟಿದ್ದೇನೆ’ ಎಂದು ಹಲವರು ಹೇಳುತ್ತಿರುವುದನ್ನು ಕೇಳುತ್ತೇವೆ.

ಯಾರೇ ಆದರೂ ಒಂದೇ ವಿಚಾರವನ್ನು ಪದೇ ಪದೇ ಹೇಳುತ್ತಿದ್ದರೆ ಹಿಂಸೆ ಎನಿಸುತ್ತದೆ, ಸುಮ್ಮನೆ ತಲೆ ತಿನ್ನುತ್ತಾರೆ ಎನಿಸುತ್ತದೆ. ಎಲ್ಲವೂ ಹೌದು. ಅದರಲ್ಲೂ ದಾಂಪತ್ಯದಂತಹ ಸೂಕ್ಷ್ಮ ಸಂಬಂಧವಾಗಿದ್ದರೆ ಮುಗಿದೇ ಹೋಯಿತು. ನಿತ್ಯ ಅನುಭವಿಸುವಂತಿಲ್ಲ, ಅನುಭವಿಸದೇ ಬಿಡುವಂತಿಲ್ಲ ಎಂಬಂತಾಗುತ್ತದೆ. ಆಗಲೇ ಹೀಗೆ ನಿರ್ಲಕ್ಷಿಸುವ ಪರಿಪಾಠ ಆರಂ‘ವಾಗುತ್ತದೆ.

ಯಾರೇ ಆದರೂ ಒಂದೇ ವಿಚಾರದ ಬಗ್ಗೆ ತಲೆ ತಿನ್ನುತ್ತಾ ಇದ್ದರೆ ಅದು ಕಿರಿಕಿರಿಯೇನೋ ನಿಜವೇ. ಆದರೆ, ಒಮ್ಮೆ ಯೋಚಿಸಿ. ಅವರಿಗೆ ಯಾಕೆ ಹಾಗೆ ಅದೇ ವಿಚಾರ ತಲೆಗೆ ಬರುತ್ತಿದೆ? ಅಷ್ಟರ ಮಟ್ಟಿಗೆ ನಿಮ್ಮಲ್ಲಿ ಅವರು ಅದನ್ನು ಹೇಳುತ್ತಿದ್ದಾರೆ ಎಂದರೆ, ತಮ್ಮಲ್ಲೇ ಅವರು ಆ ವಿಚಾರದ ಬಗ್ಗೆ ಎಷ್ಟು ಕೊರಗಿರಲಿಕ್ಕೆ ಸಾಕು? ಅವರ ಈ ಮನೋಭಾವನೆಗೆ ಕಾರಣ ಏನು? ನೀವು ಅವರನ್ನು ನಿರ್ಲಕ್ಷಿಸುತ್ತಿರುವುದರಿಂದಲೇ ಅವರಿಗೆ ಹಾಗೆ ನಿಮ್ಮ ತಲೆ ತಿನ್ನಬೇಕು ಎಂದೆನಿಸುತ್ತಿದೆಯಾ? ನಿಮ್ಮ ಬಗ್ಗೆ ಅವರಿಗಿರುವ ಕಂಪ್ಲೇಂಟ್ಗಳು ಏನು? ಅವರಿಗೆ ನಿಮ್ಮ ಬಗ್ಗೆ ಯಾವುದಾದರೂ ವಿಚಾರದಲ್ಲಿ ಸಂಶಯ ಮೂಡುತ್ತಿದೆಯಾ? ಎಂದು ಸಹನೆಯಿಂದ ಕುಳಿತು ಕೇಳಿ. ಅವರ ಸಮಸ್ಯೆ ಆಲಿಸಿ. ಆಗ ಅವರಿಗೆ ವಿಷಯ ಮನದಟ್ಟು ಮಾಡಿಕೊಡುವ ತಾಳ್ಮೆ ನಿಮ್ಮದಾಗಬೇಕು.

ಅಷ್ಟಕ್ಕೂ ಅವರೊಂದಿಗೆ ಬಾಳಬೇಕಾದವರು ನೀವೇ. ಹೀಗಾಗಿ ಒಂದಿಷ್ಟು ಸಹನೆಯಿಂದ, ಅವರನ್ನು ಕನ್ವಿನ್ಸ್ ಮಾಡುವುದು ಖಂಡಿತ ತಪ್ಪಲ್ಲ. ಅವರ ಭಾವನೆ ಸಂಶಯಕ್ಕೆ ತಿರುಗಿದ್ದರೆ ಅದರ ಬಗೆಗೂ ವಿಶ್ವಾಸದಿಂದ ಮಾತನಾಡಿ. ಅವರಲ್ಲಿರುವ ಅಭದ್ರತೆಯನ್ನು ಹೋಗಲಾಡಿಸಿ.

ಇದು ದಾಂಪತ್ಯ ಅಂತಲೇ ಅಲ್ಲ, ಎಲ್ಲ ಸಂಬಂಧಗಳಿಗೂ ಅನ್ವಯವಾಗುವಂಥದ್ದು. ಬಹಳಷ್ಟು ಬಾರಿ ಇಂಥ ನಮ್ಮ ನಿರ್ಲಕ್ಷ್ಯವೇ ಇಡೀ ಸಂಬಂಧವನ್ನು ಮುರಿದು ಹಾಕಿಬಿಡಬಹುದು. ಬೇಸರದ ಸನ್ನಿವೇಶದಲ್ಲಿ ‘ಹೋದರೆ ಹೋಗಲಿ, ನೆಮ್ಮದಿಯಾಗಿರುತ್ತೇನೆ‘ ಎನ್ನುವ ಧೋರಣೆಗೆ, ನಿಲುವಿಗೆ ಬಂದು ಬಿಡುತ್ತೇವೆ. ಅದು ಆಕ್ಷಣದಲ್ಲಿ, ಆದರೆ ಸಂಬಂಧಗಳ ಮೌಲ್ಯ ಗೊತ್ತಾಗುವುದು ಕಳೆದುಕೊಂಡ ಮೇಲೆಯೇ. ದಿನಗಳೆದಂತೆ ‘ಸ್ವಲ್ಪ ತಾಳ್ಮೆ ವಹಿಸಬಹುದಿತ್ತೇನೋ, ದುಕಿಬಿಟ್ಟೆನಾ?‘ ಎಂದೆಲ್ಲ ನಮಗೇ ಅನ್ನಿಸತೊಡಗುತ್ತದೆ; ಆದರೆ ಕೈಜಾರಿ ಹೋದ ಮೇಲೆ ಅದನ್ನು ಮತ್ತೆ ಗಳಿಸಿಕೊಳ್ಳುವುದು ದುಃಸ್ಸಾಧ್ಯ ಎಂಬುದು ನೆನಪಿರಲಿ. ಇನ್ನೂ ಒಂದು ಸಂಗತಿಯನ್ನು ಮನದಟ್ಟು ಮಾಡಿಕೊಳ್ಳಬೇಕು, ಒಂದನ್ನು ಕಳೆದುಕೊಂಡ ಮೇಲೆ ಪರ್ಯಾಯಕ್ಕಾಗಿ ಮನಸ್ಸು ಹುಡುಕಾಡುತ್ತದಲ್ಲ, ಅಂಥ ಪರ್ಯಾಯ ವ್ಯಕ್ತಿ, ಸಂಬಂಧ ನಮಗೆ ಮತ್ತೆ ಸಿಕ್ಕೇಬಿಡುತ್ತದೆ ಎಂಬುದು ಏನು ಗ್ಯಾರಂಟಿ? ಒಂದೊಮ್ಮೆ ಸಿಕ್ಕರೂ ಅದು ಇದಕ್ಕಿಂತ ಉತ್ತಮವಾಗಿರುತ್ತದೆ ಎಂಬುದು ಖಚಿತವಿರುವುದಿಲ್ಲ.

ಜೀವನದಲ್ಲಿ ಸಿಕ್ಕ ಎಲ್ಲವೂ, ಎಲ್ಲ ಸಂಬಂಧಗಳೂ ಒಳ್ಳೆಯದೇ ಆಗಿರುವುದಿಲ್ಲ. ಸಿಕ್ಕ ಮೇಲೆ ಅದನ್ನು ಒಳ್ಳೆಯದಾಗಿ ಪರಿವರ್ತಿಸಿಕೊಳ್ಳುವುದು ನಮ್ಮ ಕೈಯ್ಯಲ್ಲಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.