ಅನೇಕ ಸಲ ಅಂಥ ವಿಮರ್ಶೆಗಳಲ್ಲಿ ಅರ್ಥವೇ ಇರುವುದಿಲ್ಲ. ಒಂದೊಮ್ಮೆ ಹಾಗೆ ವಿಮರ್ಶಿಸಿಕೊಳ್ಳುತ್ತ ಸಾಗಿದರೆ ನಮ್ಮ ತಪ್ಪುಗಳಿಗೆ, ನಮ್ಮೆಲ್ಲ ಕೃತ್ಯಗಳಿಗೆ ಒಂದಿಲ್ಲೊಂದು ಸಮರ್ಥನೆ ಸಿಗುವುದು ದೊಡ್ಡದೇನಲ್ಲ. ಅದು ಸಮರ್ಥನೀಯವಲ್ಲದಿದ್ದರೂ ನಮ್ಮ ಮನಸ್ಸು ಹಾಗೊಂದು ಚೌಕಟ್ಟನ್ನು ನಿರ್ಮಿಸಿಕೊಳ್ಳುತ್ತದೆ. ಸಂಭಾವಿತತನಕ್ಕೆ ಒಂದಿಲ್ಲೊಂದು ಹೆಸರೂ ಹುಟ್ಟಿಕೊಳ್ಳಲೂಬಹುದು. ಅದಕ್ಕೂ ಮೀರಿ ಇಂಥದ್ದೇ ಹಿಂದಿನ ಹಲವಾರು ಘಟನೆಗಳನ್ನು, ಬೇರೆ ಬೇರೆ ವ್ಯಕ್ತಿಗಳನ್ನು ಉದಾಹರಣೆಯಾಗಿ ನಿಲ್ಲಿಸಿ ವಕಾಲತ್ತನ್ನೂ ಆರಂಭಿಸಿ ಬಿಡಬಹುದು. ಅದೇನೇ ಆದರೂ ಇಂಥವುಗಳಿಂದ ನಮ್ಮ ಆತ್ಮ ತಣಿಯುವುದಿಲ್ಲ.

ಕಚೇರಿಯಲ್ಲಿ ಎಂದಿಟ್ಟುಕೊಳ್ಳಿ, ಏನೋ ತಪ್ಪನ್ನು ಮಾಡಿಬಿಟ್ಟಿರುತ್ತೇವೆ. ಅದನ್ನ ಬಾಸ್ ಕೇಳಿದಾಗ ಆ ಕ್ಷಣಕ್ಕೆ ಏನೋ ಒಂದು ಬಾಯಿಗೆ ಸಿಕ್ಕ ಉತ್ತರವನ್ನು ಹೇಳಿ ತಪ್ಪಿಸಿಕೊಂಡು ಬಿಡುತ್ತೀರಿ. ಮನಸಿನಲ್ಲಿ ಅವತ್ತಿಡೀ ಅದದೇ ಸುತ್ತುತ್ತಿರುತ್ತದೆ. ‘ಒಂದೊಮ್ಮೆ ಇದು ನನ್ನದೇ ತಪ್ಪು ಎಂದು ಬಾಸ್ಗೆ ಗೊತ್ತಾಗಿಬಿಟ್ಟರೆ, ಇನ್ಯಾರಾದರೂ ಫಿಟ್ಟಿಂಗ್ ಇಟ್ಟುಬಿಟ್ಟರೆ...’ ಹೀಗೆ ರೇಗಳಲ್ಲಿ ಮನಸು ತಾಕಾಡುತ್ತ ಇರುತ್ತದೆ.

ಬಾಯಿ ತಪ್ಪಿ ಸ್ನೇಹತನಿಗೆ ನೋವಾಗುವಂತೆ ಮಾತಾಡಿಬಿಡುತ್ತೀರಿ. ಏನೋ ಆ ಕ್ಷಣದಲ್ಲಿ ನಾಲಗೆ ಹೊರಳಿ ಬಿಡುತ್ತದೆ. ಆತನಿಗೂ ಹರ್ಟ್ ಆಗಿದ್ದು ಗೊತ್ತಾಗುತ್ತದೆ. ಅವನು ಅತ್ತ ಹೋದ ಬಳಿಕ ನಿಮ್ಮೊಳಗೇ ಕಿರಿಕಿರಿ. ಛೇ, ಅವನಿನ್ನು ನನ್ನನ್ನು ದೂರ ಮಾಡಿಬಿಟ್ಟರೆ. ಸ್ನೇಹಿತರ ವಲಯದಲ್ಲೆಲ್ಲಾ ಹೇಳಿ ನನ್ನನ್ನು ಚಿಕ್ಕವನನ್ನಾಗಿಸಿದರೆ...

ಬಂಧುಗಳೊಬ್ಬರ ಬಗ್ಗೆ ಯಾರೊಂದಿಗೋ ನಾವು ಹಗುರವಾಗಿ ಮಾತಾಡಿದ್ದು, ಅವರ ಬ್ಯೂಸಿನೆಸ್ನಲ್ಲಿ ನಿರೀಕ್ಷಿಸಿರದ ಬಹುದೊಡ್ಡ ನಷ್ಟಕ್ಕೆ ಕಾರಣವಾಗಿಬಿಡುತ್ತದೆ. ಗೆಳತಿಯೊಬ್ಬಳ ಬಗೆಗಿನ ಗುಟ್ಟನ್ನು ಯಾರ ಮುಂದೆ ಹೇಳಬಾರದಿತ್ತೋ, ಅವರೆದುರೇ ಹೇಳಿಬಿಡುತ್ತೇವೆ….ಇಂಥವೆಲ್ಲ ಮಾತಿನ ಬಗೆಗಾಯಿತು. ಇದಲ್ಲದೇ ಬಹಳಷ್ಟು ಬಾರಿ ತಪ್ಪನ್ನೇ ಎಸಗಿಬಿಡುತ್ತೇವೆ. ಅದು ತಪ್ಪೆಂದು ಗೊತ್ತಾಗುವಷ್ಟರಲ್ಲಿ ಆಗಬಾರದ್ದು ಆಗಿಬಿಟ್ಟಿರುತ್ತದೆ. ನಮ್ಮ ಮನಸ್ಸು ಅದನ್ನೇ ಮತ್ತೆ ಮತ್ತೆ ಯೋಚಿಸುತ್ತಾ, ಕಿರಿಕಿರಿಯನ್ನು ಅನುಭವಿಸಲಾರಂಭಿಸುತ್ತದೆ.

ಪ್ರತಿದಿನವೂ ಪ್ರತೀ ಹೆಜ್ಜೆಯನ್ನೂ ಹೀಗೆ ನಾವು ಒರೆಗೆ ಹಚ್ಚಲು ಕುಳಿತುಬಿಟ್ಟರೆ ಮುಂದಿನದೇನನ್ನೂ ಮಾಡಲೂ ಸಾಧ್ಯವೇ ಆಗುವುದಿಲ್ಲ. ಸರಿ ತಪ್ಪುಗಳ ವಿವೇಚನೆ, ವಿಮರ್ಶೆಯೇ ಬೇಡವೆಂದು ಹೇಳುತ್ತಿಲ್ಲ. ಅದು ಆರಂಭದ ಹೆಜ್ಜೆಯಾಗಬೇಕು. ಒಮ್ಮೆ ಹೆಜ್ಜೆಯನ್ನು ಕಿತ್ತಿಟ್ಟ ಮೇಲೆ ಹಿಂದಿನ ಹೆಜ್ಜೆ ಹೇಗಿತ್ತು? ಅದನ್ನು ನಾವು ಎತ್ತಿಡಬೇಕಿತ್ತೇ ಇಲ್ಲವೇ? ಅದರ ಬದಲು ನನಗೆ ಬೇರೆ ಮಾರ್ಗವೇನಿತ್ತು... ಎಂಬಿತ್ಯಾದಿ ಗೊಂದಲಕ್ಕೆ ಒಳಗಾಗುವುದರಲ್ಲಿ, ಅದನ್ನು ಯೋಚಿಸುತ್ತ ಕಳೆಯುವುದರಲ್ಲಿ ಏನರ್ಥವಿದೆ ಹೇಳಿ? ನಿಜಕ್ಕೂ ಹೆಜ್ಜೆ ಕಿತ್ತಿಟ್ಟ ನಂತರ ಯೋಚಿಸಬೇಕಾದದ್ದು ಮುಂದಿನ ಹೆಜ್ಜೆಯ ಬಗ್ಗೆಯೇ ಹೊರತೂ ಹಿಂದಿನದರ ಬಗ್ಗೆ ಅಲ್ಲ. ಒಂದೊಮ್ಮೆ ಮುಂದಿನಕ್ಕೆ ಧೈರ್ಯ ಸಾಲದೆಂದಾದರೆ ನಮ್ಮ ತಕ್ಷಣದ ಅಗತ್ಯವೇನೆಂದರೆ ಇಟ್ಟ ಹೆಜ್ಜೆಯನ್ನು ದೃಢಪಡಿಸಿಕೊಳ್ಳುವುದು. ಹಿಂದಿನದನ್ನು ಯೋಚಿಸುತ್ತಾ ಮುಂದಿನ ಬಗ್ಗೆ ಅಳುಕುತ್ತಾ ಮೈಮರೆತರೆ ನಿಂತ ಹೆಜ್ಜೆಯೂ ಸಮತೋಲನ ತಪ್ಪಿ ಮುಗ್ಗರಿಸುವ ಸಂಭವ ಇದೆ.

ಬಿಟ್ಹಾಕಿ, ಸರಿಯೋ ತಪ್ಪೋ, ಬದುಕನ್ನು ಬಂದಂತೆ, ಹಸಿಹಸಿಯಾಗಿ ಸ್ವೀಕರಿಸುವುದರಲ್ಲಿದೆ ನೆಮ್ಮದಿ. ಹೇಗೂ ಹೊರಟಾಗಿದೆ. ಹೇಗೆ ದಾರಿ ಸಾಗುತ್ತೋ ಹಾಗೆ ಹೊರಟು ಬಿಡೋಣ. ಅದೆಲ್ಲಿಗೆ ಹೋಗಿ ತಲುಪುತ್ತೋ ತಲುಪಲಿ. ಎದುರಾದ ಎಲ್ಲವನ್ನೂ ಎದುರಿಸುವ ಧೈರ್ಯ ಜತೆಗೂಡಿಸಿಕೊಳ್ಳುವುದಷ್ಟೇ ನಮ್ಮ ಗುರಿಯಾಗಲಿ. ಹೋಗಿ ನಿಂತಲ್ಲಿಯೇ ಕಾಲೂರುವುದು ಜಾಣತನವಲ್ಲವೇ ?
.ಪಿವಿ ವೈಬ್ಸ್: ನಿಮ್ಮ ಮನಸಿಗೆ ಇದನ್ನು ಕಲಿಸಿದರೆ ಗೆಲುವು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.