ಹಾಗೊಂದು ನೋವು ನಿಮ್ಮದೊಬ್ಬರದೇ ಅಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಯಾರೂ ಜೀವನದಲ್ಲಿ ನೋವು ಸಂಕಷ್ಟಗಳಿಂದ ಮುಕ್ತರಾಗಿಲ್ಲ. ಇನ್ನೊಬ್ಬರ ಬಳಿ ತೋಡಿಕೊಂಡಾಗ ನಮ್ಮ ಮನಸ್ಸಿಗೆ ಒಂದಷ್ಟು ಸಾಂತ್ವನ ಸಿಗುತ್ತದೆ ಎಂಬುದೇನೋ ನಿಜ. ನಾವು ಮನಸ್ಸಿನಲ್ಲಿದ್ದದ್ದನೆಲ್ಲ ಹೊರ ಚೆಲ್ಲಿ ಹಗುರಾಗಿ ಬಿಡುವುದು ದೊಡ್ಡ ವಿಚಾರವೇನಲ್ಲ. ಹಾಗಂತ ನಮ್ಮ ನೋವನ್ನು ಕೇಳಿಸಿಕೊಂಡವರಿಗೆ ನೋವೇ ಇಲ್ಲ ಎಂತಲೂ ಇಲ್ಲ. ನಮ್ಮ ಗೋಳನ್ನು ಕೇಳಲೊಬ್ಬರು ಸಿಕ್ಕಿದ್ದಾರೆಂದಾಕ್ಷಣ ಅವರ ಬಳಿ ಎಲ್ಲವನ್ನೂ ಕಕ್ಕಿ ಬಿಡುವ ಆತುರ ಏಕೆ?

ಅಷ್ಟಕ್ಕೂ ಅವರು ನಮ್ಮಿಂದ ಸಂತಸವನ್ನು ಬಯಸಿ ಬಂದಿರಬೇಕಾದರೆ ಇದ್ದದ್ದು, ಇಲ್ಲದ್ದನ್ನು ಮತ್ತೆ ಕೆದಕಿ, ನೆನಪಿಸಿಕೊಂಡು ಅವರ ಮುಂದೆ ಕಕ್ಕುತ್ತೇವಲ್ಲ ಅದು ನಮ್ಮ ಮನಸ್ಸಿನ ಹುನ್ನಾರ. ನಾವು ನಿಜವಾಗಿ ಹಾಗೆ ಹಗುರಾಗಬೇಕೆಂದು ಹೇಳಿಕೊಳ್ಳುವುದಕ್ಕಿಂತ, ಅವರಿಂದ ಒಂದಷ್ಟು ಕನಿಕರವನ್ನು ಗಿಟ್ಟಿಸಿಕೊಳ್ಳಬೇಕು ಎಂಬ ಉದ್ದೇಶವೇ ಹೆಚ್ಚಿರುತ್ತದೆ. ಅದು ಯಾರೇ ಆಗಿರಬಹುದು. ಎಷ್ಟು ಹತ್ತಿರದವರೇ ಇದ್ದಿರಬಹುದು. ನಮ್ಮೊಳಗೆ ಒಂದು ಕುದಿಯೇ ಮನೆ ಮಾಡಿದ್ದಿರಬಹುದು. ಅದನ್ನು ಹೊರಚೆಲ್ಲಿ ಅವರ ಮನಸ್ಸನ್ನೂ ಕಹಿಗೊಳಿಸುವುದುಂಟಲ್ಲ, ಅದರಂಥ ವಿಚಿತ್ರ ಮನಸ್ಥಿತಿ ಮತ್ತೊಂದಿಲ್ಲ. ಆ ಕ್ಷಣದಲ್ಲಿ ಅವರು ‘ಅಯ್ಯೋ ಪಾಪ’ ಎಂದು ಮರುಗುತ್ತಾರಲ್ಲ, ಅದೇ-ಅದನ್ನೇ ನಾವು ನಿರೀಕ್ಷಿಸಿದ್ದು ಎಂಬುದು ಸ್ಪಷ್ಟ. ಅಷ್ಟಕ್ಕೂ ಎಲ್ಲವನ್ನೂ ಮರೆತೋ ಅಥವಾ ಮರೆತ ಹಾಗೆ ಮಾಡಿಕೊಂಡೋ ನಮ್ಮ ಕೆಲಸದಲ್ಲಿ ನಾವು ತೊಡಗಿಸಿಕೊಂಡಿದ್ದಾಗ ಇದ್ದಕ್ಕಿದ್ದಂತೆಯೇ ಭೇಟಿಯಾಗುವ ಹಳೆಯ ಸ್ನೇಹಿತರೋ, ಹೊಸದಾಗಿ ಸಮೀಪಕ್ಕೆ ಬರುವ ಗೆಳತಿಯರೋ, ಆಪ್ತವಾಗುವ ಜೀವದೆದುರೋ ನಮ್ಮ ಪುರಾಣಗಳನ್ನೆಲ್ಲ ಬಿಚ್ಚಿಡುವುದರಲ್ಲೇನಿದೆ ಹೇಳಿ ?

ಹಾಗೆ ಕನಿಕರ ಗಿಟ್ಟಿಸಿಕೊಂಡು ಅವರಿಗೆ ಮತ್ತಷ್ಟು ಹತ್ತಿರವಾಗಬಹುದೆಂಬುದು ಭ್ರಮೆ. ಮೊದ ಮೊದಲಿಗೆ ಈ ಹುನ್ನಾರದಲ್ಲಿ ಯಶಸ್ವಿಯಾಗಬಹುದು. ಆದರೆ ದಿನ ಹೋಗುತ್ತ ನಿಮ್ಮ ಮನೋಭಾವ ಅರ್ಥವಾಗಿ ನಿಮ್ಮ ವ್ಯಕ್ತಿತ್ವಕ್ಕೇ ಕುಂದು ಬರುವ ಸಾಧ್ಯತೆ ಇದೆ. ನೋವು ಯಾರಿಗೂ ಬೇಡವಾದದ್ದು. ಸ್ವತಃ ನಮಗೇ ಅದು ಸಹ್ಯವಲ್ಲವೆಂದಾದ ಮೇಲೆ ಬೇರೆಯವರಿಗೇಕೆ ಬೇಕು ?

ಅದರ ಬದಲು ಕಳೆದದ್ದು ಕಳೆದು ಹೋಯಿತು. ಹೊಸ ಹೃದಯಗಳು ಹತ್ತಿರ ಬಂದಾಗ ಸಂತಸವನ್ನು ಚೆಲ್ಲಿ. ಮತ್ತೆ ಅಲ್ಲಿ ನೋವು ನರಳಿಕೆಗಳು ಬಾರದಿರಲಿ. ಅದರ ಸ್ಥಾನದಲ್ಲಿ ಖುಷಿಯ ಬುಗ್ಗೆ ಚಿಮ್ಮಲಿ. ಹೊಸತರ ಹೊನಲಲ್ಲಿ ಸಂಬಂಧದ ಚಿಗುರು ಅರಳಬೇಕು. ಆಗ ಮಾತ್ರ ಜೀವ-ಜೀವಗಳ ಸಂಬಂ‘ಕ್ಕೆ ವಿಶೇಷ ಅರ್ಥ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.