ನಿಮಗೆ ದೀರ್ಘಕಾಲ ಬದುಕುವುದು ಬೇಕಾ? ಅಥವಾ ಸಿಕ್ಕಾಪಟ್ಟೆ ಸ್ಪರ್ಧೆಗೆ ಬಿದ್ದು ಆರೋಗ್ಯವನ್ನು ಕಳೆದುಕೊಳ್ಳುವುದು ಬೇಕಾ?

ಇದಕ್ಕೆ ಉತ್ತರ ನೀಡುವುದು ಕಷ್ಟ. ಅಲ್ವೇ? ಹೆಚ್ಚು ಕಾಲ ಆರೋಗ್ಯವಾಗಿ ಬದುಕುವುದು ಯಾರಿಗೆ ಬೇಡ? ಹಾಗಂತ ಜೀವನದಲ್ಲಿ ಸ್ವಲ್ಪವೂ ರಿಸ್ಕ್ ಅನ್ನೇ ತೆಗೆದುಕೊಳ್ಳದೇ ಆರಾಮಾಗಿ ಇದ್ದರೇನು ಚೆಂದ? ಒಟ್ಟಿನಲ್ಲಿ ಒಂದೇ ನೇರ ವಾಕ್ಯದಲ್ಲಿ ಇದಕ್ಕೆ ಉತ್ತರಿಸುವುದು ಕಷ್ಟವೇ.

ಹೌದು, ನಮಗೆ ಯಾವಾಗಲೂ ಏನಾದರೊಂದನ್ನು ಮಾಡುತ್ತಿರುವುದೇ ರೂಢಿ. ಸುಮ್ಮನಿರುವುದು ಸಾಧ್ಯವೂ ಇಲ್ಲ, ಅದು ನಮ್ಮ ರಕ್ತದ ಗುಣದಲ್ಲೇ ಇಲ್ಲ. ಹೀಗಾಗಿ ಕೆಲವಷ್ಟು ಸ್ಪರ್ಧೆ, ಹೋರಾಟ ಅನಿವಾರ್ಯ. ಅಗತ್ಯವೂ ಹೌದು. ಕೆಲವರಿಗೆ ಅದೇ ಬದುಕು. ಅವರಿಗೆ ಕ್ಷಣಕಾಲವೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಖಾಸಗಿ ಬದುಕು, ಮನೆಯನ್ನು ನಿರ್ಲಕ್ಷಿಸಿಯಾದರೂ ಸರಿಯೇ. ರಿಸ್ಕ್ ಅನ್ನು ಆಹ್ವಾನಿಸುತ್ತಲೇ ಇರುತ್ತಾರೆ. ಅವಕಾಶಗಳ ಬೆನ್ನು ಬಿದ್ದು ಹೋಗ್ತಾರೆ. ಹಠಕ್ಕೆ ಬಿದ್ದು ಅವಕಾಶ ಸೃಷ್ಟಿಸಿಕೊಳ್ಳುತ್ತಾರೆ. ಅಂಥವರಿಗೆ ಆರೋಗ್ಯದ ವಿಚಾರದ ಬಗ್ಗೆ ಹೇಳಿ ನೋಡಿ, ‘ಸುಮ್ಮನಿರಿ, ಮಾರಾಯ್ರೇ, ಬದುಕಿನಲ್ಲಿ ಇನ್ನೂ ಸಾಧಿಸಬೇಕಾಗಿದ್ದು ಇದೆ. ಆರೋಗ್ಯ ಆಮೇಲೆ’ ಅಂತಾರೆ.

ಸರಿ, ಅವರನ್ನು ಬಿಟ್ಟುಬಿಡಿ. ಇನ್ನು ಕೆಲವರಿರ್ತಾರೆ. ‘ಒಂದಿಲ್ಲೊಂದು ದಿನ ಅವಕಾಶಗಳು ಬಂದು ಬಾಗಿಲು ತಟ್ಟುತ್ತವೆ. ಆಗ ನಾನೇನು ಮಾಡುತ್ತೇನೋ ನೋಡಿ. ಅಲ್ಲಿಯವರೆಗೂ ಏನು ಮಾಡೋಕಾಗುತ್ತೇ?’ ಅಂತ ಊರೆಲ್ಲ ಹೇಳಿಕೊಂಡು ತಿರುಗಾಡಿಕೊಂಡು ಇರ್ತಾರೆ. ಅವರಿಗೂ ಇವರಿಗೂ ಅಜಗಜಾಂತರ. ಅವರಿಗೆ ಕೆಲಸ ಮಾಡಲು ಪುರುಸೊತ್ತೇ ಇಲ್ಲವಾದರೆ, ಇವರಿಗೆ ಅವಕಾಶವೇ ಇಲ್ಲ. ಅಸಲಿಗೆ, ಅವರಿಗೆ ಕೊರತೆಯಾಗಿರುವುದು ಅವಕಾಶವಲ್ಲ, ಆ ರಿಸ್ಕ್ ತೆಗೆದುಕೊಳ್ಳುವ ಮನೋಭಾವ. ಅಕಸ್ಮಾತ್ ಯಾವುದಾದರೊಂದು ಅವಕಾಶ ಅವರಿಗೆ ಸಿಕ್ಕಿತು ಎಂತಲೇ ಇಟ್ಟುಕೊಳ್ಳಿ. ‘ಅದು ಹಾಗೆ, ಇದು ಹೀಗೆ, ನಾನು ಇಂತಹ ಕೆಲಸಗಳನ್ನು ಮಾಡೋದಾ? ನನ್ನ ತಾಕತ್ತೇ ಬೇರೆ’ ಎಂದು ಹಾಗೆಯೇ ಇರ್ತಾರೆಯೇ ಹೊರತು ಏನಾದರೂ ಮಾಡಲು ಮುಂದಾಗುವುದಿಲ್ಲ.

ಅವರು ಸೋಮಾರಿಗಳೇ, ಅನುಮಾನವೇ ಬೇಡ. ಅವರಿಗೆ ಯಾವುದನ್ನೂ ಶ್ರಮವಹಿಸಿ ಮಾಡುವಷ್ಟು ಕಾಳಜಿ ಇರುವುದಿಲ್ಲ. ಎಷ್ಟು ಬುದ್ಧಿವಂತರಾದರೂ ಅಷ್ಟೇ. ಅದನ್ನು ಬಳಸಿಕೊಳ್ಳುವ ಚಾಕಚಕ್ಯತೆಯೂ ಇರುವುದಿಲ್ಲ. ಜತೆಗೆ ಒಂದಿಷ್ಟು ಅಹಂ ಕೂಡ ಇದ್ದುಬಿಟ್ಟರೆ ಮುಗಿಯಿತು. ಮತ್ತಷ್ಟು ಸೋಮಾರಿತನ ಮೈಗೂಡುತ್ತದೆ. ಅಂಥವರಲ್ಲಿ ಕೆಲವರು ಆರೋಗ್ಯದ ಬಗ್ಗೆಯೂ ಸಾಕಷ್ಟು ಕಾಳಜಿ ಹೊಂದಿರ್ತಾರೆ. ಉತ್ತಮ ಆರೋಗ್ಯಕ್ಕೆ ಏನು ಮಾಡಬೇಕು ಎಂದು ಅವರನ್ನು ನೋಡಿ ಕಲಿತುಕೊಳ್ಳಬೇಕು. ಅಷ್ಟರ ಮಟ್ಟಿಗೆ ಕಾಳಜಿ ಹೊಂದಿರುತ್ತಾರೆ.

ಅಷ್ಟಕ್ಕೂ ಬದುಕಿನಲ್ಲಿ ರಿಸ್ಕ್ ತೆಗೆದುಕೊಂಡು ಮುನ್ನುಗ್ಗುವ ಛಲವಿರುವವರು ಆರೋಗ್ಯವನ್ನು ನಿರ್ಲಕ್ಷಿಸಬೇಕು ಎಂದೇನೂ ಇಲ್ಲ. ಆದರೆ, ಏನನ್ನೂ ಮಾಡದೇ ಸೋಮಾರಿಯಾಗಿರುವವರಿಗೆ ಆರೋಗ್ಯ ಅಂತಲೇ ಅಲ್ಲ ಇಂಥ ಒಂದಿಲ್ಲೊಂದು ನೆಪಗಳು ದೊಡ್ಡ ಗುರಾಣಿಯಾಗಿ ಸಿಕ್ಕುತ್ತವೆ...ಕೆಲಸದಿಂದ ತಪ್ಪಿಸಿಕೊಳ್ಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.