ಕಾವೇರಿ: ತಮಿಳುನಾಡಿನ ತುರ್ತು ಅರ್ಜಿ ವಜಾ

ನವದೆಹಲಿ, ಜ. 24– ಕಾವೇರಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪಿನ ಅನ್ವಯ ಬಾಕಿ ಇರುವ 5 ಟಿಎಂಸಿ ಅಡಿ ನೀರನ್ನು ತಕ್ಷಣವೇ ಬಿಡಲು ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿಹಾಕಿತು.

ತಮಿಳುನಾಡಿಗೆ ತುರ್ತಾಗಿ 11 ಟಿಎಂಸಿ ಅಡಿ ನೀರು ಬಿಡಬೇಕೆಂದು ನ್ಯಾಯ ಮಂಡಳಿ ನೀಡಿರುವ ಆದೇಶವನ್ನು ಜಾರಿಗೊಳಿಸಬೇಕೆಂದು ಕೋರಿರುವ ಅರ್ಜಿಯ ಮುಂದಿನ ವಿಚಾರಣೆಯು ಫೆಬ್ರುವರಿ 6ರಂದು ಬರಲಿದೆ. ಆಗ ತಮಿಳುನಾಡಿನ ಈ ಮನವಿಯನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹಮದಿ ಹಾಗೂ ನ್ಯಾಯಮೂರ್ತಿ ಎನ್.ಪಿ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

ಮೂವರು ಮಾಜಿ ಮಂತ್ರಿಗಳಿಂದ 2.64 ಕೋಟಿ ಸ್ವೀಕಾರ: ದಾಖಲೆ ಬಹಿರಂಗ

ನವದೆಹಲಿ, ಜ. 24 (ಪಿಟಿಐ)– ಕೇಂದ್ರದ ಮಾಜಿ ಸಚಿವರಾದ ವಿ.ಸಿ.ಶುಕ್ಲಾ, ಮಾಧವರಾವ್ ಸಿಂಧಿಯಾ, ಬಲರಾಂ ಜಾಖಡ್ ಅವರು ಅಧಿಕಾರದಲ್ಲಿದ್ದಾಗ ಹವಾಲಾ ಹಗರಣದ ಮುಖ್ಯ ಆರೋಪಿಗಳಾದ ಜೈನ್ ಸಹೋದರರಿಂದ 1.65 ಕೋಟಿ, ಅಧಿಕಾರದಲ್ಲಿ ಇಲ್ಲದಿದ್ದಾಗ 99 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.